Breaking News

ಯಲ್ಲಾಪುರದಲ್ಲೂ ಅನ್ನ ಭಾಗ್ಯದ ಅಕ್ಕಿ ಅಕ್ರಮ ದಂಧೆಕೋರರ ಪಾಲು – ತಡೆದು ಹೆಡೆಮುರಿ ಕಟ್ಟಿದ ಪೊಲೀಸರು.


ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ನೂತನನಗರ ಜಡ್ಡಿಯಲ್ಲಿ ಸರ್ಕಾರ ಬಡವರಿಗಾಗಿ ನೀಡುವ ಅನ್ನಭಾಗ್ಯದ ಅಕ್ಕಿಯನ್ನು ಕಲಘಟಗಿಯ ಶಾರುಖ್ ಮತ್ತು ಶಾನು ಎಂಬುವರು ಕಡಿಮೆ ಬೆಲೆಗೆ ಕೊಂಡು ಕದ್ದು ಸಾಗಿಸುವ ಮಾಹಿತಿ ತಿಳಿದು ಆಹಾರ ಇಲಾಖೆ ರಾಘವೇಂದ್ರ ರಾಮ ಗೌಡ ಎಂಬುವರು ಯಲ್ಲಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದು ಅಕ್ರಮ ದಂದೆಕೋರರನ್ನು ಪೊಲೀಸರು ಅಕ್ಕಿ ಮತ್ತು ಕೃತ್ಯಕ್ಕೆ ಬಳಸಿದ ವಾಹನ ಸಹಿತ ವಶಕ್ಕೆ ಪಡೆದಿರುತ್ತಾರೆ.


ಸರ್ಕಾರ ಬಡವರಿಗಾಗಿ ಹಸಿವು ಮುಕ್ತ ಭಾರತ ಎಂಬ ಉದ್ದೇಶದಿಂದ ರಾಜ್ಯ ಹಾಗು ಕೇಂದ್ರ ಸರ್ಕಾರ ಜಂಟಿಯಾಗಿ ಜನತೆಗೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಉಚಿತವಾಗಿ ಅಕ್ಕಿ ನೀಡುತ್ತಿದ್ದಾರೆ. ಕೆಲವು ಮಂದಿ ಸೊಸೈಟಿ ಅಕ್ಕಿ ಬಳಸುವುದಿಲ್ಲ, ಮತ್ತೆ ಕೆಲವರಿಗೆ ಇದು ಹೆಚ್ಚಾಗಿ ಉಳಿಯುತ್ತದೆ, ಇದನ್ನೆ ಬಂಡವಾಳ ಮಾಡಿಕೊಂಡ ಕೆಲವು ಮಂದಿ ಇದನ್ನೆ ದಂದೆಯಾಗಿ ಮಾಡಿಕೊಂಡಿದ್ದು ಅನ್ನ ಭಾಗ್ಯದ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ ಬೇರೆಡೆಗೆ ಕೊಂಡೊಯ್ದು ಅದನ್ನು ಪಾಲೀಶ್ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ ಈ ದಂದೆ ಬೇರೆ ಬೇರೆ ಕಡೆಗಳಲ್ಲಿ ನಡೆದಿರುವುದನ್ನು ಕೇಳುತ್ತಿದ್ದೆವು ಆ ದಂದೆ ಯಲ್ಲಾಪುರಕ್ಕೆ ಕಾಲಿಟ್ಟಿರುವುದು ಆಘಾತಕಾರಿಯಾಗಿದೆ.
ಅನ್ನ ಭಾಗ್ಯದ ಅಕ್ಕಿ ಮಾರುವುದು ಸಹ ಶಿಕ್ಷಾರ್ಹ ಅಪರಾಧವಾಗಿದ್ದು ಜನತೆ ಎಚ್ಚರವಹಿಸಬೇಕಿದೆ.
ಸದ್ಯ ಯಲ್ಲಾಪುರ ಪೊಲೀಸರು 51 ಸಾವಿರ ಮೌಲ್ಯದ 15 ಕ್ವಿಂಟಾಲ್ ಅಕ್ಕಿ ಹಾಗು ಸಾಗಿಸಲು ಬಳಸಿದ ವಾಹನ ಸಹಿತ ಕಲಘಟಗಿ ಮೂಲದ ಶಾರುಖ್ ನಜೀರ್ ಅಹಮ್ಮದ್ ನೇಸರಗಿ ಹಾಗು ಶಾನು ರೆಹಮಾನ್ ಯಾದವಾಡ ಎಂಬ ಅಕ್ರಮ ದಂದೆಕೋರರನ್ನು ಬಂಧಿಸಿದ್ದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದ ಪಂಚಾಯತ ರಾಜ್ ಇಂಜಿನೀಯರಿಂಗ್ ಕಛೇರಿಯಲ್ಲಿ ಗಣೇಶೋತ್ಸವ – ಶ್ರೀಧರ ಸಂಜೀವ ಕರಕೆರ ಕೈಯಲ್ಲಿ ಅರಳಿದ ಕೂರ್ಮಾರೂಡ ಗಣಪ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಪಂಚಾಯತ ರಾಜ್ ಇಂಜಿನೀಯರಿಂಗ್, ಉಪ ವಿಭಾಗ, ಯಲ್ಲಾಪುರ ಕಾರ್ಯಾಲಯದಲ್ಲಿ ಅಧಿಕಾರಿ …

Leave a Reply

Your email address will not be published. Required fields are marked *