
ಪ್ರತಿಧ್ವನಿ ಯಲ್ಲಾಪುರ : ಚೌತಿ ಗಣೇಶೋತ್ಸವದ ಸಂಭ್ರಮಾಚರಣೆಗೆ ದಿನಗಣನೆ ಆರಂಭಗೊಂಡ ಹಿನ್ನೆಲೆಯಲ್ಲಿ ಯಲ್ಲಾಪುರದ ಅತ್ಯಂತ ಹಳೆಯ ಗಣೇಶೋತ್ಸವ ಆಚರಣೆ ಸಮಿತಿಯಾದ ತಿಲಕ್ ಚೌಕ್ ಸಭಾ ಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ಎನ್.ದೀಪನ್ ಭೇಟಿ ನೀಡಿ ಸಲಹೆ ಸೂಚನೆಗಳನ್ನು ನೀಡಿದರು.

ಪಟ್ಟಣದ ಅತ್ಯಂತ ಹಳೆಯ ಸಮಿತಿ ಎಂದೇ ಹೆಸರಾದ ಮತ್ತು ಪ್ರತಿ ವರ್ಷ ವಿಶಿಷ್ಟ ಆಚರಣೆಗೆ ಹೆಸರಾದ ತಿಲಕ್ ಚೌಕ್ ಗಜಾನನೋತ್ಸವ ಸಮಿತಿ ಆವಾರದಲ್ಲಿ ಪ್ರಸಕ್ತ ವರ್ಷದ ಗಜಾನನೋತ್ಸವ ಆಚರಣೆಯ ಕುರಿತು ಸಭೆ ನಡೆಯಿತು. ವಿಶೇಷವಾಗಿ ಸಭೆಯಲ್ಲಿ ಎಸ್.ಪಿ.ದೀಪನ್ ಉಪಸ್ಥಿತರಿದ್ದು ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕುರಿತು ಸಭೆಯಲ್ಲಿ ಮಾಹಿತಿ ಹಂಚಿಕೊಂಡರು.

ಆಚರಣೆಯ ಸಂಭ್ರಮದಲ್ಲಿ ಯಾವುದೆ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು, ಸಮಿತಿ ಪ್ರಮುಖರು ಆಚರಣೆ ಸಂದರ್ಭದಲ್ಲಿ ಎಲ್ಲಾ ಪ್ರಮುಖ ವಿಚಾರಗಳ ಬಗ್ಗೆ ಗಮನ ಹರಿಸಬೇಕು, ಸರ್ಕಾರದ ನಿಯಮಾವಳಿಗಳನ್ನು ಮೀರುವಂತಿಲ್ಲ,ಕಾಲಕಾಲಕ್ಕೆ ಪೊಲೀಸ್ ಇಲಾಖೆ ನೀಡುವ ಸಲಹೆ ಸೂಚನೆಗಳನ್ನು ಪಾಲಿಸಬೇಕು ಒಟ್ಟಾರೆ ಹಬ್ಬ ಸಂಭ್ರಮ ಸಡಗರದೊಂದಿಗೆ ಶಿಸ್ತು ಮತ್ತು ಶಾಂತಿಯುತವಾಗಿ ಆಚರಣೆಯಾಗಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ತಿಲಕ್ ಚೌಕ್ ಗಜಾನನೋತ್ಸವ ಸಮಿತಿ ಅಧ್ಯಕ್ಷ ಬಾಲಕೃಷ್ಣ ನಾಯಕ್ ಪ್ರಮುಖ ವಿಚಾರಗಳ ಬಗ್ಗೆ ಪ್ರಸ್ಥಾಪಿಸಿದರು.

ಪ್ರಮುಖರಾದ ರವಿ ಲಕ್ಷ್ಮಣ್ ಶಾನಬಾಗ್ ಆಚರಣೆಗಳ ಬಗ್ಗೆ ಸಮಿತಿಯ ಸಿದ್ದತೆಯ ಕುರಿತು ಸಭೆಗೆ ವಿವರಿಸಿದರು.

ಪ್ರಥಮಬಾರಿಗೆ ತಿಲಕ್ ಚೌಕ್ ಸಾರ್ವಜನಿಕ ಗಜಾನನೋತ್ಸವ ಸಮಿತಿ ಆವಾರಕ್ಕೆ ಆಗಮಿಸಿದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಅವರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಯಲ್ಲಾಪುರ ನೂತನ ಪಿಐ ಸುರೇಶ್ ಕುಂಬಾರ್, ಪಿಎಸ್ಐ ರಾಜಶೇಖರ ವಂದಲಿ ಸ್ಥಳೀಯ ಪ್ರಮುಖರಾದ ರಾಜೇಂದ್ರ ಬದ್ದಿ, ಮಾದವ ನಾಯಕ್, ಶಂಕರ ಬದ್ದಿ, ಗಜು ನಾಯಕ್, ರಜತ್ ಬದ್ದಿ, ಗೌತಮ್ ಬಿಡೀಕರ್, ಪವನ್ ಕಾಮತ್, ಗಿರೀಶ್ ಪೈ, ರಮಣ್ ಅಸೂಕರ್, ಸಿದ್ದಾಥ್೯ ನಂದೊಳ್ಳಿ ಮಠ, ನಮಿತಾ ಬಿಡೀಕರ್, ಭವ್ಯ ಬಾಲಕೃಷ್ಣ ನಾಯಕ್,ತನುಜ ರಾಜೇಂದ್ರ ಬದ್ದಿ, ರಾಧಾ ಗುಡಿಗಾರ್, ಇನ್ನಿತರರು ಉಪಸ್ಥಿತರಿದ್ದರು.











Prathidvani Yellapura