Breaking News

Yearly Archives: 2026

ಯಲ್ಲಾಪುರದಲ್ಲೂ ಅನ್ನ ಭಾಗ್ಯದ ಅಕ್ಕಿ ಅಕ್ರಮ ದಂಧೆಕೋರರ ಪಾಲು – ತಡೆದು ಹೆಡೆಮುರಿ ಕಟ್ಟಿದ ಪೊಲೀಸರು.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ನೂತನನಗರ ಜಡ್ಡಿಯಲ್ಲಿ ಸರ್ಕಾರ ಬಡವರಿಗಾಗಿ ನೀಡುವ ಅನ್ನಭಾಗ್ಯದ ಅಕ್ಕಿಯನ್ನು ಕಲಘಟಗಿಯ ಶಾರುಖ್ ಮತ್ತು ಶಾನು ಎಂಬುವರು ಕಡಿಮೆ ಬೆಲೆಗೆ ಕೊಂಡು ಕದ್ದು ಸಾಗಿಸುವ ಮಾಹಿತಿ ತಿಳಿದು ಆಹಾರ ಇಲಾಖೆ ರಾಘವೇಂದ್ರ ರಾಮ ಗೌಡ ಎಂಬುವರು ಯಲ್ಲಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದು ಅಕ್ರಮ ದಂದೆಕೋರರನ್ನು ಪೊಲೀಸರು ಅಕ್ಕಿ ಮತ್ತು ಕೃತ್ಯಕ್ಕೆ ಬಳಸಿದ ವಾಹನ ಸಹಿತ ವಶಕ್ಕೆ ಪಡೆದಿರುತ್ತಾರೆ. ಸರ್ಕಾರ ಬಡವರಿಗಾಗಿ ಹಸಿವು ಮುಕ್ತ ಭಾರತ ಎಂಬ …

Read More »

ದಶಕಗಳಿಂದ ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಸೇವೆಸಲ್ಲಿಸಿ ಯಲ್ಲಾಪುರದಲ್ಲಿ ಹೆಸರಾದ “ಹೆಗಡೆ ಎಲೆಕ್ಟ್ರಾನಿಕ್ಸ್” ಪುನರಾರಂಭ.

ಪ್ರತಿಧ್ವನಿ ಯಲ್ಲಾಪುರ : ಬೆಳೆಯುತ್ತಿರುವ ಜಗದ ತಂತ್ರಜ್ಞಾನ ಯುಗದ ಓಟದ ಭರಾಟೆಯಲ್ಲಿ ಹಲವು ದಶಕಗಳಿಂದ ಯಲ್ಲಾಪುರ ತಾಲೂಕಿನ ಜನತೆಗೆ ಎಲೆಕ್ಟ್ರಾನಿಕ್ ವಸ್ತುಗಳ ರಿಪೇರಿ ವಿಭಾಗದಲ್ಲಿ ಜೀವನೋಪಾಯದೊಂದಿಗೆ ನಿರಂತರ ಸೇವೆ ಸಲ್ಲಿಸುತ್ತ ನಂಬಿಕೆ ಮತ್ತು ವಿಶ್ವಾಸಾರ್ಹ ಗ್ರಾಹಕರನ್ನು ಸಂಪಾದಿಸಿದ್ದ ” ಹೆಗಡೆ ಎಲೆಕ್ಟ್ರಾನಿಕ್ಸ್ ” ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಗ್ರಾಹಕರಿಗೆ ಸೇವೆ ನೀಡಲು ಪುನರಾರಂಭಗೊಂಡಿದೆ. ಸಮಾಜ ಸೇವಕ, ಪತ್ರಕರ್ತ ಸೂರಜ್ ಹೆಗಡೆ ಒಡೆತನದ ಹೆಗಡೆ ಎಲೆಕ್ಟ್ರಾನಿಕ್ಸ್ ಹೊಸ ತಂತ್ರಜ್ಞಾನಕ್ಕೆ ಅನುಗುಣವಾಗಿ ತರಬೇತಿ …

Read More »

ಭತ್ತದ ಬೆಳೆಗೆ ಕಾಡುತ್ತಿರುವ ಬೆಂಕಿರೋಗ–ಕಂದುಜಿಗಿ, ಎಲೆಸುರುಳಿ ಕೀಟ ನಿಯಂತ್ರಣಕ್ಕೆ ಕೃಷಿ ಇಲಾಖೆ ಸಲಹೆ ಪಡೆದುಕೊಳ್ಳಿ – ನಾಗರಾಜ್ ನಾಯ್ಕ್ (ಸ.ಕೃ.ನಿ)

