
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೆ ಇರುವ ಗಣಪತಿಗಲ್ಲಿ ಅಂಗನವಾಡಿ ಕೇಂದ್ರಕ್ಕೆ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ದೇವಿದಾಸ (ಉಲ್ಲಾಸ)ನಾಗೇಶ್ ಶಾನಭಾಗ ಭೇಟಿ ನೀಡಿ ಪರಿಶೀಲಿಸಿದರು.

ಮಕ್ಕಳಿಗೆ ನೀಡುತ್ತಿರುವ ಆಹಾರ ಮತ್ತು ಪಾಟ,ಪಾಠ ಹಾಗು ಆರೋಗ್ಯದ ಕುರಿತು ಸಿಬ್ಬಂದಿಯೊಂದಿಗೆ ಮಾತನಾಡಿ ಮಾಹಿತಿ ಪಡೆದರು. ಅಂಗನವಾಡಿ ಪರಿಸರವನ್ನು ಶುಚಿಯಾಗಿಟ್ಟುಕೊಂಡು ಮಕ್ಕಳಿಗೆ ಉತ್ತಮ ಆಹಾರ ಹಾಗು ಆಟಪಾಠಗಳನ್ನು ಅಚ್ಚುಕಟ್ಟಾಗಿ ಹೇಳಿಕೊಡುತ್ತಿರುವ ಶಿಕ್ಷಕಿ ಮಂಜುಳ ವಿ ನಾಯ್ಕ್ ಹಾಗು ಸಹಾಯಕಿ ಅರ್ಚನ ಆರ್ ಪೂಜಾರಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗು ಕೆಲವು ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಯಲ್ಲಾಪುರ, ಸಿ.ಡಿ.ಪಿ.ಒ ಇಮಲಪ್ಪಾ ಸಹ ಜೊತೆಯಲ್ಲಿ ಇದ್ದರು.

ಮನೆಯೆ ಮೊದಲ ಪಾಠಶಾಲೆ ತಾಯಿಯೆ ಮೊದಲ ಗುರು ಎಂಬ ಮಾತು ಎಷ್ಟು ಸಮಂಜಸವೋ ಹಾಗೆ ಇದರ ನಂತರ ನಮ್ಮ ವಿದ್ಯಾಭ್ಯಾಸ ಅಕ್ಷರ ಕಲಿಕೆಯ ದೇಗುಲ ಎಂದರೆ ಅದು ಅಂಗನವಾಡಿ ಮಕ್ಕಳ ಬುದ್ದಿಯನ್ನು ಮತ್ತು ಚಟುವಟಿಕೆಗಳನ್ನು ಚುರುಕಾಗಿಸುವ ಮೊಲ ಕೇಂದ್ರ ಹಾಗಾಗಿ ಅಂಗನವಾಡಿ ವ್ಯವಸ್ಥೆ ಮೇಲೆ ನಮ್ಮ ಸರ್ಕಾರ ವಿಶೇಷ ನಿಗಾ ವಹಿಸುತ್ತಿದೆ.ಮಕ್ಕಳ ಆರೋಗ್ಯ,ಆಹಾರ,ಆಟ,ಪಾಠದ ಕಡೆಗೆ ಅಂಗನವಾಡಿ ನಿರ್ವಹಣೆ ಮಾಡುವವರು ಹೆಚ್ಚಿನ ಗಮನಹರಿಸಬೇಕಿದೆ ಆ ನಿಟ್ಟಿನಲ್ಲಿ ಗಣಪತಿ ಗಲ್ಲಿ ಅಂಗನವಾಡಿ ಭೇಟಿ ನೀಡಿದ್ದು ವ್ಯವಸ್ಥೆ ಅಚ್ಚುಕಟ್ಟಾಗಿ ಇಟ್ಟಿದ್ದಾರೆ.
ದೇವಿದಾಸ (ಉಲ್ಲಾಸ) ನಾಗೇಶ್ ಶಾನಭಾಗ
ಅಧ್ಯಕ್ಷರು
ತಾಲೂಕಾ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಯಲ್ಲಾಪುರ.













Prathidvani Yellapura