Breaking News

Yearly Archives: 2026

ಹುಟಕಮನೆ ಗುಡ್ಡ ನೆಲಸಮ ಪ್ರಕರಣದ ಹೋರಾಟಗಾರ ಮಂಜುನಾಥ ಹೆಗಡೆ ವಿರುದ್ದ ಷಡ್ಯಂತರ-ಜೀವ ರಕ್ಷಣೆಗೆ ಮೊರೆ.

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಹುಟಕಮನೆ ನೈಸರ್ಗಿಕ ಗುಡ್ಡ ನೆಲಸಮ,ಅರಣ್ಯ ನಾಶದ ಗಂಭೀರ ಪ್ರಕರಣದ ವಿಷಯದಲ್ಲಿ ಧ್ವನಿ ಎತ್ತಿ ಹೋರಾಟಕ್ಕಿಳಿದು ಹಿಡಿದ ಪಟ್ಟು ಬಿಡದೆ ಬೆಂಗಳೂರಿನ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಕ್ಕೆ ಮೊರೆ ಹೋಗಿದ್ದು ಪ್ರಕರಣ ನ್ಯಾಯಾಲಯದಲ್ಲಿ ಇರುಂತೆಯೆ ಅದೇ ಸ್ಥಳವನ್ನು ಮಾರಾಟ ಮಾಡುವ ಹುನ್ನಾರ ನಡೆದಿದ್ದು ಇದರ ವಿರುದ್ದ ಮತ್ತೆ ಹೊರಾಟಕ್ಕಿಳಿದ ಸಾಮಾಜಿಕ ಕಾರ್ಯಕರ್ತ ಮಂಜುನಾಥ ಹೆಗಡೆ ಮೇಲೆ ರಿಯಲ್ ಎಸ್ಟೇಟ್ ಉದ್ಯಮಿ ಹಾಗು ಆತನ ಪತ್ನಿ …

Read More »

ಇಲ್ಲಿ ಅಪಘಾತವಾದರೆ ಯಾರಮೇಲೆ ಕಾನೂನು ಕ್ರಮ ಸಾರ್ವಜನಿಕರ ಗಂಭೀರ ಪ್ರಶ್ನೆ.???

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿ ಹಾದು ಹೋಗಿರುವ ಬಳ್ಳಾರಿ -ಕಾರವಾರ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅಪಾಯಕಾರಿಯಾಗಿ ದಡೂತಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿದ್ದು ಸಣ್ಣಪುಟ್ಟ ವಾಹನಗಳು ದ್ವಿಚಕ್ರ ವಾಹನಗಳು ಹಾಗು ಪಾದಚಾರಿಗಳಿಗೆ ಈ ಸ್ಥಳ ಯಮಪುರಿಗೆ ಕರೆದೊಯ್ಯಬಲ್ಲ ಸ್ಥಳಗಳಾಗಿ ಮಾರ್ಪಟ್ಟಿರುವುದು ದುರಂತವಾಗಿದೆ. ಈ ಹಿಂದೆ ಪ್ರತಿಧ್ವನಿ ವೆಬ್ ನ್ಯೂಸ್ ಎಚ್ಚರಿಸಿ ಸುದ್ದಿ ಪ್ರಕಟಿಸಿತ್ತು ಆದರು ಗಂಭೀರವಾಗಿ ಪರಿಗಣುಸದ ಸಂಬಂಧಿಸಿದ ಇಲಾಖೆಗಳು ಪ್ರಾಣ ಬಲಿಗಾಗಿ ಕಾಯುತ್ತಿರುವರೇನೊ ಎಂಬ ಅನುಮಾನ ಕಾಡುತ್ತಿದೆ. ಎಲ್ಲಿಯಾದರು ಅಪಘಾತವಾದಾಗ …

Read More »

ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಪ್ರಬಂಧ ಸ್ಪರ್ಧೆ ನಡೆಸಿದ ಯಲ್ಲಾಪುರ ಪೊಲೀಸರು.

