ಪ್ರತಿಧ್ವನಿ ಯಲ್ಲಾಪುರ : ಶಾಸಕ ಶಿವರಾಮ ಹೆಬ್ಬಾರ್ ಶನಿವಾರ ಯಲ್ಲಾಪುರ ಪಟ್ಟಣದಲ್ಲಿ ಶ್ರೀ ಗ್ರಾಮದೇವಿ ದ್ವಿಚಕ್ರ ವಾಹನಗಳ ತಂತ್ರಜ್ಞರ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಶಾಸಕರು, ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ವತಿಯಿಂದ ನೀಡಲಾಗುವ ವಿವಿಧ ಪರಿಕರಗಳನ್ನು ವಿತರಿಸಿದರು. ಇದೇ ಸಂದರ್ಭದಲ್ಲಿ ದ್ವಿಚಕ್ರ ವಾಹನಗಳ ದುರಸ್ತಿ ದರಪಟ್ಟಿಯನ್ನು ಬಿಡುಗಡೆಗೊಳಿಸಿ, ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ದ್ವಿಚಕ್ರ ವಾಹನಗಳ ದುರಸ್ತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ತಂತ್ರಜ್ಞರು ಎದುರಿಸುತ್ತಿರುವ …
Read More »ಕಾಲು ಶತಮಾನ ಕಂಡ ಯು.ಕೆ ಸೌಹಾರ್ಧ ಸಹಕಾರಿ – 1 ಕೋಟಿ,14 ಲಕ್ಷ ಲಾಭದಲ್ಲಿ – ಪ್ರಮೋದ್ ಹೆಗಡೆ.
ಪ್ರತಿಧ್ವನಿ ಯಲ್ಲಾಪುರ : ಯು.ಕೆ.ಸೌಹಾರ್ದ ಸಹಕಾರಿಯು ಪ್ರಸಕ್ತ ಸಾಲಿನಲ್ಲಿ 1.14 ಕೋಟಿ ರೂ ಎಲ್ಲ ನಿಧಿಗಳನ್ನು ತೆಗೆದಿಟ್ಟು ಲಾಭ ಗಳಿಸಿದೆ. 22,448 ಶೇರುದಾರರನ್ನು ಹೊಂದಿದ್ದು, 7,70 ಕೋಟಿ ಶೇರು ಬಂಡವಾಳ ಹೊಂದಿ, ಕಾಲು ಶತಮಾನ ಗತಿಸಿದ ನಮ್ಮ ಸಂಸ್ಥೆ ಸಮಾನ ಮನಸ್ಕರ ತಂಡದಿದಾಗಿ ಅಭಿವೃದ್ಧಿಯನ್ನು ಹೊಂದಿದೆ. ಜನರ ಸಹಕಾರ, ಪ್ರೀತಿ ನಮ್ಮ ಸಂಸ್ಥೆಯ ಮೇಲಿರುವುದರಿಂದಲೇ ಉತ್ತಮ ಪ್ರಗತಿಯನ್ನು ಸಾಧಿಸುವುದಕ್ಕೆ ಸಾಧ್ಯವಾಗಿದೆ ಎಂದು ಸಹಕಾರಿಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.ಅವರು, ಶುಕ್ರವಾರ …
Read More »ಉಮ್ಮಚಗಿ ಭಾಗದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ
ಪ್ರತಿಧ್ವನಿ ಯಲ್ಲಾಪುರ : ಉಮ್ಮಚಗಿ ಭಾಗದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಸುಭಾಷ ಗಜಾನನ ಪಟಗಾರ, ಲಕ್ಷ್ಮಣ ವಾಲಿಕರ, ಗಣೇಶ ಬಾಬು ವಡ್ಡರ್ ಹಾಗೂ ಸಂಕದಗುಂಡಿಯ ಮಂಜುನಾಥ ಎಚ್. ವಡ್ಡರ್ ಅವರು ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಕುಪ್ಪಯ್ಯ ಪೂಜಾರಿ ಹಾಗೂ ಮಂಜುನಾಥ ಮೋಗೆರ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ನಂತರ ಶಾಸಕ ಶಿವರಾಮ …
Read More »ಯಲ್ಲಾಪುರದ ಸ್ವಾತಂತ್ರ್ಯ ಸಂಭ್ರಮಕ್ಕೆ ಮಕ್ಕಳ ಬಾಯಿ ಸಿಹಿಯಾಗಿಸಿದ ಲಾರಿ ಚಾಲಕರ ಸಂಘ.
