Breaking News

Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

ತಾಲೂಕು ಆಡಳಿತ ಸೌಧದಲ್ಲಿ  ಇನ್ನೂ ಅಳವಡಿಸದ ಲಿಫ್ಟ್ – ವಯೋವೃದ್ದರಿಗೆ ಮೆಟ್ಟಿಲು ಹತ್ತುವ ದೌರ್ಭಾಗ್ಯ.

ಕೇಬಲ್ ನಾಗೇಶ್ ಲೇಖನಿಯಲ್ಲಿ🖋 ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಆಡಳಿತಸೌಧ ಲೋಕಾರ್ಪಣೆಗೊಂಡು 3 ವರ್ಷಗಳೆ ಕಳೆಯುತ್ತಾ ಬಂದರು ಇನ್ನೂ ಲಿಫ್ಟ್ ಅಳವಡಿಸದಿರುವುದು ಶೋಚನೀಯ. ಶಾಸಕ ಶಿವರಾಮ ಹೆಬ್ಬಾರ್ ವಿಶೇಷ ಪ್ರಯತ್ನದ ಫಲವಾಗಿ ಪಟ್ಟಣದಲ್ಲಿ ಬಹುತೇಕ ಸರ್ಕಾರಿ ಕಚೇರಿಗಳ ಕಟ್ಟಡಗಳು ಸ್ವಂತ ಜಾಗ ಹೊಂದಿ ಹೈಟೆಕ್ ಸ್ಪರ್ಶ ದಲ್ಲಿ ನಳನಳಿಸುತ್ತಿವೆ ಅವುಗಳಲ್ಲಿ ಬಹು ಪ್ರಮುಖವಾಗಿ ಕೆ.ಬಿ ರಸ್ತೆಯಲ್ಲಿ ನಿರ್ಮಾಣಗೊಂಡ ಮಿನಿ ವಿಧಾನಸೌಧ ಯಲ್ಲಾಪುರದ ಆಡಳಿತ ಸೌಧ ಕೂಡ ಒಂದಾಗಿದೆ. ಕೋಟಿಗಟ್ಟಲೆ ಹಣ …

Read More »

ಟಿ.ಎಂ.ಎಸ್ ಉಳಿಸಿ ಹೋರಾಟದ ಮುಂದಿನ ಹಂತವಾಗಿ ಉಪವಾಸ ಸತ್ಯಾಗ್ರಹ.

ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಟಿ.ಎಂ.ಎಸ್ ಬಾರಿ ಸುದ್ದಿಯಲಿದ್ದು ಆಡಳಿತಾಧಿಕಾರಿ ವಜಾಗೊಳಿಸುವಂತೆ ಗುರುವಾರ ರಸ್ತೆ ತಡೆ ನಡೆಸಲಾಗಿತ್ತು. ಶುಕ್ರವಾರ ಮುಂದುವರೆದ ಭಾಗವಾಗಿ ಟಿ.ಎಂ.ಎಸ್ ಮುಂಭಾಗ ಹಿರಿಯ ಸಹಕಾರಿ ಎನ್.ಕೆ.ಭಟ್ ಅಗ್ಗಾಶಿ ಕುಂಬ್ರಿ ನೇತೃತ್ವದಲ್ಲಿ ಹೋರಾಟ ಸಮಿತಿಯ ಪ್ರಮುಖರು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ರೈತರ ಜೀವನಾಡಿಯಂತಿರುವ ಟಿ.ಎಂ.ಎಸ್ ಸಂಸ್ಥೆಯ ಕತ್ತು ಹಿಚುಕುವ ಕಾರ್ಯ ಹಿಬಂದಿಯ ಬಾಗಿಲಿನಿಂದ ಆಡಳಿತಾಧಿಕಾರಿ ಮೂಲಕ ಮಾಡುತ್ತಿದ್ದು ಇಂತಹ ಹೇಯ ಕೃತ್ಯ ಎಸಗದಂತೆ ತಡೆಯುವ …

Read More »

