
ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ಪೊಲೀಸ್ ಠಾಣೆ ನೂತನ ಪಿಐ ಆಗಿ ಸುರೇಶ್ ಜಿ ಕುಂಬಾರ್ ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ.
ಈ ಹಿಂದೆ ಇದೇ ಠಾಣೆಯಲ್ಲಿ ಪಿಐ ಆಗಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದ ರಮೇಶ್ ಹಾನಾಪುರ ವರ್ಗಾವಣೆ ಆದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಹುಬ್ಬಳ್ಳಿ ರೈಲ್ವೆ ನಿಲ್ದಾಣ ವ್ಯಾಪ್ತಿಯ ಠಾಣೆಯಲ್ಲಿ ಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶ್ ಜಿ ಕುಂಬಾರ್ ಯಲ್ಲಾಪುರ ಠಾಣೆಗೆ ವರ್ಗಾವಣೆಯಾಗಿ ಬಂದಿದ್ದಾರೆ. ಮೂಲತಃ ಗದಗ ದವರಾಗಿದ್ದು ಕರ್ತವ್ಯದಲ್ಲಿ ಉತ್ತಮ ಹೆಸರು ಗಳಿಸಿದವರಾಗಿದ್ದಾರೆ.
ಸದ್ಯ ಯಲ್ಲಾಪುರ ಠಾಣೆಗೆ ವರ್ಗವಾಗಿ ಬಂದಿದ್ದು ಅದಾಗಲೆ ಯಲ್ಲಾಪುರ ಠಾಣೆಯಲ್ಲಿ ಖಡಕ್ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್ಐ ಗಳಾದ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ, ಮಹಾವೀರ ಕಾಂಬ್ಳೆ ಸೇರಿದಂತೆ ದಕ್ಷ ಸಿಬ್ಬಂದಿಗಳ ತಂಡಕ್ಕೆ ಮತ್ತಷ್ಟು ಬಲಬಂದಂತಾಗಿದೆ.ಮುಂದೆ ನೂತನ ಪಿಐ ಸುರೇಶ್ ಜಿ ಕುಂಬಾರ್ ಅವರ ಆಡಳಿತ ವೈಕರಿ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.











Prathidvani Yellapura