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಶಾಲೆಗಳ ವಿದ್ಯಾರ್ಥಿಗಳಿಗೆ ಲಾರಿ ಚಾಲಕರ ಸಂಘದ ವತಿಯಿಂದ ಸಿಹಿ ಹಂಚಿ ಬಾಯಿ ಸಿಹಿ ಮಾಡಲಾಯಿತು. ದೇಶಕ್ಕೆ 80 ನೆ ವರ್ಷದ ಸ್ವಾತಂತ್ರ್ಯ ಸಂಭ್ರಮ ಎಲ್ಲೆಡೆ ತ್ರಿವರ್ಣ ಧ್ವಜದ ಹಾರಾಟ ಇಂತಹ ಸಂತಸದ ಸನ್ನಿವೇಶದಲ್ಲಿ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಲಾರಿ ಚಾಲಕರ ಸಂಘ ಬದ್ದತೆಯ ಕಾರ್ಯ ಮಾಡಿದರು. ಸಂಘದ ಅಧ್ಯಕ್ಷ ಸಂತೋಷ ನಾಯ್ಕ್ ಮಾರ್ಗ ದರ್ಶನದಲ್ಲಿ.ಉಪಾಧ್ಯಕ್ಷ ಶಂಕರ್ ಅತ್ತರವಾಲ, ಕಾರ್ಯದರ್ಶಿ ಸಂದೀಪ್ ವಡ್ಡರ್ ಹಾಗು …
Read More »ಯಲ್ಲಾಪುರ ವಿದ್ಯುತ್ ಗುತ್ತಿಗೆದಾರರ ಸಂಘದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮ.
ಪ್ರತಿಧ್ವನಿ ಯಲ್ಲಾಪುರ : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ( ರಿ)ಯಲ್ಲಾಪುರ ಸಮಿತಿಯಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ವನ್ನು ಸಂಘದ ಅಧ್ಯಕ್ಷರಾದ ವೇಣುಗೋಪಾಲ ಮದ್ಗುಣಿಯವರು ನೆರವೇರಿಸಿ ಮಾತನಾಡಿ ನಮ್ಮೇಲ್ಲರ ಹಿರಿಯರ ಬಲಿದಾನದಿಂದ ಅನೇಕ ವರ್ಷಗಳ ಹೋರಾಟದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು ಅದನ್ನು ನಾವೇಲ್ಲರೂ ನೆನೆಯ ಬೇಕು.ಇಂದಿನ ಯುವ ಪೀಳಿಗೆ ಅದರ ಮಹತ್ವವನ್ನು ಅರಿಯಬೇಕೆಂದರು. ಮಲೆನಾಡು ಸೊಸೈಟಿ ಅಧ್ಯಕ್ಷರಾದ ಎಂ.ಆರ್.ಹೆಗಡೆ,ಕುಂಬ್ರಿಗುಡ್ಡೆ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಮಾಕಾಂತ …
Read More »ಯಲ್ಲಾಪುರದ ವಿಶ್ವ ದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಬಾನೆತ್ತರಕ್ಕೆ ಹಾರಿದ ತ್ರಿವರ್ಣ ಧ್ವಜ.
