Breaking News

ಸಾಲಗಾರರ ಪರ ಆರ್.ಬಿ‌.ಐ ಬಿಗ್ ಬ್ಯಾಟಿಂಗ್ – ಸಾಲ ವಸೂಲಾತಿಗೆ ಹಲವು ನಿಯಮಗಳು.

ಪ್ರತಿಧ್ವನಿ ಯಲ್ಲಾಪುರ : ಸಾಲಗಾರರಿಗೆ ದೊಡ್ಡ ಮಟ್ಟದ ನೆಮ್ಮದಿ ನೀಡುವ ಹೊಸ ನಿಯಮಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)  ಜಾರಿಗೆ ತಂದಿದೆ.

ಸಾಲದಾತರು ಮತ್ತು ಸಾಲ ವಸೂಲು ಏಜಂಟರಿಗಾಗಿ ಹೊರಡಿಸಲಾಗಿರುವ ಹೊಸ ನಿಯಮಗಳ ಪ್ರಕಾರ, ಸಾಲ ವಸೂಲಾತಿ ಏಜೆಂಟರು ಸಾಲಗಾರರ ವಿರುದ್ಧ ಬೈಗುಳದ ಭಾಷೆ ಬಳಸುವಂತಿಲ್ಲ, ಅತಿಯಾಗಿ ಫೋನ್ ಕರೆಗಳನ್ನು ಮಾಡುವಂತಿಲ್ಲ ಅಥವಾ ಹಿಂಸೆಗೆ ಇಳಿಯುವಂತಿಲ್ಲ.

ಫೋನ್ ಕರೆಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸಾಲಗಾರರು ಎದುರಿಸುತ್ತಿರುವ ಕಿರುಕುಳಗಳ ಕುರಿತ ದೂರುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿಯಮಗಳು ಜಾರಿಗೆ ಬಂದಿವೆ.

ಸೂಕ್ತವಲ್ಲದ ಸಮಯದಲ್ಲಿ ಫೋನ್ ಕರೆ ಮಾಡುವುದು ಅಥವಾ ದೈಹಿಕ ಬಲವನ್ನು ಬಳಸುವುದನ್ನು ಆರ್‌ಬಿಐ ಈಗಾಗಲೇ ನಿಷೇಧಿಸಿದೆ. ಹೊಸ ನಿಯಮಾವಳಿಗಳು, ಯಾವ ಕೃತ್ಯಗಳು ’ಕಠಿಣ’ ಎನಿಸಿಕೊಳ್ಳುತ್ತವೆ ಹಾಗೂ ಅವುಗಳನ್ನು ಮಾಡಬಾರದು ಎಂಬ ವ್ಯಾಪ್ತಿಯನ್ನು ವಿಸ್ತರಿಸಿವೆ.

ಬ್ಯಾಂಕ್ ಉದ್ಯೋಗಿಗಳು ಮತ್ತು ವಸೂಲಾತಿ ಏಜಂಟರು ಬೆದರಿಕೆ ಅಥವಾ ನಿಂದನೀಯ ಭಾಷೆ ಬಳಸುವುದು, ಸಾಮಾಜಿಕ ಮಾಧ್ಯಮಗಳಲ್ಲಿ ಸಾಲಗಾರರ ವೈಯಕ್ತಿಕ ವಿವರಗಳನ್ನು ಹರಡುವುದು, ಅನುಚಿತ ಸಂದೇಶಗಳನ್ನು ಕಳುಹಿಸುವುದು ಅಥವಾ ಅತಿಯಾಗಿ ಕರೆ ಮಾಡುವುದನ್ನು ಕೇಂದ್ರೀಯ ಬ್ಯಾಂಕ್ ಈಗ ನಿರ್ಬಂಧಿಸಿದೆ.

ಏಜಂಟರು ಸಾಲಗಾರರನ್ನು ಅಥವಾ ಅವರನ್ನು ಪರಿಚಯಿಸಿದವರನ್ನು, ಅವರ ಸಂಬಂಧಿಕರು, ಸ್ನೇಹಿತರು ಅಥವಾ ಸಹೋದ್ಯೋಗಿಗಳನ್ನು ಬೆದರಿಸುವಂತಿಲ್ಲ ಅಥವಾ ಸಾರ್ವಜನಿಕವಾಗಿ ಅವಮಾನಿಸುವಂತಿಲ್ಲ ಎಂದು ನೂತನ ನಿಯಮಗಳು ಹೇಳುತ್ತವೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಬಸ್ ಅಪಘಾತದಲ್ಲಿ ಗಾಯಗೊಂಡವರಿಗೆ ಸಾಂತ್ವನ ಹೇಳಿದ ಶಾಸಕ ಹೆಬ್ಬಾರ್ ಮತ್ತು ಪುತ್ರ ವಿವೇಕ್ ಹೆಬ್ಬಾರ್.

ಪ್ರತಿಧ್ವನಿ ಯಲ್ಲಾಪುರ : ಮುಂಡಗೋಡ ತಾಲ್ಲೂಕಿನ ಶಿಡ್ಲಗುಂಡಿ ಗ್ರಾಮದಲ್ಲಿ ಬುಧವಾರ ಎರಡು ಸಾರಿಗೆ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ, ಬಸ್ ಚಾಲಕ …

Leave a Reply

Your email address will not be published. Required fields are marked *