
ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ವೈಟಿಎಸ್ಎಸ್ ಕಾಲೇಜು ಇಂಗ್ಲೀಷ್ ಉಪನ್ಯಾಸಕಿ ಅಶ್ವನಿ.ಕೆ ಹಾಗು ಕಂಚನಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ಸುಧಾಕರ ನಾಯ್ಕ್ ಅವರಿಗೆ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದ್ದು ಶನಿವಾರ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಕೆಪಿಸಿಸಿ ಶಿಕ್ಷಕ ಘಟಕದ ಅಡಿಯಲ್ಲಿ ನೀಡುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಬೆಂಗಳೂರಿನ ಕ್ವಿನ್ಸ್ ರಸ್ತೆಯಲ್ಲಿರುವ ” ಭಾರತ್ ಜೋಡೋ ಭವನದಲ್ಲಿ ” ನಡೆದ ಸಮಾರಂಭದಲ್ಲಿ ನೀಡಲಾಯಿತು.

ಕೆಪಿಸಿಸಿ ರಾಜ್ಯಾಧ್ಯಕ್ಷ ಬಿ.ಕೆ.ಹರಿಪ್ರಸಾದ್, ಶಿಕ್ಷಕರ ಘಟಕದ ರಾಜ್ಯಾಧ್ಯಕ್ಷ ಬಸವರಾಜ್ ಗುರಿಕಾರ ಸೇರಿದಂತೆ ಹಲವು ಪ್ರಮುಖ ನಾಯಕರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಪ್ರಶಸ್ತಿ ಲಭಿಸಿದ ಮೇಲೆ ಮತ್ತಷ್ಟು ಜವಾಬ್ದಾರಿ ಹೆಚ್ಚುತ್ತದೆ, ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು ಅದನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಿದ್ದೇನೆ.
ಅಶ್ವಿನಿ,ಕೆ
ಉಪನ್ಯಾಸಕಿ
ವೈಟಿಎಸ್ಎಸ್ ಕಾಲೇಜು, ಯಲ್ಲಾಪುರ.

ಶಿಕ್ಷಣ ಕ್ಷೇತ್ರದಲ್ಲಿನ ಸೇವೆಗೆ ಪರಿಗಣಿಸಿ ನೀಡುತ್ತಿರುವ ರಾಜ್ಯಮಟ್ಟದ ಪ್ರಶಸ್ತಿ ಹೊಣೆಗಾರಿಕೆ ಹೆಚ್ಚಿಸಿದೆ ಅಲ್ಲದೆ ಶಿಕ್ಷಕ ದಿನಾಚರಣೆ ಸಂದರ್ಭದಲ್ಲಿ ಪಡೆಯುತ್ತಿರುವುದಕ್ಕೆ ಮತ್ತಷ್ಟು ಹೆಮ್ಮೆ ಇದೆ.
ಸುಧಾಕರ ಜಿ ನಾಯ್ಕ್
ಮುಖ್ಯೋಪಾಧ್ಯಾಯ
ಕಂಚನಳ್ಳಿ ಶಾಲೆ
ಯಲ್ಲಾಪುರ


















Prathidvani Yellapura