
ಪ್ರತಿಧ್ವನಿ ಯಲ್ಲಾಪುರ : ರಾಜ್ಯ ಸರ್ಕಾರ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣ ಮಾಡಿದ ಸಂತಸದಲ್ಲಿ ನಿತ್ಯ ಶಾಲಾ ಕಾಲೇಜು ಮತ್ತು ಉದ್ಯೋಗಕ್ಕೆ ತೆರಳುವ ಪ್ರಯಾಣಿಕರ ಗೋಳು ಕಾಣಿಸುತ್ತಿಲ್ಲ. ಪ್ರತಿ ನಿತ್ಯ ಶಾಲಾ ಕಾಲೇಜುಗಳಿಗೆ,ಉದ್ಯೋಗ, ಆಸ್ಪತ್ರೆಗೆ ಒಂದು ಊರಿನಿಂದ ಇನ್ನೊಂದು ಊರಿಗೆ ತೆರಳಲು ಪ್ರಯಾಣಿಕರು ಪ್ರಾಣ ಪಣಕ್ಕಿಟ್ಟು ಸಂಚರಿಸುವ ದುರ್ಗತಿ ಎದುರಾಗಿದೆ.

ತಾಲೂಕಿನ ಕಿರವತ್ತಿ ಗ್ರಾಮದಿಂದ ಪ್ರತಿ ನಿತ್ಯ ಶಾಲಾ,ಕಾಲೇಜು,ಉದ್ಯೋಗ, ಆಸ್ಪತ್ರೆಗೆ ನೂರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಬೆಳಗ್ಗೆ 8 ರಿಂದ 9 ಗಂಟೆ ಅವಧಿಯಲ್ಲಿ ಬಸ್ಸಿನಲ್ಲಿ ಯಲ್ಲಾಪುರ ತೆರಳಲು ದೊಡ್ಡ ಯುದ್ದವನ್ನೆ ಮಾಡಬೇಕಾಗುತ್ತದೆ ಕಾರಣ ಬಸ್ ಗಳ ಸಂಖ್ಯೆ ಕಡಿಮೆ ಪ್ರಯಾಣಿಕರ ಸಂಖ್ಯೆ ಹೆಚ್ಚು.
ಹುಬ್ಬಳ್ಳಿ, ಬೆಳಗಾವಿ,ದಾರವಾಡ,ಕಲಘಟಗಿ ಕಡೆಯಿಂದ ಯಲ್ಲಾಪುರ ವಯಾ ಘಟ್ಟದ ಕೆಳಗಿನ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರೆ ಬಸ್ಸಿನ ತುಂಬಾ ಇಕ್ಕಟ್ಟಾದ ರೀತಿಯಲ್ಲಿ ತುಂಬಿಕೊಂಡು ನಿಲ್ಲಲು ಸಹ ಸ್ಥಳಾವಕಾಶ ಇಲ್ಲದಂತೆ ಇರುವಾಗ ಅದೇ ಬಸ್ ಕಿರವತ್ತಿ ಬಂದಾಗ ಕಿರವತ್ತಿ ಯಲ್ಲಿ ಕಾಯುತ್ತಿರುವ ನೂರಾರು ಪ್ರಯಾಣಿಕರು ಬಸ್ ಹತ್ತುವುದಾದರು ಹೇಗೆ.? ಇಂತಹ ಸಂದರ್ಭದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಳು ಸಮಯದ ಕಾರಣದಿಂದ ಸಂಪೂರ್ಣ ತುಂಬಿರುವ ಬಸ್ ಫುಟ್ ಬೋಡ್೯ ನಲ್ಲೆ ಜೋತಾಡುತ್ತ ಯಲ್ಲಾಪುರ ತಲುಪಬೇಕಿದೆ.
ಇಷ್ಟೊಂದು ಇಕ್ಕಟ್ಟಾದ ಬಸ್‌ನಲ್ಲಿ ಜೋತಾಡುತ್ತ ಪ್ರಯಾಣ ಮಾಡುವ ವಿದ್ಯಾರ್ಥಿಗಳ ಜೀವಕ್ಕೆ ಏನಾದರು ಅವಘಡ ಸಂಭವಿಸಿದರೆ ಹೊಣೆಯಾರು.?