“ಪ್ರತಿಧ್ವನಿ ಯಲ್ಲಾಪುರ ನ್ಯೂಸ್” ಸುದ್ದಿಗೆ ಸ್ಪಂದನೆ-ಅಂಬೇಡ್ಕರ್ ಕಟ್ಟೆ ಶುಚಿಗೊಳಿಸಿದ ಪಟ್ಟಣ ಪಂಚಾಯತ. ಪೌರಕಾರ್ಮಿಕರಿಗೆ ಪ್ರತಿಧ್ವನಿ ವಂದನೆ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಕಟ್ಟೆಗೆ ಕವಳ ತಿಂದು ಉಗಿದು ಅಪಮಾನ ಮಾಡಿರುವ ಘಟನೆಯ ಕುರಿತು ತೊಗಲು ಹರಳಯ್ಯ ಟ್ರಸ್ಟ್ ಅಧ್ಯಕ್ಷ ಜಗನ್ನಾಥ ರೇವಣ್ಕರ್ ಖಂಡಿಸಿ ಹೋರಾಟದ ಎಚ್ಚರಿಕೆ ನೀಡಿದ ಸುದ್ದಿಯನ್ನು ಪ್ರತಿಧ್ವನಿ ಯಲ್ಲಾಪುರ ನ್ಯೂಸ್ ತಕ್ಷಣದಲ್ಲೇ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ ಪಟ್ಟಣ ಪಂಚಾಯತ ತಕ್ಷಣಕ್ಕೆ ಅಂಬೇಡ್ಕರ್ ಕಟ್ಟೆ ತೊಳೆದು ಶುಚಿಗೊಳಿಸಿದ್ದಾರೆ.ತೊಗಲು ಹರಳಯ್ಯ ಟ್ರಸ್ಟ್ ಅಧ್ಯಕ್ಷ ಜಗನ್ನಾಥ ರೇವಣ್ಕರ್ ಮುಂದೆ ನಿಂತು ಪಟ್ಟಣ ಪಂಚಾಯತ ಆರೋಗ್ಯ …

Read More »

ಪ್ರತಿಭಟನೆ ಹೆಸರಲ್ಲಿ ಅಂಬೇಡ್ಕರ್ ವೃತ್ತಕ್ಕೆ ಅಪಮಾನ – ಕ್ರಮ ಜರುಗಿಸದಿದ್ದರೆ ಹೋರಾಟದ ಎಚ್ಚರಿಕೆ – ಜಗನ್ನಾಥ ರೇವಣ್ಕರ್.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಪ್ರತಿಷ್ಠಿತ ಎಂದೇ ಪರಿಗಣಿಸುವ ಅಂಬೇಡ್ಕರ್ ವೃತ್ತದ ಅಂಬೇಡ್ಕರ್ ಕಟ್ಟೆಗೆ ಕವಳ ಉಗಿದು ಅವಮಾನಿಸಿರುವುದನ್ನು ದಲಿತ ಪ್ರಮುಖ ತೊಗಲು ಹರಳಯ್ಯ ಟ್ರಸ್ಟ್ ಅಧ್ಯಕ್ಷ ಜಗನ್ನಾಥ ರೇವಣ್ಕರ್ ಉಗ್ರವಾಗಿ ಖಂಡಿಸಿರುವುದಲ್ಲದೆ ಸಂಬಂಧಿಸಿದ ಇಲಾಖೆಗಳು ಕ್ರಮಜರುಗಿಸದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಟಿ.ಎಂ.ಎಸ್ ಉಳಿಸಿ ಹೋರಾಟದ ವೇದಿಕೆ ಅಡಿಯಲ್ಲಿ ರಸ್ತೆ ತಡೆ ನಡೆಸಿ ಹೋರಾಟ ನಡೆಸಿದ್ದರು. ಈ ಸಂದರ್ಭದಲ್ಲಿ ವೃತ್ತದ ಮದ್ಯದಲ್ಲಿರುವ ಅಂಬೇಡ್ಕರ್ ಕಟ್ಟೆಗೆ …

Read More »

ಟಿ.ಎಂ.ಎಸ್ ಉಳಿಸಿ ಹೋರಾಟ ಕೆಲವೇ ಜನರ ಪ್ರಹಸನ – ಪ್ರಸಾದ ಹೆಗಡೆ ಮಾತು ಖಂಡನೆಗೆ ಅರ್ಹ- ವಿ.ಎಸ್ ಭಟ್.

ಪ್ರತಿಧ್ವನಿ ಯಲ್ಲಾಪುರ – ಟಿ.ಎಂ.ಎಸ್ ಉಳಿಸಿ ಎಂಬ ಪ್ರಹಸನ ಕೆಲವೆ ಮಂದಿಗೆ ಸೀಮಿತವಾಗಿದೆ. ಸಹಕಾರಿ ರಂಗದ ಕಿಂಚಿತ್ತು ಅರಿವಿರದ ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ್ ಹೆಗಡೆ ಮಾತು ಬಾಲಿಷವಾಗಿದೆ.ರಾಜ್ಯ ಮಟ್ಟದಲ್ಲಿ ಶ್ರೇಷ್ಠ ಸಹಕಾರಿಗಳಲ್ಲಿ ಓರ್ವರಾದ ಶಾಸಕ ಶಿವರಾಮ ಹೆಬ್ಬಾರ್ ಅವರ ಬಗ್ಗೆ ಮಾತನಾಡುವ ಯಾವ ನೈತಿಕತೆ ಪ್ರಸಾದ್ ಹೆಗಡೆಗೆ ಇರುವುದಿಲ್ಲ.ಟಿ.ಎಂ.ಎಸ್ ಸಂಸ್ಥೆಯ ಇತಿಹಾಸ ಗೊತ್ತಿರದ ನೀವಿನ್ನು ಹಸುಳೆ ಎಂದು ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್ ಭಟ್ ಗುರುವಾರ ಯಲ್ಲಾಪುರದ ಅಂಬೇಡ್ಕರ್ …

