Breaking News

Monthly Archives: August 2026

ಉತ್ತರ ಕನ್ಬಡ ಜಿಲ್ಲೆಯನ್ನು ಪ್ರಸ್ಥಾಪಿತ ಮಂಗಳೂರು ಸಂಚಾರಿ ಪೀಠದ ವ್ಯಾಪ್ತಿಗೆ ಸೇರ್ಪಡೆಗೆ ಜಯ ಕರ್ನಾಟಕ ಸಂಘಟನೆ ವಿರೋದವಿದೆ – ವಿಲ್ಸನ್ ಫರ್ನಾಂಡೀಸ್.

ಪ್ರತಿಧ್ವನಿ ಯಲ್ಲಾಪುರ : ಇತ್ತೀಚೆಗೆ ಕೇಳಿ ಬರುತ್ತಿರುವಂತೆ ಮಂಗಳೂರು ಸಂಚಾರಿ ಪೀಠದ ವ್ಯಾಪ್ತಿಗೆ ಉತ್ತರ ಕನ್ನಡ ಜಿಲ್ಲೆ ಸೇರ್ಪಡೆ ಮಾಡುವ ಪ್ರಸ್ತಾಪ ಕೇಳಿ ಬರುತ್ತಿದ್ದು ಇಂತಹ ಅವೈಜ್ಞಾನಿಕ ನಿರ್ಧಾರವನ್ನು ರಾಜ್ಯದ ಕ್ರಿಯಾಶೀಲವಾದ “ಜಯ ಕರ್ನಾಟಕ ಸಂಘಟನೆ ” ಪ್ರಭಲವಾಗಿ ವಿರೋದಿಸುತ್ತದೆ ಎಂದು ಯಲ್ಲಾಪುರ ತಾಲೂಕು ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ವಿಲ್ಸನ್ ಫರ್ನಾಂಡೀಸ್ ಪ್ರತಿಧ್ವನಿ ಯೊಂದಿಗೆ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಕ್ರಮಿಸುವ ದೂರ ಮತ್ತು ಸಮಯ ಹಾಗು ಆರ್ಥಿಕವಾಗಿಯು ಉತ್ತರ ಕನ್ನಡ …

Read More »

ಆಡಳಿತ ಸುಧಾರಣ ಆಯೋಗದ ಅಧ್ಯಕ್ಷರಾಗಿ ಆರ್.ವಿ‌.ದೇಶಪಾಂಡೆ ನಮಗೆ ತೃಪ್ತಿ ಇದೆ – ಬಾಬು ಸಿದ್ದಿ, ಯಲ್ಲಾಪುರ.

ಪ್ರತಿಧ್ವನಿ ಯಲ್ಲಾಪುರ : ರಾಜ್ಯ ರಾಜಕಾರಣದಲ್ಲಿ ಹಿರಿಯ ಮುತ್ಸದ್ದಿ ಮತ್ತು ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರಾದವರು ಹಳಿಯಾಳ ಕ್ಷೇತ್ರದ ಶಾಸಕ ಆರ್.ವಿ‌ದೇಶಪಾಂಡೆಯವರು ಆದರು ಎಂದಿಗು ಪಜ್ಷದ ತತ್ವ ಮತ್ತು ಸಿದ್ದಾಂತಕ್ಕೆ ಎದುರಾಡಿದವರಲ್ಲ ಮಂತ್ರಿ ಸ್ಥಾನಕ್ಕಾಗಿ ಲಾಭಿ ಮಾಡಿದವರಲ್ಲ ವಿಶೇಷವಾಗಿ ಬ್ಲಾಕ್ ಮೇಲ್ ರಾಜಕಾರಣದಲ್ಲಿ ಬಂದವರಲ್ಲ. ಪಕ್ಷದ ಹೈ ಕಮಾಂಡ್ ನೀಡಿದ ಜವಾಬ್ದಾರಿಯನ್ನು ಅತ್ಯಂತ ಶಿಸ್ತಿನಿಂದ ನಿಭಾಯಿಸಬಲ್ಲ ಅಜಾತ ಶತೃ. ಆರ್‌.ವಿ.ಡಿ, ಸದ್ಯ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಸರ್ಕಾರದಲ್ಲಿ ಪುನಃ ಆಡಳಿತ ಸುಧಾರಣಾ …

Read More »

