

ಕೇಬಲ್ ನಾಗೇಶ್,ಯಲ್ಲಾಪುರ..🖋
ಪ್ರತಿಧ್ವನಿ ಯಲ್ಲಾಪುರ : ಇತ್ತೀಚಿನ ವರ್ಷಗಳಲ್ಲಿ ಪೋಷಕರು ತಮ್ಮ ಮಕ್ಕಳ ಮೇಲೆ ತೋರಿಸುವ ಅಕ್ಕರೆ,ಪ್ರೀತಿ,ಮಮಕಾರದ ಪ್ರಮಾಣ ಹೆಚ್ಚಾಗುತ್ತಾ ಸಾಗುತ್ತಿದ್ದು ಭವಿಷ್ಯದಲ್ಲಿ ಮಕ್ಕಳು ಸಂಸ್ಕಾರಂತ ಬದುಕು ನಡೆಸಲು ಅಡ್ಡಿಯಾಗುವುದಲ್ಲದೆ ಸುಂದರ,ಸುಸಂಪನ್ನ ಮತ್ತು ಸಂಸ್ಕಾರವಂತರನ್ನಾಗಿಸುವ ಗುರು ಹಿರಿಯರ ಪ್ರಯತ್ನಕ್ಕು ಅಡ್ಡಿಯಾಗುತ್ತಿದೆ.

ಮಕ್ಕಳನ್ನು ವಿದ್ಯಾರ್ಥಿ ದಿಸೆಯಲ್ಲಿ ಅದರಲ್ಲಿ ಪ್ರಾಥಮಿಕ ಹಂತದಿಂದಲೆ ನಡೆ,ನುಡಿ,ಸಭ್ಯತೆ,ಸಂಸ್ಕಾರ,ಪದ್ದತಿ,ಪರಂಪರೆ ಯನ್ನು ಹೇಳಿಕೊಡುತ್ತ ಉತ್ತಮ ಹಂತಕ್ಕೆ ಕೊಂಡೊಯ್ಯುವ ಸಮಯವಾಗಿದೆ. ಈ ಹಂತದಲ್ಲಿ ಮನೆಯಲ್ಲಿ ಹಿರಿಯರು ಶಾಲೆಗಳಲ್ಲಿ ಶಿಕ್ಷಕರು ಸದಾ ತಿದ್ದಿ ಬುದ್ದಿ ಹೇಳುತ್ತ ಸನ್ಮಾರ್ಗ ತೋರಿಸುತ್ತಲೆ ಇರುತ್ತಾರೆ. ಈ ಮದ್ಯೆ ಮಕ್ಕಳಿಂದಾಗುವ ತಪ್ಪುಗಳಿಗೆ ಶಿಕ್ಷಿಸುವ ಅಧಿಕಾರ ಬಹುತೇಕ 90 ರ ದಶಕದಲ್ಲೆ ಮುಗಿದಿದೆ ಇದೀಗ ಯಾವುದೇ ಶಿಕ್ಷಕರು ಮಕ್ಕಳಿಗೆ ದಂಡ ಹಿಡಿದು ದಂಡಿಸುವ ಮಾತು ಬಿಡಿ ಕನಿಷ್ಟಪಕ್ಷ ಗಟ್ಟಿಯಾದ ಧ್ವನಿಯಲ್ಲಿ ಗದರಿದರು ಸಾಕು ಆ ಶಿಕ್ಷಕನಿಗೆ ಗ್ರಹಚಾರ ಕಾದಿದೆ ಅಂದು ಕೊಳ್ಳಬಹುದು. ಕಾರಣ ಮಾರನೆ ದಿನವೆ ಪೊಷಕರು ದಂಡಿಸಿದ ಶಿಕ್ಷಕನ ಮುಂದಿರುತ್ತಾರೆ.ನಮ್ಮ ಮಕ್ಕಳಿಗೆ ಯಾಕೆ ದಂಡಿಸಿದಿರಿ,ಯಾಕೆ ಎಲ್ಲರ ಮುಂದೆ ಗದರಿದಿರಿ ಎಂದು ಖಾರವಾಗಿ ಪ್ರಶ್ನಿಸಿ ಗ್ರಹಚಾರ ಬಿಡಿಸುತ್ತಾರೆ.

