ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ತಾಲ್ಲೂಕಿನ ಹಿಟ್ಟಿಬೈಲ್ ಸಮೀಪ ಭಾನುವಾರ ಮಳೆಯ ನಡುವೆಯೇ ಬಸ್, ಕಾರು ಹಾಗೂ ಸ್ಕೂಟಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಸವಾರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು,ಯಲ್ಲಾಪುರ ತಾಲ್ಲೂಕು ಆಸ್ಪತ್ರೆ ಆಂಬುಲೆನ್ಸ್ ಮೂಲಕ ಮೃತರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಹಾಗೂ ಆಂಬುಲೆನ್ಸ್ ಸಿಬ್ಬಂದಿ ಆಗಮಿಸಿದ್ದು ಪೊಲೀಸರು ಅಪಘಾತದ ನಿಖರ ಕಾರಣ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹಾಗು ಮೃತ ಯುವಕರ ಬಗ್ಗೆ …
Read More »ಯಲ್ಲಾಪುರದ ಸವಣಗೇರಿಯಲ್ಲಿ ರವಿವಾರ ನಡೆದ ಶಾಲೆಯ ಸ್ವಚ್ಚತಾ ಕಾರ್ಯ.
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಹೊರ ವಲಯ ಸವಣಗೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದ ಸ್ವಚ್ಚತಾ ಕಾರ್ಯ ಸ್ಥಳೀಯ ನಾಗರಿಕರು ಸೇರಿದಂತೆ ಹಳೆಯ ವಿದ್ಯಾರ್ಥಿಗಳು, ಪ್ರಮುಖರೊಂದಿಗೆ ರವಿವಾರ ನೆರವೇರಿತು. ಶಾಲೆಯ ಆವರಣದಲ್ಲಿ ಬೆಳೆದ ಅನವಶ್ಯಕ ಗಿಡಗಂಟಿಗಳನ್ನು ತೆಗೆದು ಸ್ವಚ್ಚಗೊಳಿಸಲಾಯಿತು. ಶಾಲೆಯ ಸ್ವಚ್ಚತಾ ಕಾರ್ಯದ ಶ್ರಮದಾನದಲ್ಲಿ ಪಾಲ್ಗೊಂಡ ರವಿ ನಾಯ್ಕ, ಮಂಜುನಾಥ ನಾಯ್ಕ,ಜಾಬೀರ್ ಶೇಖ್, ತಿಮ್ಮಣ್ಣ,ರಾಘವೇಂದ್ರ ಹೆಗಡೆ, ಉಮಾಮಹೇಶ್ವರಭಟ್ಟ , ವಿಶ್ವನಾಥ ಭಟ್ಟ, ಯುವರಾಜ ಗೊಂದಳಿ, ಶಶಿಧರ್ ಗೊಂದಳಿ, ವಿಜಯಾ …
Read More »ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನ ವಿಕಾಸ ಕಾರ್ಯಕ್ರಮದಡಿ ಉಚಿತ ಟೈಲರಿಂಗ್ ತರಬೇತಿಗೆ ಚಾಲನೆ.
ಪ್ರತಿಧ್ವನಿ ಯಲ್ಲಾಪುರ : “ಟೈಲರಿಂಗ್ ಕೇವಲ ಒಂದು ಕೌಶಲವಲ್ಲ, ಅದು ಮಹಿಳೆಯರ ಜೀವನಕ್ಕೆ ಆತ್ಮವಿಶ್ವಾಸ, ಸ್ವಾವಲಂಬನೆ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ನೀಡುವ ಉತ್ತಮ ಸ್ವಯಂ ಉದ್ಯೋಗವಾಗಿದೆ. ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಈ ಉದ್ಯಮವು ಮನೆಯಲ್ಲಿಯೇ ಆದಾಯ ಗಳಿಸಲು ಅವಕಾಶ ಕಲ್ಪಿಸುತ್ತದೆ. ಇಂದಿನ ದಿನಗಳಲ್ಲಿ ಶಾಲಾ ಸಮವಸ್ತ್ರ, ಮಹಿಳೆಯರ ಉಡುಪು, ಬ್ಲೌಸ್ ಹೊಲಿಗೆ, ಫ್ಯಾಷನ್ ಡಿಸೈನಿಂಗ್ ಹಾಗೂ ಬಟ್ಟೆಗಳ ಅಲ್ಟರೇಷನ್ಗೆ ನಿರಂತರ ಬೇಡಿಕೆ ಇರುವುದರಿಂದ ಟೈಲರಿಂಗ್ ಕ್ಷೇತ್ರವು ಶಾಶ್ವತ ಆದಾಯದ ಮೂಲವಾಗಿದೆ. …