ಪ್ರತಿಧ್ವನಿ ಯಲ್ಲಾಪುರ : ಅಂತಾರಾಷ್ಟ್ರೀಯ ಮಾದಕ ಪದಾರ್ಥಗಳ ಬಳಕೆ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆಯ ಪ್ರಯುಕ್ತ ಯಲ್ಲಾಪುರ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಯಲ್ಲಾಪುರ ಪೊಲೀಸ್ ವತಿಯಿಂದ ” ಅಂತರಾಷ್ಟ್ರೀಯ ಮಾದಕ ದ್ರವ್ಯ ಗಳ ಸೇವನೆ ಹಾಗೂ ಸಾಗಾಣಿಕೆ ನಿಷೇದ ಮತ್ತು ಬಳಿಕೆಯಿಂದ ಆಗುವ ದುಷ್ಪರಿಣಾಮ ” ದ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಪಾಲ್ಗೊಂಡ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಅಶ್ವಿನಿ ಗಾಂವ್ಕರ್ ಪ್ರಥಮ, …

Read More »

ಬೋರ್ ಕೊರೆಸಿ ಕರಡೊಳ್ಳಿ ಗ್ರಾಮಸ್ತರ ದಾಹ ನೀಗಿಸಿದ ಬಾಲಕೃಷ್ಣ ನಾಯಕ್.ಬರೋಬ್ಬರಿ 3.5 ಇಂಚು ನೀರು.

ಪ್ರತಿಧ್ವನಿ ಯಲ್ಲಾಪುರ : ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಸಂಭಾವ್ಯ ಬಿಜೆಪಿ ಅಭ್ಯರ್ಥಿ ಎಂದೇ ಬಿಂಬಿತವಾಗುತ್ತಿರುವ ಸಾಮಾಜಿಕ ಕಾರ್ಯಕರ್ತ ಕೊಡುಗೈ ದಾನಿ ಯುವ ನಾಯಕ ಬಾಲಕೃಷ್ಣ ನಾಯಕ್ ಅವರು ಕರಡೊಳ್ಳಿಯಲ್ಲಿ ಕೊಳವೆಬಾವಿ ಕೊರೆಸಿ ಗ್ರಾಮಸ್ಥರ ದಶಕಗಳ ದಾಹ ನೀಗಿಸಿದ್ದು ಗ್ರಾಮಸ್ಥರು ಧನ್ಯತೆ ಸಮರ್ಪಿಸಿದ್ದಾರೆ. ಬಾಲಕೃಷ್ಣ ನಾಯಕ್ ಸದ್ಯ ಯಲ್ಲಾಪುರ – ಮುಂಡಗೋಡು ವಿಧಾನಸಭಾ ಕ್ಷೇತ್ರದಾದ್ಯಂತ ಪ್ರಚಲಿತದಲ್ಲಿರುವ ಹೆಸರಾಗಿದೆ. ವಿಶೇಷವಾಗಿ ಹಳ್ಳಿಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಕಡೆಗೆ ಹೆಚ್ಚಿನ …

Read More »

ತುರ್ತು ಪರಿಸ್ಥಿತಿಯ ಕಾಂಗ್ರೆಸ್ ಗ್ಯಾರಂಟಿ ದಿನಕ್ಕೆ ಇಂದು ಐವತ್ತೊಂದರ ಸಂಭ್ರಮ – ರಾಮು ನಾಯ್ಕ್.