ಪ್ರತಿಧ್ವನಿ ಯಲ್ಲಾಪುರ: ತಾಲ್ಲೂಕಿನಲ್ಲಿ ಕಳೆದ 15 ದಿನಗಳಿಂದ 120 ದಿನಗಳ ಭತ್ತದ ಬೆಳೆ ಬೆಳವಣಿಗೆಯ ಹಂತದಲ್ಲಿದ್ದು, ಕಳೆದ ಕೆಲ ದಿನಗಳಿಂದ ಮಳೆಯ ಪ್ರಮಾಣ ತೀವ್ರವಾಗಿ ಕಡಿಮೆಯಾಗಿ, ಬೆಳಗಿನ ಜಾವ ಮಂಜು ಕವಿದ ವಾತಾವರಣ ಕಂಡುಬರುತ್ತಿದೆ. ಈ ವಾತಾವರಣವು ಬೆಂಕಿರೋಗದ ಶಿಲೀಂಧ್ರದ ಬೆಳವಣಿಗೆಗೆ ಪೂರಕವಾಗಿದ್ದು, ತಾಲ್ಲೂಕಿನ ಹೊಸಳ್ಳಿ, ಕಂಚನಳ್ಳಿ, ಕಿರವತ್ತಿ, ಮದನೂರು, ಹೆಮ್ಮಾಡಿ, ಭರತನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಭತ್ತದ ಬೆಳೆಗೆ ಬೆಂಕಿರೋಗದ ಬಾಧೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ರೈತರು ಕೆಳಕಂಡ ಸಸ್ಯ ಸಂರಕ್ಷಣಾ …

Read More »

ಕಾಂಗ್ರೆಸ್ ವಿರುದ್ದದ ಬಿಜೆಪಿ ಬಳ್ಳಾರಿ ಪಾದಯಾತ್ರೆಯಲ್ಲಿ ಸಮಾಜ ಸೇವಕ ಉದ್ಯಮಿ ಬಾಲಕೃಷ್ಣ ನಾಯಕ್ ಭಾಗಿ.

ಪ್ರತಿಧ್ವನಿ ಯಲ್ಲಾಪುರ : ಕೊಡುಗೈ ದಾನಿ,ಸಮಾಜ ಸೇವಕ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಎಂದೇ ಗುಸುಗುಸು ಕೇಳಿ ಬರುತ್ತಿರುವ ಬಿಜೆಪಿ ಯುವ ನಾಯಕ ಬಾಲಕೃಷ್ಣ ನಾಯಕ್ ಬಿಜೆಪಿಯ ಬಳ್ಳಾರಿ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಆಡಳಿತದ ವಿರುದ್ದ ಹೋರಾಟದ ಅಖಾಡಕ್ಕೆ ದುಮುಕಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ವಿವಿಧ ಚಟುವಟಿಕೆಯಲ್ಲಿ ಪ್ರಭಲವಾಗಿ ಕೇಳಿ ಬರುತ್ತಿರುವ ಯುವ ಉದ್ಯಮಿ ಬಾಲಕೃಷ್ಣ ನಾಯಕ್ ದೇವಸ್ಥಾನಗಳಿಗೆ, ಬಡವರ ಆರೋಗ್ಯಕ್ಕೆ,ಶಾಲ …

Read More »

ಯಲ್ಲಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಾರಂಭಗೊಂಡ ಸಿ.ಇ.ಟಿ ಕ್ಲಾಸಸ್.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ  Integrated CET classes ಯಶಸ್ವಿಯಾಗಿ ಪ್ರಾರಂಭಗೊಂಡಿತು.   ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರುಗಳಾದ  ಜಗನ್ನಾಥ ರೇವಣಕರ,  ರಾಘವೇಂದ್ರ ದೇವಾಡಿಗ, ಪುಷ್ಪಾ ಜೋಗಾರಶೆಟ್ಟರ ಹಾಗೂ ವಿಜ್ಞಾನ ಬೋಧಿಸುವ ಉಪನ್ಯಾಸಕರು, ಪಾಲಕ/ಪೋಷಕರೂ ಉಪಸ್ಥಿತರಿದ್ದರು. ಜೀವಶಾಸ್ತ್ರ ಉಪನ್ಯಾಸಕರಾದ ವಿಕಾಸ ಮೊಕಾಶಿ ಅವರು ಸಿಇಟಿ ಪರೀಕ್ಷೆಯ ಪರಿಚಯ ಹಾಗೂ ಅದರ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಮನವರಿಕೆ ಮಾಡಿದರು. ಅಧ್ಯಕ್ಷತೆ ವಹಿಸಿದ್ದ …

