
ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ವಿವಿಧ ಭಾಗಗಳಲ್ಲಿ ರಸ್ತೆಗಳು ತುಂಬಾ ಹದಗೆಟ್ಟಿದ್ದು ಮಳೆಗಾಲವಾದ್ದರಿಂದ ಮತ್ತಷ್ಟು ಹೊಂಡಗುಂಡಿಗಳ ಸಂಖ್ಯೆ ಹೆಚ್ಚುತ್ತಲೆ ಇದೆ. ಈ ಮದ್ಯೆ ಯಲ್ಲಾಪುರ ಲೋಕೋಪಯೋಗಿ ಇಲಾಖೆ ಸಾರ್ವಜನಿಕ ಸಂಚಾರದ ಸುರಕ್ಷತೆಯನ್ನು ಮನದಲ್ಲಿಟ್ಟುಕೊಂಡು ತಾತ್ಕಾಲಿಕ ದುರಸ್ತಿಗೆ ಮುಂದಾಗಿದ್ದು ಹೊಂಡಗುಂಡಿಗಳನ್ನು ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ.

ಖಾನಾಪುರ – ತಾಳಗುಪ್ಪ ರಾಜ್ಯ ಹೆದ್ದಾರಿ, ಚವತ್ತಿ ಗ್ರಾಮೀಣ ಭಾಗದಲ್ಲಿ, ಉಮ್ಮಚ್ಚಗಿ ಸಂಕದಗುಂಡಿ ವ್ಯಾಪ್ತಿಯಲ್ಲಿ,ಮಂಚಿಕೇರಿ ಗ್ರಾಮೀಣ ವ್ಯಾಪ್ತಿಯಲ್ಲಿ ತಾತ್ಕಾಲಿಕ ದುರಸ್ತಿ ಕೆಲಸ ಮಾಡಿದ್ದು ಮತ್ತು ಇತರೆಡೆಗಳಲ್ಲಿ ತಾತ್ಕಾಲಿಕ ರಸ್ತೆ ದುರಸ್ತಿ ಮುಂದುವರೆಸಲಿದ್ದಾರೆ.

ಯಲ್ಲಾಪುರ ತಾಲೂಕಿನ ವ್ಯಾಪ್ತಿ ಹೆಚ್ಚಿನ ಮಳೆ ಬೀಳುವ ಪ್ರದೇಶವಾಗಿದ್ದು ರಸ್ತೆಗಳು ಗುಂಡಿ ಬೀಳುವುದು ಸರ್ವೇಸಾಮಾನ್ಯ ಆಗಿದೆ, ಬರುವ ದಿನಗಳಲ್ಲಿ ವರ್ಷಕ್ಕೆ ಇಂತಿಷ್ಟು ಕಿಲೋಮೀಟರ್ ರಸ್ತೆ ಗುಣಮಟ್ಟದಲ್ಲಿ ನಿರ್ಮಿಸಲು ಪ್ರಾರಂಬಿಸಿದರೆ ಕೆಲವೇ ವರ್ಷಗಳಲ್ಲಿ ತಾಲ್ಲೂಕಿನ ರಸ್ತೆಗಳು ಉತ್ಕೃಷ್ಟ ದರ್ಜೆ ತಲುಪಲಿದೆ ಹಾಗು ಪದೇಪದೇ ದುರಸ್ತಿ ಹೆಸರಲ್ಲಿ ಹಣ ಪೋಲಾಗುವುದನ್ನು ತಡೆಯಬಹುದಾಗಿದೆ.

ಜನರ ಆಕ್ರೋಶ, ವಿರೋಧ ಪಕ್ಷಗಳ ಪ್ರತಿಭಟನೆಗಾಗಿ ರಸ್ತೆ ಸರಿಪಡಿಸುವುದಲ್ಲ ಬದಲಾಗಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಿದರೆ ಜನರ ತೆರಿಗೆ ಹಣದ ಸಮರ್ಪಕ ಬಳಕೆ ಮತ್ತು ರಸ್ತೆ ನಿರ್ಮಿಸಿದ ಸರ್ಕಾರಕ್ಕೆ ಒಳ್ಳೆಯ ಹೆಸರು ತನ್ನಿಂದ ತಾನೆ ಬರಲಿದೆ. ಹಳೆಯ ರೀತಿ ಜನರನ್ನು ಯಾಮಾರಿಸುವ ದಿನಗಳು ದೂರಾಗಿವೆ ಪ್ರತಿಯೊಬ್ಬ ನಾಗರಿಕನು ಪ್ರಜ್ಞಾವಂತನಾಗಿದ್ದು ತನ್ನ ತೆರಿಗೆ ಹಣದ ಲೆಕ್ಕ ಕೇಳುತ್ತಿದ್ದಾನೆ. ಜನರು ಜಾಗೃತರಾಗಿದ್ದಾರೆ ಎನ್ನುತ್ತಿದ್ದಾರೆ ಸ್ಥಳೀಯ ನಾಗರಿಕರು.

ಮಳೆಗಾಲ ಪ್ರಾರಂಭವಾಗಿ ಇರುವ ರಸ್ತೆ ಮತ್ತಷ್ಟು ಹೊಂಡ-ಗುಂಡಿಗಳು ಸೃಷ್ಟಿಯಾಗಿದ್ದು ಇಲಾಖೆ ಕಾಲಕಾಲಕ್ಕೆ ದುರಸ್ತಿ ಕಾರ್ಯ ಮಾಡುತ್ತಲೆ ಬಂದಿದೆ, ಮಳೆ ಹೆಚ್ಚಾದಂತೆ ಗುಂಡಿಗಳು ಹೆಚ್ಚಾಗಿದೆ ಈಗಾಗಲೆ ಬಹಳಷ್ಟು ಕಡೆಗಳಲ್ಲಿ ದುರಸ್ತಿ ಕಾರ್ಯ ಮಾಡಿದ್ದು ಮೊದಲಿಗೆ ಮುಖ್ಯ ರಸ್ತೆಗಳಿಗೆ ಆದ್ಯತೆ ನೀಡಿದ್ದು ಗ್ರಾಮೀಣ ಪ್ರದೇಶಗಳಲ್ಲಿನ ರಸ್ತೆಗಳ ದುರಸ್ತಿ ಮುಂದುವರೆಸಿದ್ದೇವೆ. ಜನತೆಯ ಸುರಕ್ಷಿತವಾದ ಸಂಚಾರ ನಮ್ಮ ಇಲಾಖೆಯ ಆದ್ಯತೆಯಾಗಿದೆ. ರಾಮಲಿಂಗೇಶ್ ಎಸ್.ಎಂ ,ಎಇಇ , ಲೋಕೋಪಯೋಗಿ ಇಲಾಖೆ, ಯಲ್ಲಾಪುರ.













Prathidvani Yellapura