Read More »

ನಾಯಕನಕೆರೆಯ ಶ್ರೀ ಶಾರದಾಂಬಾ ವೇದ ಸಂಸ್ಕೃತ ಪಾಠಶಾಲೆಯಲ್ಲಿ ಮಾ.15 ರಂದು ವಾರ್ಷಿಕ ಧಾರ್ಮಿಕ ಕಾರ್ಯಕ್ರಮ

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ನಾಯಕನಕೆರೆಯ ಶ್ರೀ ಶಾರದಾಂಬಾ ವೇದ ಸಂಸ್ಕೃತ ಪಾಠಶಾಲೆಯಲ್ಲಿ ಮಾ.15 ರಂದು ವಾರ್ಷಿಕ ಧಾರ್ಮಿಕ ಕಾರ್ಯಕ್ರಮ ಪ್ರಾತಃಕಾಲದಲ್ಲಿ ನವಗ್ರಹಹೋಮ, ಗಣಹೋಮ, ಸರಸ್ವತೀ ಹೋಮ ಮುಂತಾದ ಧಾಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಮುಖ್ಯಾಧ್ಯಾಪಕ ಡಾ.ಶಿವರಾಮ ಭಾಗ್ವತ ತಿಳಿಸಿದ್ದಾರೆ. ಮಧ್ಯಾಹ್ನ 2-30 ಕ್ಕೆ ನಡೆಯುವ ಸಾಹಿತ್ಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆಯು ಸಂಸ್ಥೆಯ ಅಧ್ಯಕ್ಷ ಉಮೇಶ ಭಾಗ್ವತ ಅಧ್ಯಕ್ಷತೆಯಲ್ಲಿ ನಡೆಯುವುದು. ಉಪನ್ಯಾಸಕರಾಗಿ ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಅಭ್ಯಾಗತರಾಗಿ …

Read More »

ಕಿರವತ್ತಿ ದೊಡ್ಲ ಡೈರಿಯಲ್ಲಿ ” ಸುರಕ್ಷತೆಗೆ ಸಂಬಂಧಿಸಿದ ಜಾಗೃತಿ ಮತ್ತು ಸ್ಪರ್ಧೆಗಳು..

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಕಿರವತ್ತಿ ಸಮೀಪದ ದೊಡ್ಲಾ ಹಾಲಿನ ಡೈರಿ ಘಟಕದಲ್ಲಿ ಸುರಕ್ಷತೆಗೆ ಸಂಬಂದಿಸಿದಂತೆ ವಿವಿಧ ಸ್ಪರ್ಧೆಗಳು ಹಾಗು ಜಾಗೃತಿ ಕಾರ್ಯಕ್ರಮ ಜರುಗಿತು. 55ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ 2026 ಅಂಗವಾಗಿ ಡೋಡ್ಲಾ ಡೈರಿ ಲಿಮಿಟೆಡ್, ಕಿರವಟ್ಟಿ ಘಟಕ ವತಿಯಿಂದ ಎಲ್ಲಾ ಉದ್ಯೋಗಿಗಳು ಹಾಗೂ ಗುತ್ತಿಗೆ ಆಧಾರದ ಕಾರ್ಮಿಕರಿಗಾಗಿ ವಿವಿಧ ಸುರಕ್ಷತಾ ಸ್ಪರ್ಧೆಗಳನ್ನು ಆಯೋಜಿಸಲಾಯಿತು.  ಸ್ಪರ್ಧೆಗಳಲ್ಲಿ ಸುರಕ್ಷತಾ ಕ್ವಿಜ್, ಚಿತ್ರಕಲೆ, ಘೋಷವಾಕ್ಯ ಬರವಣಿಗೆ ಹಾಗೂ ರೋಲ್ ಪ್ಲೇ ಸ್ಕಿಟ್ …

Read More »

ಯಲ್ಲಾಪುರ ಮಾರುಕಟ್ಟೆಗೆ ಬಾಯಲ್ಲಿ ನೀರೂರಿಸುವ “ಅಪ್ಪೆಮಿಡಿ ಮಾವಿನ ಆಗಮನ”

