
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿ ಸ್ಥಾಪಿತವಾಗಿರುವ ಕೈಗಾರಿಕ ಸಹಕಾರಿ ಸಂಘ ನಿ. ಯಲ್ಲಾಪುರ ಕಳೆದ ಆರ್ಥಿಕ ವರ್ಷದಲ್ಲಿ 40 ಲಕ್ಷ ನಿವ್ವಳ ಲಾಭ ಗಳಿಸಿದ್ದು ಸಂಸ್ಥೆಯ ಮೇಲಿನ ಗ್ರಾಹಕರ ಪ್ರೀತಿ,ನಂಬಿಕೆ ಮತ್ತು ಸಮರ್ಥವಾದ ಆಡಳಿತ ಮಂಡಳಿ ಹಾಗು ಉತ್ತಮ ವ್ಯಾವಹಾರಿಕ ನೈಪುಣ್ಯತೆಯ ವ್ಯವಸ್ಥಾಪಕ ಹಾಗು ಸಿಬ್ಬಂದಿಗಳ ಕಾರ್ಯಕ್ಷಮತೆಗೆ ಹೃದಯಾಂತರಾಳದಿಂದ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಂಸ್ಥೆಯ ಅಧ್ಯಕ್ಷರಾದ ಡಿ.ಶಂಕರ ಭಟ್ ಹೇಳಿದರು.

ಅವರು ಶುಕ್ರವಾರ ಕೈಗಾರಿಕ ಸೊಸೈಟಿಯ ಸಭಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸೊಸೖಟಿಯು 11 ವರ್ಷಗಳನ್ನು ಪೂರೖಸಿ 12ನೇ ವರ್ಷಕ್ಕೆ ಕಾಲಿಟ್ಟಿದ್ದು ಎಲ್ಲಾ ನಿರ್ದೇಶಕರು, ಸದಸ್ಯರು ಹಾಗೂ ಸಿಬ್ಬಂದಿಗಳ ಸಹಕಾರದಿಂದ ಲಾಭಗಳಿಸುತ್ತಾ ಮುನ್ನೆಡೆಯುತ್ತಿರುವುದು ಸಂಸ್ಥೆಯ ಮೇಲಿನ ಗೌರವ ಮತ್ತು ಬದ್ದತೆ ಮತ್ತಷ್ಟು ಹೆಚ್ಚಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಒಟ್ಟಾರೆಯಾಗಿ 22 ಕೋಟಿ ವ್ಯವಹಾರ ನಡೆಸಲಾಗಿದೆ. ಸಂಘದ ಸದಸ್ಯರ ಹಿತವನ್ನು ಗಮನದಲ್ಲಿಟ್ಟುಕೊಂಡು ವ್ಯವಹಾರ ಮಾಡಲಾಗುತ್ತಿದೆ. ಸಂಘದಲ್ಲಿ ಒಟ್ಟು 1050 ಸದಸ್ಯರಿದ್ದು 38 ಲಕ್ಷ ಷೇರು ಬಂಡವಾಳವಿದೆ. ಸಾಲ ವಸೂಲಾತಿ ಪ್ರಮಾಣ ಶೇ. 99 ಆಗಿರುವುದು ಸಂತಸದ ಸಂಗತಿ , ಸಂಘದ ಅಭಿವೃದ್ಧಿಗೆ ಸಹಕರಿಸಿದ ಸರ್ವರಿಗೂ ಮತ್ತೊಮ್ಮೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಸೆಪ್ಟೆಂಬರ್ 9 ರಂದು ಬೆಳಗ್ಗೆ ಸಂಘದ ವಾರ್ಷಿಕ ಮಹಾಸಭೆಯನ್ನು ಶಿರಸಿ ರಸ್ತೆಯಲ್ಲಿರುವ ಶ್ರೀ ಶಕ್ತಿ ಮಹಾ ಗಣಪತಿ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸಂತೋಷ ಎಂ ನಾಯ್ಕ, ನಿರ್ದೇಶಕರಾದ ಮುರಳೀ ಹೆಗಡೆ, ಗಣೇಶ ಹೆಗಡೆ ಪಣ್ತಗೇರಿ, ಶ್ರೀಪಾದ ಹೆಗಡೆ, ಪ್ರಶಾಂತ ಹೆಗಡೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ರವೀಂದ್ರ ದೇಸಾಯಿ ಉಪಸ್ಥಿತರಿದ್ದರು.
ವಿಶೇಷವಾಗಿ ಸಂಘದ ವಾರ್ಷಿಕ ಸಭೆಯ ನಿಮಿತ್ತ ಬಂದಂತಹ ಎಲ್ಲಾ ಅತಿಥಿ ಅಭ್ಯಾಗತರಿಗೆ ಭೋಜನದ ವ್ಯವಸ್ಥೆ ಮಾಡಲಾಗಿದ್ದು ಸರ್ವರು ಆತಿಥ್ಯ ಸ್ವೀಕರಿಸಬೇಕೆಂದು ಕೇಳಿಕೊಂಡರು.



















Prathidvani Yellapura