
ಕೇಬಲ್ ನಾಗೇಶ್, ಯಲ್ಲಾಪುರ..🖋
ಪ್ರತಿಧ್ವನಿ ಯಲ್ಲಾಪುರ : ಪ್ರತಿ ವರ್ಷದಂತೆ ಈ ವರ್ಷವು ಯಲ್ಲಾಪುರ ತಾಲೂಕಿನ ಕೋಳಿಕೇರಿ ಪರಿಸರದಲ್ಲಿ ನೆಲೆಸಿರುವ ವೀರ ಸತ್ಪುರುಷರಾದ ಕಾಳುಘಾಡಿ-ಬಾಳುಘಾಡಿ ಜಾತ್ರಾ ಮಹೋತ್ಸವವು ಮಿರಾಶಿ ಕುಟುಂಬ ಹಾಗು ಸ್ಥಳೀಯ ಪ್ರಮುಖರು ಹಾಗು ಹಿತೈಷಿಗಳ ಸಹಕಾರದಿಂದ ಇಂದು ರವಿವಾರ ಶ್ರದ್ದಾ ಭಕ್ತಿಯಿಂದ ಜರುಗುತ್ತಿದ್ದು ಪವಾಡ ಪುರುಷರ ದರ್ಶನ ಪಡೆಯಲು ರಾಜ್ಯ ಹೊರ ರಾಜ್ಯದಿಂದಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತ ಆಗಮಿಸುತ್ತಿದ್ದು ಸಕಲ ಸಿದ್ಧತೆಗಳನ್ನು ಮಾಡಿ ಕೊಳ್ಳಲಾಗಿದೆ.
ಕ್ಷೇತ್ರ ಮಹಿಮೆ ಚಿತ್ರ ಸಹಿತ

ಸುಮಾರು 300 ವರ್ಷಗಳ ಹಿಂದಿನಿಂದ ಶ್ರದ್ಧಾ ಭಕ್ತಿಯಿಂದ ಪೂಜಿಸಲ್ಪಡುತ್ತಾ ಜಾತ್ರೋತ್ಸವವಾಗಿ ಆಚರಿಸಲ್ಪಡುವ ಯಲ್ಲಾಪುರ ತಾಲೂಕಿನ ಕೋಳಿಕೇರಿಯ ಕಾಳು ಘಾಡಿ-ಬಾಳು ಘಾಡಿ ಬೇಡಿ ಬಂದ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ.

ಮಿರಾಶಿ ಕುಟುಂಬ ಪೂರ್ವಜರ ಕಾಲದಲ್ಲಿ ಘೋರ ಯುದ್ದ ಒಂದರಲ್ಲಿ ಕಾಳುಘಾಡಿ ಮತ್ತು ಬಾಳು ಘಾಡಿ ಎಂಬ ವೀರ ಯೋಧರು ಮರಣವನಪ್ಪುತ್ತಾರೆ.

ಮಡಿದ ವೀರರ ಪಾರ್ಥಿವ ಶರೀರವನ್ನು ಇದೇ ಕೋಳಿಕೇರಿ ಅರಣ್ಯ ಪರಿಸರದಲ್ಲಿ ಸಂಸ್ಕಾರ ಮಾಡಲಾಗಿತ್ತು.

ಅಂದಿನಿಂದಲೂ ಇಂದಿನವರೆಗು ಈ ಪರಿಸರವು ವೀರ ಸತ್ಪುರುಷರಾದ ಕಾಳುಘಾಡಿ-ಬಾಳುಘಾಡಿ ಯಿಂದಾಗಿ ದಿವ್ಯ ಶಕ್ತಿಯನ್ನು ತುಬಿಕೊಂಡಿದೆ.

ಇಲ್ಲಿ ಬೇಡಿ ಬಂದ ಭಕ್ತರ ಇಷ್ಟಾರ್ಥ ಸಿದ್ದಿಸಿ ಹಲವು ಪವಾಡಗಳೆ ನಡೆದಿವೆ.

ಈ ಪರಿಸರದಲ್ಲಿ ಯಾವುದೆ ಕೆಟ್ಟ ಕೃತ್ಯಕ್ಕೆ ಅವಕಾಶ ನೀಡದೆ ಸದಾ ಕೋಳಿಕೇರಿ ಪರಿಸರವನ್ನು ಪುಣ್ಯ ಕ್ಷೇತ್ರದಂತೆ ಕಾಪಾಡುತ್ತ ಊರನ್ನು ಕಾಯುತ್ತಾ ಬಂದಿದ್ದಾರೆ ಕಾಳುಘಾಡಿ-ಬಾಳುಘಾಡಿ ಸತ್ಪುರುಷರು ಎಂಬ ಬಲವಾದ ನಂಬಿಕೆ ಇದೆ.

ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಸ್ಥಳೀಯ ಪ್ರಮುಖ ವಿಜಯ್ ಮಿರಾಶಿ ಕುಟುಂಬದ ಸರ್ವ ಸದಸ್ಯರು ಹಾಗು ಸ್ಥಳೀಯ ಪ್ರಮುಖರು ಮತ್ತು ಹಿತೈಷಿಗಳ ಸಹಕಾರದಿಂದ ಜಾತ್ರಾ ಮಹೋತ್ಸವ ವಿಜ್ರಂಭಣೆಯಿಂದ ಪ್ರತಿ ವರ್ಷ ನಡೆಯುತ್ತಾ ಬಂದಿದೆ.









Prathidvani Yellapura