ಪ್ರತಿಧ್ವನಿ ಯಲ್ಲಾಪುರ : 1997 ರಲ್ಲಿ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾಮಿಗಳ ಆಶಿರ್ವಾದದಿಂದ ಪ್ರಾರಂಭವಾದ ವಿಕಾಸ್ ಅರ್ಬನ್ ಬ್ಯಾಂಕ್ ರಾಷ್ಟ್ರ ಮಟ್ಟದ ಆರ್ಥಿಕ ಏರಿಳಿತ,ಸ್ಥಳೀಯವಾಗಿ ಬ್ಯಾಂಕ್ ಸಂಖ್ಯೆ ಹೆಚ್ಚುತ್ತಿರುವುದರ ನಡುವೆಯು ಉತ್ತಮ ಪ್ರಗತಿ ಸಾಧಿಸಿ ಲಾಭದಾಯಕ ನಡೆಯಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ, ಇದಕ್ಕೆ ನಮ್ಮ ಆರ್ಥಿಕ ಸಂಸ್ಥೆಯ ಮೇಲಿನ ಗ್ರಾಹಕರ ಭರವಸೆ, ಸಿಬ್ಬಂದಿಗಳ ನಿಷ್ಠೆ, ಆಡಳಿತ ಮಂಡಳಿಯ ದೂರದೃಷ್ಟಿ ಯೋಜನೆಗಳು ಕಾರವಾಗಿದ್ದು ಸರ್ವರಿಗು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ವಿಕಾಸ್ ಅರ್ಬನ್ …
Read More »ವಿಶ್ವ ದರ್ಶನ ಶಿಕ್ಷಣ ಸೇವೆಗು ಸೈ – ಸಮಾಜ ಸೇವೆಗು ಜೈ – ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ.
ಪ್ರತಿಧ್ವನಿ ಯಲ್ಲಾಪುರ : ಸಮಾಜಕ್ಕೆ ಹಿತವನ್ನೇ ಬಯಸುವ ಆಶಯವನ್ನು ಕೇವಲ ಮಾತಿಗೆ ಸೀಮಿತವಾಗಿಸದೇ, ಕೃತಿಯ ಮೂಲಕ ವಿಶ್ವದರ್ಶನ ಸೇವಾ ತೋರಿಸುತ್ತಿದೆ. ವಿಶ್ವದರ್ಶನ ಶಿಕ್ಷಣ ಸಂಸ್ಥೆ ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವನ್ನೂ ನೀಡುತ್ತಿದೆ. ಶೈಕ್ಷಣಿಕ ಚಟುವಟಿಕೆಗಳಲ್ಲಿ ಮಾತ್ರವಲ್ಲದೇ ಸಾಮಾಜಿಕ ಕಾರ್ಯಗಳಲ್ಲಿಯೂ ಮುಂಚೂಣಿಯಲ್ಲಿದೆ ಎಂದು ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್ ಹೆಗಡೆ ಕುಂಬ್ರಿಗುಡ್ಡೆ ಹೇಳಿದರು. ಅವರು ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವದರ್ಶನ ಸೇವಾ, ಹುಬ್ಬಳ್ಳಿಯ ವಿಹಾನ್ ಹಾರ್ಟ್ ಮತ್ತು ಸೂಪರ್ …
Read More »ಶಿಕ್ಷಕರ ಸೇವೆಗೆ ಸದಾ ಸಿದ್ದ – ಕನ್ನಡ ಮಾದ್ಯಮ ಶಾಲೆಗಳ ಉಳಿವಿಗಾಗಿ ನನ್ನ ಹೋರಾಟ ನಿರಂತರ – ಹೊರಟ್ಟಿ.
