Breaking News

ಯಲ್ಲಾಪುರ ಮಾರುಕಟ್ಟೆಗೆ ಬಾಯಲ್ಲಿ ನೀರೂರಿಸುವ “ಅಪ್ಪೆಮಿಡಿ ಮಾವಿನ ಆಗಮನ”

ಪ್ರತಿಧ್ವನಿ ಯಲ್ಲಾಪುರ : ಉತ್ತರಕನ್ನಡ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳಾದ ಯಲ್ಲಾಪುರ, ಶಿರಸಿ, ಸಿದ್ದಾಪುರ ಹಾಗೂ ದಾಂಡೇಲಿಯ ಕೆಲ ಭಾಗಗಳಲ್ಲಿ ಹೇರಳವಾಗಿ ದೊರೆಯುತ್ತಿದ್ದ ಅಪ್ಪೆಮಿಡಿ ಹಾಗೂ ಜೀರಿಗೆ ಮಾವು ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗುತ್ತಿರುವುದು ಮಿಡಿ ಉಪ್ಪಿನಕಾಯಿ ಸವಿಯುವವರಿಗೆ ಬೇಸರ ತಂದಿದೆ. ಸದ್ಯ ಈ ಬಾರಿ ಮಾರುಕಟ್ಟೆಗೆ ಅಪ್ಪೆ ಮಿಡಿಮಾವು ಲಗ್ಗೆ ಇಟ್ಟಿದ್ದು ನಿಧಾನವಾಗಿ ಗ್ರಾಹಕರನ್ನ ತನ್ನತ್ತ ಸೆಳೆಯುತ್ತಿದೆ.


ನೂರು ಮಿಡಿಗಳಿಗೆ ಗರಿಷ್ಠ 200 ರುಪಾಯಿಯಂತೆ ಮಾರಾಟವಾಗುತ್ತಿದ್ದು ಲಭ್ಯತೆಯನ್ನಾಧರಿಸಿ ದರ ನಿಗದಿಯಾಗುತ್ತ ಸಾಗಲಿದೆ. ಮಾರುಕಟ್ಟೆಗೆ ಮಿಡಿ ಮಾವು ಬರುವ ಪ್ರಮಾಣವೆ ಕಡಿಮೆ ಎನಿಸಿದರು ಅಪ್ಪೆ ಮಿಡಿ ತನ್ನ ಮೌಲ್ಯ ಕಳೆದುಕೊಳ್ಳದೇ ಗ್ರಾಹಕರನ್ನು ಸೆಳೆಯುತ್ತಿದೆ. ಒಟ್ಟಿನಲ್ಲಿ ಊಟದ ಜೊತೆ ಉಪ್ಪಿನಕಾಯಿ ಇಲ್ಲದೇ ಊಟವೇ ಸೇರದ ಅನೇಕರಿಗೆ ಅಪ್ಪೆಮಿಡಿ ಬಲುಪ್ರೀತಿ..


ವರ್ಷದಿಂದ ವರ್ಷಕ್ಕೆ ಮಾವಿನ ಫಸಲು ಕಡಿಮೆಯಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಅಪ್ಪೆಮಿಡಿ ಹಾಗೂ ಜೀರಿಗೆ ಮಿಡಿ ಉಪ್ಪಿನಕಾಯಿಗೆ ಯೋಗ್ಯವಾಗಿದ್ದು ಹೊಳೆಬದಿಯ ಹಳೆಯ ಮರಗಳಲ್ಲಿ ಸಿಗುವ ಮಿಡಿ ಮಾವು ರುಚಿಕರವಾಗಿರುತ್ತದೆ. ಆದರೆ ಮನುಷ್ಯನ ಆಸೆಗೆ ಕೇವಲ ಮಿಡಿಗಳನ್ನು ಕೀಳದೇ ರೆಂಬೆಗಳನ್ನೇ ಕತ್ತರಿಸುತ್ತಿರುವುದು ಮತ್ತು ಗಾಳಿ-ಮಳೆಗೆ ಮರಗಳೇ ಉರುಳುತ್ತಿರುವುದು ರುಚಿಕರವಾದ ಮಾವಿನ ಮಿಡಿಗೆ ಧಕ್ಕೆ ತಂದೊಡ್ಡಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

“ಸೇವೆ ಎಂಬ ಯಜ್ಞದಲ್ಲಿ ಸಮಿತೆಯಂತೆ ಉರಿಯುವ” ಹಿಂದು ಮುಖಂಡ ಸೋಮೇಶ್ವರ ನಾಯ್ಕ್ ಗೆ ಒಪ್ಪುವಂತಹ ಸಾಲುಗಳು.

ಪ್ರತಿಧ್ವನಿ ಯಲ್ಲಾಪುರ : ಸೇವಾ ಭಾವದಲ್ಲಿ ಸಮಾಜಕ್ಕಾಗಿ ಶ್ರಮಿಸುವ ಮತ್ತು ಸಮಾಜದ ಒಳಿತಿಗಾಗಿ ಸದಾ ಮಿಡಿವ ಮನಸ್ಸುಗಳಲ್ಲಿ ಯಲ್ಲಾಪುರದ ಹಿಂದು …

Leave a Reply

Your email address will not be published. Required fields are marked *