
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ತಾಲೂಕಾ ಪಂಚಾಯತ್ ಸಭಾ ಭವನದಲ್ಲಿ ಸೋಮವಾರ ತಾಲೂಕಾ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಮಾಸಿಕ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ದೇವಿದಾಸ (ಉಲ್ಲಾಸ) ನಾಗೇಶ್ ಶಾನಭಾಗ ತಾಲ್ಲೂಕಿನಲ್ಲಿ ಗ್ಯಾರಂಟಿ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಟಾನಗೊಳ್ಳುತ್ತಿದ್ದು ಸಾಧಕ ಭಾದಕಗಳ ಚರ್ಚೆ ಮಾಸಿಕವಾಗಿ ನಡೆಯುವ ಸಭೆಯಲ್ಲಿ ಚರ್ಚಿಸುವ ಮೂಲಕ ಸಮಸ್ಯೆ ಇದ್ದಲ್ಲಿ ಬಗೆಹರುಸಿಕೊಳ್ಳಲು ಅನುಕೂಲಕರವಾಗಿದೆ. ಅಧಿಕಾರಿಗಳು ತಮ್ಮತಮ್ಮ ವ್ಯಾಪ್ತಿಗೆ ಬರುವ ಯೋಜನೆಗಳ ಕುರಿತು ಸಮಸ್ಯೆ ಇದ್ದಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಿ ಎಂದು ಸಭೆಗೆ ಹೇಳಿದರು.

ಸಮಿತಿಯ ಸದಸ್ಯರಾದ ಟಿ ಸಿ ಗಾಂವ್ಕರ್, ಬಸ್ಥಾoವ ಬಾಳಗುಂದಿಕರ್ , ಅನಂತ ಕೋಟೆಮನೆ , ನಾಗರಾಜ್ ಕೈಟ್ಕರ್, ಮುಷರತ್ ಖಾನ್, ನರ್ಮದಾ ನಾಯ್ಕ್, ಎಂ ಕೆ ಭಟ್, ಅನಿಲ್ ಮರಾಠೆ , ಶಿವಾನಂದ ನಾಯ್ಕ್ ಸಾರಿಗೆ ಇಲಾಖೆ, ಆಹಾರ ಇಲಾಖೆ, ಹೆಸ್ಕಾಂ ಇಲಾಖೆ, ಯುವನಿಧೀ ಇಲಾಖೆ, ಸಿ ಡಿ ಪೀ ಓ ಇಲಾಖೆಯ ಅಧಿಕಾರಿಗಳು ,ಎನ್ ಆರ್ ಎಲ್ ಎಂ ಸ್ವಯಂ ಸೇವಕಿಯರು, ಅಧಿಕಾರಿ ಮಂಜಣ್ಣ, ರೇಗೊ ಉಪಸ್ಥಿತರಿದ್ದರು.
ಗೃಹ ಲಕ್ಷ್ಮೀ,ಗ್ರಹ ಜ್ಯೋತಿ,ಪಡಿತರ ವಿತರಣಾ ವ್ಯವಸ್ಥೆ ,ಸಾರಿಗೆ ವ್ಯವಸ್ಥೆ, ಯುವನಿಧಿ ತರಬೇತಿ ಬಗ್ಗೆ ವಿಸ್ತಾರವಾಗಿ ಚರ್ಚಿಸಲಾಯಿತು. ಮಹೇಶ್ ನಾಯ್ಕ್ ಸ್ವಾಗತಿಸಿದರು ಮತ್ತು ಎನ್.ಆರ್.ಎಲ್‌ಎಂ ಮಂಜಣ್ಣ ವಂದಿಸಿದರು.










Prathidvani Yellapura