ಕಿರವತ್ತಿ ಯಲ್ಲಿ ಮೊಳಗಿದ ಹರ್ ಘರ್ ತಿರಂಗಾ ಸಂಕಲ್ಪ

ಪ್ರತಿಶ್ವನಿ ಯಲ್ಲಾಪುರ : ಹರ ಘರ ತಿರಂಗಾ ‌ಕರೆಯ‌ ಮೇರೆಗೆ ‌ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಜೊತೆಯಾಗಿ ಕಿರವತ್ತಿ ಯಿಂದ ಬೈಲಂದೂರ ತನಕ ಭಾರತ ಮಾತಾ ಕೀ ಜೈ ಘೋಷಣೆ ಯೊಂದಿಗೆ ಬೈಕ್ ರ್‍ಯಾಲಿ ನಡೆಯಿತು. ಬೈಲಂದೂರು ನಲ್ಲಿ ಛತ್ರಪತಿ ಶಿವಾಜಿ ಮಹರಾಜ ಪುತ್ಥಳಿಗೆ‌ ಗೌರವ ಸಲ್ಲಿಸಿ ನೆರೆದಿದ್ದ ಸಾರ್ವಜನಿಕರ ಜೊತೆಗೆ ಹರಘರ ತಿರಂಗಾ ಅಭಿಯಾನ ಯಶಸ್ಸಿಗೆ ಸಂಕಲ್ಪ ಮಾಡಲಾಯಿತು. ಈ‌ ಸಂಧರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಸುಬ್ರಾಯ …

Read More »

ಅನಾರೋಗ್ಯದಿಂದ ನಿಧನರಾದ ಯಲ್ಲಾಪುರ ಠಾಣೆ ಎ.ಎಸ್.ಐ ನೀಲಕಂಠಾಚಾರಿ – ಅಧಿಕಾರಿಗಳು ಸಾರ್ವಜನಿಕರ ಸಂತಾಪ.

ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ಠಾಣೆಯಲ್ಲಿ ಹಲವು ವರ್ಷಗಳಿಂದ ಎ‌ಎಸ್.ಐ ಆಗಿ ಸೇವೆ ಸಲ್ಲಿಸುತ್ತಾ ಸಾರ್ವಜನಿಕರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದ ನೀಲಕಂಠ ಆಚಾರಿ ಯವರು ತಮ್ಮ ಸ್ವ ಗೃಹದಲ್ಲಿ ನಿಧನರಾಗಿದ್ದು ಅಪಾರ ಬಂದು ಬಳಗ ಮತ್ತು ಹಿತೈಷಿಗಳು ಹಾಗು ಸಹೋದ್ಯೋಗಿಗಳನ್ನು ಅಗಲಿದ್ದಾರೆ.ನೀಲಕಂಠಾಚಾರಿ ಯವರು ಮೂಲತಃ ಕಾರವಾರದ ಆಮದಳ್ಳಿ ಯವರಾಗಿದ್ದು 55 ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಉಡುಪಿ ಆಸ್ಪತ್ರಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು, ಬುಧವಾರ ದಂದು ಇಹ ಲೋಕ …

Read More »

ಸಾಲಗಾರರ ಪರ ಆರ್.ಬಿ‌.ಐ ಬಿಗ್ ಬ್ಯಾಟಿಂಗ್ – ಸಾಲ ವಸೂಲಾತಿಗೆ ಹಲವು ನಿಯಮಗಳು.

ಪ್ರತಿಧ್ವನಿ ಯಲ್ಲಾಪುರ : ಸಾಲಗಾರರಿಗೆ ದೊಡ್ಡ ಮಟ್ಟದ ನೆಮ್ಮದಿ ನೀಡುವ ಹೊಸ ನಿಯಮಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)  ಜಾರಿಗೆ ತಂದಿದೆ. ಸಾಲದಾತರು ಮತ್ತು ಸಾಲ ವಸೂಲು ಏಜಂಟರಿಗಾಗಿ ಹೊರಡಿಸಲಾಗಿರುವ ಹೊಸ ನಿಯಮಗಳ ಪ್ರಕಾರ, ಸಾಲ ವಸೂಲಾತಿ ಏಜೆಂಟರು ಸಾಲಗಾರರ ವಿರುದ್ಧ ಬೈಗುಳದ ಭಾಷೆ ಬಳಸುವಂತಿಲ್ಲ, ಅತಿಯಾಗಿ ಫೋನ್ ಕರೆಗಳನ್ನು ಮಾಡುವಂತಿಲ್ಲ ಅಥವಾ ಹಿಂಸೆಗೆ ಇಳಿಯುವಂತಿಲ್ಲ. ಫೋನ್ ಕರೆಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸಾಲಗಾರರು ಎದುರಿಸುತ್ತಿರುವ ಕಿರುಕುಳಗಳ ಕುರಿತ …

Read More »

ಪ್ರಸ್ತಾಪಿತ ಮಂಗಳೂರು ಉಚ್ಚ ನ್ಯಾಯಾಲಯದ ಪೀಠಕ್ಕೆ ಉತ್ತರ ಕನ್ನಡ ನನ್ನ ವಿರೋಧವಿದೆ – ಸಂಸದ ಕಾಗೇರಿ.

