Breaking News

25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿತನ ಬಂಧನ – ಯಲ್ಲಾಪುರ ಪೊಲೀಸರ ಕಾರ್ಯಕ್ಕೆ SP ಶ್ಲಾಘನೆ.


ಪ್ರತಿಧ್ವನಿ ಯಲ್ಲಾಪುರ : ಕಳೆದ 25 ವರ್ಷಗಳಿಂದ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದು ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೋಲಿಸ್ ಅಧೀಕ್ಷಕ ದೀಪನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಗುಜರಾತ್ ಪೋರಬಂದರ್ ಮೂಲದ ಚಾಲಕ ವೃತ್ತಿಯ ಆರೋಪಿತ ಕೇಸುಬಾಯಿ ತಂದೆ ಮಿನಂದಾಬಾಯಿ ಸಿಸೋಡಿಯಾ ಅಲಿಯಾಸ್ ಮೊದ್ವಾಡಿಯಾ ಕೇಸುಬಾಯಿ. ಪ್ರಾಯ: 58 ಎಂಬಾತನು 2001 ರಲ್ಲಿ  ಯಲ್ಲಾಪುರದಲ್ಲಿ ಹಾದು ಹೋಗಿರುವ ಕಾರವಾರ ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ಮೇಲೆ ಜೋಗಿಕೋಪ್ಪ ಕ್ರಾಸ್ ಬಳಿ ತನ್ನ ಲಾರಿಯನ್ಬು ಅತಿ ವೇಗದಿಂದ ಚಲಾಯಿಸಿಕೋಂಡು ಬಂದು ಕೆ ಎಸ್ ಆರ್ ಟಿ ಸಿ
ಬಸ್  ಹಿಂದಕ್ಕೆ ಹಾಕುವ ಸಂದರ್ಭದಲ್ಲಿ ಬಸ್ ಚಾಲಕನೋದಿಂದಿಗೆ ಜಗಳ ಮಾಡಿದ ಬಗ್ಗೆ ಯಲ್ಲಾಪುರ
ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿತ್ತು.
ಆರೋಪಿತನ ವಿರುದ್ದ ದೋಷಾರೋಪಣ ಪತ್ರವನ್ನು ತಯಾರಿಸಿ ನ್ಯಾಯಾಲಯಕ್ಕೆ ನಿವೇದಿಸಿಕೊಂಡಿದ್ದಾಗಿತ್ತು.
ಆರೋಪಿತನು ನ್ಯಾಯಾಲಯದಿಂದ 2001 ರಲ್ಲಿ ಜಾಮೀನು ಪಡೆದುಕೊಂಡು ಜಾಮೀನಿನ ಮೇಲೆ ಹೋದವನು ನಂತರ ನ್ಯಾಯಾಲಯದ  ವಿಚಾರಣೆಗೆ ಹಾಜರಾಗದೇ  ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದನು.

ಹಲವಾರು ಬಾರಿ ಆತನ ವಿಳಾಸಕ್ಕೆ ವಾರೆಂಟ್ ನೀಡಲು ಹೋದಾಗ ಆರೋಪಿತನು ಸಿಗದೇ
ತಲೆಮರೆಸಿಕೊಡಿದ್ದನು.ಬಂತರ ನ್ಯಾಯಾಲಯದಿಂದ ಉದ್ಗೋಷಣೆ ಕೂಡಾ ಹೊರಡಿಸಲಾಗಿತ್ತು.



