Breaking News

ಯಲ್ಲಾಪುರ ಯುಗಾದಿ ಉತ್ಸವ ಸಮಿತಿ  ಲೆಕ್ಕಾಚಾರ ಸಭೆ – ವೆಂಕಟ್ರಮಣ ಮಠ ದಲ್ಲಿ ನಡೆಯಿತು.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ವೆಂಕಟರಮಣ ಮಠದಲ್ಲಿ ರವಿವಾರ 2026 ನೆ ಸಾಲಿನಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿದ ಯಲ್ಲಾಪುರ ಯುಗಾದಿ ಉತ್ಸವ ಸಮಿತಿ ಲೆಕ್ಕಾಚಾರ ಸಮರ್ಪಣಾ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಯಲ್ಲಾಪುರ ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ವಿಶಾಲ್ ವಾಳಂಬಿ ವಹಿಸಿದ್ದು ಜಮಾ-ಖರ್ಚಿನ ಮಾಹಿತಿ ನೀಡಿ ಉತ್ಸವದ ಯಶಸ್ಸಿಗೆ ಕಾಣೀಕರ್ತರಾದ ಸರ್ವರನ್ನು ಸ್ಮರಿಸಿ ಧನ್ಯವಾದ ತಿಳಿಸಿದರು.

26 ನೆ ವರ್ಷದ ನಿಮಿತ್ತ ಯುಗಾದಿ ಉತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆದಿದ್ದು ಪ್ರತಿ ವರ್ಷಕ್ಕಿಂತ ಹೆಚ್ಚಿನ ರೀತಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಸಂಘಟಕರ ಪರಿಶ್ರಮಕ್ಕೆ ಧನ್ಯವಾಧಗಳೂ ಎಂದು ಸಮಿತಿಯ ಉಪಾಧ್ಯಕ್ಷ ಆರ್ ಎಸ್ ಭಟ್ , ಚಂದಗಳಿ ಹೇಳಿದರು.


ಇನ್ನೊರ್ವ ಉಪಾಧ್ಯಕ್ಷ ಗಜಾನನ‌ ಭಟ್ ಕಳಚೆ ಮಾತನಾಡಿ  ಯುಗಾದಿ ಉತ್ಸವದ ಯಶಸ್ವಿಯಾಗಿ ನಡೆಯಲು ತನೂ ಮನ ಧನ ಸಹಾಯ ನೀಡಿದ ದಾನಿಗಳ ಮತ್ತು ಶ್ರಮಿಸಿದ ಸರ್ವರ ಸಹಾಯ ಸಹಕಾರವನ್ನೂ ಪ್ರಶಂಶಿದರು.

2026 ರ ಯುಗಾದಿ ಉತ್ಸವ ನಿಮಿತ್ತ ವಸೂಲಾದ ಹಣ 5,96,064-00 ರುಪಾಯಿಗಳು. ಅದರಲ್ಲಿ ಒಟ್ಟು ವೆಚ್ಚ 5,79,770-00 ರುಪಾಯಿಗಳು ಒಟ್ಟು ಉಳಿಕೆ 16,294 ರುಪಾಯಿಗಳು ಎಂಬುದಾಗಿ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಉಪಾಧ್ಯಕ್ಷ ಮಹೇಶ ನಾಯ್ಕ, ರಾಮು ಆಚಾರಿ , ಗಣೇಶ ದೇವಡಿಗಾ, ಸತೀಶ ನಾಯ್ಕ ಕಾರ್ಯದರ್ಶಿ ಸಿದ್ದಾರ್ಥ ನಂದೊಳಿಮಠ ಉಪಸ್ಥಿತರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಅನುದಾನಿತ- ಸರ್ಕಾರಿ ಶಾಲಾ ಶಿಕ್ಷಕರೆಂಬ ತಾರತಮ್ಯ ಬಿಡಿ ಸರಿ ಸಮಾನವಾದ ಗೌರವ ಹಕ್ಕುಗಳನ್ನು ಕೊಡಿ – ಎಂ. ರಾಜಶೇಖರ್ ಮನವಿ

ಪ್ರತಿಧ್ವನಿ ಯಲ್ಲಾಪುರ : 30 ವರ್ಷಕ್ಕೂ ಹೆಚ್ಚಿನ ಅವಧಿಗಳ  ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿ ಬರಿಗೈಯಲ್ಲಿ ಮನೆಗೆ ಹೋಗುವ ಅನುದಾನಿತ …

Leave a Reply

Your email address will not be published. Required fields are marked *