ಇಷ್ಟೆಲ್ಲಾ ಸಮಸ್ಯೆ ಯಾಕೆ ಒಂದಷ್ಟು ಬುದ್ದಿ ಮಾತು ಸರಳವಾಗಿ ಹೇಳಿ ಕೈ ಬಿಡೋದೆ ಒಳ್ಳೆಯದು ಯಾಕೀ ರಗಳೆ ಎಂಬ ಸ್ಥಿತಿಗೆ ಶಿಕ್ಷಕರನ್ನು ತಂದು ನಿಲ್ಲಿಸಿದ್ದಾರೆ.
ಶಿಕ್ಷಕರು ನಿಮ್ಮ ಮಕ್ಕಳಿಗೆ ಶಿಕ್ಷಿಸಿದ್ದಾರೆ ಎಂದರೆ ನಿಮ್ಮ ಮಕ್ಕಳ ಮೇಲಿನ ಕೊಪ,ದ್ವೇಷ, ಅಸೂಹೆ ಯಿಂದಲ್ಲ ಬದಲಾಗಿ ನಿಮ್ಮ ಮಕ್ಕಳ ಮೇಲೆ ನಿಮಗಿಂತ ಹೆಚ್ಚು ಕಾಳಜಿ ಇಟ್ಟಿದ್ದಾರೆ ಎಂದರ್ಥ,ಮಕ್ಕಳಿಗೆ ತಿಳಿ ಹೇಳುವ ರೀತಿಯಲ್ಲಿ ದಂಡಿಸುವುದು ಒಂದು ಮಾರ್ಗವೆ ಇಂತಹ ಮಾರ್ಗ ಅನುಸರಿಸಿದಾಗ ಮಾತ್ರ ನಿಮ್ಮ ಮಕ್ಕಳು ಸನ್ಮಾರ್ಗದಲ್ಲಿ ನಡೆಸಲು ಸಾದ್ಯ.

ಕೆಲವು ಸಂದರ್ಭಗಳಲ್ಲಿ ದಂಡನೆ ತೀವ್ರ ಸ್ವರೂಪ ಪಡೆದು ಮಕ್ಕಳಿಗೆ ಸಮಸ್ಯೆ ಆದ ಪ್ರಸಂಗಗಳು ಸಹ ನಮ್ಮ ಕಣ್ಣ ಮುಂದಿದೆ. ಗಮನಿಸಿ ಇಂತಹ ಪ್ರಕರಣಗಳು ಕೇವಲ ಬೆರಳೆಣಿಕೆ ಮಾತ್ರ ಆದರೆ ಶಿಕ್ಷಕರ ದಂಡನೆಯ ಭಯ ಮಕ್ಕಳಲ್ಲಿ ಇದ್ದಾಗ ಮಾತ್ರ ಆ ಶಿಕ್ಷಕರು ನೀಡುವ ಶಿಕ್ಷಣದ ಕಡೆಗೆ ವಿದ್ಯಾರ್ಥಿಗಳ ಗಮನ ಸ್ಥಿರವಾಗಿ ನಿಲ್ಲುತ್ತದೆ.
ಸರ್ಕಾರ, ಕಾನೂನು ಮಕ್ಕಳ ವಿಚಾರದಲ್ಲಿ ಆತಂಕ ಪಟ್ಟು ವಿದ್ಯಾರ್ಥಿಗಳಿಗೆ ಶಿಕ್ಷಕರು ಹೊಡೆಯುವಂತಿಲ್ಲ ಎಂದರು ನಮ್ಮ ಮಕ್ಕಳ ಉತ್ತಮ ಸಂಸ್ಕಾರವಂತ ಜೀವನಕ್ಕೆ ಶಿಕ್ಷಕರ ದಂಡನೆಯು ಸಹ ಇರಬೇಕು ಎಂಬುದು ಬಹುತೇಕರ ಅಭಿಪ್ರಾಯವಾಗಿದೆ.

ಈ ಲೇಖನ ಓದುತ್ತಿರುವ ಅದೆಷ್ಟೋ ಮಂದಿ ಇದೇ ಶಿಕ್ಷಕರ ಹೊಡೆತ ತಿಂದು ಬೆಳೆದು ಇಂದು ಜೀವನ ಸಾಗಿಸುತ್ತಿರುವವರಿದ್ದೇವೆ. ನಿಮ್ಮ ಎದೆ ಮೇಲೆ ಕೈ ಇಟ್ಟು ಹೇಳಿ ನಿಮಗೆ ಅಂದು ನಿಮ್ಮ ಶಿಕ್ಷಕರು ನೀಡಿದ ದಂಡನೆಯ ಪೆಟ್ಟು ಒಳ್ಳೆಯ ಹಾದಿಯಲ್ಲಿ ನಡೆಸಿದೆಯ ಅಥವ ಕೆಟ್ಟದಾಗಿದೆಯ ಎಂದು. ಅಲ್ಲಿ ಬರುವ ನಿಜವಾದ ಉತ್ತರ ನಮಗೆ ನಮ್ಮ ಶಿಕ್ಷಕರು ನೀಡಿದ ಬಲವಾದ ದಂಡನೆ ನಮ್ಮ ಭವಿಷ್ಯದ ಬದುಕಿಗೆ ಪ್ರಸ್ತುತ ಈಗಿನ ಜೀವನಕ್ಕು ಉತ್ತಮ ಪಾಠವೆ ಆಗಿದೆ ಅಲ್ಲವೆ.