ಪ್ರತಿಧ್ವನಿ ಯಲ್ಲಾಪುರ : ಸ್ವಾತಂತ್ರ್ಯ ಬ್ರಿಟಿಷರ ಕೊಡುಗೆಯಲ್ಲ ಅದರ ಹಿಂದೆ ನಮ್ಮ ಹೋರಾಟ ತ್ಯಾಗ ಬಲಿದಾನಗಳು ಇವೆ ಎಂದು ವಾಯು ಪಡೆಯ ನಿವೃತ್ತ ಯೋಧ ಮಹಾದೇವಚಂದ್ರ ಪಂಡರಾಪುರ ಹೇಳಿದರು. ಅವರು ವಿಶ್ವ ದರ್ಶನ ಶಿಕ್ಷಣ ಸಮೂಹದಲ್ಲಿ ಆಯೋಜಿಸಿದ್ದ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಮಾತನಾಡಿದರು. ಇಂದು ನೂರಾರು ವರ್ಷಗಳ ಪರಕೀಯರ ದಾಸ್ಯದ ಸಂಕೋಲೆ ಮುರಿದ ದಿನ. ಸ್ವಾತಂತ್ರ್ಯ ಬ್ರಿಟಿಷರ ಕೊಡುಗೆಯಲ್ಲ ಅದರ ಹಿಂದೆ ನಮ್ಮ ಹೋರಾಟ ತ್ಯಾಗ ಬಲಿದಾನಗಳು ಇವೆ. ಇಂದು ನಮ್ಮಲ್ಲಿರುವ …
Read More »ಹಲವು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನದ ಫಲವಾಗಿ ಇಂದು ನಾವು ಸ್ವತಂತ್ರರಾಗಿ ಬದುಕುತ್ತಿದ್ದೇವೆ – ಹೆಬ್ಬಾರ್.
ಪ್ರತಿಧ್ವನಿ ಯಲ್ಲಾಪುರ: ಪಕ್ಷ, ಪಂಗಡ ಎಲ್ಲದಕ್ಕೂ ಮೀರಿದ್ದು ನಮ್ಮ ಭಾರತ, ದೇಶ ಎಂಬ ವಿಷಯ ಬಂದಾಗ ಉಳಿದವೆಲ್ಲಾ ನಗಣ್ಯ ದೇಶವೆ ಮೊದಲು. ಜಗತ್ತಿನೆದುರು ಭಾರತ ಪ್ರಜ್ವಲಿಸಿ ಅಭಿವೃದ್ಧಿ ಪಥದತ್ತ ಸಾಗಬೇಕಿದೆ ಅದಕ್ಕೆ ಸಂಘಟಿತ ಮನೋಭಾವ ಅತಿ ಮುಖ್ಯ, ದೇಶದ ಸಂವಿದಾನದ ಅಡಿಯಲ್ಲಿ ನಾವೆಲ್ಲಾ ಒಗ್ಗಟ್ಟಾಗಿ ಮುಂದೆ ಸಾಗೋಣ ಭವ್ಯ ಭಾರತ ನಿರ್ಮಾಣ ಮಾಡೋಣ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು. ಅವರು 80 ನೇ ಸ್ವಾತಂತ್ರ್ಯ …
Read More »ಸ್ವಾತಂತ್ರ್ಯಕ್ಕೂ ಸ್ವೇಚ್ಛಾಚಾರಕ್ಕೂ ಇರುವ ವ್ಯತ್ಯಾಸವನ್ನು ಅರಿತು ನಾವು ದೇಶವನ್ನು ಕಟ್ಟಬೇಕಾಗಿದೆ – ರಾಜಶೇಖರ್..