ಪ್ರತಿಧ್ವನಿ ಯಲ್ಲಾಪುರ : ಕಾಂಗ್ರೆಸ್ಸಿಗರ ಗ್ಯಾರಂಟಿ ಭಾಗ್ಯ ಯೋಜನೆಗಳು ಈಗಷ್ಟೇ ಅಲ್ಲ, 50 ವರ್ಷಗಳ ಹಿಂದೆ, ಶ್ರೀಮತಿ ಇಂದಿರಾ ಗಾಂಧಿಯವರ ಕಾಲದಲ್ಲಿಯೇ ಇವು ಜಾರಿಯಲ್ಲಿದ್ದವು.1975 ಜೂನ 26, ಪ್ರಧಾನಿ ಇಂದಿರಾ ಗಾಂಧಿಯವರು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ, ಅದನ್ನು ಪ್ರತಿಭಟಿಸುವವರ ಸಲುವಾಗಿಯೇ ಮೊಟ್ಟ ಮೊದಲ ಬಾರಿ, ಉಚಿತ ಜೈಲು ಗ್ಯಾರಂಟಿ ಯೋಜನೆಯನ್ನೂ ಜಾರಿಗೆ ತಂದಿದ್ದರು. ಅಂದು ದೇಶದಲ್ಲಿ ಪ್ರಜಾಪ್ರಭುತ್ವ ಗಂಡಾಂತರದಲ್ಲಿತ್ತು. ಸಂವಿಧಾನ ಹತ್ತಿಕ್ಕಲಾಗಿತ್ತು. ಸಂಘದ ಮೇಲೆ ನಿಷೇಧವಿತ್ತು. ವಾಕ್ …

Read More »

ಹುಟಕಮನೆ ಗುಡ್ಡ ನೆಲಸಮ ಪ್ರಕರಣ ನ್ಯಾಯಾಲಯಲ್ಲಿರುವಂತೆಯೆ ಮಾರಾಟಕ್ಕೆ ತೆರೆಮರೆಯ ಯತ್ನ.!!

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಲ್ಲಿ ಸದ್ದುಮಾಡಿ ಬೆಂಗಳೂರಿನ ಭೂ ವ್ಯಾಜ್ಯಗಳ ವಿಶೇಷ ನ್ಯಾಯಾಲಯದ ಮೆಟ್ಟಿಲೇರಿದ ಹುಟಕಮನೆ ಗುಡ್ಡ ನೆಲಸಮ ಅರಣ್ಯನಾಶ ಪ್ರಕರಣಕ್ಕೆ ಸಂಬಂಧಿಸಿದ ಭೂಮಿ ಸಮತಟ್ಟಾಗಿಸಿ ನ್ಯಾಯಾಲಯಕ್ಕು ಗೊತ್ತಾಗದಂತೆ ತೆರೆಮರೆಯಲ್ಲೆ ಮಾರಾಟಕ್ಕೆ ವೇದಿಕೆ ಸಿದ್ದಗೊಂಡು ಭೂಮಿ ಮಾರಾಟಕ್ಕಿದೆ ಎಂಬ ಜಾಹಿರಾತು ಸಾಮಾಜಿಕ ಜಾಲತಾಣದಲ್ಲಿ ಖುಲ್ಲಂಖುಲ್ಲಾ ಹರಿದಾಡುತ್ತಿದೆ. ಯಲ್ಲಾಪುರ ತಾಲೂಕು ಕೇಂದ್ರದಿಂದ ಸರಿ ಸುಮಾರು 7 ಕಿಲೋಮೀಟರ್ ಅಂತರದಲ್ಲಿರುವ ಹುಟಕಮನೆ ಗ್ರಾಮದಲ್ಲ್ಲಿ ನೈಸರ್ಗಿಕವಾಗಿ ಬೆಳೆದುನಿಂತ ಬೃಹತ್ ಬೆಟ್ಟ ನೆಲಸಮಮಾಡಿ ಸಹಸ್ರಾರು ಲೋಡ್ …

Read More »

ಕರ್ನಾಟಕ ಬ್ಯಾಂಕ್ ಯಲ್ಲಾಪುರ ಶಾಖೆಗೆ 15 ವರ್ಷ ಶುಭಕೋರಿದ ಶಾಸಕ ಹೆಬ್ಬಾರ್.

