
ಪ್ರತಿಧ್ವನಿ ಯಲ್ಲಾಪುರ : ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರ ಅಳವಡಿಸಿದ್ದ ಬೃಹತ್ ಫಲಕಕ್ಕೆ ಸರ್ಕಾರದ ಗ್ಯಾರಂಟಿ ಯೋಜನೆಯ ಗೃಹ ಲಕ್ಷ್ಮೀ ಯೋಜನೆಯು 3 ವರ್ಷ ತುಂಬಿದ ಪ್ರಚಾರ ಪರದೆಯನ್ನು ಅಳವಡಿಸಿದ್ದು ಸ್ಥಳೀಯ ದಲಿತ ಸಂಘಟನೆಗಳ ಅಸಮಧಾನಕ್ಕೆ ಕಾರಣವಾಗಿದೆ.
ಈ ಸಂಬಂಧ ತೊಗಲು ಅರಳಯ್ಯ ಟ್ರಸ್ಟ್ ಅಧ್ಯಕ್ಷ ದಲಿತ ಮುಖಂಡ ಜಗನ್ನಾಥ ರೇವಣ್ಕರ್ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದು ಈ ಕೃತ್ಯ ಎಸಗಿದವರ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಬದಲಿಸಿರುವುದು ಯಾವುದೊ ಕಾರ್ಯಕ್ರಮದ ಜಾಹಿರಾತು ಫಲಕವಲ್ಲ ಬದಲಾಗಿ ಪಟ್ಟಣದ ಪ್ರಮುಖ ಅಂಬೇಡ್ಕರ್ ವೃತ್ತದಲ್ಲಿನ ಈ ಫಲಕದಲ್ಲಿ ಪ್ರತಿ ವರ್ಷ ಅಂಬೇಡ್ಕರ್ ಜಯಂತಿ ವಿಜ್ರಂಭಣೆಯಿಂದ ಆಚರಿಸುವ ಸಂದರ್ಭದಲ್ಲಿ ಹೊಸದಾದ ಬೃಹತ್ ಪರದೆಯನ್ನು ಈ ಹೋಲ್ಡಿಂಗ್ ನಲ್ಲಿ ಅಳವಡಿಸಲಾಗುತ್ತದೆ.

ಅದನ್ನು ಸ್ಥಳೀಯ ಶಾಸಕರ ಕೈಯಲ್ಲಿ ಉದ್ಘಾಟನೆ ಮಾಡಿಸಲಾಗಿದೆ. ಈ ಫಲಕದ ಮೇಲೆ ಮತ್ತು ಆ ವೃತ್ತದ ಮೇಲೆ ವಿಶೇಷವಾಗಿ ದಲಿತ ಸಮುದಾಯದವರಲ್ಲಿ ಭಾವನಾತ್ಮಕ ಸಂಬಂಧವಿದ್ದು ಆ ಭಾವನೆಗೆ ದಕ್ಕೆತಂದಿದ್ದಾರೆ ಎಂಬುದು ಹಲವು ದಲಿತ ಮುಖಂಡರ ಆಕ್ರೋಶದ ನುಡಿಗಳಾಗಿದೆ.

ಕನಿಷ್ಟಪಕ್ಷ ಸೌಜನ್ಯಕ್ಕು ಈ ಕುರಿತು ಸ್ಥಳೀಯ ದಲಿತ ಮುಖಂಡರ ಗಮನಕ್ಕು ತರದೆ ಬಾಬಾ ಸಾಹೇಬರ ಭಾವಚಿತ್ರ ಮುಚ್ಚಿ ಸರ್ಕಾರದ ಜಾಹಿರಾತು ಪರದೆ ಹಾಕಿರುವುದು ಅಕ್ಷಮ್ಯವಾಗಿದ್ದು ಸಂಬಂಧಿಸಿದ ಇಲಾಖೆ ಸ್ಪಷ್ಟನೆ ಕೊಡಬೇಕಿದೆ ಮತ್ತು ಕ್ರಮ ಜರುಗಿಸಬೇಕಿದೆ ಎಂಬುದು ಹಿರಿಯ ದಲಿತ ಮುಖಂಡ ಜಗನ್ನಾಥ ರೇವಣಕರ ಅವರ ಆಗ್ರಹವಾಗಿದೆ



















Prathidvani Yellapura