Breaking News

ದೇವರ ದುಡ್ಡಿಗು ರಕ್ಷಣೆ ಇಲ್ಲವಾಯಿತೆ..ರಾಮ.ರಾಮ.. ಅಯೋಧ್ಯೆ ಶ್ರೀ ರಾಮನ ದುಡ್ಡು ದೋಚಿದ ಖದೀಮರು.

ಕೇಬಲ್ ನಾಗೇಶ್, ಯಲ್ಲಾಪುರ..🖋


ಪ್ರತಿಧ್ವನಿ ಯಲ್ಲಾಪುರ : ದೇಶದಾದ್ಯಂತ ಗಂಭೀರ ಚರ್ಚೆಯಲ್ಲಿರುವ ಪ್ರಭು ಶ್ರೀರಾಮನ ಹಣ ಲಪಟಾಯಿಸಿದ ಟ್ರಸ್ಟ್ ಮತ್ತು ಅಲ್ಲಿಯ ಅಧಿಕಾರಿ ಖದೀಮರ ಕೃತ್ಯದಿಂದಾಗಿ ದೇಶದ ಸಮಸ್ತ ಹಿಂದು ಕುಲಕೋಟಿ ಬಂಧುಗಳಿಗೆ ಅತೀವ ನೋವಾಗಿದೆ.


ಬಾರಿ ಹೋರಾಟದ ನಂತರ ಹಲವು ದಶಕಗಳ ನ್ಯಾಯಾಂಗ ಹೋರಾಟದ ನಂತರ ಪ್ರಭು ಶ್ರೀ ರಾಮ ಜನ್ಮತಾಳಿದ ಅಯೋಧ್ಯೆಯಲ್ಲಿ ರಾಮಲಲ್ಲಾನ ಸುಂದರ ಮಂದಿರ ತಲೆ ಎತ್ತಲಿದೆ ಅದಕ್ಕಾಗಿ ನನ್ನ ಅಳಿಲು ಸೇವೆ ಇರಲಿ ಎಂದು ಬಿಕ್ಷುಕರಿಂದ ಹಿಡಿದು ಕೋಟ್ಯಾಧೀಶರು ಸಹ ದೇಣಿಗೆ ನೀಡಿದ್ದರು ಮತ್ತು ಮಂದಿರ ನಿರ್ಮಾಣದ ನಂತರವು ದೇಶ ವಿದೇಶಗಳ ಕೋಟ್ಯಾಂತರ ಭಕ್ತರು ಕಾಣಿಕೆ ನೀಡುತ್ತಲೆ ಬಂದಿದ್ದರು. ಆದರೆ ಈ ಮುಗ್ದತೆಯನ್ನೆ ಬಂಡವಾಳ ಮಾಡಿಕೊಂಡ ಪ್ರಾಮಾಣಿಕರಂತೆ ಮುಖವಾಡ ಹಾಕಿಕೊಂಡ ಖದೀಮರು ಪ್ರತಿ ನಿತ್ಯ ರಾಮನ ಹಣವನ್ನು ಲಪಟಾಯಿಸಿ ಆಸ್ತಿ ಮಾಡುತ್ತಾ ಸಾಗಿದ್ದಾರೆ.
ಇಷ್ಟೆಲ್ಲಾ ಲಜ್ಜೆಗೆಟ್ಟ ಕೃತ್ಯ ಎಸಗುತ್ತಾ ಬಂದರು ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀ ರಾಮ ಸುಮ್ಮನಿರುವುದು ಆಶ್ಚರ್ಯ ತಂದಿದೆ. ಇಂತಹ ನೀಚ ಕೃತ್ಯ ಎಸಗಿದವರಿಗೆ ಭಗವಂತ ಕಠಿಣ ಶಿಕ್ಷೆ ನೀಡಬೇಕಿದೆ ಇಲ್ಲವಾದಲ್ಲಿ ಕಾನೂನಿನ ಬಲವನ್ನೆ ಪಡೆದು ನುಣುಚಿಕೊಳ್ಳುವ ಸಾದ್ಯತೆ ಇದೆ.


ರಾಮ ಮಂದಿರ ನಿರ್ಮಾಣ ಸಂದರ್ಭದಲ್ಲಿ ದೇಶದಾದ್ಯಂತ ಮೂಲೆ ಮೂಲೆಗಳಿಂದ ಬಡವಬಲ್ಲಿದರೆಂಬ ಭೇದವಿಲ್ಲದೆ ದೇಣಿಗೆ ಸಂಗ್ರಹಿಸಿ ಕಳುಹಿಸಲಾಗಿತ್ತು. ಅದೆಲ್ಲಕ್ಕು ಅಪಮಾನವಾದಂತಾಗಿದೆ.


