Breaking News

Yearly Archives: 2026

ಯಲ್ಲಾಪುರ ಸಿಂಗಂ ಖ್ಯಾತಿಯ ಸಿಪಿಐ ವಿಜಯ್ ಬಿರಾದಾರ್ ಅವರಿಗೆ ಕೊಪ್ಪಳ ಲೋಕಾಯುಕ್ತ ಡಿವೈಎಸ್ಪಿ ಯಾಗಿ ಬಡ್ತಿ ಅಧಿಕಾರ ಸ್ವೀಕಾರ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಪೊಲೀಸ್ ಠಾಣೆಯಲ್ಲಿ  ಕೆಲ ವರ್ಷಗಳ ಹಿಂದೆ ಸಿಂಹ ಘರ್ಜಿಸುತ್ತಿತ್ತು ಅದುವೆ ಸಿಪಿಐ ವಿಜಯ್ ಬಿರಾದಾರ ಎಂಬುದು ಯಲ್ಲಾಪುರ ತಾಲೂಕಿನ ಪ್ರತಿಯೊಬ್ಬರಿಗೂ ತಿಳಿದಂತಹ ವಿಷಯ ಅಂತಹ ಖಡಕ್ ಪೊಲೀಸ್ ಆಫಿಸರ್ ಅವರನ್ನು ಸರ್ಕಾರ ಕೊಪ್ಪಳ ಜಿಲ್ಲಾ ಲೋಕಾಯುಕ್ತ ಡಿ.ವೈ.ಎಸ್ ಪಿ ಯಾಗಿ ಬಡ್ತಿ ನೀಡಿದ್ದು ಅಧಿಕಾರ ಸ್ವೀಕರಿಸಿದ್ದಾರೆ. ವಿಜಯ್ ಬಿರಾದಾರ್ ಅವರು ಸಿಪಿಐ ಆಗಿ ಯಲ್ಲಾಪುರ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದು ಕೆಲವೇ ವರ್ಷಗಳಾದರು ಜನಮಾನಸದಲ್ಲಿ ಸಿಂಗಂ …

Read More »

ರಾಷ್ಟ್ರೀಯ ಹೆದ್ದಾರಿ ನಿರ್ವಹಣಾ ಹಣಕ್ಕೆ ಬರ ಬಂದಿದೆ – ಹೆದ್ದಾರಿಯಲ್ಲಿ ಊರುಗಳ ಮಾಹಿತಿ ಫಲಕ ಅದಕ್ಕೆ ಮಂಕಾಗಿದೆ.

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಲ್ಲಿ ಹಾದು ಹೋಗಿರುವ ಬಳ್ಳಾರಿ ಕಾರವಾರ ರಾಷ್ಟ್ರೀಯ ಹೆದ್ದಾರಿ ಅಕ್ಕ ಪಕ್ಕದಲ್ಲಿ ಹಾಕಿರುವ ತಲುಪುವ ಊರುಗಳ ಮಾರ್ಗಸೂಚಿ ಫಲಕಗಳು ಮಸುಕಾಗಿದ್ದು ಪುರಾತನ ಕಾಲದ ಅಳಿದುಳಿದ ಶಾಸನದಂತೆ ಭಾಸವಾಗುತ್ತಿದೆ. ಪ್ರಯಾಣಿಕರ ಹಿತದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ ನಿರ್ವಹಣಾ ಇಲಾಖೆ ತನ್ನ ಘನತೆ ಉಳಿಸಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳು ಈ ಕೂಡಲೆ ಮಾಸಿಹೋದ ಫಲಕಗಳನ್ನು ಬದಲಿಸಬೇಕಿದೆ ಎಂಬುದು ವಾಹನ ಸವಾರರ ಆಗ್ರಹವಾಗಿದೆ. ಪರ ಊರುಗಳಿಂದ ಮತ್ತೊಂದು ಊರಿಗೆ ತೆರಳುವ ಪ್ರವಾಸಿಗರಿಗೆ ಸರಕು …

Read More »

