Breaking News

ಸದಾ ಅಹಿಂದ ಜಪ ಮಾಡುವ ಕಾಂಗ್ರೆಸ್ ಕನಿಷ್ಟ ಮೂಲಭೂತ ಸೌಕರ್ಯಗಳನ್ನು ಒದಗಿಸದಿರುವುದು ದುರಂತ – ಪ್ರಸಾದ್ ಹೆಗಡೆ

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಕಾಳಮ್ಮ ನಗರ ಆಶ್ರಯ ಕಾಲೋನಿಯಲ್ಲಿ ಈಗಾಗಲೇ ಸಾಕಷ್ಟು ಜನ ಮೂಲಭೂತ ಸೌಕರ್ಯಗಳ ಕೊರತೆ ಯಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂಬುದನ್ನು  ಸಂಬಂದಿಸಿದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಬಿಜೆಪಿ ತಿಳಿಸುತ್ತಾ ಬಂದು ಯಾವುದೆ ಪ್ರಯೋಜನ ಕಂಡುಬರುತ್ತಿಲ್ಲ.ಮಾತೆತ್ತಿದ್ದರೇ ಅಹಿಂದ ಜಪ‌ ಮಾಡುವ ಕಾಂಗ್ರೆಸ್ ಪಕ್ಷ ಹಿಂದುಳಿದ,ದಲಿತರ ಉಳಿಯುವ ಪ್ರದೇಶಗಳಲ್ಲಿ ಕನಿಷ್ಠ ಪಕ್ಷ ಮೂಲಭೂತ ಸೌಕರ್ಯ ನೀಡಲು ಮುಂದಾಗಬೇಕಿತ್ತು,ಆ ಸವಲತ್ತುಗಳನ್ನು ಮಾಯಾ ಮಾಡಿದ ಕೀರ್ತಿ ಈ ಆಡಳಿತ ವ್ಯವಸ್ಥೆ ಗೆ ಸಲ್ಲಲೇಬೇಕು ಎಂದು ಬಿಜೆಪಿ ಯಲ್ಲಾಪುರ ಮಂಡಲಾಧ್ಯಕ್ಷ ಪ್ರಸಾದ್ ಹೆಗಡೆ ಮಾದ್ಯಮ ಪ್ರಕಟಣೆ ಹೊರಡಿಸಿ ಆಕ್ರೋಶ ಹೊರ ಹಾಕಿದ್ದಾರೆ.

ರವಿವಾರ ಬಿಜೆಪಿ ನಿಯೋಗ ಆಶ್ರಯ ಕಾಲೋನಿ ಗೆ ಬೇಟಿ ನೀಡಿದ್ದೇವು.ಮೂಲಭೂತ ಸಮಸ್ಯೆ ಗಳ ಜೊತೆಗೆ ಬಡವರ ಮನೆ ಉರುಳವ ಸಂಧರ್ಭ ಆ ಭಾಗದ ಹತ್ತಾರು ಮನೆಗಳಲ್ಲಿ ಕಾಣಸಿದೆ.ಈ ವಿಷಯದ ಬಗ್ಗೆ ಸಂಭಂದಿಸಿದ ಇಲಾಖೆಯ ಗಮನಕ್ಕೆ ತರುತ್ತಿದ್ದೇವೆ.

ಯಲ್ಲಾಪುರ ದಲ್ಲಿ ರಾಜಕಾಲುವೆ ನಿರ್ಮಾಣ ಸಂಪೂರ್ಣವಾಗಿ ಮುಗಿಸದೇ ಅರೆ ಬರೆ ಕಾಮಗಾರಿ ಮಾಡಿದ್ದಾರೆ .ಆಶ್ರಯ ಕಾಲೋನಿ ಬಳಿ ರಾಜಕಾಲುವೆ ನಿರ್ಮಾಣ ಸಂಪೂರ್ಣ ಆಗದೇ ರಾಜಕಾಲುವೆ‌ ಮೇಲಿನ ಭಾಗದ ಮನೆಗಳು ಬೀಳುವ ಹಂತಕ್ಕೆ ಬಂದು ತಲುಪಿದೆ,

  1. ಆಶ್ರಯ ಕಾಲೋನಿ ಹಿಂಭಾಗದಲ್ಲಿ ಹುಲ್ಲು ಪೊದರೆ ಕಾಡಿನಂತೆ ಬೆಳೆದಿದ್ದು ಅಲ್ಲಿ ಯ ಹಂದಿ,ನಾಯಿಗಳ ಕಾಟದಿಂದ ಜನಜೀವನ ತತ್ತರವಾಗಿದೆ.ಸಾಕಷ್ಟು ಬಡವರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.ಮಕ್ಕಳು ಶಾಲೆಗೆ ಹೋಗುತ್ತಾರೆ ,ಬೀದಿ ನಾಯಿಗಳ‌ಕಾಟದಿಂದ ಪಾಲಕರು ಹೈರಾಣಾಗಿದ್ದಾರೆ.ತತಕ್ಷಣ ಸಂಭಂದಿಸಿದ ಅಧಿಕಾರಿಗಳು ಅದರ ಬಗ್ಗೆ ಜಾಗ್ರತೆ ವಹಿಸಬೇಕು.ಇಲ್ಲವಾದಲ್ಲಿ ಮುಂದಿನ ಅನಾಹುತ ಕ್ಕೆ ನೇರವಾಗಿ ನೀವೆ ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಈ ಸಂಧರ್ಭದಲ್ಲಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಗಣೇಶ ಪಾಟಣಕರ,ಹಿಂದೂಳಿದ ಮೋರ್ಚಾ ಪ್ರಧಾನಕಾರ್ಯದರ್ಶಿ ರವಿ ದೇವಡಿಗ,ಕಾಳಮ್ಮ ನಗರ ಬೂತ ಅಧ್ಯಕ್ಷರಾದ ತುಳಸಿದಾಸ ನಾಯ್ಕ ಉಪಸ್ಥಿತರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ದೇಶದ ಪ್ರಧಾನಿ,ಅರಣ್ಯ ಸಚಿವರು ಮತ್ತು ಸಚಿವಾಲಯದ ಕಾರ್ಯದರ್ಶಿಯವರಿಗೆ ಪಶ್ಚಿಮ ಘಟ್ಟಗಳ ವಿಚಾರದಲ್ಲಿ ಮದ್ಯ ಪ್ರವೇಶಿಸುವಂತೆ ಚಂದ್ರಕಾಂತ ಕೊಚರೇಕರ್ ಮನವಿ

ಪ್ರತಿಧ್ವನಿ ಯಲ್ಲಾಪುರ :  ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸುವ ಸಂಬಂಧ 27-07-2026ರಂದು …

Leave a Reply

Your email address will not be published. Required fields are marked *