Breaking News

ಯಲ್ಲಾಪುರದ ಶಕ್ತಿ ಗಣಪತಿ ಸಾನಿದ್ಯದಲ್ಲಿ ಆ,13 ರಂದು ನಾಡಿ ಪರೀಕ್ಷೆ – ಪಂಚಗವ್ಯ ಚಿಕಿತ್ಸೆ – ಗಣಪತಿ ಕೋಲಿಬೇಣ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಶಿರಸಿ ರಸ್ತೆಯಲ್ಲಿರುವ ಶ್ರೀ ಶಕ್ತಿ ಗಣಪತಿ ದೇವಸ್ಥಾನದ ಆವಾರದಲ್ಲಿ ಆಗಸ್ಟ್,13 ರ ಗುರುವಾರದಂದು “ಆರ್ಟ್ ಆಫ್ ಲಿವಿಂಗ್” ಯಲ್ಲಾಪುರ
ಗೋಸೇವಾ ಗತಿ ವಿಧಿ, ದಾಂಡೇಲಿ ಜಿಲ್ಲಾ, ಶಿರಸಿ ವಿಭಾಗ
ಶ್ರೀ ಗೋವರ್ಧನ (ರಿ) ಗೋಶಾಲೆ ಕರಡೊಳ್ಳಿ, ಯಲ್ಲಾಪುರ (ಉ.ಕ). ಇವರ ಸಂಯುಕ್ತ ಆಶ್ರಯದಲ್ಲಿ ನಾಡಿ ಪರೀಕ್ಷೆ – ಪಂಚಗವ್ಯ ಚಿಕಿತ್ಸಾ ಶಿಭಿರ ನಡೆಯಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಕರಡೊಳ್ಳಿ ಗೋವರ್ಧನ ಗೋ ಶಾಲೆ ಪ್ರಮುಖ ಗಣಪತಿ ಕೋಲಿಬೇಣ ಮಾದ್ಯಮದ ಮೂಲಕ ಮನವಿ ಮಾಡಿದ್ದಾರೆ.

ದಿನಾಂಕ 13 ರ ಗುರುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಶಿಭಿರ ಶ್ರೀ ಶಕ್ತಿ ಗಣಪತಿ ದೇವಸ್ಥಾನ ಆವರಣದಲ್ಲಿ ನಡೆಯಲಿದೆ. ಖ್ಯಾತ ವೈದ್ಯರಾದ ಡಾ|| ಪದ್ಮಾವತಿ ಕುಲಕರ್ಣಿ ಅವರು ಉಪಸ್ಥಿತರಿದ್ದು ಪರೀಕ್ಷಿಸಲಿದ್ದಾರೆ,  ಆಲಸ್ಯ, ಅಧಿಕ ರಕ್ತದೊತ್ತಡ BP, ಮಧುಮೇಹ (ಶುಗರ್), ಅರ್ಧ ಮತ್ತು ಪೂರ್ತಿ ತಲೆ ನೋವು, ಜ್ವರ,ಕಫ, ಶೀತ, ಅಸ್ತಮಾ, ಕೆಮ್ಮು, ಮೂಲವ್ಯಾಧಿ, ಬೇಧಿ, ಸಂಧಿವಾತ, ಅಲ್ಸರ್, ಪಿತ್ತ,  ಕ್ಯಾನ್ಸರ್, ಸೋರಿಯಾಸಿಸ್, ನರಗಳ ಸಮಸ್ಯೆ, ಸ್ತ್ರೀ ಸಂಬಂಧಿ ರೋಗಗಳು, ಮಾನಸಿಕ ಖಿನ್ನತೆ, ನೆನಪಿನ ಶಕ್ತಿ ಕಡಿಮೆ ಆಗುವುದು, ಬಂಜೆತನ, ತೂಕ ಹೆಚ್ಚಾಗುವುದು, ಥೈರಾಯ್ಡ್, ಮುಟ್ಟು ನಿಲ್ಲುವ ಸಮಸ್ಯೆ ಇನ್ನೂ ಅನೇಕ ರೋಗಗಳನ್ನು “ಪಂಚಗವ್ಯ ಔಷಧಿ”ಗಳಲ್ಲಿ ಪರಿಹರಿಸಿಕೊಳ್ಳಬಹುದಾಗಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.

  

ವಿಶೇಷ ಮಾಹಿತಿ : ತಪಾಸಣೆ ಉಚಿತವಾಗಿದ್ದು, ಔಷಧಿಗಾಗಿ ಗೋಸೇವಾ ನಿಧಿ ಸಂಗ್ರಹಿಸಲಾಗುತ್ತದೆ. ▶ತಪಾಸಣೆಗಾಗಿ ಹಸಿದ ಹೊಟ್ಟೆಯಲ್ಲಿ ಅಥವಾ ತಿಂಡಿ ತಿಂದು 2 ಘಂಟೆ ಕಳೆದಿರಬೇಕು. ▶ ತಪಾಸಣೆಗಾಗಿ ತಮ್ಮ ಹೆಸರನ್ನು 12 – 08 – 26 ರ ಒಳಗೆ ನೋಂದಾಯಿಸಬೇಕು. ನೋಂದಣಿಗಾಗಿ ಸಂಪರ್ಕಿಸಿ :-  8762520989, 7022889743. “ಪಂಚಗವ್ಯ ಆಧಾರಿತ – ರೋಗ ಮುಕ್ತ ಭಾರತ

ಸಹಾಯ – ಸಹಕಾರ
“ಅಖಿಲ ಕರ್ನಾಟಕ ಗವ್ಯೋತ್ಪನ್ನ & ಮಾರಾಟ ಸಂಘ”
“ಓಂಕಾರ ಯೋಗ ಕೇಂದ್ರ”

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಬಸ್ ಅಪಘಾತದಲ್ಲಿ ಗಾಯಗೊಂಡವರಿಗೆ ಸಾಂತ್ವನ ಹೇಳಿದ ಶಾಸಕ ಹೆಬ್ಬಾರ್ ಮತ್ತು ಪುತ್ರ ವಿವೇಕ್ ಹೆಬ್ಬಾರ್.

ಪ್ರತಿಧ್ವನಿ ಯಲ್ಲಾಪುರ : ಮುಂಡಗೋಡ ತಾಲ್ಲೂಕಿನ ಶಿಡ್ಲಗುಂಡಿ ಗ್ರಾಮದಲ್ಲಿ ಬುಧವಾರ ಎರಡು ಸಾರಿಗೆ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ, ಬಸ್ ಚಾಲಕ …

Leave a Reply

Your email address will not be published. Required fields are marked *