
ಪ್ರತಿಧ್ವನಿ ಯಲ್ಲಾಪುರ : ಉತ್ತರ ಕನ್ನಡ ಎಂದರೆ ಪ್ರವಾಸಿ ತಾಣಗಳ ತವರು. ಇಲ್ಲಿ ಸುಂದರ ಸಮುದ್ರತೀರ, ಹಚ್ಚ ಹಸಿರಾದ ಪ್ರಕೃತಿ, ಬೋರ್ಗರೆದು ದುಮ್ಮಿಕ್ಕುವ ಜಲಪಾತಗಳು, ಪುರಾತನ ಇತಿಹಾಸ ಸಾರುವ ನೂರಾರು ದೇವಾಲಯಗಳು, ವಿಶಿಷ್ಟ ಸಂಸ್ಕೃತಿ ಪರಂಪರೆ ಹೊಂದಿದ ಬುಡಕಟ್ಟು ಸಮುದಾಯಗಳು ಇನ್ನು ಹಲವು ವೈಶಿಷ್ಟ್ಯ ಹೊಂದಿ ಪ್ರವಾಸಿಗರ ಪ್ರವಾಸಕ್ಕೆ ಕೈ ಬೀಸಿ ಕರೆವ ಜಿಲ್ಲೆಯಾಗಿದೆ.


ವಿಶೇಷವಾಗಿ ಯಲ್ಲಾಪುರ ತಾಲೂಕು ಜಲಪಾತಗಳ ಆಗರವಾಗಿದೆ. ಇಲ್ಲಿನ ಸಾತೊಡ್ಡಿ ಮತ್ತು ಮಾಗೋಡು ಪ್ರವಾಸಿಗರ ನೆಚ್ಚಿನ ಜಲಪಾತಗಳಾಗಿದ್ದು ಜೇನುಕಲ್ಲು ಗುಡ್ಡದ ಸುಂದರ ನೋಟ ವರ್ಣನೆಗು ಮೀರಿದ್ದು ಇಂತಹ ಪ್ರವಾಸಿ ತಾಣಗಳು ಅಭಿವೃದ್ಧಿ ಹೊಂದಬೇಕೆ ವಿನಃ ವಂಚಿತವಾಗಬಾರದು. ಅದಕ್ಕೆ ಪ್ರಮುಖವಾಗಿ ಪ್ರಚಾಸಿಗರ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸುವ ಇಲಾಖೆ ಮತ್ತು ಅಧಿಕಾರಿಗಳು ಶ್ರಮವಹಿಸಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯ ಬೇಕಿದೆ .

ಆದರೆ ದುರ್ದೈವ ಬರುವ ಪ್ರವಾಸಿಗರಿಗೆ ಸರಿಯಾದ ರಕ್ಷಣೆ ಇಲ್ಲ, ಸಮರ್ಪ ಮಾಹಿತಿ ನೀಡುವವರಿಲ್ಲ, ಪ್ರವಾಸಿ ತಾಣಗಳಲ್ಲಿ ನಶೆ ಪದಾರ್ಥಗಳಿಗೆ ಅವಕಾಶವಿಲ್ಲ ಎಂಬುದರ ಮಾಹಿತಿ ನೀಡುವ ಯಾವುದೆ ಫಲಕಗಳು ಸಹ ಇಲ್ಲದಿರುವುದು ದುರಂತವಾಗಿದೆ.

ಸಾತೋಡಿ, ಮಾಗೋಡು ಮತ್ತು ಜೇನುಕಲ್ ಗುಡ್ಡ ಪ್ರವಾಸ ಸ್ಥಳಗಳ ಅಭಿವೃದ್ಧಿಗಾಗಿ ಬಂದ ಹಣ ಪೋಲಾಗುತ್ತಿದೆ. ಪ್ರವಾಸಿಗರಿಂದ ಯಾವುದೇ ಫೀ ವಸೂಲಿ ಮಾಡದೆ ಬಂದಂತ ಪ್ರವಾಸಿಗರಿಗೆ ರಕ್ಷಣೆ ನೀಡುವುದು ಅರಣ್ಯ ಇಲಾಖೆ ಅಧಿಕಾರಿಗಳ ಜವಾಬ್ದಾರಿ ಆಗಿದೆ. ಯಾವುದೇ ಕಾರಣಕ್ಕೂ ಪ್ರವಾಸಿಗರಿಗೆ ತೊಂದರೆಯಾಗದ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಬೇಕಿದ್ದು ಸಮರ್ಪಕ ಮಾಹಿತಿ ಇರುವ ಫಲಕಗಳನ್ನು ಅಳವಡಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಬಗೆಹರಿಸಬೇಕಿದೆ ಎಂದು ಕರ್ನಾಟಕ ರಕ್ಷಣಾ ವೇಧಿಕೆ ಗಜಪಡೆ ಯಲ್ಲಾಪುರ ತಾಲೂಕು ಅಧ್ಯಕ್ಷ ಶಂಶು ಮಾರ್ಕರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು ಬರುವ ಸ್ಥಳಗಳಲ್ಲಿ ಪ್ರವಾಸಿಗರ ರಕ್ಷಣೆಗೆ ಯಾವ ವ್ಯವಸ್ಥೆ ಇಲ್ಲ, ಅಲ್ಲಿನ ಅಪಾಯಗಳ ಬಗ್ಗೆ ಮಾಹಿತಿ ನೀಡಿ ಎಚ್ಚರಿಸುವವರು ಇಲ್ಲ, ಕೆಲವೆಡೆ ಶುಲ್ಕ ವಸೂಲಿ ಮಾಡುತ್ತಿರುವುದರ ಬಗ್ಗೆ ಮಾಹಿತಿ ಲಭಿಸಿದ್ದು ಅದರ ಉಪಯೋಗವು ಸಹ ಪ್ರವಾಸಿಗರಿಗೆ ಆಗುತ್ತಿಲ್ಲ. ಸರ್ಕಾರದಿಂದ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಬರುವ ಹಣ ಏನಾಗುತ್ತಿದೆ ಎಂಬುದನ್ನು ತಾಲೂಕು ಆಡಳಿತ ಜನತೆಗೆ ಸ್ಪಷ್ಟಪಡಿಸಬೇಕಿದೆ. ಪ್ರವಾಸೋದ್ಯಮ ಅಭಿವೃದ್ಧಿ ಆಗಬೇಕೆಂದು ಹೇಳಿದರೆ ಸಾಲದು ಮಾಡಿ ತೋರಿಸಬೇಕಿದೆ. ಶಂಶು ಮಾರ್ಕರ್, ಅಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಯಲ್ಲಾಪುರ ತಾಲೂಕ.











Prathidvani Yellapura