Breaking News

ಯಲ್ಲಾಪುರ ಪಟ್ಟಣದಲ್ಲಿ ಅನಾಥವಾಗಿ ಸುತ್ತುತ್ತಿವೆ ಎರಡು ಕುದುರೆಗಳು.- ಮಾಲಿಕರ ಸುಪರ್ಧಿಗೆ ಅಥವಾ ಪ್ರಾಣಿಗಳ ಆಸರೆಗೆ ವ್ಯವಸ್ಥೆ ಮಾಡಬೇಕಿದೆ.


ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಅಂಬೇಡ್ಕರ್ ವೃತ್ತ, ಮುಂಡಗೋಡು ರಸ್ತೆ ಸುತ್ತ ಮುತ್ತ ಕಳೆದ ಕೆಲವು ದಿನಗಳಿಂದ ಎರಡು ಕುದುರೆಗಳು ಅನಾಥವಾಗಿ ಸುತ್ತುತ್ತಿದ್ದು ಪ್ರಾಣಿ ಪ್ರಿಯರು ಅಥವಾ ಅರಣ್ಯ ಇಲಾಖೆ ಯವರು ಅಥವಾ ಸಂಬಂಧಿಸಿದ ಇಲಾಖೆಯವರು ಈ ಮೂಕ ಪ್ರಾಣಿಗಳಿಗೆ ಆಸರೆ ಒದಗಿಸುವತ್ತ ಗಮನ ಹರಿಸಬೇಕಿದೆ ಎಂಬುದು ಸ್ಥಳೀಯ ನಾಗರಿಕರ ಅಭಿಪ್ರಾಯವಾಗಿದೆ.


ಬೇರಾವುದೋ ಊರಿನಿಂದ ವಾಹನದಲ್ಲಿ‌ ತಂದು ಯಲ್ಲಾಪುರ ಅರಣ್ಯ ಪರಿಸರದಲ್ಲಿ ಬಿಟ್ಟು ಹೋಗಿರುವ ಸಾದ್ಯತೆ ಇದೆ. ಅಥವಾ ಮಾಲಿಕರು ಇಲ್ಲೆ ಸುತ್ತಮುತ್ತಲಿನ ಪ್ರದೇಶದಲಿದ್ದು ಕುದುರೆಗಳನ್ನು ತಿರುಗಾಡಲು ಬಿಟ್ಟಿದ್ದಾರೋ ತಿಳಿಯುತ್ತಿಲ್ಲ. ಮೇಲ್ನೋಟಕ್ಕೆ ಕುದುರೆಗಳು ಆರೋಗ್ಯವಂತವಾಗಿದ್ದು ಯಾವುದೆ ನಿತ್ರಾಣ ಸ್ಥಿತಿ ಕಂಡುಬರುತ್ತಿಲ್ಲ. ಕಾರಣ ಕೆಲವು ಸಂದರ್ಭಗಳಲ್ಲಿ ಕುದುರೆಗಳು ಅಪ್ರಯೋಜನ ಎನಿಸಿದಾಗ ಮಾಲುಕ ಅವುಗಳನ್ನು ಸಾಗಾ ಹಾಕಲು ಚಿಂತಿಸುತ್ತಾನೆ ಆದರೆ ಇಲ್ಲಿ ಅಂತಹ ಸ್ಥಿತಿ ಇರುವುದಿಲ್ಲ.

ಅನಾವಶ್ಯಕವಾಗಿ ಕಟುಕರ ಕಣ್ಣಿಗೆ ಬಿದ್ದು ಮೂಕ ಪ್ರಾಣಿಗಳ ಜೀವಕ್ಕೆ ಅಪಾಯವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ತಕ್ಷಣ ಸಂಬಂಧಿಸಿದ ಇಲಾಖೆಯವರು ಸಮಸ್ಯೆ ಬಗೆಹರಿಸಬೇಕಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ದೇಶದ ಪ್ರಧಾನಿ,ಅರಣ್ಯ ಸಚಿವರು ಮತ್ತು ಸಚಿವಾಲಯದ ಕಾರ್ಯದರ್ಶಿಯವರಿಗೆ ಪಶ್ಚಿಮ ಘಟ್ಟಗಳ ವಿಚಾರದಲ್ಲಿ ಮದ್ಯ ಪ್ರವೇಶಿಸುವಂತೆ ಚಂದ್ರಕಾಂತ ಕೊಚರೇಕರ್ ಮನವಿ

ಪ್ರತಿಧ್ವನಿ ಯಲ್ಲಾಪುರ :  ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸುವ ಸಂಬಂಧ 27-07-2026ರಂದು …

Leave a Reply

Your email address will not be published. Required fields are marked *