
ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ಠಾಣೆಯಲ್ಲಿ ಹಲವು ವರ್ಷಗಳಿಂದ ಎಎಸ್.ಐ ಆಗಿ ಸೇವೆ ಸಲ್ಲಿಸುತ್ತಾ ಸಾರ್ವಜನಿಕರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದ ನೀಲಕಂಠ ಆಚಾರಿ ಯವರು ತಮ್ಮ ಸ್ವ ಗೃಹದಲ್ಲಿ ನಿಧನರಾಗಿದ್ದು ಅಪಾರ ಬಂದು ಬಳಗ ಮತ್ತು ಹಿತೈಷಿಗಳು ಹಾಗು ಸಹೋದ್ಯೋಗಿಗಳನ್ನು ಅಗಲಿದ್ದಾರೆ.
ನೀಲಕಂಠಾಚಾರಿ ಯವರು ಮೂಲತಃ ಕಾರವಾರದ ಆಮದಳ್ಳಿ ಯವರಾಗಿದ್ದು 55 ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಉಡುಪಿ ಆಸ್ಪತ್ರಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು, ಬುಧವಾರ ದಂದು ಇಹ ಲೋಕ ತ್ಯಜಿಸಿದ್ದು ಪತ್ನಿ,ಇಬ್ಬರು ಪುತ್ರರನ್ನು ಹಾಗು ಅಪಾರ ಬಂಧು ಬಳಗ ಹಿತೈಷಿಗಳನ್ನು ಅಗಲಿದ್ದಾರೆ ಅಂತ್ಯಕ್ರಿಯೆ ಕಾರವಾರದ ಆಮದಳ್ಳಿಯಲ್ಲೆ ಜರುಗಲಿದ್ದು, ಯಲ್ಲಾಪುರ ಠಾಣೆಯ ಹಿರಿಯ ಅಧಿಕಾರಿಗಳು ಸಿಬ್ಬಂದಿಗಳು ಹಾಗು ಯಲ್ಲಾಪುರದ ಅನೇಕ ನಾಗರಿಕರು ಮೃತರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Prathidvani Yellapura