Breaking News

Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

ಮನೆಯೊಂದರ ಸ್ನಾನ ಗೃಹದಲ್ಲಿ ಕಂಡ ನಾಗರ – ಅರಣ್ಯ ಇಲಾಖೆ ಸಿಬ್ಬಂದಿ ಯಿಂದ ರಕ್ಷಣೆ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ತಟಗಾರ್ ಕ್ರಾಸ್ ಸಮೀಪ ಸುನಿಲ್ ಯಲ್ಲಾಪುರಕರ್ ಎಂಬುವರ ಮನೆಯಲ್ಲಿ ನಾಗರ ಹಾವೊಂದು ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಮಾಹಿತಿ ಲಭಿಸುತ್ತಲೆ ಅರಣ್ಯ ಇಲಾಖೆ ಸಿಬ್ಬಂದಿ ಪ್ರಶಾಂತ್ ಎಂಬುವರು ಆಗಮಿಸಿ ನಾಗರಹಾವನ್ನು ಹಿಡಿದು ರಕ್ಷಿಸಿ ಅರಣ್ಯದೊಳಗೆ ಜಾಗ್ರತೆಯಿಂದ ಬಿಟ್ಟರು. ಆತಂಕಗೊಂಡಿದ್ದ ಸುನಿಲ್ ಯಲ್ಲಾಪುರಕರ್ ಕುಟುಂಬದವರು ತಕ್ಷಣ ಸ್ಪಂದಿಸಿ ಆತಂಕ ದೂರ ಮಾಡಿದ ಅರಣ್ಯ ಇಲಾಖೆಗು ವಿಶೇಷವಾಗಿ ಸಿಬ್ಬಂದಿ …

Read More »

ದಾವಣಗೆರೆಯ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆ ಪ್ರಶಸ್ತಿಗಳಿಗೆ ಭಾಜನರಾದ ವಜ್ರಳ್ಳಿ ಶಾಲೆ ವಿದ್ಯಾರ್ಥಿಗಳು.

ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ವಜ್ರಳ್ಳಿ ಸರ್ವೋದಯ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ದಾವಣಗೆರೆಯ ” ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆ” ನೀಡುವ ಶಿಕ್ಷಣ ಕ್ಷೇತ್ರದ ಪ್ರಶಸ್ತಿಗಳಿಗೆ ಭಾಜನರಾಗಿದ್ದು ಯಲ್ಲಾಪುರ ತಾಲೂಕಿಗೆ ಓದಿದ ಶಾಲೆಗೆ ಕಲಿಸಿದ ಗುರುಗಳಿಗೆ ಹೆತ್ತ ತಂದೆತಾಯಿಗಳಿಗೆ ಗೌರವ ತಂದಿದ್ದಾರೆ. ಕಳೆದ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರಯುಕ್ತ ಸರ್ವೋದಯ ಪ್ರೌಢಶಾಲೆ ವಜ್ರಳ್ಳಿಯ ವಿದ್ಯಾರ್ಥಿಗಳಾದರಶ್ಮಿತಾ …

Read More »

ಪ್ರತಿಧ್ವನಿ ಸುದ್ದಿಯ ಬಿಗ್ ಇಂಪ್ಯಾಕ್ಟ್ ಹುಣಶೆಟ್ಟಿಕೊಪ್ಪದ ಅಪಾಯಕಾರಿ ಟ್ರಾನ್ಸಫಾರ್ಮರ್ ಸ್ಥಳ ಬದಲಿಸಿದ ಹೆಸ್ಕಾಂ

ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಹುಣಶೆಟ್ಟಿಕೊಪ್ಪದಲ್ಲಿ ಬಸ್ ನಿಲುಗಡೆ ಸಮೀಪದಲ್ಲೇ ಅಪಾಯಕಾರಿಯಾದ ಸ್ಥಿತಿಯಲಿದ್ದ ವಿದ್ಯುತ್ ಟ್ರಾನ್ಸಫಾರ್ಮರ್ ಕುರಿತು ” ಪ್ರತಿಧ್ವನಿ ಯಲ್ಲಾಪುರ ” ವೆಬ್ ನ್ಯೂಸ್ ಎಚ್ಚರಿಸಿ ಸುದ್ದಿ ಪ್ರಕಟಮಾಡಲಾಗಿತ್ತು ವಸ್ತು ಸ್ಥಿತಿಯ ಗಂಭೀರತೆ ಅರಿತ ಹೆಸ್ಕಾಂ ಇಲಾಖೆ ಶನಿವಾರ ಟ್ರಾನ್ಸಫಾರ್ಮರ್ ಸ್ಥಳ ಬದಲಿಸಿ ಮುಂದೆ ಆಗಬಹುದಾಗಿದ್ದ ಅನಾಹುತ ತಪ್ಪಿಸಿದೆ. ಹುಣಶೆಟ್ಟಿಕೊಪ್ಪದಲ್ಲಿ ಬಸ್ ನಿಲುಗಡೆ ಸಮೀಪದಲ್ಲೇ ಟ್ರಾನ್ಸಫಾರ್ಮರ್ ಇದ್ದು ಮಹಿಳೆಯರು ಮಕ್ಕಳು ಹಿರಿಯರು ಬಸ್ ಹತ್ತುವ ಮತ್ತು ಇಳಿಯುವ ಧಾವಂತದಲ್ಲಿ …