ಧರ್ಮ ಮತ್ತು ಭಕ್ತಿ ಯನ್ನೆ ಬಂಡವಾಳವಾಗಿಸಿಕೊಂಡ ಧರ್ಮಘಾತಕ ಶಕ್ತಿಗಳು ಹಣ ಲಪಟಾಯಿಸಲು ಸುಲಭ ಮಾರ್ಗ ಹುಡುಕಿಕೊಂಡಂತಿದೆ. ಭವಿಷ್ಯದಲ್ಲಿ ಮಥುರ ಶ್ರೀ ಕೃಷ್ಣ ಮಂದಿರ,ಜ್ಞಾನ ವ್ಯಾಪಿ ಮಂದಿರ ಮುಂತಾದ ಹಿಂದುಗಳ ಶ್ರದ್ದಾ ಕೇಂದ್ರಗಳ ಮರು ನಿರ್ಮಾಣ ಮತ್ತು ಅಭಿವೃದ್ಧಿ ಕಾರ್ಯಕ್ಕೆ ಯಥಾ ಪ್ರಕಾರ ದೇಶವ್ಯಾಪಿ ದೇಣಿಗೆ ಸಂಗ್ರಹ ಕಾರ್ಯ ನಡೆಯಲೆಬೇಕಾಗುತ್ತದೆ ಆಗ ದೇಶವಾಸಿ ಹಿಂದುಗಳು ಇಂತಹ ನೀಚ ಕೃತ್ಯ ನೋಡಿದ ಮೇಲೆ ಹಣ ನೀಡಲು ನಂಬುವುದಿಲ್ಲ. ದೇಣಿಗೆ ಸಂಗ್ರಹದ ಹೊಣೆ ಹೊತ್ತ ವಿಶ್ವ ಹಿಂದು ಪರಿಷತ್ತು ಹಾಗು ವಿವಿಧ ಹಿಂದು ಪರ ಸಂಘಟನೆಗಳನ್ನು ಅನುಮಾನದಿಂದ ನೋಡುವಂತಾಗಿರುವುದು ಭವಿಷ್ಯದ ದೃಷ್ಟಿಯಿಂದ ಆತಂಕದ ವಿಚಾರವಾಗಿದೆ.


ಯಲ್ಲಾಪುರ ತಾಲೂಕಿನಲ್ಲಿ ಸಹ ಬಹಳ ದೊಡ್ಡ ಮಟ್ಟದಲ್ಲಿ ಮಂದಿರ ನಿರ್ಮಾಣ ನಿಮಿತ್ತ ದೇಣಿಗೆ ಸಂಗ್ರಹಿಸಿ ಕಳುಹಿಸಲಾಗಿತ್ತು ಅಲ್ಲದೆ ನೂರಾರು ಸಂಖ್ಯೆಯಲ್ಲಿ ರಾಮ ಜನ್ಮ ಭೂಮಿ ಅಯೋಧ್ಯೆ ಪ್ರಯಾಣ ಬೆಳೆಸಿ ದರ್ಶನ ಪಡೆದು ಮತ್ತು ಹುಂಡಿಗೆ ವಿವಿಧ ರೂಪದಲ್ಲಿ ಕಾಣಿಕೆ ಅರ್ಪಿಸಲಾಗಿತ್ತು.