ಪ್ರತಿಧ್ವನಿ ಯಲ್ಲಾಪುರ : ಸಭಾಪತಿ ಸ್ಥಾನದಿಂದ ಕೆಳಗೆ ಇಳಿಸಿರುವ ಕ್ರಮ ಸಂವಿಧಾನಕ್ಕೆ ವಿರುದ್ಧವಾಗಿದ್ದು ಶಿಕ್ಷಕರ ಕ್ಷೇತ್ರದಿಂದ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಇಷ್ಟು ವರ್ಷಗಳ ಕಾಲ ಘನತೆಯಿಂದ ಕಾಪಾಡಿಕೊಂಡು ಬಂದಿರುವ ಈ ವ್ಯಕ್ತಿತ್ವಕ್ಕೆ ಅವಮಾನ, ಗೌರವಕ್ಕೆ ದಕ್ಕೆ ಬಂದಿದ್ದು ನಿಜ, ಹಾಗೆಂದು ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ ಇದರಿಂದ ಮತ್ತೆ ಪುಟ್ಟಿದೆದ್ದು ಬಂದು ಇನ್ನೂ ಹೆಚ್ಚಿನ ಸಮಯ ಶಿಕ್ಷಕರ ಕ್ಷೇತ್ರದಲ್ಲಿ ಸೇವೆಯನ್ನು ಮಾಡಲು ಅವಕಾಶವನ್ನ ಪಡೆಯುವಂತಾಗಿದೆ. ಇನ್ನೂ ಹೆಚ್ಚಿನ ಶಿಕ್ಷಕರಿಗೆ …
Read More »ಉ.ಕ ಜಿಲ್ಲೆಯನ್ನು ಧಾರವಾಡ ಸಂಚಾರಿ ಪೀಠದಲ್ಲೆ ಮುಂದುವರೆಸುವಂತೆ ಸದನದ ಗಮನ ಸೆಳೆದು ಉತ್ತರ ಕನ್ನಡ ಅಸ್ಮಿತೆಯ ಧ್ವನಿಯಾದ ಶಾಸಕ ಹೆಬ್ಬಾರ್ ,
ಪ್ರತಿಧ್ವನಿ ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯನ್ನು ಪ್ರಸ್ತಾಪಿತ ಮಂಗಳೂರು ಸಂಚಾರಿ ಪೀಠದ ವ್ಯಾಪ್ತಿಗೆ ಸೇರಿಸುವ ಕುರಿತ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಅದೇ ರೀತಿ ಶಾಸಕ ಶಿವರಾಮ ಹೆಬ್ಬಾರ್ ಕೂಡ ಉ.ಕ.ಜಿಲ್ಲೆಯನ್ನು ಧಾರವಾಡ ಪೀಠದಿಂದ ಪ್ರಸ್ಥಾಪಿತ ಮಂಗಳೂರು ಪೀಠದ ವ್ಯಾಪ್ತಿಗೆ ಒಳಪಡಿಸುವುದನ್ನು ಖಂಡತುಂಡಾಗಿ ವಿರೋದಿಸಿದ್ದರು. ಸದ್ಯ ರಾಜ್ಯದಲ್ಲಿ ವಿಧಾನಸಭಾ ಅಧಿವೇಶನ ನಡೆಯುತ್ತಿದ್ದು ಇದೇ ವಿಚಾರವನ್ನು ಶಾಸಕ ಹೆಬ್ಬಾರ್ ಸದನದ ಗಮನಕ್ಕೆ ತಂದು …
Read More »ವಿಧಾನಸೌಧ ಗಾಂಧಿ ಪ್ರತಿಮೆ ಎದುರು ಬಿಜೆಪಿ–ಜೆಡಿಎಸ್ ಧೋರಣೆ ಖಂಡಿಸಿ ಪ್ರತಿಭಟನೆ – ಶಾಸಕ ಹೆಬ್ಬಾರ್ ಭಾಗಿ.
ಪ್ರತಿಧ್ವನಿ ಯಲ್ಲಾಪುರ – ಬೆಂಗಳೂರು: ರಾಜ್ಯದ ಪ್ರಮುಖ ಸಮಸ್ಯೆಗಳ ಕುರಿತು ಚರ್ಚಿಸಲು ವಿಧಾನಮಂಡಲ ಅಧಿವೇಶನದಲ್ಲಿ ಅವಕಾಶ ನೀಡದೆ, ಗದ್ದಲದ ಮೂಲಕ ಕಲಾಪದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಧೋರಣೆಯನ್ನು ಖಂಡಿಸಿ ವಿಧಾನಸೌಧದ ಆವರಣದಲ್ಲಿರುವ ಮಹಾತ್ಮ ಗಾಂಧೀಜಿ ಅವರ ಪ್ರತಿಮೆ ಮುಂದೆ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಪಾಲ್ಗೊಂಡು, ಪ್ರತಿಪಕ್ಷಗಳ ಈ ಧೋರಣೆಯನ್ನು ಖಂಡಿಸಿದರು. ರಾಜ್ಯದ ಜನರ ಸಮಸ್ಯೆಗಳು, …
Read More »ಪ್ರಕರಣಗಳನ್ನು ಶೀಘ್ರಗತಿಯಲ್ಲಿ ಇತ್ಯರ್ಥ ಪಡಿಸಲು ಲೋಕ್ ಅಧಾಲತ್ ಯಶಸ್ವಿಗೊಳಿಸೋಣ – ಕುಮಾರ್ ಎಸ್, ನ್ಯಾಯಾಧೀಶರು ಯಲ್ಲಾಪುರ.