ಪ್ರತಿಧ್ವನಿ ಯಲ್ಲಾಪುರ : ಉತ್ತರಕನ್ನಡ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳಾದ ಯಲ್ಲಾಪುರ, ಶಿರಸಿ, ಸಿದ್ದಾಪುರ ಹಾಗೂ ದಾಂಡೇಲಿಯ ಕೆಲ ಭಾಗಗಳಲ್ಲಿ ಹೇರಳವಾಗಿ ದೊರೆಯುತ್ತಿದ್ದ ಅಪ್ಪೆಮಿಡಿ ಹಾಗೂ ಜೀರಿಗೆ ಮಾವು ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗುತ್ತಿರುವುದು ಮಿಡಿ ಉಪ್ಪಿನಕಾಯಿ ಸವಿಯುವವರಿಗೆ ಬೇಸರ ತಂದಿದೆ. ಸದ್ಯ ಈ ಬಾರಿ ಮಾರುಕಟ್ಟೆಗೆ ಅಪ್ಪೆ ಮಿಡಿಮಾವು ಲಗ್ಗೆ ಇಟ್ಟಿದ್ದು ನಿಧಾನವಾಗಿ ಗ್ರಾಹಕರನ್ನ ತನ್ನತ್ತ ಸೆಳೆಯುತ್ತಿದೆ. ನೂರು ಮಿಡಿಗಳಿಗೆ ಗರಿಷ್ಠ 200 ರುಪಾಯಿಯಂತೆ ಮಾರಾಟವಾಗುತ್ತಿದ್ದು ಲಭ್ಯತೆಯನ್ನಾಧರಿಸಿ ದರ ನಿಗದಿಯಾಗುತ್ತ …

Read More »

ಯಲ್ಲಾಪುರ ತಾಲೂಕು ಕಾಂಗ್ರೆಸ್ ಪಕ್ಷ ಸಂಘಟನೆಗೆ ನೂತನ‌ ಸಮಿತಿ ಪಟ್ಟಿ ಬಿಡುಗಡೆ.

ಪ್ರತಿಧ್ವನಿ ಯಲ್ಲಾಪುರ : ರಾಜ್ಯದಲ್ಲಿ ಅತಿ ಶೀಘ್ರದಲ್ಲಿ ವಿವಿಧ ಹಂತದ ಚುನಾವಣೆ ಎದುರಾಗಲಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ.ಯಲ್ಲಾಪುರ ತಾಲೂಕಿನಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಪ್ರಬಲವಾದ ಕಾರ್ಯಕರ್ತರ ಪಡೆ ಹೊಂದಿದ್ದು ಮತ್ತಷ್ಟು ಪಕ್ಷ ಸಂಘಟನೆಗೆ ಒತ್ತು ನೀಡಿ ನೂತನ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್.ಭಟ್ ನೂತನ ಪಟ್ಟಿ ಬಿಡುಗಡೆ ಮಾಡಿ ಸಮಿತಿ ಸದಸ್ಯರು ತಮ್ಮ ತಮ್ಮ ಕಾರ್ಯಕ್ಷೇತ್ರದಲ್ಲಿ …

Read More »

ಬೀದಿಗೆ ಬಂದ ಯಲ್ಲಾಪುರ ಟಿ.ಎಂ.ಎಸ್ ಆಡಳಿತಾಧಿಕಾರಿ ವಿರುದ್ದದ ಜಟಾಪಟಿ – ರಸ್ತೆ ತಡೆ ನಡೆಸಿದ ರೈತರು.

ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಲ್ಲಿ ಒಂದಾದ ಟಿ.ಎಂ.ಎಸ್ ಆಡಳಿತಾಧಿಕಾರಿ ನಡೆಯ ವಿರುದ್ದ ರೈತರು ಸಿಡಿದಿದ್ದು ಗುರುವಾರ ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದರು. ಹಿರಿಯ ಸಹಕಾರಿ ಸಂಸ್ಥೆಯ ಮಾಜಿ ಅಧ್ಯಕ್ಷ ನಾರಾಯಣ ಭಟ್ ಅಗ್ಗಾಶಿಕುಂಬ್ರಿ ಸ್ಥಳೀಯ ಶಾಸಕರ ವಿರುದ್ದ ನೇರ ವಾಗ್ದಾಳಿ ನಡೆಸಿ ಅತ್ಯಂತ ಸುಭದ್ರ ಹಾಗು ರೈತ ಸ್ನೇಹಿ ಟಿ.ಎಂ‌.ಎಸ್ ಸಂಸ್ಥೆಯ ಅಸ್ತಿತ್ವಕ್ಕೆ ಧಕ್ಕೆ ತರುವ ಹುನ್ನಾರ ನಡೆಸುತ್ತಿದ್ದು ಅದರ ಭಾಗವಾಗಿ …

Read More »