ಆದರೆ ಇದೀಗ ಅಲ್ಲಿ ನಡೆದ ನಾಚಿಕೆಗೇಡಿನ ಸಂಗತಿ ಎಂತಹ ಶ್ರದ್ದಾವಂತ ಭಕ್ತರಿಗು ಹೇಸಿಗೆ ತರಿಸಿದೆ ಕಾರಣ ಅಲ್ಲಿ ಹಣ ಕದ್ದವರು ಮುಸ್ಲಿಂ ಅಲ್ಲ,ಕ್ರಿಶ್ಚಿಯನ್ ಪಂಥದವರಲ್ಲ ಬದಲಾಗಿ ಸನಾತನ ಹಿಂದು ಧರ್ಮದವರು ಈಗ ನಾವು ಯಾರ ಕಡೆಗೆ ಬೆರಳು ತೋರಿಸಿ ದೇಶಕ್ಕೆ ಇವರಿಂದ ಅಪಾಯವಿದೆ ಎನ್ನಬೇಕು.?
ಬಹುತೇಕ ದೇಶ ವಾಸಿ ಹಿಂದುಗಳಿಗೆ ಅನುಮಾನ ಕಾಡಲು ಶುರುವಾಗಿ ದೇಶದ ಕೋಟ್ಯಾಂತರ ದೇವಸ್ಥಾನದ ವಹಿವಾಟಿನ ಮೇಲೆ ಅನುಮಾನ ಪ್ರಾರಂಭವಾಗಿದೆ. ಯಾವುದೆ ದೇವಸ್ಥಾನದ ಮುಖ್ಯಸ್ಥ ಕಡು ಬಡತನದಲ್ಲಿದ್ದವರನ್ನು ಕಾಣಲು ಸಾದ್ಯವೆ ಇಲ್ಲ ಬಹುತೇಕರದ್ದು ಐಶಾರಾಮಿ ಜೀವನ ಸಾಕಷ್ಟು ಆಸ್ತಿ ಮೈ ತುಂಬಾ ಕೈ ತುಂಬಾ ಚಿನ್ನ ಬೆಲೆ ಬಾಳುವ ಕಾರುಗಳು ಬಂಗಲೆಯಂತಹ ಮನೆಗಳು ಹೀಗೆ ಹಲವು ವಿಧದಲ್ಲಿ ಅರ್ಧರಾತ್ರಿಯಲ್ಲಿ ಬಂದ ಶ್ರೀಮಂತಿಕೆ ಎದ್ದು ಕಾಣುತ್ತದೆ ಅದೇ ದೇವಸ್ಥಾನದ ಹುಂಡಿಗೆ ಬೆವರು ಸುರಿಸಿ ದುಡಿದ ಬೆವರಿನ ಹಣ ಹಾಕುವ ಭಕ್ತ ಅಂದಿಗು ಇಂದಿಗು ಬಡವನಾಗಿಯೆ ಉಳಿದಿದ್ದಾನೆ.

ಈ ಎಲ್ಲಾ ಕಾರಣಗಳು ಕಣ್ಣ ಮುಂದಿನ ಸತ್ಯಗಳು ಅಯೋಧ್ಯೆ ರಾಮ ಮಂದಿರದ ಹಣ ಕದ್ದ ಪ್ರಕರಣದಿಂದಾಗಿ ಮತ್ತಷ್ಟು ಸತ್ಯಕ್ಕೆ ಹತ್ತಿರವಾಗಿ ಮುಂದೆ ದೇಣಿಗೆ ಕೇಳಲು ಭಕ್ತರ ಬಾಗಿಲಿಗೆ ಹೋದರೆ ಕಳ್ಳರಂತೆ ಕಾಣುವ ಸಾದ್ಯತೆ ಇದೆ.
ಮೇಲಿನ ಎಲ್ಲಾ ಕಾರಣಗಳಿಂದ ಸಂಬಂಧಿಸಿದ ಸಂಘ ಸಂಸ್ಥೆಗಳು ಹಿಂದುಪರ ಸಂಘಟನೆಗಳು ವಿಶೇಷವಾಗಿ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಸಂದರ್ಭದಲ್ಲಿ ದೇಣಿಗೆ ಸಂಗ್ರಹಿಸಿದ ಸಂಘಟನೆಗಳು ತಮ್ಮ ತಮ್ಮ ವ್ಯಾಪ್ತಿಯ ಹಿಂದುಗಳಿಗೆ ಸ್ಪಷ್ಟನೆ ನೀಡಬೇಕಿದೆ ಮತ್ತು ಅದು ನಿಮ್ಮ ಜವಾಬ್ದಾರಿ ಕೂಡ ಹೌದು.
ಎಲ್ಲೊ ಇರುವ ರಾಮ ಮಂದಿರದ ವಿಷಯ ಎಂದು ನಿರ್ಲಕ್ಷಿಸಿದರೆ ಧರ್ಮದ ಮೇಲಿನ ನಂಬಿಕೆಗೆ ಧಕ್ಕೆಯಾಗುವ ಸಾದ್ಯತೆ ಇದೆ. ಮತ್ತು ಸ್ಥಳೀಯ ಎಲ್ಲಾ ದೇವಸ್ಥಾನದ ಆಡಳಿತ ಮಂಡಳಿಯ ಮೇಲೆ ಗಂಭೀರ ಅನುಮಾನ ಹೆಚ್ಚಾಗಲಿದೆ ಮತ್ತು ಆ ದೇವಸ್ಥಾನದ ಲೆಕ್ಕಪತ್ರ ಖರ್ಚು ವೆಚ್ಚವನ್ನು ಹುಂಡಿಗೆ ಕಾಣಿಕೆ ಹಾಕಿದ ಪ್ರತಿಯೊಬ್ಬ ಭಕ್ತರಿಗು ತಿಳಿಸಬೇಕಿದೆ ಇಲ್ಲವಾದರೆ ಎಲ್ಲರನ್ನು ಕಳ್ಳರ ಸಾಲಿನಲ್ಲೆ ನೋಡುತ್ತ ಕೃತಕ ನಗೆ ಬೀರಿ ನಾಟಕೀಯ ಗೌರವ ನೀಡುವ ಪರಿಸ್ಥಿತಿ ಎದುರಾಗಲಿದೆ. ಜೈ ಶ್ರೀರಾಮ್

