
ಪ್ರತಿಧ್ವನಿ ಯಲ್ಲಾಪುರ : 30 ವರ್ಷಕ್ಕೂ ಹೆಚ್ಚಿನ ಅವಧಿಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿ ಬರಿಗೈಯಲ್ಲಿ ಮನೆಗೆ ಹೋಗುವ ಅನುದಾನಿತ ಶಾಲಾ ಶಿಕ್ಷಕರ ಪಾಡು ಯಾರಿಗೂ ಬರಬಾರದು. ಈ ರೀತಿಯ ಮಲತಾಯಿ ಧೋರಣೆಯಿಂದ ಅನೇಕ ಶಿಕ್ಷಕರು ಇಂದು ಭ್ರಮನೀರಸನಗೊಂಡಿದ್ದಾರೆ. ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಸೂಚಿಸಿದಂತೆ ಓಪಿಎಸ್ ಜಾರಿಗೊಳಿಸಿ. ಬಸವರಾಜ ಹೊರಟ್ಟಿ ಅವರ ಕಾಲ್ಪನಿಕ ವೇತನದ ಮೇಲಿನ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಗೆ ನೀಡುವ ಜ್ಯೋತಿ ಸಂಜೀವಿನಿ(ಸಿರಿ) ಹಾಗೂ ಇನ್ನಿತರ ಆದೇಶಗಳನ್ನು ಯಥಾವತ್ತಾಗಿ ತಾರತಮ್ಯವಿಲ್ಲದೆ ಜಾರಿಗೊಳಿಸಬೇಕಿದೆ. ಅನುದಾನಿತ ಮತ್ತು ಸರಕಾರಿ ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ತಾರತಮ್ಯವಿಲ್ಲದಂತೆ ಕಾರ್ಯಕ್ರಮವನ್ನ ಹಮ್ಮಿಕೊಳ್ಳಿ. ಮಲೆನಾಡಿನ ಪ್ರದೇಶಗಳ ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಅನುಪಾತವನ್ನು ಕಡಿಮೆಗೊಳಿಸಿ ಆದೇಶ ನೀಡಬೇಕಿದೆ ಎಂದು ಮಾಧ್ಯಮಿಕ ನೌಕರ ಸಂಘದ ಕೇಂದ್ರ ಸಮಿತಿಯ ಸದಸ್ಯ ಹಾಗು ಹೋಲಿ ರೋಜರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಎಂ ರಾಜಶೇಖರ ಹೇಳಿದರು.
ಅವರು ಹಲವಾರು ಜ್ವಲಂತ ಸಮಸ್ಯೆಗಳ ಕುರಿತು ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಶಿಕ್ಷಣ ಸಚಿವರಿಗೆ ತಾಲೂಕಿನ ದಂಡಾಧಿಕಾರಿಗಳ ಮೂಲಕ ಶನಿವಾರ ಮಾಧ್ಯಮಿಕ ನೌಕರರ ಸಂಘ ಯಲ್ಲಾಪುರ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು.ಮನವಿ ಸ್ವೀಕರಿಸಿದ ತಾಲೂಕಿನ ದಂಡಾಧಿಕಾರಿಗಳು ಮನವಿಯನ್ನ ಸರ್ಕಾರಕ್ಕೆ ಕಳಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮಿಕ ನೌಕರರ ಸಂಘದ ಕೇಂದ್ರ ಸಮಿತಿಯ ಅಧ್ಯಕ್ಷರಾದ ವಿನಾಯಕ ಹೆಗಡೆ ಕಾರ್ಯದರ್ಶಿಗಳಾದ ಶರಣಬಸವ ಬೇವಿನಕಟ್ಟಿ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ತಾಲೂಕಿನ ಎಲ್ಲಾ ಅನುದಾನಿತ ಶಾಲೆಗಳ ಶಿಕ್ಷಕ ಬಂಧುಗಳು ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಹಾಜರಿದ್ದರು











Prathidvani Yellapura