ಪ್ರತಿಧ್ವನಿ ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯನ್ನು ಪ್ರಸ್ತಾಪಿತ ಮಂಗಳೂರು ಉಚ್ಚ ನ್ಯಾಯಾಲಯದ ಪೀಠಕ್ಕೆ ಸೇರಿಸುವ ಪ್ರಸ್ತಾವನೆಯನ್ನು ನಾನು ತೀವ್ರವಾಗಿ ವಿರೋಧಿಸುತ್ತೇನೆ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಕಳೆದ 18 ವರ್ಷಗಳಿಂದ ನಮ್ಮ ಜಿಲ್ಲೆಯು ಧಾರವಾಡ ಉಚ್ಚ ನ್ಯಾಯಾಲಯ ಪೀಠದ ವ್ಯಾಪ್ತಿಯಲ್ಲಿದ್ದು, ಮುಂದೆಯೂ ಧಾರವಾಡ ಪೀಠದಲ್ಲೇ ಮುಂದುವರಿಯಬೇಕು ಎಂಬುದು ಜಿಲ್ಲೆಯ ಸಮಸ್ತ ಸಾರ್ವಜನಿಕರ ಹಾಗೂ ವಕೀಲರ ನ್ಯಾಯಯುತ …

Read More »

ಮಂಗಳೂರು ಹೈಕೋರ್ಟ್ ಸಂಚಾರಿ ಪೀಠದ ವ್ಯಾಪ್ತಿಗೆ ಉತ್ತರ ಕನ್ನಡ – ಅಖಿಲ ಕರ್ನಾಟಕ ಅಹಿಂದ ವೇದಿಕೆ ವಿರೋಧ – ದ್ಯಾಮಣ್ಣ ಬೋವಿ ವಡ್ಡರ್

ಪ್ರತಿಧ್ವನಿ ಯಲ್ಲಾಪುರ : ಹೈಕೋರ್ಟ್ ಸಂಚಾರಿ ಪೀಠವನ್ನು ಮಂಗಳೂರಿನಲ್ಲಿ ಆರಂಭಿಸಲು ಸರಕಾರ ಮುಂದಾಗಿದ್ದು ಉತ್ತರ ಕನ್ನಡ ಜಿಲ್ಲೆಯನ್ನು ಅದರ ವ್ಯಾಪ್ತಿಗೆ ಸೇರಿಸಲು ಹೊರಟಿರುವುದಕ್ಕೆ ನಮ್ಮ ಸಂಘಟನೆ ಬಲವಾಗಿ ವಿರೋದಿಸುತ್ತದೆ ಈ ಸಂಬಂಧ ಯಾವುದೇ ಸಂಘಟನೆಗಳು ಹೋರಾಟಕ್ಕೆ ಮುಂದಾದರೆ ಅದಕ್ಕೆ ಅಖಿಲ ಕರ್ನಾಟಕ ಅಹಿಂದ ಸಂಘಟನೆ ಸಂಪೂರ್ಣ ಬೆಂಬಲ ನೀಡಿ ಹೋರಾಟದಲ್ಲಿ ಪಾಲ್ಗೊಳ್ಳಲಿದೆ ಎಂದು ಅಖಿಲ ಕರ್ನಾಟಕ ಅಹಿಂದ ವೇದಿಕೆ ಸ್ಥಾಪಕಾಧ್ಯಕ್ಷ ದ್ಯಾಮಣ್ಣ ಬೋವಿ ವಡ್ಡರ್ ಪ್ರತಿಧ್ವನಿಗೆ ಪ್ರತಿಕ್ರಿಯಿಸಿದ್ದಾರೆ. ವಿಶೇಷವಾಗಿ ಉತ್ತರ …

Read More »

