ಪ್ರತಿಧ್ವನಿ ಯಲ್ಲಾಪುರ : ಹಿಂದು ಧರ್ಮದ ನೂತನ ವರ್ಷಾರಂಭ ಯುಗಾದಿ ಯಿಂದ ಪ್ರಾರಂಭ ಅದಕ್ಕೆ ಯಲ್ಲಾಪುರದಲ್ಲಿ ವಿಜ್ರಂಭಣೆಯ ಆಚರಣೆ ನಡೆಯುತ್ತಾ ಬಂದಿದೆ. ಅದರಂತೆ ಮಾ,19,ಗುರುವಾರ ಯುಗಾದಿ ಉತ್ಸವ ಶೋಭಾಯಾತ್ರೆ ಅದ್ದೂರಿಯಾಗಿ ನಡೆಯಿತು. ಚಂಡೆಯ ಝಲಕ್ ಝಾಂಜ್ ನ ಹೊಡೆತ ಗೊಂಬೆಗಳ ಕುಣಿತ ಭಜನಾ ತಂಡದ ಭಕ್ತಿ ನೃತ್ಯ ಛದ್ಮ ವೇಷದ ಸೊಬಗು ಊರಿನ ತುಂಬಾ ಕೇಸರಿ ಕಲರವ,ಮಾವಿನ ತೋರಣ ವಿದ್ಯುತ್ ದೀಪಾಲಂಕಾರದ ವೈಭವ, ಚಂಡೆಯ ನಿನಾದ,ಡಿ.ಜೆ ಸದ್ದು,ಝಾಂಜ್,ಪತಾಕೆಗಳ ಆರ್ಭಟ ವಿವಿಧ …
Read More »ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? ಇಲ್ಲಿದೆ ಅದಕ್ಕೆ ಸರಿಯಾದ ಮಾಹಿತಿ.
ಬೆಳಗಿನಿಂದ ಅನೇಕರದ್ದು ಒಂದೇ ಪ್ರಶ್ನೆ – ‘ಈ ಸಂವತ್ಸರಕ್ಕೆ ‘ಪರಾಭವ’ ಎಂಬ ಹೆಸರೇಕೆ ? ಪರಾಭವ ಅಂದ್ರೆ ಸೋಲು ಅಂತ ಅರ್ಥವಲ್ಲವೇ? ಯಾಕೋ ಯುಗಾದಿ ಶುಭಾಶಯ ಹೇಳುವಾಗ ಕಸಿವಿಸಿ ಆಗುತ್ತದೆ.’ ನಿಜ, ‘ಪರಾಭವ’ ಎಂದರೆ ನಮಗೆ ‘ಸೋಲು’ ಅಥವಾ ‘ಅವಮಾನ’ ಎಂಬ ಅರ್ಥವೇ ಮೊದಲು ನೆನಪಾಗುತ್ತದೆ. ಆದರೆ ಸಂಸ್ಕೃತದಲ್ಲಿ ಮತ್ತು ಜ್ಯೋತಿಷ್ಯ ಶಾಸ್ತ್ರದ ಈ ಹೆಸರಿನಲ್ಲಿ ಅಡಗಿರುವ ಅರ್ಥವೇ ಬೇರೆ. ಹಿಂದೂ ಕಾಲಗಣನೆಯ 60 ಸಂವತ್ಸರಗಳಲ್ಲಿ ‘ಪರಾಭವ’ ಎಂಬುದು 40ನೇ …
Read More »ಪರಮಪೂಜ್ಯ “ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳಿಂದ ದತ್ತ ಮಂದಿರದಲ್ಲಿ ಆಶಿರ್ವಚನ.
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ದತ್ತ ಮಂದಿರ ಪರಿಸರದಲ್ಲಿ ನೂರಾರು ದೇವತೆಗಳು ಆವಾಸರಾಗಿರುತ್ತಾರೆ. ದತ್ತಗುರುವಿನ ಸೇವೆ ಜನ್ಮ ಪಾವನ ಮತ್ತು ಸಾಕ್ಷಾತ್ಕಾರಕ್ಕೆ ದಾರಿದೀಪವಾಗಿದೆ. ಪರಸ್ಥಳದಿಂದ ದತ್ತನ ದರ್ಶನಕ್ಕೆ ಭಕ್ತರು ಯಲ್ಲಾಪುರದ ದತ್ತಮಂದಿರಕ್ಕೆ ಬರುವಂತಾಗಬೇಕು ಎಂದು ರಾಮಚಂದ್ರಾಪುರ ಮಠದ ಪರಮ ಪೂಜ್ಯ ರಾಘವೇಶ್ವರ ಭಾರತೀ ಸ್ವಾಮಿಗಳು ಆಶಿರ್ವಚನ ನೀಡಿದರು. ಅವರು ಪಟ್ಟಣದ ದತ್ತ ಮಂದಿರದಲ್ಲಿ ಬುಧವಾರ ನಡೆದ ಸೇವಾಶಿರ್ವಾದ ಕಾರ್ಯಕ್ರಮದಲ್ಲಿ ದಿವ್ಯ ಉಪಸ್ಥಿತಿ ವಹಿಸಿ ಆಶಿರ್ವಚನ ನೀಡಿದರು. ದತ್ತಮಂದಿರದ ನೂತನ ಕ್ರಿಯಾ …
Read More »ನಾಡುಕಂಡ ಹಿರಿಯ ಮತ್ತು ಶ್ರೇಷ್ಠ ರಾಜಕಾರಣಿ ಆರ್.ವಿ.ದೇಶಪಾಂಡೆ ಅವರ ಜನುಮ ದಿನಕ್ಕೆ ಶುಭ ಕೋರಿದ ಅತ್ಯಾಪ್ತ ಬಾಬು ಸಿದ್ದಿ ಮತ್ತು ತಂಡ.