ದೀಪನ್ ಎನ್, ಐ,ಪಿ,ಎಸ್, ಪೊಲೀಸ್ ಅಧೀಕ್ಷಕರು, ಉತ್ತರಕನ್ನಡ ಜಿಲ್ಲೆ, ಕಾರವಾರ, ಜಿ.ಕೃಷ್ಣಮೂರ್ತಿ
ಹೆಚ್ಚುವರಿ ಪೊಲೀಸ ಅಧೀಕ್ಷಕರು, ಉತ್ತರಕನ್ನಡ ಜಿಲ್ಲೆ, ಕಾರವಾರ,  ಗೀತಾ ಪಾಟೀಲ  ಪೊಲೀಸ
ಉಪಾಧೀಕ್ಷಕರು ಶಿರಸಿ, ರಮೇಶ ಹಾನಾಪುರ ಪಿಐ ರವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಗಳಾದ ರಾಜಶೇಖರ ವಂದಲಿ,
ಸಿದ್ದಪ್ಪ ಗುಡಿ, ಮತ್ತು ಮಹಾವೀರ ಕಾಂಬಳೆ ರವರ ನೇತೃತ್ವದಲ್ಲಿ ಈ ವರೆಗೂ ಕಳೆದ 25 ವರ್ಷಗಳಿಂದ  ನ್ಯಾಯಾಲಯಕ್ಕೆ
ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಯ ಪತ್ತೆ ಕಾರ್ಯ ಮುಂದುವರೆಸಿ, ಆತನ ಇರುವಿಕೆ ಬಗ್ಗೆ ಖಚಿತ ಮಾಹಿತಿ ಪಡೆದು
ಸಿಬ್ಬಂದಿಗಳಾದ ರಾಘವೇಂದ್ರ ಮೂಳೆ, ಮಾರುತಿ, ಒಳಗೊಂಡಂತೆ ಗುಜರಾತ್ ರಾಜ್ಯದ
ರಣವಾವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಸ್ತಗಿರಿ ಮಾಡಿ
ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

  ಪತ್ತೆ ಕಾರ್ಯಕ್ಕೆ ಸಿಬ್ಬಂದಿಗಳಾದ ಸಂತೋಷ ಬಾಳೇರ,
ಬಸವರಾಜ ಡಿ,ಕೆ,ಪರಮೇಶ್ವರ ಎಸ್.ಕೆ, ರೇಖಾ ಎಮ್ ಎಸ್, ಅಂಕೋಲಾ ಪೊಲೀಸ್ ಠಾಣಾ
ಅಪರಾಧ ಸಿಬ್ಬಂದಿಯಾದ ಮಹಮದ್ ಶಫೀ ಶೇಖ್ ಹಾಗೂ ಕಾರವಾರದ ಟೆಕ್ನಿಕಲ್ ಶೆಲ್ ವಿಭಾಗದ
ಸಿಬ್ಬಂದಿಗಳಾದ  ಉದಯ ಗುನಗ, ಬಬನ್ ಡಿ ಕದಂ ಮತ್ತು ಮಹಾಲಿಂಗ ಸಾವಳಗಿ ಇವರು ಸಹ ಆರೋಪಿತನ ಪತ್ತೆ ಕಾರ್ಯಕ್ಕೆ
ಸಹಕರಿಸಿರುತ್ತಾರೆ.
ಆರೋಪಿತನನ್ನು ಪತ್ತೆ ಮಾಡಿದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರು ಉತ್ತರ ಕನ್ನಡ, ಕಾರವಾರ ಅಭಿನಂದಿಸಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ದೇಶದ ಪ್ರಧಾನಿ,ಅರಣ್ಯ ಸಚಿವರು ಮತ್ತು ಸಚಿವಾಲಯದ ಕಾರ್ಯದರ್ಶಿಯವರಿಗೆ ಪಶ್ಚಿಮ ಘಟ್ಟಗಳ ವಿಚಾರದಲ್ಲಿ ಮದ್ಯ ಪ್ರವೇಶಿಸುವಂತೆ ಚಂದ್ರಕಾಂತ ಕೊಚರೇಕರ್ ಮನವಿ

ಪ್ರತಿಧ್ವನಿ ಯಲ್ಲಾಪುರ :  ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸುವ ಸಂಬಂಧ 27-07-2026ರಂದು …

Leave a Reply

Your email address will not be published. Required fields are marked *