Read More »ಅನುದಾನಿತ- ಸರ್ಕಾರಿ ಶಾಲಾ ಶಿಕ್ಷಕರೆಂಬ ತಾರತಮ್ಯ ಬಿಡಿ ಸರಿ ಸಮಾನವಾದ ಗೌರವ ಹಕ್ಕುಗಳನ್ನು ಕೊಡಿ – ಎಂ. ರಾಜಶೇಖರ್ ಮನವಿ
ಪ್ರತಿಧ್ವನಿ ಯಲ್ಲಾಪುರ : 30 ವರ್ಷಕ್ಕೂ ಹೆಚ್ಚಿನ ಅವಧಿಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿ ಬರಿಗೈಯಲ್ಲಿ ಮನೆಗೆ ಹೋಗುವ ಅನುದಾನಿತ ಶಾಲಾ ಶಿಕ್ಷಕರ ಪಾಡು ಯಾರಿಗೂ ಬರಬಾರದು. ಈ ರೀತಿಯ ಮಲತಾಯಿ ಧೋರಣೆಯಿಂದ ಅನೇಕ ಶಿಕ್ಷಕರು ಇಂದು ಭ್ರಮನೀರಸನಗೊಂಡಿದ್ದಾರೆ. ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಸೂಚಿಸಿದಂತೆ ಓಪಿಎಸ್ ಜಾರಿಗೊಳಿಸಿ. ಬಸವರಾಜ ಹೊರಟ್ಟಿ ಅವರ ಕಾಲ್ಪನಿಕ ವೇತನದ ಮೇಲಿನ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಗೆ ನೀಡುವ ಜ್ಯೋತಿ ಸಂಜೀವಿನಿ(ಸಿರಿ) ಹಾಗೂ …
Read More »ಕೋಳಿಕೇರಿ ವೀರ ಸತ್ಪುರುಷರಾದ ಕಾಳುಘಾಡಿ-ಬಾಳುಘಾಡಿ ಜಾತ್ರಾ ಮಹೋತ್ಸವ ಇಂದು.
ಕೇಬಲ್ ನಾಗೇಶ್, ಯಲ್ಲಾಪುರ..🖋 ಪ್ರತಿಧ್ವನಿ ಯಲ್ಲಾಪುರ : ಪ್ರತಿ ವರ್ಷದಂತೆ ಈ ವರ್ಷವು ಯಲ್ಲಾಪುರ ತಾಲೂಕಿನ ಕೋಳಿಕೇರಿ ಪರಿಸರದಲ್ಲಿ ನೆಲೆಸಿರುವ ವೀರ ಸತ್ಪುರುಷರಾದ ಕಾಳುಘಾಡಿ-ಬಾಳುಘಾಡಿ ಜಾತ್ರಾ ಮಹೋತ್ಸವವು ಮಿರಾಶಿ ಕುಟುಂಬ ಹಾಗು ಸ್ಥಳೀಯ ಪ್ರಮುಖರು ಹಾಗು ಹಿತೈಷಿಗಳ ಸಹಕಾರದಿಂದ ಇಂದು ರವಿವಾರ ಶ್ರದ್ದಾ ಭಕ್ತಿಯಿಂದ ಜರುಗುತ್ತಿದ್ದು ಪವಾಡ ಪುರುಷರ ದರ್ಶನ ಪಡೆಯಲು ರಾಜ್ಯ ಹೊರ ರಾಜ್ಯದಿಂದಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತ ಆಗಮಿಸುತ್ತಿದ್ದು ಸಕಲ ಸಿದ್ಧತೆಗಳನ್ನು ಮಾಡಿ ಕೊಳ್ಳಲಾಗಿದೆ. ಕ್ಷೇತ್ರ ಮಹಿಮೆ …
Read More »ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಮೊದಲಬಾರಿಗೆ ಜಿಲ್ಲೆಗಾಗಮಿಸಿದ ಯು.ಟಿ. ಖಾದರ್ – ಸ್ವಾಗತಿಸಿದ ಶಾಸಕ ಹೆಬ್ಬಾರ್.
