Breaking News

ಸತ್ಯವಾಗಿ ಇದು ರಸ್ತೆ ನಮ್ಮ ಯಲ್ಲಾಪುರ-ಹಳಿಯಾಳ ರಾಜ್ಯ ರಸ್ತೆ ಆಧುನಿಕ ಭಾರತದ ರಸ್ತೆ.!!!


ಪ್ರತಿಧ್ವನಿ ಯಲ್ಲಾಪುರ : ಬಳ್ಳಾರಿ- ಕಾರವಾರ ರಾಷ್ಟ್ರೀಯ ಹೆದ್ದಾರಿಯ ಹಳಿಯಾಳ್ ಕ್ರಾಸ್ ನಿಂದ ತಾಟವಾಳದ ವರೆಗೆ ರಾಜ್ಯ ರಸ್ತೆಗೆ ಅತ್ಯಂತ ದುರ್ಗತಿ ಬಂದಿದ್ದು ದುರಸ್ತಿ
ಕಾಣದೆ ಗುಂಡಿಯೋಳಗೆ ರಸ್ತೆ ಇರುವುದರಿಂದ ಪ್ರತಿ ನಿತ್ಯ ವಾಹನ ಸವಾರರು ನರಕ ಅನುಭವಿಸುತ್ತಿದ್ದು ಅಪಘಾತಗಳ ಸಂಖ್ಯೆ ಹೆಚ್ಚುತ್ತಲಿದೆ.


ಯಲ್ಲಾಪುರ ಮತ್ತು ಹಳಿಯಾಳ ಸಂಪರ್ಕಿಸುವ ರಸ್ತೆ ಭಾರಿ ಗುಂಡಿಗಳಿಂದ ತುಂಬಿಹೋಗಿದೆ. ಅಪರೂಪಕ್ಕೆ ಈ ಭಾಗದಲ್ಲಿ ವಾಹನ ಚಲಾಯಿಸುವುದು ಯಮಲೋಕಕ್ಕೆ ಪಯಣಿಸುವುದು ಒಂದೇ ಆಗಿದೆ. ವಯೋವೃದ್ದರು,ಗರ್ಭಿಣಿಯರು, ವಿಶೇಷ ಚೇತನರು ಈ ರಸ್ತೆಯಲ್ಲಿ ಸಂಚರಿಸಲು ಹಿಂಜರಿಯುತ್ತಿದ್ದಾರೆ.


ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸುವುದು ಅದೇನು ರಾಕೆಟ್ ಸೈನ್ಸ ಎಂದು ಇತ್ತೀಚೆಗೆ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಮಾತನ್ನೆ ಪ್ರಜ್ಞಾವಂತ ನಾಗರಿಕರು ಪ್ರಶ್ನಿಸುತ್ತಿದ್ದಾರೆ. ಯಾವ ಸರ್ಕಾರಗಳು ಅಥವ ಅಧಿಕಾರಿಗಳು ತಮ್ಮ ಮನೆಯ ಹಣ ತಂದು ರಸ್ತೆ ಮಾಡುವುದಿಲ್ಲ. ಜನರು ಬೆವರು ಸುರಿಸಿ ಸಂಪಾದನೆಮಾಡಿ ಅದರಲ್ಲಿ ಕಟ್ಟಿದ ತೆರಿಗೆ ಹಣದಲ್ಲಿ ನಿರ್ಮಿಸಿದ ಮತ್ತು ನಿರ್ವಹಿಸುವ ರಸ್ತೆಯಾಗಿದೆ. ಅಂದ ಮೇಲೆ ಹಣ ಹೆಚ್ಚಾದರು ಪರವಾಗಿಲ್ಲ ಹಣ ನಮ್ಮದೇ ಅಲ್ವ ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಲು ನಿಮಗೇನು ಎಂಬುದು ತೆರಿಗೆ ಪಾವತಿಸುವ ಈ ರಸ್ತೆ ಯಜಮಾನ ಸಾಮಾನ್ಯ ನಾಗರಿಕನ ಪ್ರಶ್ನೆ ಆಗಿದೆ.


ಇತ್ತೀಚೆಗೆ ಫೆಬ್ರವರಿ ತಿಂಗಳಲ್ಲಿ ನಡೆದ ಯಲ್ಲಾಪುರ ಗ್ರಾಮದೇವಿ ಜಾತ್ರೆ ಸಂದರ್ಭದಲ್ಲಿ ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಲಾಗಿತ್ತು ಆದರೆ ಇದೀಗ ಮತ್ತೆ ಆ ರಸ್ತೆ ಸಂಚಾರಕ್ಕೆ ಯೋಗ್ಯವಿಲ್ಲದಾಗಿದೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕಿದೆ ಇಲ್ಲವಾದಲ್ಲಿ ಸದ್ಯದಲ್ಲೆ ಬಾರಿ ಅವಘಡ ಕಾದಿದೆ. ಎಚ್ಚರ.. ಎಚ್ಚರ.. ಎಚ್ಚರ.

ರಸ್ತೆ ಅತ್ಯಂತ ದುಸ್ತಿತಿ‌ ತಲುಪಿರುವ ಕುರಿತು‌ ನನ್ನ ಗಮನಕ್ಕೆ ತಂದ ಕೂಡಲೆ ಸ್ಥಳಕ್ಕೆ ಭೇಟಿ ನೀಡಿ. ಸ್ಥಿತಿ ಗತಿ ಅರಿತಿದ್ದೇನೆ. ಈ ಹಿನ್ನೆಲೆಯಲ್ಲಿ ಶೀಘ್ರವಾಗಿ ಕಾಮಗಾರಿ ಕೈಗೆತ್ತಿಕೊಂಡು‌‌ ದುರಸ್ತಿ ಮಾಡಲಾಗುವುದು. ವಾಹನ ಸವಾರರು ಸಹ ಅತ್ಯಂತ ಜಾಗರೂಕರಾಗಿ ವಾಹನ ಚಲಾಯಿಸಬೇಕಿದೆ. ರಾಮಲಿಂಗ ಎಇಇ,ಲೋಕೋಪಯೋಗಿ ಇಲಾಖೆ,ಯಲ್ಲಾಪುರ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ತಾಲೂಕು “ಫೋಟೋಗ್ರಾಫರ್ ಯೂನಿಯನ್” ಅಸ್ತಿತ್ವಕ್ಕೆ – ಅಧ್ಯಕ್ಷರಾಗಿ ಗುರುಮೂರ್ತಿ ಗಾಂವ್ಕರ್,ಕಾರ್ಯದರ್ಶಿಯಾಗಿ ಗಣೇಶ್ ಪತ್ತಾರ್ ಆಯ್ಕೆ

ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ತಾಲೂಕಿನಲ್ಲಿ ನೂತನವಾಗಿ “ಫೋಟೋಗ್ರಾಫರ್ ಯೂನಿಯನ್” ಅಸ್ತಿತ್ವಕ್ಕೆ ಬಂದಿರುವುದು ಸ್ಥಳೀಯ ಛಾಯಾಗ್ರಾಹಕರಿಗೆ ಒಗ್ಗಟ್ಟಿನ ವೇದಿಕೆ ನಿರ್ಮಾಣದ …

Leave a Reply

Your email address will not be published. Required fields are marked *