Read More »

ಅಡಿಕೆ ಬೆಳೆಯ ಎಲೆಚುಕ್ಕೆ ರೋಗ ಮತ್ತು ಕೊಳೆ ರೋಗ ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆಯಿಂದ ಸಹಾಯಧನ ವಿತರಣೆ,

ಪ್ರತಿಧ್ವನಿ ಯಲ್ಲಾಪುರ : ಅಡಿಕೆ ಬೆಳೆಯ ಎಲೆಚುಕ್ಕೆ ರೋಗ ಮತ್ತು ಕೊಳೆ ರೋಗ ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆಯಿಂದ ಸಹಾಯಧನ ವಿತರಿಸಲಾಗುತ್ತಿದೆ. 2026-27 ಸಾಲಿನಲ್ಲಿ ಅಡಿಕೆ ಬೆಳೆಗಾರರಿಗೆ ಎಲೆಚುಕ್ಕೆ ರೋಗ ಮತ್ತು ಕೊಳೆ ರೋಗ ನಿರ್ವಹಣೆಗಾಗಿ  ಈಗಾಗಲೇ ಕೇಂದ್ರ ನೆರವಿನ ಯೋಜನೆಯಾದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ಘಟಕವಾದ ಸಮಗ್ರ ಪೋಷಕಾಂಶ ನಿರ್ವಹಣೆ ಹಾಗೂ ಸಮಗ್ರ ರೋಗ/ಕೀಟ ನಿಯಂತ್ರಣ ಕಾರ್ಯಕ್ರಮದಡಿ ಸಸ್ಯ ಸಂರಕ್ಷಣಾ ಔಷಧಿ ಖರೀದಿಗಾಗಿ ರೂ. 5೦೦೦ ಘಟಕ ವೆಚ್ಚಕ್ಕೆ …

Read More »

ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಸೇರಿಸುವ ಅಧಿಸೂಚನೆ ಜಿಲ್ಲೆಯ ಮರಣಶಾಸನ – ಶಾಂತಾರಾಮ್ ನಾಯಕ ಎಚ್ಚರಿಕೆ!!

ಪ್ರತಿಧ್ವನಿ ಯಲ್ಲಾಪುರ : ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಸೇರಿಸುವ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಲಾದ ಏಳನೆ ಅಧಿಸೂಚನೆಗೆ ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಿ ಜಿಲ್ಲೆಯ ವನವಾಸಿ,ಬುಡಕಟ್ಟು,ರೈತಾಪಿ ಜನರ ಬೆನ್ನಿಗೆ ನಿಲ್ಲಬೇಕಿದೆ. ಈ ಬಗ್ಗೆ ಅಧಿವೇಶನದಲ್ಲಿ ಕೂಲಂಕುಷವಾಗಿ ಚರ್ಚಿಸುವ ಅಗತ್ಯವಿದೆ, ವರದಿ ಅವೈಜ್ಞಾನಿಕವಾಗಿದ್ದು ಒಂದುವೇಳೆ ರಾಜ್ಯ ಸರ್ಕಾರ ಸುಮ್ಮನೆ ಕುಳಿತರೆ ಏಳನೆ ಅಧಿಸೂಚನೆ ಜಿಲ್ಲೆಯ ಜನತೆಗೆ ಮರಣಶಾಸನವಾಗಲಿದೆ ಎಚ್ಚರ ಎಂದು ಕರ್ನಾಟಕ ಪ್ರಾಂತ ರೈತ ಸಂಘ …

Read More »

ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಮಾಸಿಕ ಸಭೆ-ಸಮಸ್ಯೆಗಳಿದ್ದಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಿ – ಉಲ್ಲಾಸ್ ಶಾನಬಾಗ್