Read More »

ವಿದ್ಯಾರ್ಥಿಗಳ ವಿದ್ಯಾಬ್ಯಾಸಕ್ಕಾಗಿ ಮಂಚಿಕೇರಿ-ಯಲ್ಲಾಪುರ ಮದ್ಯ ಸಮರ್ಪಕವಾದ ಬಸ್ ವ್ಯವಸ್ಥೆ ಕಲ್ಪಿಸಿ – ದ್ಯಾಮಣ್ಣ ಬೊವಿ ವಡ್ಡರ್ ಆಗ್ರಹ.

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಮಂಚಿಕೇರಿ – ಯಲ್ಲಾಪುರ ಓಡಾಟ ನಡೆಸುವ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ರೀತಿಯಲ್ಲಿ ಯಲ್ಲಾಪುರ ಬಸ್ ಡಿಪೋದಿಂದದಲೆ ಪ್ರತೇಕ ಬಸ್ ಒಂದನ್ನು ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಅಹಿಂದ ವೇದಿಕೆ ಚಂದಗುಳಿ ಘಟಕದ ವತಿಯಿಂದ ಗುರುವಾರ ಮನವಿ ಸಲ್ಲಿಸಲಾಯಿತು. ಪ್ರತಿನಿತ್ಯ ಮಂಚಿಕೇರಿ ಯಿಂದ ಯಲ್ಲಾಪುರದ ಶಾಲಾ ಕಾಲೇಜುಗಳಿಗೆ ಓಡಾಟ ನಡೆಸುವ ವಿದ್ಯಾರ್ಥಿಗಳಿಗೆ ಶಿರಸಿ ಮಾರ್ಗವಾಗಿ ಬರುವ ಎಲ್ಲಾ ಬಸ್ ಗಳು ನಿಲ್ಲಲು …

Read More »

ಯಲ್ಲಾಪುರದಲ್ಲಿ ಹೆಚ್ಚಾಯ್ತು ಬೀದಿ ನಾಯಿಗಳ ಹಾವಳಿ – ಕ್ರಮ ಕೈಗೊಳ್ಳಬೇಕಿದೆ ಸ್ಥಳೀಯ ಆಡಳಿತ..

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿ ಇತ್ತೀಚೆಗೆ ಪುನಃ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು ಎಲ್ಲೆಂದರಲ್ಲಿ ಗುಂಪುಗುಂಪಾಗಿ ತಿರುಗುತ್ತ ಸಾರ್ವಜನಿಕರ ಮೇಲೆ ದಾಳಿಗೆ ಮುಂದಾಗುತ್ತಿದ್ದು ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಪಟ್ಟಣದಲ್ಲಿನ ಶಾಲಾ ಕಾಲೇಜು ಅಂಗನವಾಡಿಗಳ ಸಮೀಪ ನಾಯಿಗಳ ಗುಂಪು ಕಾಣಿಸುತ್ತಿದ್ದು ಇದರ ಸಂಖ್ಯೆ ಇದ್ದಕ್ಕಿದ್ದಂತೆ ಹೆಚ್ಚಾಗಿದ್ದು ಹೊರಗಿನಿಂದ ನಾಯಿಗಳನ್ನು ತಂದು ಯಲ್ಲಾಪುರಕ್ಕೆ ಬಿಟ್ಟು ಹೋಗುತ್ತಿರಬಹುದೇನೊ ಎಂಬ ಅನುಮಾನ ಕಾಡುತ್ತಿದೆ. ಅದೇನೆ ಇರಲಿ ಬೀದಿ ನಾಯಿಗಳಿಂದ ಆತಂಕ ತಪ್ಪಿದ್ದಲ್ಲ. …

Read More »

ಹುಣಶೆಟ್ಟಿಕೊಪ್ಪದಲ್ಲಿ ಅತ್ಯಂತ ಅಪಾಯಕಾರಿ ಬಸ್ ನಿಲುಗಡೆ – ಟ್ರಾನ್ಸ್ ಫಾರ್ಮರ್ ಸ್ಥಳ ಬದಲಿಸದಿದ್ದರೆ ಜೀವ ಬಲಿ ಖಂಡಿತ.