ಯಲ್ಲಾಪುರದ ಶಕ್ತಿ ಗಣಪತಿ ಸಾನಿದ್ಯದಲ್ಲಿ ಆ,13 ರಂದು ನಾಡಿ ಪರೀಕ್ಷೆ – ಪಂಚಗವ್ಯ ಚಿಕಿತ್ಸೆ – ಗಣಪತಿ ಕೋಲಿಬೇಣ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಶಿರಸಿ ರಸ್ತೆಯಲ್ಲಿರುವ ಶ್ರೀ ಶಕ್ತಿ ಗಣಪತಿ ದೇವಸ್ಥಾನದ ಆವಾರದಲ್ಲಿ ಆಗಸ್ಟ್,13 ರ ಗುರುವಾರದಂದು “ಆರ್ಟ್ ಆಫ್ ಲಿವಿಂಗ್” ಯಲ್ಲಾಪುರ“ಗೋಸೇವಾ ಗತಿ ವಿಧಿ, ದಾಂಡೇಲಿ ಜಿಲ್ಲಾ, ಶಿರಸಿ ವಿಭಾಗ“ಶ್ರೀ ಗೋವರ್ಧನ (ರಿ) ಗೋಶಾಲೆ ಕರಡೊಳ್ಳಿ, ಯಲ್ಲಾಪುರ (ಉ.ಕ). ಇವರ ಸಂಯುಕ್ತ ಆಶ್ರಯದಲ್ಲಿ ನಾಡಿ ಪರೀಕ್ಷೆ – ಪಂಚಗವ್ಯ ಚಿಕಿತ್ಸಾ ಶಿಭಿರ ನಡೆಯಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಕರಡೊಳ್ಳಿ ಗೋವರ್ಧನ ಗೋ ಶಾಲೆ ಪ್ರಮುಖ …

Read More »

ಯಲ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಮ್ ಓರಿಯಂಟೇಶನ್ “ಯುವ ಪರ್ವ”ಕ್ಕೆ  ಚಾಲನೆ

ಪ್ರತಿಧ್ವನಿ ಯಲ್ಲಾಪುರ: ಯಲ್ಲಾಪುರದ “ಸರ್ಕಾರಿ ಪ್ರಥಮ ದರ್ಜೆ ಕಾಲೇಜು  ಕೇವಲ ಪಠ್ಯ ಬೋಧನೆಗೆ ಸೀಮಿತವಾಗಿರದೆ, ವಿದ್ಯಾರ್ಥಿಗಳ ಸವಾಂಗೀಣ ವಿಕಸನಕ್ಕೆ ನಿರಂತರವಾಗಿ ಶ್ರಮಿಸುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದಲ್ಲ ಒಂದು ವಿಶಿಷ್ಟ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಲು ಕಾಲೇಜಿನಲ್ಲಿ ಕ್ರೀಡೆ, ಸಾಂಸ್ಕೃತಿಕ ವೇದಿಕೆ, ಎನ್.ಎಸ್.ಎಸ್., ಹಾಗೂ ಯೂತ್ ರೆಡ್ ಕ್ರಾಸ್‌ನಂತಹ ಹಲವು ತರಬೇತಿ ವೇದಿಕೆಗಳು ಲಭ್ಯವಿವೆ” ಎಂದು ಕಾಲೇಜಿನ ಕ್ರಿಯಾಶೀಲ ಪ್ರಾಂಶುಪಾಲ ಡಾ,ಆರ್.ಡಿ.ಜನಾರ್ಧನ್ ಹೇಳಿದರು. ಅವರು ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ …

Read More »

ಮಂಗಳೂರು ಹೈಕೋರ್ಟ್ ಸಂಚಾರಿ ಪೀಠಕ್ಕೆ ಉತ್ತರ ಕನ್ನಡ ಜಿಲ್ಲೆ ಸೇರ್ಪಡೆ ಶಾಸಕ  ಹೆಬ್ಬಾರ್ ವಿರೋಧ – ಹೋರಾಟಕ್ಕೆ ಬೆಂಬಲ ಘೋಷಣೆ.

ಪ್ರತಿಧ್ವನಿ ಯಲ್ಲಾಪುರ: ಮಂಗಳೂರಿನಲ್ಲಿ ಪ್ರಸ್ತಾಪಿಸಲಾಗಿರುವ ಹೈಕೋರ್ಟ್ ಸಂಚಾರಿ ಪೀಠಕ್ಕೆ ಉತ್ತರ ಕನ್ನಡ ಜಿಲ್ಲೆಯನ್ನು ಸೇರ್ಪಡೆ ಮಾಡುವ ಪ್ರಸ್ತಾವನೆಗೆ ಶಾಸಕ ಶಿವರಾಮ ಹೆಬ್ಬಾರ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಸಂಬಂಧ ಉತ್ತರ ಕನ್ನಡ ಜಿಲ್ಲಾ ಬಾರ್ ಅಸೋಸಿಯೇಷನ್ ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಈ ಕುರಿತು ವಿಡಿಯೋ ಸಂದೇಶದ ಮೂಲಕ ಪ್ರತಿಕ್ರಿಯಿಸಿರುವ ಶಾಸಕ ಶಿವರಾಮ ಹೆಬ್ಬಾರ್ ಅವರು, ಉತ್ತರ ಕನ್ನಡ ಜಿಲ್ಲೆಯನ್ನು ಮಂಗಳೂರು …

Read More »