ಪ್ರತಿಧ್ವನಿ ಯಲ್ಲಾಪುರ : ನಾಡಿನ ಹಿರಿಯ ಮತ್ತು ಶ್ರೇಷ್ಠ ರಾಜಕಾರಣಿ ಹಳಿಯಾಳ ಕ್ಷೇತ್ರದ ಶಾಸಕ ಮಾಜಿ ಮಂತ್ರಿ ಹಾಲಿ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರ ಜನುಮ ದಿನಕ್ಕೆ ಅವರ ಅತ್ಯಾಪ್ತ ಕಟ್ಟಾ ಕಾಂಗ್ರೆಸ್ಸಿಗ ಸಿದ್ದಿ ಬುಡಕಟ್ಟು ಸಮುದಾಯದ ಮುಖಂಡ ಕಿರವತ್ತಿಯ ಬಾಬು ಸಿದ್ದಿ ಮತ್ತು ತಂಡ ದೇಶಪಾಂಡೆ ಅವರ ನಿವಾಸದಲ್ಲಿ ಭೇಟಿಮಾಡಿ ಹೂಮಾಲೆ ಹಾಕಿ ಹುಟ್ಟು ಹಬ್ಬದ ಶುಭಾಶಯ ಕೋರಿ ಸಂಭ್ರಮಿಸಿದರು. ಆರ್.ವಿ.ದೇಶಪಾಂಡೆ ಅವರಿಗೆ ಯಲ್ಲಾಪುರದ ಬಾಬು …
Read More »ಬಿಲ್ಲಿಗದ್ದೆ ಅರಣ್ಯ ಅತಿಕ್ರಮಣ ಅರಣ್ಯರೋಧನ ಪ್ರಕರಣದ ಸುದ್ದಿಗೆ ಬಿಗ್ ಟ್ವಿಸ್ಟ್.
ಪ್ರತಿಧ್ವನಿ ಯಲ್ಲಾಪುರ : ಕಳೆದೆರಡು ದಿನಗಳ ಹಿಂದೆ ಪ್ರತಿಧ್ವನಿ ಯಲ್ಲಾಪುರ ನ್ಯೂಸ್ ನಲ್ಲಿ ” ಬಿಲ್ಲಿಗದ್ದೆ ಹೊಸದಾಗಿ ಅರಣ್ಯ ಅತಿಕ್ರಮಣ-ಅರಣ್ಯ ರೋಧನ” ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಕಟಗೊಂಡಿತ್ತು. ಸುದ್ದಿ ತಿಳಿದ ಜಾಗದ ಮೂಲ ಮಾಲಿಕರು ಶೇಷಗಿರಿ ಮುರ್ತು ಪ್ರಭು ಸ್ಥಳದಲ್ಲೆ ನಿಂತು ಸಂಪೂರ್ಣ ಮಾಹಿತಿ ನೀಡಿದ್ದು ಪ್ರಕಟವಾದ ಸುದ್ದಿಯಲ್ಲಿ ಸಂಪೂರ್ಣತೆ ಇಲ್ಲ ಮತ್ತು ಸತ್ಯಕ್ಕೆ ದೂರವಾದ ಅಂಶವಾಗಿದೆ. ಇದರ ಸಂಪೂರ್ಣ ವಿವರ ನಾನೆ ಒದಗಿಸುತ್ತೇನೆ ಎಂದು ಸ್ಥಳದ ಮಾಹಿತಿ …
Read More »ಮಕ್ಕಳ ವಿದ್ಯಾಬ್ಯಾಸಕ್ಕೆ ಪ್ರೋತ್ಸಾಹ ನೀಡಲು ಸ್ವಂತ ದುಡಿಮೆಯ ಹಣದಲ್ಲಿ ಪೆನ್ನು ಪುಸ್ತಕ ವಿತರಿಸಿದ-ವಿಟ್ಟು ದೋಂಡು ಪಟಕಾರೆ.
