
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ತಟಗಾರ ಕ್ರಾಸ್ ಸಮೀಪದಲ್ಲಿ ಸರ್ಕಾರದ ಷರತ್ತು ಅವಧಿ ಮುಗಿಯದ ಭೂಮಿ ಮಾರಟಕ್ಕೆ ಆಕ್ಷೇಪಣೆ ಸಲ್ಲಿಸಲಾಗಿದ್ದ ಭೂಮಿಯನ್ನು ಅಧಿಕಾರಿಗಳು ಚಾಣಾಕ್ಷತನದಿಂದ ಮಾರಾಟಕ್ಕೆ ಮತ್ತೆ ವೇದಿಕೆ ಸಿದ್ದಪಡಿಸಿರುವುದರ ಮೂಲಕ ಮತ್ತೆ ಹೋರಾಟದ ಅಖಾಡಕ್ಕೆ ಸಾಮಾಜಿಕ ಹೋರಾಟಗಾರ ಮಂಜುನಾಥ ವಿ ಹೆಗಡೆ ಮುಂದಾಗಿದ್ದಾರೆ.
ತಟಗಾರ ಕ್ರಾಸ್ ನ ಸರ್ವೆ ನಂ 31-16-3 ಜಾಗವು ಸರ್ಕಾರದ ಷರತ್ತಿನ ಅವಧಿ ಒಳಗೊಂಡಿದೆ.ಈ ಹಿಂದೆ ಒಮ್ಮೆ ಮಾರಾಟದ ತಂತ್ರ ರೂಪಿಸಲಾಗಿತ್ತು ಅಂದಿನ ಅಧಿಕಾರಿಳಿಗೆ ವಸ್ತು ಸ್ಥಿತಿ ತಿಳಿಸಿ ಬೇಕಾದ ದಾಖಲೆ ಪತ್ರ ಒದಗಿಸಿ ಮಾರಾಟವನ್ನು ತಡೆಹಿಡಿಯಲಾಗಿತ್ತು. ಅಲ್ಲದೆ ಇದೇ ಜಾಗಕ್ಕೆ ಹೊಂದಿಕೊಂಡಿರುವ ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಲಾಗಿತ್ತು ಈ ಹಿನ್ನೆಲೆಯಲ್ಲಿ ಬೆಂಗಳೂರಿನ ” ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ” ದೂರು ದಾಖಲಿಸಿ ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿರುವಂತೆಯೆ ಅಧಿಕಾರಿಗಳು ಒಳಗಿಂದೊಳಗೆ ಹೊಸ ವರಸೆ ತೆಗೆದಿದ್ದು ಮತ್ತೆ ಮಾರಾಟಕ್ಕೆ ವೇದಿಕೆ ಸಿದ್ದಪಡಿಸಿಕೊಂಡಿದ್ದು ಖಾತೆ ಬದಲಾವಣೆಯ ಹುನ್ನಾರ ನಡೆಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆಯ ಮೇಲಾಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ಸರ್ಕಾರಿ ಷರತ್ತು ಅವಧಿ ಇರುವಂತಯೆ ಮಾರಾಟ ಮಾಡುವ ಅವಕಾಶ ರಾಜ್ಯದ ಎಲ್ಲಾ ನಾಗರಿಕರಿಗು ಒದಗಿಸಬೇಕೆಂದು ಮಂಜುನಾಥ ವಿ ಹೆಗಡೆ ಆಗ್ರಹಿಸಿದ್ದಾರೆ.

ಯಲ್ಲಾಪುರ ಪಟ್ಟಣ ಪಂಚಾಯತ್ ನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಅಧಿಕಾರಿಗಳ ದುಂಡಾ ವರ್ತನೆಗೆ ಜನರು ಬೇಸತ್ತಿದ್ದಾರೆ. ಭೂಮಿ ಮಾರಾಟದ ಪ್ರಯತ್ನದ ಹಿಂದೆ ಯಾವ ಅಧಿಕಾರಿಗಳ ಕಾಣದ ಕೈ ಕೆಲಸ ಮಾಡುತ್ತಿದೆ ಪತ್ತೆ ಹಚ್ಚಿ ಸಮಸ್ಯೆ ಉಲ್ಬಣಿಸದಂತೆ ಬಗೆಹರಿದಬೇಕಿದೆ. ಸಾಮಾಜಿಕ ಹೋರಾಟಗಾರ ಮಂಜುನಾಥ ವಿ ಹೆಗಡೆ










Prathidvani Yellapura