ಯಲ್ಲಾಪುರ ಪೊಲೀಸರಿಂದ “ಏರಿಯಾ ಡಾಮಿನೇಷನ್” ಕಾರ್ಯಾಚರಣೆ

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿ ಯಲ್ಲಾಪುರ ಪೊಲೀಸರಿಂದ ‌ ” ಏರಿಯಾ ಡಾಮಿನೇಷನ್ ” ಕಾರ್ಯಾಚರಣೆ ಯಶಸ್ವಿಯಾಗಿ ನಡೆಯಿತು. ಪಟ್ಟಣದ ಪ್ರಮುಖ ರಸ್ತೆಯಲ್ಲಿ, ಬೀದಿಗಳಲ್ಲಿ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಶನಿವಾರ ಸಂಯುಕ್ತ ಕಾರ್ಯಾಚರಣೆ ನಡೆಸಿ, ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವ ಮತ್ತು ಅಪರಾಧಿಗಳಲ್ಲಿ ಭಯ ಹುಟ್ಟಿಸುವ ಕಾರ್ಯ ಮಾಡಲಾಯಿತು.     ಸಾರ್ವಜನಿಕರಲ್ಲಿ ಕಾನೂನು ಸುರಕ್ಷತೆಯ ವಿಶ್ವಾಸ ಸಮಾಜದಲ್ಲಿ ಶಾಂತಿ ನೆಲೆಸುವ ವಾತಾವರಣ, ನಾಗರಿಕರಲ್ಲಿ ಕಾನೂನಿನ ಪ್ರಜ್ಞಾವಂತಿಕೆ,  …

Read More »

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಎಸ್.ಐ.ಆರ್ ಪ್ರಕ್ರಿಯೆ ಉಸ್ತುವಾರಿಯಾಗಿ ವಿವೇಕ್ ಹೆಬ್ಬಾರ್ ಆಯ್ಕೆ – ಡಿಸಿಸಿ ಯಿಂದ ನೇಮಕ.

ಪ್ರತಿಧ್ವನಿ ಯಲ್ಲಾಪುರ : ದೇಶದಾದ್ಯಂತ ಎಸ್.ಐ.ಆರ್ ಪ್ರಕ್ರಿಯೆ ಅತ್ಯಂತ ವೇಗವಾಗಿ ಜರುಗುತ್ತಿದ್ದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮೇಲುಸ್ತುವಾರಿ ಸಮಿತಿ ರಚನೆಮಾಡಿದ್ದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಎಸ್.ಐ.ಆರ್ ಪ್ರಕ್ರಿಯೆ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಉಸ್ತುವಾರಿ ಯಾಗಿ ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್ ಅವರಿಗೆ ಜವಾಬ್ದಾರಿ ನೀಡಿ ಜಿಲ್ಲಾ ಕಾಂಗ್ರೆಸ್ ಆದೇಶ ಪತ್ರ ಹೊರಡಿಸಿದೆ. ಯಲ್ಲಾಪುರ ಬ್ಲಾಕ್ ಗೆ ಎನ್.ಕೆ.ಭಟ್, ಮುಂಡಗೋಡು ಬ್ಲಾಕ್ ಗೆ ಜ್ಞಾನೇಶ್ವರ ಗುಡಿಯಾಳ, ಬನವಾಸಿ ಬ್ಲಾಕ್ ಗೆ …

Read More »

ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಿದ ಸರ್ಕಾರ ವಿದ್ಯಾರ್ಥಿಗಳಿಗೆ ನಿತ್ಯ ಫುಟ್ ಬೋಡ್೯ ಜೋತಾಟ  ಗೋಳಾಟ ತಪ್ಪಿಸಲಿಲ್ಲ..!!

ಪ್ರತಿಧ್ವನಿ ಯಲ್ಲಾಪುರ : ರಾಜ್ಯ ಸರ್ಕಾರ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣ ಮಾಡಿದ ಸಂತಸದಲ್ಲಿ ನಿತ್ಯ ಶಾಲಾ ಕಾಲೇಜು ಮತ್ತು ಉದ್ಯೋಗಕ್ಕೆ ತೆರಳುವ ಪ್ರಯಾಣಿಕರ ಗೋಳು ಕಾಣಿಸುತ್ತಿಲ್ಲ. ಪ್ರತಿ ನಿತ್ಯ ಶಾಲಾ ಕಾಲೇಜುಗಳಿಗೆ,ಉದ್ಯೋಗ, ಆಸ್ಪತ್ರೆಗೆ ಒಂದು ಊರಿನಿಂದ ಇನ್ನೊಂದು ಊರಿಗೆ ತೆರಳಲು ಪ್ರಯಾಣಿಕರು ಪ್ರಾಣ ಪಣಕ್ಕಿಟ್ಟು ಸಂಚರಿಸುವ  ದುರ್ಗತಿ ಎದುರಾಗಿದೆ. ತಾಲೂಕಿನ ಕಿರವತ್ತಿ ಗ್ರಾಮದಿಂದ ಪ್ರತಿ ನಿತ್ಯ ಶಾಲಾ,ಕಾಲೇಜು,ಉದ್ಯೋಗ, ಆಸ್ಪತ್ರೆಗೆ ನೂರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಬೆಳಗ್ಗೆ 8 ರಿಂದ 9 …

Read More »

ಪ್ರತಿಧ್ವನಿ ಸುದ್ದಿ ಫಲಶೃತಿ  ಯಲ್ಲಾಪುರ-ಹಳಿಯಾಳ ರಸ್ತೆ ತಾತ್ಕಾಲಿಕ ದುರಸ್ತಿ ಆರಂಭ.

ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ-ಹಳಿಯಾಳ ರಾಜ್ಯ ರಸ್ತೆ ಅತ್ಯಂತ ಧಾರುಣ ಸ್ಥಿತಿ ತಲುಪಿರುವ ಕುರಿತು ಪ್ರತಿಧ್ವನಿ ಯಲ್ಲಾಪುರ ವೆಬ್ ಶುಕ್ರವಾರ ಸುದ್ದಿ ಪ್ರಕಟಿಸಿತ್ತು. ಸುದ್ದಿ ಪ್ರಕಟಗೊಂಡ ಕೆಲವೇ ಗಂಟೆಗಳಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ತಾತ್ಕಾಲಿಕ ದುರಸ್ತಿ ಆರಂಭಗೊಂಡಿದ್ದು ಸಾರ್ವಜನಿಕ ಹಿತ ದೃಷ್ಟಿಯಿಂದ ಸುದ್ದಿ ಮಾಡಿದ್ದ ಪ್ರತಿಧ್ವನಿ ಗೆ ಸಮಾಧಾನ ತಂದಿದೆ. ಸುದ್ದಿ ಪ್ರಕಟಿಸಿದ ಕೂಡಲೆ ಕಾರ್ಯ ಪ್ರವೃತ್ತರಾದರು ಎಂಬ ಸಂತಸಕ್ಕಿಂತ ರಸ್ತೆ ಪರಿಸ್ಥಿತಿ ಕಂಡು ಮತ್ಯಾರಿಗು ಅವಘಡ ಸಂಭವಿಸವಾರದು ಎಂಬ …

Read More »

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಎಸ್.ಐ.ಆರ್. ಸಭೆ ನಡೆಸಿದ ಶಾಸಕ ಹೆಬ್ಬಾರ್.

ಪ್ರತಿಧ್ವನಿ ಯಲ್ಲಾಪುರ : ಮತದಾರರ ಪಟ್ಟಿಯು ನಿಖರ ಹಾಗೂ ದೋಷರಹಿತವಾಗಿರುವುದು ಪ್ರಜಾಪ್ರಭುತ್ವದ ಬಲವರ್ಧನೆಗೆ ಅತ್ಯಂತ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಎಸ್.ಐ.ಆರ್. ಕಾರ್ಯವನ್ನು ಜವಾಬ್ದಾರಿಯುತವಾಗಿ ಹಾಗೂ ಪಾರದರ್ಶಕವಾಗಿ ಕೈಗೊಳ್ಳಬೇಕಿದೆ.  ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ವಿಶೇಷ ಕಾಳಜಿ ವಹಿಸುವಂತೆ ಅಧಿಕಾರಿಗಳು ಹಾಗೂ ಬಿ.ಎಲ್.ಎ.-2 ಪ್ರತಿನಿಧಿಗಳಿಗೆ ನಿರ್ದೇಶನ ನೀಡಿದ್ದು ಎಸ್.ಐ.ಆರ್ ಪ್ರಕ್ರಿಯೆ ಯಶಸ್ವಿಯಾಗಲಿ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು. ತಅವರು ಮತದಾರರ ಪಟ್ಟಿಯ ವಿಶೇಷ ತೀವ್ರ …

Read More »

ಸತ್ಯವಾಗಿ ಇದು ರಸ್ತೆ ನಮ್ಮ ಯಲ್ಲಾಪುರ-ಹಳಿಯಾಳ ರಾಜ್ಯ ರಸ್ತೆ ಆಧುನಿಕ ಭಾರತದ ರಸ್ತೆ.!!!

ಪ್ರತಿಧ್ವನಿ ಯಲ್ಲಾಪುರ : ಬಳ್ಳಾರಿ- ಕಾರವಾರ ರಾಷ್ಟ್ರೀಯ ಹೆದ್ದಾರಿಯ ಹಳಿಯಾಳ್ ಕ್ರಾಸ್ ನಿಂದ ತಾಟವಾಳದ ವರೆಗೆ ರಾಜ್ಯ ರಸ್ತೆಗೆ ಅತ್ಯಂತ ದುರ್ಗತಿ ಬಂದಿದ್ದು ದುರಸ್ತಿ ಕಾಣದೆ ಗುಂಡಿಯೋಳಗೆ ರಸ್ತೆ ಇರುವುದರಿಂದ ಪ್ರತಿ ನಿತ್ಯ ವಾಹನ ಸವಾರರು ನರಕ ಅನುಭವಿಸುತ್ತಿದ್ದು ಅಪಘಾತಗಳ ಸಂಖ್ಯೆ ಹೆಚ್ಚುತ್ತಲಿದೆ. ಯಲ್ಲಾಪುರ ಮತ್ತು ಹಳಿಯಾಳ ಸಂಪರ್ಕಿಸುವ ರಸ್ತೆ ಭಾರಿ ಗುಂಡಿಗಳಿಂದ ತುಂಬಿಹೋಗಿದೆ. ಅಪರೂಪಕ್ಕೆ ಈ ಭಾಗದಲ್ಲಿ ವಾಹನ ಚಲಾಯಿಸುವುದು ಯಮಲೋಕಕ್ಕೆ ಪಯಣಿಸುವುದು ಒಂದೇ ಆಗಿದೆ. ವಯೋವೃದ್ದರು,ಗರ್ಭಿಣಿಯರು, ವಿಶೇಷ …

