Breaking News

ಇಂದು ಮದ್ಯಾಹ್ನ ಯಲ್ಲಾಪುರದಲ್ಲಿ ಯುಗಾದಿ ಉತ್ಸವ ನಿಮಿತ್ತ ಧರ್ಮ ಜಾಗೃತಿ ಬೈಕ್ ರ‍್ಯಾಲಿ.🚩


ಪ್ರತಿಧ್ವನಿ ಯಲ್ಲಾಪುರ : ಹಿಂದುಗಳ ನೂತನ ವರ್ಷದ ಆಗಮನಕ್ಕೆ ಎರಡು ದಿನಗಳು ಬಾಕಿ ಇರುವಂತೆ ಯುಗಾದಿ ಉತ್ಸವ ನಿಮಿತ್ತ ಧರ್ಮ ಜಾಗೃತಿಗಾಗಿ ಬೃಹತ್ ಬೈಕ್ ರ‍್ಯಾಲಿ ಮದ್ಯಾಹ್ನ 3 ಗಂಟೆಗೆ ಕಾಳಮ್ಮ ದೇವಿ ದೇವಾಲಯದಿಂದ ಚಾಲನೆ ದೊರೆಯಲಿದ್ದು ಸಮಸ್ತ ಹಿಂದು ಕುಲಕೋಟಿ ಬಂಧುಗಳು ಆಗಮಿಸಿ ಬೈಕ್ ರ‍್ಯಾಲಿ ಯಲ್ಲಿ ಪಾಲ್ಗೊಳ್ಳುವಂತೆ ಸಮಿತಿಯವರು ಗೌರವಪೂರ್ವಕ ಧರ್ಮ ಕರೆ ನೀಡಿದ್ದಾರೆ.
ಯುಗಾದಿ ಉತ್ಸವದ ಹಿನ್ನೆಲೆಯಲ್ಲಿ ಸಮಸ್ತ ಯಲ್ಲಾಪುರ ಕೇಸರಿಮಯವಾಗಿದ್ದು ಬೈಕ್ ರ‍್ಯಾಲಿ ಸಾಗುವ ಮಾರ್ಗದುದ್ದಕ್ಕು ಕೇಸರಿ ಪತಾಕೆ,ಧ್ವಜ,ತೋರಣ, ರಂಗೋಲಿ ಸರ್ವರನ್ನು ಸ್ವಾಗತಿಸಲು ಸಜ್ಜಾಗಿದೆ.


ಸೋಮವಾರ ರಾತ್ರಿ ಮಂಜುನಾಥ ನಗರದ ಯುವಕರ ತಂಡ ಸತೀಶ್ ಶಿವಾನಂದ ನಾಯ್ಕ್ ನೇತೃತ್ವದಲ್ಲಿ ಕೇಸರಿ ಪತಾಕೆ,ಬಂಟಿಗ್ಸ್, ಶ್ರೀರಾಮನ ಕಟೌಟ್, ಧ್ವಜ,ತೋರಣ ಕಟ್ಟಿ ಸಿಂಗಾರ ಮಾಡಿದರು.


ಕಾಳಮ್ಮ ನಗರದ ಯುವಕರ ಬಳಗ ತ್ರಿಶೂಲ ಸರ್ಕಲ್ ಮತ್ತು ಆ ಭಾಗದ ರಸ್ತೆಗಳಲ್ಲಿ ಕೇಸರಿ ಶ್ರಿಂಗಾರ ಮಾಡಿದರು.


ಗೌತಮ್ ಕಾಮತ್ ಮತ್ತು ಸ್ನೇಹ ಬಳಗದವರು ಸಹ ನಗರದ ಕೇಸರಿ ಶಂಗಾರದಲ್ಲಿ ತೊಡಗಿದ್ದು ಶೋಭಾ ಯಾತ್ರೆಯೊಳಗೆ ಮತ್ತಷ್ಟು ಅಲಂಕಾರ ಕಾಣಲಿದೆ ಯಲ್ಲಾಪುರ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

“ಸೇವೆ ಎಂಬ ಯಜ್ಞದಲ್ಲಿ ಸಮಿತೆಯಂತೆ ಉರಿಯುವ” ಹಿಂದು ಮುಖಂಡ ಸೋಮೇಶ್ವರ ನಾಯ್ಕ್ ಗೆ ಒಪ್ಪುವಂತಹ ಸಾಲುಗಳು.

ಪ್ರತಿಧ್ವನಿ ಯಲ್ಲಾಪುರ : ಸೇವಾ ಭಾವದಲ್ಲಿ ಸಮಾಜಕ್ಕಾಗಿ ಶ್ರಮಿಸುವ ಮತ್ತು ಸಮಾಜದ ಒಳಿತಿಗಾಗಿ ಸದಾ ಮಿಡಿವ ಮನಸ್ಸುಗಳಲ್ಲಿ ಯಲ್ಲಾಪುರದ ಹಿಂದು …

Leave a Reply

Your email address will not be published. Required fields are marked *