Breaking News

ವಿಷ ಪ್ರಾಶನಕ್ಕೆ 6 ಶ್ವಾನಗಳ ಸಾವು ತಳ್ಳೀಗೆರೆಯಲ್ಲಿ ನಡೆದ ಅಮಾನವೀಯ ಘಟನೆ – ತನಿಖೆಗೆ ಆಗ್ರಹಿಸಿದ ವಿಜಯ್ ಮಿರಾಶಿ.

ಪ್ರತಿಧ್ವನಿ ಯಲ್ಲಾಪುರ : ಒಂದೇ ದಿನ ಒಂದೇ ಏರಿಯಾದಲ್ಲಿ  ನಾಲ್ಕು ನಾಯಿಗಳು ಸಾವನಪ್ಪಿದ ಧಾರುಣ ಘಟನೆ ಶುಕ್ರವಾರ ಪಟ್ಟಣದ ತಳ್ಳೀಗೇರಿಯಲ್ಲಿ ನಡೆದಿದೆ.

ಬದ್ದತೆ ತೋರಿದ ಸಮಾಜ ಸೇವಕ ವಿಜಯ್ ಮಿರಾಶಿ

ವಿಷಯ ತಿಳಿಯುತ್ತಲೆ ಸ್ಥಳಕ್ಕಾಗಮಿಸಿದ ಸ್ಥಳೀಯ ಮುಖಂಡ ಸಮಾಜ ಸೇವಕ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ್ ಮಿರಾಶಿ ಪರಿಸ್ಥಿತಿಯ ಗಂಭೀರತೆ ಅರಿತು ಸಂಬಂಧಿಸಿದ ಅಧಿಕಾರಿಗಳಿಗೆ ಕರೆಮಾಡಿ ಸಾವನಪ್ಪಿದ ಶ್ವಾನಗಳನ್ನು ಬೇರೆಡೆಗೆ ಸಾಗಿಸಲು ಸೂಚಿಸಿದರು ಮೊದಲಿಗೆ ಅಲ್ಲಿಯ ಜನರು ಹಾವಿನ ಕಡಿತಕ್ಕೆ ಈ ರೀತಿ ನಾಯಿಗಳು ಸಾವನಪ್ಪಿವೆ ಎಂದು ಭಾವಿಸಿದ್ದರು,ಸ್ಥಳೀಯ ಜನರ ಆತಂಕ ಕಂಡು ವಿಷಪೂರಿತ ಹಾವನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸುವ ಪ್ರಯತ್ನ ಮಾಡಿಸಿದರು ಆದರೆ ಹಾವು ಸಿಗಲಿಲ್ಲ. ಸಾವನಪ್ಪಿದ ನಾಯಿಗಳನ್ನು ಪಟ್ಟಣ ಪಂಚಾಯತ ಸಿಬ್ಬಂದಿಗಳು ಬೇರೆಡೆಗೆ ಸಾಗಿಸಿದರು ಶನಿವಾರ ಬೆಳಗ್ಗೆ ಮತ್ತೆರಡು‌ ನಾಯಿಗಳು ಸತ್ತು ಬಿದ್ದಿರುವುದು ಕಂಡು ಬಂತು ಆಗ ಅನುಮಾನಗೊಂಡು ಪರಿಶೀಲಿಸಿದಾಗ ನಾಯಿಗಳಿಗೆ ವಿಷವಿಕ್ಕಿರುವುದು ಮೇಲ್ನೋಟಕ್ಕೆ ದೃಡವಾಯಿತು.

ಇಂತಹ ಅಮಾನವೀಯ ಕೃತ್ಯ ಎಸಗಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ, ಇದರಿಂದ ವಿಷ ವಸ್ತುವನ್ನು ಹಸುಗಳು ಅಥವ ಇತರೆ ಪ್ರಾಣಿಗಳು ತಿನ್ನುವ ಆತಂಕವಿದ್ದು ಇದೊಂದು ಅತ್ಯಂತ ಕೆಟ್ಟ ಕೃತ್ಯವಾಗಿದೆ ಇದನ್ನು ತನಿಖೆಗೆ ಒಳಪಡಿಸಬೇಕೆಂದು ಸ್ಥಳೀಯ ಪ್ರಮುಖ ವಿಜಯ್ ಮಿರಾಶಿ ಆಗ್ರಹಿಸಿದ್ದಾರೆ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದ ಪಂಚಾಯತ ರಾಜ್ ಇಂಜಿನೀಯರಿಂಗ್ ಕಛೇರಿಯಲ್ಲಿ ಗಣೇಶೋತ್ಸವ – ಶ್ರೀಧರ ಸಂಜೀವ ಕರಕೆರ ಕೈಯಲ್ಲಿ ಅರಳಿದ ಕೂರ್ಮಾರೂಡ ಗಣಪ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಪಂಚಾಯತ ರಾಜ್ ಇಂಜಿನೀಯರಿಂಗ್, ಉಪ ವಿಭಾಗ, ಯಲ್ಲಾಪುರ ಕಾರ್ಯಾಲಯದಲ್ಲಿ ಅಧಿಕಾರಿ …

Leave a Reply

Your email address will not be published. Required fields are marked *