ಪ್ರತಿಧ್ವನಿ ಯಲಾಪುರ :ಇಂದಿನ ಕಾಲಮಾನದಲ್ಲಿ ದುಡಿದ ಹಣ ದುಂದು ಮಾಡಿ ಅರ್ಥಹೀನ ಕೆಲಸಗಳಲ್ಲಿ ಪೋಲು ಮಾಡುವವರ ಮದ್ಯೆ ಸಣ್ಣ ಯಲವಳ್ಳಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಕ್ರಿಯಾಶೀಲ ಯುವಕ ವಿಟ್ಟು ದೋಂಡು ಪಟಕಾರೆ ವಿಬಿನ್ನತೆ ತೋರಿದ್ದು ಕಿರವತ್ತಿ ಗ್ರಾಮ ಪಂಚಾಯತ ವ್ಯಾಪ್ತಿಯ ಶಾಲೆಗಳ 410 ಕ್ಕು ಅಧಿಕ ವಿದ್ಯಾರ್ಥಿಗಳಿಗೆ ತನ್ನ ಸ್ವಂತ ದುಡಿದ ಹಣದಿಂದ ನೋಟ್ ಪುಸ್ತಕ ಮತ್ತು ಪೆನ್ನುಗಳನ್ನು ವಿತರಿಸಿ ಸಾರ್ಥಕತೆ ಮೆರೆದಿದ್ದಾರೆ. ತಾಲೂಕು ಕಿರವತ್ತಿ ಪಂಚಾಯತಿ ವ್ಯಾಪ್ತಿಯ ತೆಂಗಿನಗಿರಿ, …
Read More »ಮಾರಿಷಸ್‌ನಲ್ಲಿ ಪ್ರಯಾಣ, ಪ್ರವಾಸೋದ್ಯಮ ಮತ್ತು ಆತಿಥ್ಯ ವಿಭಾಗದಲ್ಲಿ ಡಿಪ್ಲಮೋ ಮಾಡಲು ಸುವರ್ಣಾವಕಾಶ..
ಪ್ರತಿಧ್ವನಿ ಯಲ್ಲಾಪುರ ಉದ್ಯೋಗವಕಾಶದ ಮಾಹಿತಿ ಮಾರಿಷಸ್ ದೇಶದಲ್ಲಿ ಮಾರಿಷಸ್ ಸರ್ಕಾರದ ಮಾನ್ಯತೆ ಪಡೆದಿರುವ ಎಂ.ಕ್ಯೂ.ಎ ಅನುಮೋದಿತ ಒ.ಸಿ.ಇ.ಪಿ ತರಬೇತಿ ಸಂಸ್ಥೆ ಅಡಿಯಲ್ಲಿ ಎರಡು ವರ್ಷಗಳ ಪ್ರಯಾಣ, ಪ್ರವಾಸೋದ್ಯಮ ಮತ್ತು ಆತಿಥ್ಯ ವಿಭಾಗದಲ್ಲಿ ಡಿಪ್ಲಮೋ ಕೋರ್ಸ್ ಆರಂಬಿಸಿದ್ದು ಎಸ್.ಎಸ್.ಎಲ್.ಸಿ / ದ್ವಿತೀಯ ಪಿಯುಸಿ ಉತ್ತೀರ್ಣರಾದವರು ಈ ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಆಕರ್ಷಕ ಪಾಠ, ಅದ್ಬುತ ಮಾರಿಷಸ್ ಅನ್ನು ಅನ್ವೇಷಿಸಿ ಮಾರಿಷಸ್ ಆತಿಥ್ಯ ವಲಯದಲ್ಲಿ ವ್ಯಾಪಾರ ಮತ್ತು ಉದ್ಯೋಗ ಕುರಿತಂತೆ ಹಲವು ವಿಚಾರಗಳ …
Read More »ಶಾಲೆಯ ಮೂಲಭೂತ ಮತ್ತು ಶೈಕ್ಷಣಿಕ ಬೆಳವಣಿಗೆಯಲ್ಲಿ ಸಮಿತಿ ಪಾತ್ರ ಮುಖ್ಯ – ಪ್ರಶಾಂತ ಪಟಗಾರ್ (ಬಿ.ಆರ್.ಸಿ)
ಪ್ರತಿಧ್ವನಿ ಯಲ್ಲಾಪುರ : ಶಾಲೆಯ ಮೂಲಭೂತ ಮತ್ತು ಶೈಕ್ಷಣಿಕ ಬೆಳವಣಿಗೆಯಲ್ಲಿ ಸಮಿತಿಯ ಪಾತ್ರ ಮುಖ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆಯ ಬಿ.ಆರ್.ಸಿ ಪ್ರಶಾಂತ ಪಟಗಾರ ಹೇಳಿದರು.