Read More »

ಶಾಂತಾರಾಮ್ ಬುಡ್ನ ಸಿದ್ದಿಯವರ ಎಂ.ಎಲ್.ಸಿ ಸ್ಥಾನ ಜುಲೈ 21 ಕ್ಕೆ ಅವಧಿ ಮುಕ್ತಾಯ – ಹೇಳಲಿದ್ದಾರೆ ತಮ್ಮ ಸ್ಥಾನಕ್ಕೆ ವಿಧಾಯ.

ಪ್ರತಿಧ್ವನಿ ಯಲ್ಲಾಪುರ : ಇದು ಅಪರೂಪದಲ್ಲಿ ಅಪರೂಪದ ಘಟನೆ. ಒಬ್ಬ ಸರಳ,ಸಜ್ಜನ,ರಾಜಕೀಯ ಹಿನ್ನೆಲೆ ಇಲ್ಲದ,ಶ್ರೀಮಂತಿಕೆ ಇರದ, ನಿತ್ಯ ಜನರ ನಡುವೆಯೆ ಇದ್ದು ತುತ್ತಿನ ಚೀಲ ತುಂಬುವ ಕೃಷಿಕಾಯಕದೊಂದಿಗೆ ಹುಟ್ಟಿದ ಮಣ್ಣಿನ ಋಣ ತೀರಿಸುವ ಸೇವಾ ಕಾರ್ಯದಲ್ಲಿ ಬಿಡುವಿಲ್ಲದಂತೆ ತೊಡಗಿಕೊಂಡ ಬುಡಕಟ್ಟು ಸಿದ್ದಿ ಸಮುದಾಯದ  ಮೊದಲ ಪದವೀಧರ ಶಾಂತಾರಾಮ್ ಬುಡ್ನ ಸಿದ್ದಿ ಅವರಿಗೆ ಭಾರತೀಯ ಜನತಾ ಪಕ್ಷದಿಂದ ವಿಧಾನ ಪರಿಷತ್ ಸದಸ್ಯ ಸ್ಥಾನ ಒಲಿದು ಬಂದಿತ್ತು.ಇದರಿಂದ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಘನತೆ …

Read More »

ನಮ್ಮ ಗ್ರಾಮ ನಮ್ಮ ರಸ್ತೆ ಸರ್ಕಾರಿ ಯೋಜನೆ – ರಸ್ತೆ ದುರವಸ್ತೆ ಕಂಡು ವರ್ಷಗಳೆ ಕಳೆದರು ಕೇಳುವವರಿಲ್ಲದಾಗಿದೆ.

ಕೇಬಲ್ ನಾಗೇಶ್, ಯಲ್ಲಾಪುರ..🖊 ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಕರಡೊಳ್ಳಿ ಯಿಂದ ಮುಂಡಗೋಡು ರಸ್ತೆ ಸಂಪರ್ಕಿಸುವ ರಸ್ತೆ 2020 ರಲ್ಲಿ ನಿರ್ಮಾಣವಾಗಿ 2025 ರ ವರೆಗೆ ಗುತ್ತಿಗೆದಾರನೆ ನಿರ್ವಹಣೆ ಮಾಡುವ ಕರಾರಿತ್ತು. ನಂತರ ಮರು ಡಾಂಬರಿಕರಣ ಕಾಣ ಬೇಕಿದ್ದ ರಸ್ತೆ ಇದೀಗ ರಸ್ತೆಯನ್ನೆ ಹುಡುಕುವ ಸ್ಥಿತಿ ತಲುಪಿದೆ.  ಸರ್ಕಾರದ ನಿಯಮಾವಳಿಯಂತೆ ನಿರ್ವಹಣೆ ಮಾಡಬೇಕಿದ್ದ ಗುತ್ತಿಗೆದಾರ ನಿಯಮಾವಳಿ ಗಾಳಿಗೆ ತೂರಿ  ಮಾಯವಾಗಿದ್ದರೆ ನಿತ್ಯ ನರಕ ಅನುಭವಿಸುತ್ತಿರುವವರು ಇದೇ ರಸ್ತೆಗೆ ತಮ್ಮ ತೆರಿಗೆ …

Read More »