ಪ್ರತಿಧ್ವನಿ ಯಲ್ಲಾಪುರ : ಲೋಕ್ ಅದಾಲತ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣ ಇತ್ಯರ್ಥ ಪಡಿಸಲು, ರಾಜಿ ಸಂಧಾನದ ಮೂಲಕ ಪ್ರಕರಣ ಬಗ್ಗೆ ಹರಿಸಿ ಸಾರ್ವಜನಿಕರ ಸಮಯ ಮತ್ತು ಆರ್ಥಿಕ ಹೊರೆ ತಪ್ಪಿಸಲು ಎಲ್ಲಾ ಇಲಾಖೆಗಳು ಸಹಕರಿಸಬೇಕು ಎಂದು ಮಾನ್ಯ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕುಮಾರ್ ಎಸ್ ಹೇಳಿದರು. ಅವರು ದಿನಾಂಕ 19.9.2026 ರಂದು ನಡೆಯಲಿರುವ ಲೋಕ್ ಅದಾಲತ್ ಯಶಸ್ವಿಯಾಗಿಸುವ ಬಗ್ಗೆ ಚರ್ಚಿಸಲು ಯಲ್ಲಾಪುರದ ನ್ಯಾಯಾಲಯದ ಆವರಣದಲ್ಲಿ ಪೂರ್ವಭಾವಿ ಸಭೆಕರೆದು ಸಭೆಯ …
Read More »ಯಲ್ಲಾಪುರ ಗಣಪತಿ ಗಲ್ಲಿ ಅಂಗನವಾಡಿ ಕೇಂದ್ರಕ್ಕೆ ತಾಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಉಲ್ಲಾಸ ಶಾನಭಾಗ್ ಬೇಟಿ.
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೆ ಇರುವ ಗಣಪತಿಗಲ್ಲಿ ಅಂಗನವಾಡಿ ಕೇಂದ್ರಕ್ಕೆ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ದೇವಿದಾಸ (ಉಲ್ಲಾಸ)ನಾಗೇಶ್ ಶಾನಭಾಗ ಭೇಟಿ ನೀಡಿ ಪರಿಶೀಲಿಸಿದರು. ಮಕ್ಕಳಿಗೆ ನೀಡುತ್ತಿರುವ ಆಹಾರ ಮತ್ತು ಪಾಟ,ಪಾಠ ಹಾಗು ಆರೋಗ್ಯದ ಕುರಿತು ಸಿಬ್ಬಂದಿಯೊಂದಿಗೆ ಮಾತನಾಡಿ ಮಾಹಿತಿ ಪಡೆದರು. ಅಂಗನವಾಡಿ ಪರಿಸರವನ್ನು ಶುಚಿಯಾಗಿಟ್ಟುಕೊಂಡು ಮಕ್ಕಳಿಗೆ ಉತ್ತಮ ಆಹಾರ ಹಾಗು ಆಟಪಾಠಗಳನ್ನು ಅಚ್ಚುಕಟ್ಟಾಗಿ ಹೇಳಿಕೊಡುತ್ತಿರುವ ಶಿಕ್ಷಕಿ ಮಂಜುಳ ವಿ ನಾಯ್ಕ್ ಹಾಗು …
Read More »ಯಲ್ಲಾಪುರ ಲೋಕೋಪಯೋಗಿ ಇಲಾಖೆಯಿಂದ ತಾಲೂಕಿನ ವಿವಿಧ ರಸ್ತೆಗಳ ತಾತ್ಕಾಲಿಕ ದುರಸ್ತಿ ಕಾರ್ಯ.
ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ವಿವಿಧ ಭಾಗಗಳಲ್ಲಿ ರಸ್ತೆಗಳು ತುಂಬಾ ಹದಗೆಟ್ಟಿದ್ದು ಮಳೆಗಾಲವಾದ್ದರಿಂದ ಮತ್ತಷ್ಟು ಹೊಂಡಗುಂಡಿಗಳ ಸಂಖ್ಯೆ ಹೆಚ್ಚುತ್ತಲೆ ಇದೆ. ಈ ಮದ್ಯೆ ಯಲ್ಲಾಪುರ ಲೋಕೋಪಯೋಗಿ ಇಲಾಖೆ ಸಾರ್ವಜನಿಕ ಸಂಚಾರದ ಸುರಕ್ಷತೆಯನ್ನು ಮನದಲ್ಲಿಟ್ಟುಕೊಂಡು ತಾತ್ಕಾಲಿಕ ದುರಸ್ತಿಗೆ ಮುಂದಾಗಿದ್ದು ಹೊಂಡಗುಂಡಿಗಳನ್ನು ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಖಾನಾಪುರ – ತಾಳಗುಪ್ಪ ರಾಜ್ಯ ಹೆದ್ದಾರಿ, ಚವತ್ತಿ ಗ್ರಾಮೀಣ ಭಾಗದಲ್ಲಿ, ಉಮ್ಮಚ್ಚಗಿ ಸಂಕದಗುಂಡಿ ವ್ಯಾಪ್ತಿಯಲ್ಲಿ,ಮಂಚಿಕೇರಿ ಗ್ರಾಮೀಣ ವ್ಯಾಪ್ತಿಯಲ್ಲಿ ತಾತ್ಕಾಲಿಕ ದುರಸ್ತಿ ಕೆಲಸ ಮಾಡಿದ್ದು ಮತ್ತು ಇತರೆಡೆಗಳಲ್ಲಿ …
Read More »ಹೊಂಡಗಳ ಭಾಗ್ಯ ಕರುಣಿಸಿದ ಕಾಂಗ್ರೆಸ್ ಸರ್ಕಾರ ನಮ್ಮ ರಾಜ್ಯಕ್ಕೆ ಬೇಕಿತ್ತೆ – ಪ್ರಸಾದ್ ಹೆಗಡೆ.
ಪ್ರತಿಧ್ವನಿ ಯಲ್ಲಾಪುರ : ಕಾಂಗ್ರೆಸ್ ಸರಕಾರ ಕಳೆದ ಮೂರು ವರ್ಷಗಳಿಂದ ರಸ್ತೆಗಳನ್ನು ನಿರ್ವಹಣೆ ಮಾಡದೇ ಹೊಂಡಗಳ ಭಾಗ್ಯ ಕರುಣಿಸಿದೆ. ಇಂತಹ ಭಾಗ್ಯಗಳು ನಮ್ಮ ತಾಲ್ಲೂಕಿಗೆ ,ನಮ್ಮ ರಾಜ್ಯಕ್ಕೆ ಬೇಕಾಗಿತ್ತೇ ? ಎಂದು ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಆಕ್ರೋಶ ವ್ಯಕ್ತಪಡಿಸಿದರು. ಅವರು ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಿಡಬ್ಲುಡಿ ರಸ್ತೆಗಳ ತುರ್ತು ನಿರ್ವಹಣೆ ಆಗದಿದ್ದಲ್ಲಿ ಪ್ರತಿಭಟನೆ ಅನಿವಾರ್ಯವಾಗಿ ಮಾಡಬೇಕಾಗುತ್ತದೆಂದು ಇಲಾಖಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಮತ್ತು ಹೊಂಡಗಳಲ್ಲಿ ಬಾಳೆ …
Read More »ಯಲ್ಲಾಪುರ ವಿಶ್ವದರ್ಶನದಲ್ಲಿ ಆ.23ರಂದು ಉಚಿತ ಹೃದಯರೋಗ ತಪಾಸಣಾ ಶಿಭಿರ.
ಪ್ರತಿಧ್ವನಿ ಯಲ್ಲಾಪುರ : ಸದಾ ಒಂದಲ್ಲ ಒಂದು ಸಮಾಜಮುಖಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಮನುಷ್ಯನ ಅತಿ ಪ್ರಮುಖ ಭಾಗವಾದ ಹೃದಯಕ್ಕೆ ಸಂಬಂಧಿಸಿದಂತೆ ಉಚಿತ ತಪಾಸಣ ಶಿಭಿರವನ್ನು ಆಗಸ್ಟ್ 23 ರ ಬೆಳಗ್ಗೆ 10 ಗಂಟೆಯಿಂದ ಹಮ್ಮಿಕೊಂಡಿದ್ದು ಸಾರ್ವಜನಿಕರು ಶಿಭಿರದ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆ ಮಾದ್ಯಮ ಪ್ರಕಟಣೆ ಹೊರಡಿಸಿದೆ. ವಿಶ್ವದರ್ಶನ ಸೇವಾ ಹಾಗೂ ಹುಬ್ಬಳ್ಳಿಯ ವಿಹಾನ ಹಾರ್ಟ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯವರ ಸಹಯೋಗದಲ್ಲಿ ಉಚಿತ ಹೃದಯರೋಗ …
Read More »
Prathidvani Yellapura