ಗಜಾನನ ನಾಯ್ಕ ತಳ್ಳೀಗೆರೆ,ವಿಶ್ವ ಹಿಂದುಪರಿಷತ್ ತಾಲ್ಲೂಕು ಅಧ್ಯಕ್ಷ

ರಾಮ ಮಂದಿರದ ಹಣ ಕದ್ದ ಖದೀಮರ ಕೃತ್ಯವನ್ನು ಅತ್ಯಂತ ಉಗ್ರವಾಗಿ ಖಂಡಿಸುತ್ತೇನೆ. ಅಲ್ಲಿನ ಯೋಗಿ ಆಧಿತ್ಯನಾಥ್ ಸರ್ಕಾರ ಎಸ್‌ಐ‌ಟಿ ರಚನೆ ಮಾಡಿದ್ದು ತನಿಖೆ ಪ್ರಗತಿಯಲ್ಲಿದೆ. ತಪ್ಪು ಯಾರೆ ಮಾಡಿದರು ತಪ್ಪೆ ಈ ನೆಲದ ಕಾನೂನಿನಂತೆ ಶಿಕ್ಷೆ ಅನುಭವಿಸಲೇಬೇಕು. ಪ್ರಭು ಶ್ರೀ ರಾಮನ ಶಾಪವು ತಟ್ಟಲಿದೆ. ಸಂಘಟನೆಯ ಹಿರಿಯರು ಈ ವಿಚಾರದಲ್ಲಿ ಹಿಂದು ಕುಲಕೋಟಿ ಬಂಧುಗಳಿಗೆ ನಂಬಿಕೆಯ ಸ್ಪಷ್ಟನೆ ನೀಡಬೇಕಿದೆ. ಭವಿಷ್ಯದಲ್ಲಿ ಯಾವುದೆ ತರಹದ ಧರ್ಮ ಸಂಘಟನೆಯ ಅಥವ ಧಾರ್ಮಿಕ ಕಾರ್ಯಗಳಿಗಾಗಿ ಹಿಂದುಗಳ ಮನೆ ಬಾಗಿಲಿಗೆ ಹೋದರೆ ಅನುಮಾನದಲ್ಲಿ ನೋಡುವಂತಾಗಬಾರದು ಅದಕ್ಕಾಗಿ ಅರ್ಥೈಸುವ ರೀತಿಯಲ್ಲಿ ದೇಣಿಗೆ ಹಣದ ವಿಚಾರದಲ್ಲಿ ಸ್ಪಷ್ಟನೆ ಕೋಡುವುದು ಸೂಕ್ತವಾಗಿದೆ. ಈ ಕೃತ್ಯವನ್ನು ಉಗ್ರವಾಗಿ ಖಂಡಿಸುತ್ತೇನೆ. ಗಜಾನನ ನಾಯ್ಕ ತಳ್ಳೀಗೆರೆ,ವಿಶ್ವ ಹಿಂದುಪರಿಷತ್ ತಾಲ್ಲೂಕು ಅಧ್ಯಕ್ಷ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಅಧಿಕಾರಿಗಳೆ ತಡೆದಿದ್ದ ಷರತ್ತು ಅವಧಿ ಮುಗಿಯದ ಭೂಮಿ ಮಾರಾಟ – ಅಧಿಕಾರಿಗಳಿಂದಲೆ ಖಾತೆ ಬದಲಾವಣೆಗೆ ಹುನ್ನಾರ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ತಟಗಾರ ಕ್ರಾಸ್ ಸಮೀಪದಲ್ಲಿ ಸರ್ಕಾರದ ಷರತ್ತು ಅವಧಿ ಮುಗಿಯದ ಭೂಮಿ ಮಾರಟಕ್ಕೆ ಆಕ್ಷೇಪಣೆ ಸಲ್ಲಿಸಲಾಗಿದ್ದ …

Leave a Reply

Your email address will not be published. Required fields are marked *