
ಪ್ರತಿಧ್ವನಿ ಯಲ್ಲಾಪುರ- ತಹಶೀಲ್ದಾರ್ ಕಛೇರಿ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಹೋಲಿ ರೋಜರಿ ಪ್ರೌಢಶಾಲೆ,ಯಲ್ಲಾಪುರ ಇವರ ಸಂಯುಕ್ತಾಶ್ರಯದಲ್ಲಿ ELC ಕ್ಲಬ್ ನ ಅಡಿಯಲ್ಲಿ ಮತದಾರರ ಪರಿಷ್ಕರಣೆಯ ಜಾಗೃತಿ ಜಾಥಾವನ್ನು ನಡೆಸಲಾಯಿತು.

ಕಾರ್ಯಕ್ರಮಕ್ಕೆ ಆಗಮಿಸಿದ ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷ್ ಜಿಗಳೂರು , ಕ್ಷೇತ್ರ ಸಂಪನ್ಮೂಲ ಕೇಂದ್ರದ ಅಧಿಕಾರಿ ಚಂದ್ರಹಾಸ ನಾಯ್ಕ ಅವರನ್ನು ಹೋಲಿ ರೋಜರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಂ. ರಾಜಶೇಖರ್ ಅವರು ಆತ್ಮೀಯವಾಗಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ತದನಂತರ ಶ್ರೀಯುತ ಸಂತೋಷ್ ಜಿಗಳೂರು ಹಾಗೂ ಚಂದ್ರಹಾಸ ನಾಯ್ಕ ರವರು ವಿದ್ಯಾರ್ಥಿಗಳಿಗೆ ಮತದಾರರಪಟ್ಟಿ ಪರಿಷ್ಕರಣೆಯ ಕುರಿತಾಗಿ ಮಹತ್ವದ ವಿಚಾರಗಳನ್ನು ವಿವರಿಸಿದರು. ತದನಂತರ ಯಲ್ಲಾಪುರದ ಪ್ರಮುಖ ಬೀದಿಗಳಲ್ಲಿ ಜಾಥಾ ಮುನ್ನಡೆದು ಜನರಲ್ಲಿ ಜಾಗೃತಿಯನ್ನು ಮೂಡಿಸಲಾಯಿತು.
ಜಾಗೃತಿ ಕಾರ್ಯಕ್ರಮದಲ್ಲಿ ಹೋಲಿ ರೋಜರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಎಂ ರಾಜಶೇಖರ್, ಹಿರಿಯ ಶಿಕ್ಷಕರಾದ ವೆಂಕಟ್ರಮಣ ಭಟ್, ಕನ್ನಡ ಶಿಕ್ಷಕರಾದ ಮಲ್ಲಿಕಾರ್ಜುನ್ ಹೆಗ್ಗೇರಿ , ನಿವೃತ್ತ ಶಿಕ್ಷಕ ಚಂದ್ರಶೇಖರ್ ಹಾಗೂ ಹೋಲಿ ರೋಜರಿ ಪ್ರೌಢಶಾಲೆಯ 8 ,9 ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ELC ಕ್ಲಬ್ ನ ಸಂಚಾಲಕರಾದ ಶ್ರೀ ನೆಲ್ಸನ್ ಗೊನ್ಸಾಲ್ವಿಸ್ ರವರು ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು.










Prathidvani Yellapura