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ತಾಲೂಕಾ ಪಂಚಾಯತ್ ಸಭಾ ಭವನದಲ್ಲಿ ಸೋಮವಾರ ತಾಲೂಕಾ  ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ  ಮಾಸಿಕ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ  ದೇವಿದಾಸ (ಉಲ್ಲಾಸ) ನಾಗೇಶ್ ಶಾನಭಾಗ ತಾಲ್ಲೂಕಿನಲ್ಲಿ ಗ್ಯಾರಂಟಿ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಟಾನಗೊಳ್ಳುತ್ತಿದ್ದು ಸಾಧಕ ಭಾದಕಗಳ ಚರ್ಚೆ ಮಾಸಿಕವಾಗಿ ನಡೆಯುವ ಸಭೆಯಲ್ಲಿ ಚರ್ಚಿಸುವ ಮೂಲಕ ಸಮಸ್ಯೆ ಇದ್ದಲ್ಲಿ ಬಗೆಹರುಸಿಕೊಳ್ಳಲು ಅನುಕೂಲಕರವಾಗಿದೆ. ಅಧಿಕಾರಿಗಳು ತಮ್ಮತಮ್ಮ …

Read More »

ಕ್ರೀಡೆಯು ಪ್ರತಿಯೊಬ್ಬರಲ್ಲಿ ಶಿಸ್ತು ಮತ್ತು ಆತ್ಮ ವಿಶ್ವಾಸ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ – ಶಾಸಕ ಹೆಬ್ಬಾರ್.

ಪ್ರತಿಧ್ವನಿ ಯಲ್ಲಾಪುರ : ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮವಿಶ್ವಾಸ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಪಠ್ಯ ಚಟುವಟಿಕೆ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿದೆ.ಕ್ರೀಡೆಯಲ್ಲಿ ನಮ್ಮ ಉತ್ತರ ಕನ್ನಡ ಜಿಲ್ಲೆಯ ಹಲವು ಪ್ರತಿಭೆಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಜಿಲ್ಲೆಗೆ ಗೌರವ ತಂದಿದ್ದಾರೆ ಅದೆಲ್ಲವು ಕ್ರೀಡಾಪಟುಗಳಾದ ತಮಗೆಲ್ಲಾ ಸ್ಪೂರ್ತಿಯಾಗಬೇಕಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು. ಅವರು  ಪಟ್ಟಣದ ಕಾಳಮ್ಮನಗರ ತಾಲೂಕು ಕ್ರೀಡಾಂಗಣದಲ್ಲಿ …

Read More »

ಬಿ.ಎಸ್.ಎನ್‌.ಎಲ್ ಅಧಿಕಾರಿಗಳಿಗೆ ಸಂಸದ ಕಾಗೇರಿ ಕ್ಲಾಸ್ – ಶೀಘ್ರವಾಗಿ ನೆಟ್ವರ್ಕ್ ಸಮಸ್ಯೆ ಬಗೆಹರಿಸುವಂತೆ ಆದೇಶ.

ಪ್ರತಿಧ್ವನಿ ಯಲ್ಲಾಪುರ : ರಾಜ್ಯದಲ್ಲೇ ಅತಿ ಹೆಚ್ಚು ಬಿಎಸ್‌ಎನ್‌ಎಲ್ ಟವರ್‌ಗಳು ನಮ್ಮ ಜಿಲ್ಲೆಯಲ್ಲಿದ್ದು, ಅವುಗಳ ನಿರ್ವಹಣೆ ಹಾಗೂ ಹೊಸ ಟವರ್‌ಗಳ ನಿರ್ಮಾಣ ಕಾರ್ಯದಲ್ಲಿ ಎದುರಾಗುತ್ತಿರುವ ತೊಡಕುಗಳನ್ನು ಆದಷ್ಟು ಬೇಗ ನಿವಾರಿಸಬೇಕು ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಬಿ.ಎಸ್.ಎನ್.ಎಲ್  ಮಂಗಳೂರು ವಿಭಾಗದ ಜನರಲ್ ಮ್ಯಾನೇಜರ್ (GM) ಶ್ರೀ ಬೋರಾಲೇ ಹೇಮಂತ್ ಸದಾಶಿವ್ ಸೇರಿದಂತೆ ಜಿಲ್ಲೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಖಡಕ್ ಆದೇಶ ನೀಡಿದರು. ಜಿಲ್ಲೆಯಾದ್ಯಂತ …

Read More »