ಪ್ರತಿಧ್ವನಿ ಯಲ್ಲಾಪುರ:: ಕಾರವಾರ ಜಿಲ್ಲಾ ಕೇಂದ್ರದಲ್ಲಿ ಪ್ರಕೃತಿ ವಿಕೋಪದಲ್ಲಿ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಲು ಆಯೋಜಿಸಲಾದ ಸಭೆಯಲ್ಲಿ ಭಾಗವಹಿಸಲು ಕಾರವಾರಕ್ಕೆ ಆಗಮಿಸಿದ ಆರೋಗ್ಯ ಸಚಿವರು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರನ್ನು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಆತ್ಮೀಯವಾಗಿ ಸನ್ಮಾನಿಸಿ, ಜಿಲ್ಲೆಗೆ ಸ್ವಾಗತ ಕೋರಿದರು. ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರ ರಚನೆಯಾದ ಬೆನ್ನಲ್ಲೆ ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಯು.ಟಿ.ಖಾದರ್ ಅವರು …
Read More »ಮಳೆಗಾಲದ ಸಂದರ್ಭ ಹಾವು ಕಡಿತದ ಪ್ರಕರಣಗಳು ಹೆಚ್ಚು – ಕೃಷಿ ಚಟುವಟಿಕೆ ಸಂದರ್ಭದಲ್ಲಿ ರೈತರು ಜಾಗೃತಿ ವಹಿಸಿ.
ಕೇಬಲ್ ನಾಗೇಶ್, ಯಲ್ಲಾಪುರ..🖋 ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಕೆಲ ದಿನಗಳಿಂದ ಹಾವು ಕಡಿತಕ್ಕೊಳಗಾದ ಪ್ರಕರಣಗಳು ಹೆಚ್ಚಾಗಿ ಬರುತ್ತಿದ್ದು ಸೂಕ್ತ ಚಿಕಿತ್ಸೆ ದೊರೆಯುತ್ತಿದೆ ಮತ್ತು ಅ್ಕ್ಕೆ ಸಂಬಂಧಿಸಿದ ಔಷಧಗಳು ತಾಲೂಕಿನ ಎಲ್ಲಾ ಪಿ.ಹೆಚ್.ಸಿ ಗಳಲ್ಲು ಸಹ ಲಭ್ಯ ಇರುವುದಾಗಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್ ಪ್ರತಿಧ್ವನಿಗೆ ಮಾಹಿತಿ ನೀಡಿದ್ದಾರೆ. ವಿಶೇಷವಾಗಿ ಮಳೆಗಾಲದ ಸಂದರ್ಭದಲ್ಲಿ ಮಲೆನಾಡಿನಲ್ಲಿ ಕೃಷಿ ಚಟುವಟಿಕೆ ವೇಗ ಪಡೆದುಕೊಳ್ಳುತ್ತದೆ ಅದಾಗಲೆ ತೋಟ,ಗದ್ದೆ,ಜಮೀನುಗಳಲ್ಲಿ ವಿವಿಧ ಜಾತಿ ಹಾವುಗಳ …
Read More »ಜಿಪಿಎಸ್ ಆಗದಿರುವ ಅರಣ್ಯ ಜಾಗವನ್ನು ಇಲಾಖೆ ಸ್ವಾಧೀನ ಪಡಿಸಿಕೊಂಡಿದೆ – ದಬ್ಬಾಳಿಕೆ ಸತ್ಯಕ್ಕೆ ದೂರವಾದ ಮಾತು-ಹಿಮವತಿ ಭಟ್,ಎಸಿಎಫ್
ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ತಾಲೂಕಿನ ಶೀಗೆಪಾಲ ಗ್ರಾಮದ ರೈತ ಗುಡೇಪಾಲ ರಾಮಚಂದ್ರ ಭಟ್ಟರಿಗೆ ಸೇರಿದ ಸುಮಾರು ಅರ್ಧ ಎಕರೆ ಅಡಕೆ ತೋಟವನ್ನು ಸ್ಥಳೀಯ ಅರಣ್ಯ ಇಲಾಖೆ ಫಾರೆಸ್ಟರ್ ಮತ್ತು ಗಾರ್ಡ್ ಗಿಡಗಳನ್ನು ಕಡಿದು,ಕಿತ್ತು ಧ್ವಂಸ ಮಾಡಿದ್ದಾರೆ ಎಂಬ ಸುದ್ದಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಅಪ್ಪಟ ಅರಣ್ಯ ಜಾಗವನ್ನು ಸ್ವಾಧೀನಪಡಿಸಿಕೊಂಡಿದ್ದೇವೆ ಮತ್ತು ಇದು ಜಿಪಿಎಸ್ ಆಗದ ಜಾಗ ಹಾಗು ಯಾವುದೆ …
Read More »ಅಧಿಕಾರಿಗಳೆ ತಡೆದಿದ್ದ ಷರತ್ತು ಅವಧಿ ಮುಗಿಯದ ಭೂಮಿ ಮಾರಾಟ – ಅಧಿಕಾರಿಗಳಿಂದಲೆ ಖಾತೆ ಬದಲಾವಣೆಗೆ ಹುನ್ನಾರ.
