Breaking News

ಪ್ರತಿಧ್ವನಿ ಸುದ್ದಿ ಫಲಶೃತಿ  ಯಲ್ಲಾಪುರ-ಹಳಿಯಾಳ ರಸ್ತೆ ತಾತ್ಕಾಲಿಕ ದುರಸ್ತಿ ಆರಂಭ.


ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ-ಹಳಿಯಾಳ ರಾಜ್ಯ ರಸ್ತೆ ಅತ್ಯಂತ ಧಾರುಣ ಸ್ಥಿತಿ ತಲುಪಿರುವ ಕುರಿತು ಪ್ರತಿಧ್ವನಿ ಯಲ್ಲಾಪುರ ವೆಬ್ ಶುಕ್ರವಾರ ಸುದ್ದಿ ಪ್ರಕಟಿಸಿತ್ತು.


ಸುದ್ದಿ ಪ್ರಕಟಗೊಂಡ ಕೆಲವೇ ಗಂಟೆಗಳಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ತಾತ್ಕಾಲಿಕ ದುರಸ್ತಿ ಆರಂಭಗೊಂಡಿದ್ದು ಸಾರ್ವಜನಿಕ ಹಿತ ದೃಷ್ಟಿಯಿಂದ ಸುದ್ದಿ ಮಾಡಿದ್ದ ಪ್ರತಿಧ್ವನಿ ಗೆ ಸಮಾಧಾನ ತಂದಿದೆ.


ಸುದ್ದಿ ಪ್ರಕಟಿಸಿದ ಕೂಡಲೆ ಕಾರ್ಯ ಪ್ರವೃತ್ತರಾದರು ಎಂಬ ಸಂತಸಕ್ಕಿಂತ ರಸ್ತೆ ಪರಿಸ್ಥಿತಿ ಕಂಡು ಮತ್ಯಾರಿಗು ಅವಘಡ ಸಂಭವಿಸವಾರದು ಎಂಬ ದೊಡ್ಡತನ ತೋರಿ ದುರಸ್ತಿಗೆ ಮುಂದಾದ ಯಲ್ಲಾಪುರ ಲೋಕೋಪಯೋಗಿ ಇಲಾಖೆ ಎಇಇ ರಾಮಲಿಂಗ್ ಅವರ ಬದ್ದತೆಗೆ ಪ್ರತಿಧ್ವನಿ ವಂದಿಸುತ್ತದೆ.


ಸದ್ಯ ಮಳೆ ವಾತಾವರಣದಲ್ಲಿ ಸಂಪೂರ್ಣ ಸರಿಯಾಗದಿದ್ದರು ಕನಿಷ್ಟ ಅನಾಹುತ ಆಗದ ರೀತಿಯಲ್ಲಿ ದುರಸ್ತಿ ಆದರು ಸಹ ಒಳ್ಳೆಯ ಕಾರ್ಯವಾದಂತಾಗಲಿದೆ. ಪ್ರತಿಧ್ವನಿ ಯಲ್ಲಾಪುರ ಇಲಾಖೆಗೆ ಕೃತಜ್ಞತೆ ಸಲ್ಲಿಸುತ್ತದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಆದಿವಾಸಿಗಳ ಹೆಸರಿನಲ್ಲಿ ಸಮ್ಮೇಳನ ಆದರೆ ಬುಡಕಟ್ಟು ಸಿದ್ದಿ ಸಮುದಾಯದ ಪ್ರಮುಖರಿಗೆ ತಿಳಿದಿಲ್ಲ ಏನಿದರ ಮರ್ಮ..?

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಕಾರ್ಮಿಕ ಭವನದಲ್ಲಿ ಸಡೆಸಲು ಉದ್ದೇಶಿಸಿರುವ ಆದಿವಾಸಿಗಳ ಕರ್ನಾಟಕ ರಾಜ್ಯ ಸಮ್ಮೇಳನಕ್ಕೆ ಪ್ರಾರಂಭದಲ್ಲೆ ವಿಘ್ನ ಎದುರಾಗಿದೆ …

Leave a Reply

Your email address will not be published. Required fields are marked *