ಮಕ್ಕಳನ್ನು ಕಳೆದುಕೊಂಡ ನೊಂದ ಕುಟುಂಬಗಳಿಗೆ ಐದೊ ಹತ್ತೊ ಲಕ್ಷ ಪರಿಹಾರ ಹಣ ನೀಡಿದರೆ ಮಕ್ಕಳ ಜೀವ ವಾಪಸ್ ತರಲು ಸಾದ್ಯವಿಲ್ಲ. ಇಂತಹ ಅವಘಡ ಸಂಭವಿಸುವ ಮುನ್ನವೆ ಶಾಲಾ ಕಾಲೇಜುಗಳಿಗೆ ತೆರಳುವ ಸಂದರ್ಭದಲ್ಲಿ ಕಿರವತ್ತಿ ಬಸ್ ನಿಲ್ದಾಣದಿಂದಲೆ ಯಲ್ಲಾಪುರ ಘಟಕದಿಂದ ಬಸ್ಸುಗಳ ಸಂಖ್ಯೆ ಹೆಚ್ಚಿಸಿದರೆ ಆಗುವ ಅವಘಡ ತಪ್ಪಿಸಬಹುದಾಗಿದೆ. ಮಕ್ಕಳು, ಮಹಿಳೆಯರು, ವೃದ್ದರು ನಿರಾತಂಕವಾಗಿ ಯಲ್ಲಾಪುರಕ್ಕೆ ತೆರಳಬಹುದಾಗಿದೆ. ಇಂತಹ ರೂಟ್ ಅಳವಡಿಕೆಯಿಂದ ನಿಗಮಕ್ಕೆ ಲಾಭವಾಗದಿದ್ದರು ಪ್ರಯಾಣಿಕರ ಹಿತ ದೃಷ್ಟಿಯಿಂದ ಸೇವೆ ಎಂಬ ತತ್ವದ ಅಡಿಯಲ್ಲಿ ಅಳವಡಿಸಬಹುದಾಗಿದೆ ಎನ್ನುತ್ತಾರೆ ಸಾರ್ವಜನಿಕರು.

ನಿತ್ಯ ನೂರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಕಿರವತ್ತಿ ಬಸ್ ನಿಲ್ದಾಣದಿಂದ ಯಲ್ಲಾಪುರ ಮತ್ತಿತರ ಕಡೆಗಳಿಗೆ ಪ್ರಯಾಣಿಸುವ ಪ್ರಯಾಣಿಕರ ಗೋಳು ಹೇಳತೀರದಾಗಿದೆ. ಅದರಲ್ಲೂ ಶಿಕ್ಷಣ ಅರಸಿ ತೆರಳುವ ವಿದ್ಯಾರ್ಥಿಗಳ ಪಾಡು ದೇವರಿಗೆ ಪ್ರೀತಿ ಅವರ ಜೀವಕ್ಕೇನಾದರು ಅನಾಹುತವಾದ ನಂತರ ಪಶ್ಚಾತ್ತಾಪ ಪಡುವ ಬದಲು ಅಂತಹ ಪೀಕ್ ಟೈಮ್ ನಲ್ಲಿ ಬಸ್ ಗಳ ಸಂಖ್ಯೆ ಹೆಚ್ಚಿಸಿ ಮಕ್ಕಳ ಸುರಕ್ಷಿತ ಪ್ರಯಾಣಕ್ಕೆ ಅನುಕೂಲ ಕಲ್ಪಿಸಬೇಕಿದೆ ಇಲ್ಲವಾದಲ್ಲಿ ಅವರಿಗಾಗುವ ಯಾವುದೆ ಸಮಸ್ಯೆಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ನೇರ ಹೊಣೆಯಾಗಲಿದೆ. ಈ ಕುರಿತು ಸರ್ಕಾರ ಮತ್ತು ಅಧಿಕಾರಿಗಳು ಗಂಭೀರವಾಗಿ ಗಮನಿಸಿ ಬಸ್ ಗಳ ಸಂಖ್ಯೆ ಹೆಚ್ಚಿಸಬೇಕಿದೆ.
ಬಾಬು ಸಿದ್ದಿ, ಸಾಮಾಜಿಕ ಕಾರ್ಯಕರ್ತರು, ಕಿರವತ್ತಿ
ಸರ್ಕಾರದ ನಿಯಮಾವಳಿಯಂತೆ ಒಂದು ವಾಹನದಲ್ಲಿ ಇಂತಿಷ್ಟೇ ಪ್ರಯಾಣಿಕರು ಪ್ರಯಾಣಿಸಬೇಕೆಂಬ ಕರಾರಿದೆ ಅದನ್ನು ಮೀರಿದರೆ ಆರ್.ಟು.ಒ ಅಧಿಕಾರಿಗಳು, ಟ್ರಾಫಿಕ್ ಪೊಲೀಸರು ಕಾನೂನು ಕ್ರಮ ಜರುಗಿಸುತ್ತಾರೆ ಆದರೆ ಸಾರಿಗೆ ಬಸ್ ಗಳಲ್ಲಿ ನಿಯಮ ಮೀರುವ ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಕಾನೂನಿಗೆ ವಿರುದ್ದವಾಗಿ ಫುಟ್ ಬೋಡ್೯ ಮೇಲೆ ನೇತಾಡುತ್ತ ಪ್ರಯಾಣಿಸಿದರು ಕೇಳುವವರಿಲ್ಲದಾಗಿದೆ. ಈ ಕುರಿತು ಸಾರಿಗೆ ಅಧಿಕಾರಿಗಳು ಗಮನಿಸಬೇಕಿದೆ.
ನಿತ್ಯ ಪ್ರಯಾಣಿಸುವ ಪ್ರಯಾಣಿಕ,ಕಿರವತ್ತಿ











Prathidvani Yellapura