ಅವರು ಮಂಗಳವಾರ. ಮಂಚಿಕೇರಿಯ ಕೋಸಗುಳಿ ಶಾಲೆಯಲ್ಲಿ ಮಳಲಗಾಂವ್ ಮತ್ತು ಮಂಚಿಕೇರಿ ಕ್ಲಸ್ಟರ್ ನ ಎಸ್.ಡಿ.ಎಂ.ಸಿ ಅಧ್ಯಕ್ಷ ಸದಸ್ಯ ಮತ್ತು ಮುಖ್ಯಾಧ್ಯಾಪಕರ ಒಂದು ದಿನದ ತರಬೇತಿ ಕಾರ್ಯಾಗಾರ ಉಧ್ಘಾಟಿಸಿ ತರಬೇತಿ ನೀಡಿದರು. ಶಾಲೆಯ ಪ್ರಗತಿಯಲ್ಲಿ ಈ ಸಮಿತಿಯ ಜವಾಬ್ದಾರಿ ಮತ್ತು ಕಾರ್ಯವ್ಯಾಪ್ತಿ ಯೋಜನೆ ಬಗ್ಗೆ ವಿವರವಾಗಿ …
Read More »ಕುಮಾರಿ ಶ್ರಾವ್ಯ ಶ್ರೀರಾಮ ಹೆಗಡೆ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆ.
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಮಾಗೋಡು ಕಾಲೋನಿ ಹಿರಿಯಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಕುಮಾರಿ ಶ್ರಾವ್ಯ ಶ್ರೀರಾಮ ಹೆಗಡೆ 2026 ನೇ ಸಾಲಿನ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾಗಿರುತ್ತಾಳೆ. ಶ್ರೀರಾಮ ಹೆಗಡೆ ಮತ್ತು ಸೌಮ್ಯ ಭಾಗ್ವತ ಶಿಕ್ಷಕ ದಂಪತಿಗಳ ಮಗಳಾಗಿರುತ್ತಾಳೆ. ಶಾಲೆಯ ಎಲ್ಲ ಶಿಕ್ಷಕರು ಎಸ್ ಡಿ ಎಮ್ ಸಿ ಯವರು ಊರ ನಾಗರಿಕರು ವಿದ್ಯಾರ್ಥಿನಿಯ ಸಾಧನೆಯನ್ನು ಅಭಿನಂದಿಸಿದ್ದಾರೆ. .
Read More »ಯಲ್ಲಾಪುರದಲ್ಲಿ ನಡೆದ ಯುಗಾದಿ ಉತ್ಸವದ ಜಾಗೃತಿಗಾಗಿ ಬೃಹತ್ ಬೈಕ್ ರ‍್ಯಾಲಿ.
ಪ್ರತಿಧ್ವನಿ ಯಲ್ಲಾಪುರ : ಹಿಂದುಗಳ ನೂತನ ವರ್ಷಾರಂಭ ಯುಗಾದಿ ಯಿಂದ ಪ್ರಾರಂಭಗೊಳ್ಳುವ ಹಿನ್ನೆಲೆಯಲ್ಲಿ ಯಲ್ಲಾಪುರದಲ್ಲಿ ಯುಗಾದಿ ಉತ್ಸವವನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಉತ್ಸವದ ಜಾಗೃತಿಗಾಗಿ ಮಂಗಳವಾರ ಬೃಹತ್ ಬೈಕ್ ರ‍್ಯಾಲಿ ಜರುಗಿತು. ಪಟ್ಟಣ ಕಾಳಮ್ಮನಗರ ಕಾಳಮ್ಮದೇವಾಲಯದಲ್ಲಿ ಪೂಜೆ ನೆರವೇರಿಸಿ ಪ್ರಾರಂಭಗೊಂಡ ಬೈಕ್ ರ‍್ಯಾಲಿಗೆ ಉತ್ಸವ ಸಮಿತಿ ಪ್ರಮುಖರು ಹಿರಿಯರು ಚಾಲನೆ ನೀಡಿದರು. ಪಟ್ಟಣಾಧ್ಯಂತ ಸಂಚರಿಸಿದ ಬೈಕ್ ರ‍್ಯಾಲಿ ಗ್ರಾಮದೇವಿ ದೇವಸ್ಥಾನದಲ್ಲಿ ಸಮಾಪ್ತಿಗೊಂಡಿತು. ರ‍್ಯಾಲಿ ಯಲ್ಲಿ ನೂರಾರು ಬೈಕ್ ಗಳು …
Read More »
Prathidvani Yellapura