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಹುಣಶೆಟ್ಟಿಕೊಪ್ಪದಲ್ಲಿ ಬಸ್ ನಿಲುಗಡೆ ಮಾಡುವ ಸ್ಥಳದಲ್ಲಿ ಹೆಸ್ಕಾಂ ಸಂಬಂಧಿಸಿದ ಟ್ರಾನ್ಸಫಾರ್ಮರ್ ಇದ್ದು ಮಹಿಳೆಯರು ಮಕ್ಕಳು ವಯೋವೃದ್ದರು ಇದೇ ಸ್ಥಳದಲ್ಲಿ ಜಮಾಯಿಸಿ ಬಸ್ ಹತ್ತವುದರಿಂದ ಕೊ.ಚ ನಿರ್ಲಕ್ಷ್ಯ ತೋರಿದರು ವಿದ್ಯುತ್ ಅವಘಡಕ್ಕೆ ಜೀವ ಬಲಿಯಾಗುವುದು ಖಂಡಿತವಾಗಿದ್ದು ಅಧಿಕಾರಿಗಳು ಗಂಭೀರವಾಗಿ ಗಮನಹರಿಸಿ ಭವಿಷ್ಯದಲ್ಲಿ ಆಗಬಹುದಾದ ಅನಾಹುತ ತಪ್ಪಿಸಬೇಕಿದೆ ಎಂಬುದು ಸ್ಥಳೀಯ ನಾಗರಿಕರ ಅಭಿಪ್ರಾಯವಾಗಿದೆ. ಸುರಿಯುತ್ತಿರುವ ಮಳೆಯ ನಡುವೆ ಜನರು ವಿದ್ಯುತ್ ಎಚ್ಚರಿಕೆ ಯನ್ನು ಗಮನಿಸದೆ ಬಸ್ ಹತ್ತುವ …

Read More »

ಹುಣಸಗೇರಿಯಿಂದ-ಯಲ್ಲಾಪುರಕ್ಕೆ ಸಾರಿಗೆ ಸೌಲಭ್ಯ- ಶಾಸಕ ಹೆಬ್ಬಾರ್, ಪ್ರಮುಖ ವಿಜಯ್ ಮಿರಾಶಿಗೆ ಕೃತಜ್ಞತೆ ಸಲ್ಲಿಕೆ.

ಪ್ರತಿಧ್ವನಿ ಯಲ್ಲಾಪುರ : ಶಾಸಕ ಶಿವರಾಮ್ ಹೆಬ್ಬಾರ್ ಮತ್ತು ಮುಖಂಡರಾದ  ವಿಜಯ ಮಿರಾಶಿ ಅವರ ನೇತೃತ್ವದಲ್ಲಿ ಹುಣಸಗೇರಿಯಿಂದ -ಯಲ್ಲಾಪುರಕ್ಕೆ ಸಾರಿಗೆ ಸೌಲಭ್ಯ ಪ್ರಾರಂಭಿಸಿದ್ದು ಗ್ರಾಮಸ್ಥರಲ್ಲಿ ಸಂತಸ ಮನೆಮಾಡಿದೆ. ಕಿರವತ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಹುಣಸಗೇರಿ ಗೌಳಿವಾಡಾ ಗ್ರಾಮದಲ್ಲಿ ದಟ್ಟವಾದ ಅರಣ್ಯ ಪ್ರದೇಶ ಹೊಂದಿದ್ದು ಅನೇಕ ಪ್ರಾಣಿಗಳ ಭಯದಿಂದ ಕೂಡಿದೆ. ಇಂತಹ ದುರ್ಗಮ ಅರಣ್ಯದ‌ನಡುವೆ ನಡೆದು ದಾಗುವುದು  ದುಸ್ತರದ ಸಂಗತಿಯಾಗಿತ್ತು. ವಿದ್ಯಾರ್ಥಿಗಳ ವಿದ್ಯಾಬ್ಯಾಸಕ್ಕೆ ಅಡಚಣೆಯಾಗುತ್ತಿತ್ತು. ಈ ಕುರಿತು ಸಮಸ್ಯೆಯನ್ನು ಈ ಭಾಗದ …

Read More »

ಜನರ ಧ್ವನಿಯನ್ನು ಆಡಳಿತದ ಗಮನಕ್ಕೆ ತಲುಪಿಸುವ ಮಹತ್ತರ ಜವಾಬ್ದಾರಿ ಪತ್ರಕರ್ತರು ನಿಭಾಯಿಸುತ್ತಿದ್ದಾರೆ – ಹೆಬ್ಬಾರ್.