ಇಷ್ಟಲ್ಲಾ ತಿಳಿದಿದ್ದರು ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿ ಮಕ್ಕಳು ಮಾಡಿದ ತಪ್ಪಿಗೆ ಒಂದೇಟು ಹೊಡೆದರೆ ಅಥವಾ ಗಟ್ಟಿಯಾಗಿ ಗದರಿಸಿದರೆ ಮಾರನೆ ದಿನ ಪೊಷಕರು ಆಶಿಕ್ಷಕನ ಮುಂದೆ ನಿಂತು ನೀನು ಯಾರು ಹೊಡೆಯಲು ಗದರಿಸಲು ನಮ್ಮ ಮಗನಿಗೆ ? ಸರ್ಕಾರ ಹೇಳಿದೆ ಮಕ್ಕಳಿಗೆ ಹೊಡೆಯಬಾರದು ಎಂದು ನೀನೇಕೆ ಹೊಡೆದೆ ಎಂದೆಲ್ಲಾ ಹೆದರಿಸಿ ಬೆದರಿಸಿ ಅವರ ವೃತ್ತಿಗೆ ಕುಂದುಂಟಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಾರೆ ನೆನಪಿರಲಿ ಅವರು ನಿಮ್ಮ ಮಕ್ಕಳ ಭವಿಷ್ಯ ರೂಪಿಸುವಲ್ಲಿ ವಿದ್ಯಾವಂತರನ್ನಾಗಿಸುವಲ್ಲಿ ನಿಮಗಿಂತ ಹೆಚ್ಚಾಗಿ ಶ್ರಮಿಸುತ್ತಿದ್ದಾರೆ. ಅಂತಹ ಪ್ರಯತ್ನದಲ್ಲಿ ಕೆಲವೊಮ್ಮೆ ದಂಡಿಸುವುದು ಅನಿವಾರ್ಯ ಅದನ್ನೆ ತಪ್ಪೆಂದರೆ ಹೇಗೆ.?

ಸಾವಿರಕ್ಕೆ ಒಬ್ಬ ಶಿಕ್ಷಕ ಮಕ್ಕಳಿಗೆ ದಂಡನೆ ನೀಡುವ ವಿಚಾರದಲ್ಲಿ ವರಟಾಗಿ ವರ್ತಿಸಿದಾಕ್ಷಣ ಎಲ್ಲಾ ಶಿಕ್ಷಕರು ಹಾಗೆ ನಡೆದುಕೊಳ್ಳುತ್ತಾರೆ ಎಂಬುದು ಶುದ್ದ ಸುಳ್ಳು. ಒಂದಾನುವೇಳೆ ಸರ್ಕಾರ ನೀಡುವ ಸಂಬಳ ಪಡೆದು ಸರಳವಾಗಿ ಪಾಠ ಮಾಡಿಕೊಂಡು ತಮ್ಮ ಪಾಡಿಗೆ ತಾವು ಇದ್ದು ಸಂಬಳ ಪಡೆಯುತ್ತ ಹೋದರೆ ನಿಮ್ಮ ಮಕ್ಕಳ ಪಾಡೇನು. ಈಗಿನ ದಿನಗಳಲ್ಲಿ ಮಕ್ಕಳು ದಾರಿ ತಪ್ಪುವ ವಾತಾವರಣ ಹೆಚ್ಚಾಗುತ್ತಲೆ. ಮನೆಯಲ್ಲಿ ನಿಮಗೆ ಹೇಳಿಕೊಡಲು ಸಮಯವಿಲ್ಲ ಆಗ ನಿಮ್ಮ ಮಕ್ಕಳ ಭವಿಷ್ತ ಡೋಲಾಯಮಾನವಾಗಲಿದೆ.
ಒಟ್ಟಿನಲ್ಲಿ ನಿಮ್ಮ ಮಕ್ಕಳ ಉಜ್ವಲ ಭವಿಷ್ಯ ವನ್ನು ಸುಂದರ ಮತ್ತು ಸಂಸ್ಕಾರಯುತ ಬುದ್ದಿಯನ್ನು ಬೆಳೆಸುವ ಶಿಕ್ಷಕರಿಗೆ ಪೊಷಕರ ಬೆಂಬಲವಿದ್ದಾಗ ಮಾತ್ರ ಸಾದ್ಯವಾಗಲಿದೆ.







Prathidvani Yellapura