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ತಟಗಾರ ಕ್ರಾಸ್ ಸಮೀಪದಲ್ಲಿ ಸರ್ಕಾರದ ಷರತ್ತು ಅವಧಿ ಮುಗಿಯದ ಭೂಮಿ ಮಾರಟಕ್ಕೆ ಆಕ್ಷೇಪಣೆ ಸಲ್ಲಿಸಲಾಗಿದ್ದ ಭೂಮಿಯನ್ನು ಅಧಿಕಾರಿಗಳು ಚಾಣಾಕ್ಷತನದಿಂದ ಮಾರಾಟಕ್ಕೆ ಮತ್ತೆ ವೇದಿಕೆ ಸಿದ್ದಪಡಿಸಿರುವುದರ ಮೂಲಕ ಮತ್ತೆ ಹೋರಾಟದ ಅಖಾಡಕ್ಕೆ ಸಾಮಾಜಿಕ ಹೋರಾಟಗಾರ ಮಂಜುನಾಥ ವಿ ಹೆಗಡೆ ಮುಂದಾಗಿದ್ದಾರೆ.ತಟಗಾರ ಕ್ರಾಸ್ ನ ಸರ್ವೆ ನಂ 31-16-3 ಜಾಗವು ಸರ್ಕಾರದ ಷರತ್ತಿನ ಅವಧಿ ಒಳಗೊಂಡಿದೆ.ಈ ಹಿಂದೆ ಒಮ್ಮೆ ಮಾರಾಟದ ತಂತ್ರ ರೂಪಿಸಲಾಗಿತ್ತು ಅಂದಿನ ಅಧಿಕಾರಿಳಿಗೆ ವಸ್ತು …
Read More »ದೇವರ ದುಡ್ಡಿಗು ರಕ್ಷಣೆ ಇಲ್ಲವಾಯಿತೆ..ರಾಮ.ರಾಮ.. ಅಯೋಧ್ಯೆ ಶ್ರೀ ರಾಮನ ದುಡ್ಡು ದೋಚಿದ ಖದೀಮರು.
ಕೇಬಲ್ ನಾಗೇಶ್, ಯಲ್ಲಾಪುರ..🖋 ಪ್ರತಿಧ್ವನಿ ಯಲ್ಲಾಪುರ : ದೇಶದಾದ್ಯಂತ ಗಂಭೀರ ಚರ್ಚೆಯಲ್ಲಿರುವ ಪ್ರಭು ಶ್ರೀರಾಮನ ಹಣ ಲಪಟಾಯಿಸಿದ ಟ್ರಸ್ಟ್ ಮತ್ತು ಅಲ್ಲಿಯ ಅಧಿಕಾರಿ ಖದೀಮರ ಕೃತ್ಯದಿಂದಾಗಿ ದೇಶದ ಸಮಸ್ತ ಹಿಂದು ಕುಲಕೋಟಿ ಬಂಧುಗಳಿಗೆ ಅತೀವ ನೋವಾಗಿದೆ. ಬಾರಿ ಹೋರಾಟದ ನಂತರ ಹಲವು ದಶಕಗಳ ನ್ಯಾಯಾಂಗ ಹೋರಾಟದ ನಂತರ ಪ್ರಭು ಶ್ರೀ ರಾಮ ಜನ್ಮತಾಳಿದ ಅಯೋಧ್ಯೆಯಲ್ಲಿ ರಾಮಲಲ್ಲಾನ ಸುಂದರ ಮಂದಿರ ತಲೆ ಎತ್ತಲಿದೆ ಅದಕ್ಕಾಗಿ ನನ್ನ ಅಳಿಲು ಸೇವೆ ಇರಲಿ ಎಂದು …
Read More »
Prathidvani Yellapura