ಪ್ರತಿಧ್ವನಿ ಯಲ್ಲಾಪುರ : ನಮ್ಮ ದೇಶ, ಸಂಸ್ಕಾರ ಸಂಸ್ಕೃತಿ, ಇವೆಲ್ಲವೂ ನಮಗೆ ಹಿರಿಯರು ನೀಡಿದ ಬದುಕಿನ ಕ್ರಮವಾಗಿದೆ. ಸ್ವಾತಂತ್ರ್ಯ ಎಂದರೆ ಗುಲಾಮಗಿರಿಯಿಂದ ಇಂದಿನ ಸ್ವತಂತ್ರವನ್ನು ಕೊಡಿಸಿದ ಕ್ಷಣ. ಈ ಬದುಕನ್ನು ನೀಡಿದ ಮಹನೀಯರು ಪ್ರಾತಸ್ಮರಣೀಯರು. ಅಂದಿನ ಹಿರಿಯ ತಲೆಮಾರಿನ ಜನ ಒಗ್ಗಟ್ಟಿನಿಂದ ನೀಡಿರುವ ಸ್ವಾತಂತ್ರ್ಯವನ್ನು ನಾವಿಂದು ಅನುಭವಿಸುತ್ತೇವೆ. ಈ ಸ್ವಾತಂತ್ರ್ಯದ ಸವಿ ಅತ್ಯಂತ ಅಮೂಲ್ಯ ಅದನ್ನ ಪಡೆಯಬೇಕಾದರೆ ನಡೆಸಿದ ಹೋರಾಟಗಳ ಅರಿವಿಲ್ಲದೆ ನಾವಿಂದು ದೇಶದ ಬಗ್ಗೆ ದೇಶದ ಕುರಿತು ಚಿಂತನೆ …
Read More »ಜನರ ಆರೋಗ್ಯದ ಹಿತದೃಷ್ಟಿಯಿಂದ ಹೊರಡಿಸಿದ ಗುಟ್ಕಾ–ಪಾನ್ ಮಸಾಲಾ ನಿಷೇಧ ವಾಪಸ್ ಇಲ್ಲ – ಯು.ಟಿ.ಖಾದರ್ ಆರೋಗ್ಯ ಸಚಿವ.
ಪ್ರತಿಧ್ವನಿ ಯಲ್ಲಾಪುರ : ರಾಜ್ಯದಲ್ಲಿ ತಂಬಾಕು ಅಥವಾ ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ಮೇಲೆ ವಿಧಿಸಿರುವ ಒಂದು ವರ್ಷದ ಕಟ್ಟುನಿಟ್ಟಿನ ನಿಷೇಧದ ಆದೇಶವನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಆರೋಗ್ಯದ ದೃಷ್ಟಿಯಿಂದ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ಮೇಲೆ ನಿಷೇಧ ಹೇರಲಾಗಿದೆ. ಈ ನಿರ್ಧಾರದಿಂದ ಅಡಿಕೆ …
Read More »🇮🇳 80 ನೇ ಸ್ವಾತಂತ್ರ್ಯೋತ್ಸವ: ಸ್ವಾತಂತ್ರ್ಯದ ಸಾರ್ಥಕತೆಯತ್ತ ನಮ್ಮ ಹೆಜ್ಜೆ, ಬೆಳಗಲಿ ಭಾರತ ಬೆಳಗಲಿ.
ಪ್ರತಿಧ್ವನಿ ಯಲ್ಲಾಪುರ : “ಸೌಹಾರ್ದ ಭಾರತ – ಸಮೃದ್ಧಿ ಭಾರತ” ಎಂಬ ಆಶಯದೊಂದಿಗೆ ದೇಶವು 80 ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದೆ. ಶತಮಾನಗಳ ಗುಲಾಮಗಿರಿಯ ಸಂಕೋಲೆಗಳನ್ನು ಕಳಚಿ, ಸ್ವಾಭಿಮಾನ ಮತ್ತು ಸ್ವಾತಂತ್ರ್ಯದ ಹೊಸ ಬೆಳಕನ್ನು ಕಂಡ ದಿನವೇ ಆಗಸ್ಟ್ 15. ಇದು ಕೇವಲ ಒಂದು ರಾಷ್ಟ್ರೀಯ ಹಬ್ಬವಲ್ಲ; ದೇಶಕ್ಕಾಗಿ ಹೋರಾಡಿದ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ದೇಶಪ್ರೇಮವನ್ನು ಸ್ಮರಿಸುವ ಪವಿತ್ರ ದಿನ. ಮಹಾತ್ಮ ಗಾಂಧೀಜಿ, ನೇತಾಜಿ ಸುಭಾಷ್ …
Read More »
Prathidvani Yellapura