ಪ್ರತಿಧ್ವನಿ ಯಲ್ಲಾಪುರ : ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಸಮಾಜದಲ್ಲಿ ಜಾಗೃತಿ ಮೂಡಿಸುವ ಹಾಗೂ ಜನರ ಧ್ವನಿಯನ್ನು ಆಡಳಿತದ ಗಮನಕ್ಕೆ ತಲುಪಿಸುವ ಮಹತ್ತರ ಜವಾಬ್ದಾರಿಯನ್ನು ಪತ್ರಕರ್ತರು ಸಮರ್ಥವಾಗಿ ನಿರ್ವಹಿಸುತ್ತಿರುವುದು‌ ಶ್ಲಾಘನೀಯ ಕಾರ್ಯ ‌ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು. ಅವರು ಮಂಗಳವಾರ ಸವಣಗೇರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ವೇದಿಕೆ ಕಾರ್ಯಕ್ರಮಕ್ಕು ಮೊದಲು ಸವಣಗೇರಿ …

Read More »

ಕುಮಟಾದಲ್ಲಿ ಅತ್ಯಾಧುನಿಕ ಟ್ರೋಮಾ ಸೆಂಟರ್ ಆಸ್ಪತ್ರೆ – ಶಾಸಕ  ದಿನಕರ ಶೆಟ್ಟಿ ಪ್ರಯತ್ನ ಶ್ಲಾಘನೀಯ ರಾಮು ನಾಯ್ಕ್..

ಪ್ರತಿಧ್ವನಿ ಯಲ್ಲಾಪುರ ಛಲ ಬಿಡದ ತ್ರಿವಿಕ್ರಮನಂತೆ, ಸರಕಾರ ಹಾಗೂ ಸಂಬಂಧಿತ ಇಲಾಖೆಗಳ ಬೆನ್ನು ಬಿದ್ದು, ಕುಮಟಾದಲ್ಲಿ ಅತ್ಯಾಧುನಿಕ ಟ್ರೋಮಾ ಸೆಂಟರ್ ಆಸ್ಪತ್ರೆ ಆರಂಭಿಸಿದ ಶಾಸಕ  ದಿನಕರ ಶೆಟ್ಟರಿಗೆ, ನಾಗರಿಕ ವೇದಿಕೆಯ ಪರವಾಗಿ ಅಭಿನಂದಿಸುತ್ತೇನೆ ಎಂದು ಯಲ್ಲಾಪುರದ ನಾಗರಿಕ ವೇಧಿಕೆ ಅಧ್ಯಕ್ಷ ರಾಮುನಾಯ್ಕ್ ಮಾದ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಇತ್ತೀಚೆಗೆ ಆರತಿ ಬೈಲ್ ಘಟ್ಟದಲ್ಲಿ ನಡೆದ ಭೀಕರ ಅಪಘಾತ ಪ್ರತಿ ದಿನ ಒಂದಿಲ್ಲೊಂದು ವಾಹನ ಅಪಘಾತ, ಸಾವು ನೋವು ಸಂಭವಿಸುವ ಅರಬೈಲ ಘಟ್ಟದಂತಹ …

Read More »

ಯಲ್ಲಾಪುರ ಪೊಲೀಸರಿಂದ ವಿದ್ಯಾರ್ಥಿಗಳಿಗೆ ಕಾನೂನು ಪಾಠ

ಪ್ರತಿಧ್ವನಿಯಲ್ಲಾಪುರ : ವಿದ್ಯಾರ್ಥಿಗಳಲ್ಲಿ ಕಾನೂನಿನ ಅರಿವು ಅತಿ ಮುಖ್ಯ. ಬೆಳೆಯುತ್ತಿರುವ ಜಗತ್ತಿನ ಜೊತೆಯಲ್ಲಿ ಹೊಸ ಹೊಸ ರೀತಿಯಲ್ಲಿ ಅಪರಾಧಗಳು ಬೆಳೆಯುತ್ತಿವೆ ಅದಕ್ಕೆ ಕಡಿವವಾಣ ಹಾಕಲೇಬೇಕು. ವಿಶೇಷವಾಗಿ ಹೆಣ್ಣು ಮಕ್ಕಳ ಸುರಕ್ಷತೆಗಾಗಿ ವಿಶೇಷ ಕಾನೂನು ಜಾರಿಯಲಿದ್ದು ಅವುಗಳ ಮಾಹಿತಿಯನ್ನು ವಿದ್ಯಾರ್ಥಿ ದಿಸೆಯಲ್ಲಿ ತಿಳಿದುಕೊಂಡರೆ ಭವಿಷ್ಯದಲ್ಲಿ ಉಪಯುಕ್ತವಾಗಲಿದೆ ಎಂದು ಯಲ್ಲಾಪುರ ಪೊಲೀಸ್ ಠಾಣೆ ಮಹಿಳಾ ಸಿಬ್ಬಂದಿ ರೇಖಾ ಹೇಳಿದರು. ಅವರು ಪಟ್ಟಣದ ಮಾಡೆಲ್ ಸ್ಕೂಲ್ ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಹಮ್ಮಿಕೊಂಡು ಕಾನೂನಿನ ಅರಿವು …

Read More »