ಪ್ರತಿಧ್ವನಿ ಯಲ್ಲಾಪುರ : ಕೇಂದ್ರ ಸರ್ಕಾರ ಮತ್ತು ಆರ್.ಬಿ.ಐ ಬ್ಯಾಂಕುಗಳ ನಿಯಂತ್ರಣಕ್ಕಾಗಿ ಹಲವಾರು ಬದಲಾವಣೆಗಳನ್ನು ತಂದಿದೆ. ಆದರೆ ಸೌಹಾರ್ದ ಸಹಕಾರಕ್ಕೆ ಯಾವ ನಿಬಂಧನೆಯೂ ಇಲ್ಲ. ನಾಡಿನಾದ್ಯಂತ ಹಲವು ಸೌಹಾರ್ದ ಸಂಘಗಳು ಠೇವುದಾರರಿಗೆ ಬಾರೀ ಮೋಸ ಮಾಡಿವೆ. ಇದು ಸರಿಯಾದ ಕ್ರಮ ಅಲ್ಲ. ಯಾವುದೇ ಕಾರಣಕ್ಕೂ ಯಾವುದೇ ಬ್ಯಾಂಕ್ ವ್ಯವಹಾರ ನಡೆಸುವವರಿಂದ ಠೇವುದಾರರಿಗೆ ಮೋಸ ಆಗದಂತೆ ಆರ್.ಬಿ.ಐ ನೋಡಿಕೊಳ್ಳಬೇಕು ಎಂದು ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ಅಧ್ಯಕ್ಷರೂ, ಶಾಸಕ ಶಿವರಾಮ ಹೆಬ್ಬಾರ ಹೇಳಿದರು. …

Read More »

ಶಾಸಕ ಶಿವರಾಮ ಹೆಬ್ಬಾರ್ ಆಪ್ತ ಕಾರ್ಯದರ್ಶಿ ಕಮಲಾಕರ ನಾಯ್ಕ ಅವರಿಗೆ ಪಿತೃವಿಯೋಗ.

ಪ್ರತಿಧ್ವನಿ ಯಲ್ಲಾಪುರ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಅವರ ಆಪ್ತ ಕಾರ್ಯದರ್ಶಿ ಕಮಲಾಕರ ನಾಯ್ಕ ಅವರ ತಂದೆ ನಿಧನರಾಗಿದ್ದು ಪಿತೃ ವಿಯೋಗ ಹೊಂದಿದ್ದಾರೆ.ಮೂಲತಃ ಹೊನ್ನಾವರ ತಾಲ್ಲೂಕಿನ ಜಲವಳಕರ್ಕಿಯ ಸಜ್ಜನ ಈಶ್ವರ ತಿಮ್ಮಪ್ಪ ನಾಯ್ಕ (77) ಅವರು ಯಲ್ಲಾಪುರದಲ್ಲಿ ವಯೋಸಹಜ ಕಾರಣದಿಂದ‌ ನಿಧನರಾದರು.ಮೃತರು ಪತ್ನಿ ಪಾರ್ವತಿ ನಾಯ್ಕ, ಪುತ್ರ ಕಮಲಾಕರ ಸೇರಿದಂತೆ ಬಂಧು ಬಳಗ ಅಗಲಿದ್ದಾರೆ. ಈಶ್ವರ ನಾಯ್ಕ ಅವರ ಅಗಲಿಕೆಗೆ ಶಾಸಕರಾದ ಶಿವರಾಮ ಹೆಬ್ಬಾರ ಹಾಗೂ ಅವರ …

Read More »

ಗ್ಯಾರಂಟಿ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ರಾಜ್ಯವನ್ನೆ ದಿವಾಳಿಯಾಗಿಸಿದೆ – ಪ್ರಸಾದ್ ಹೆಗಡೆ.

ಪ್ರತಿಧ್ವನಿ ಯಲ್ಲಾಪುರ :  ಗ್ಯಾರಂಟಿ ಹೆಸರನಲ್ಲಿ ಅಧಿಕಾರಕ್ಕೆ ಬಂದ‌ ಕಾಂಗ್ರೆಸ್ ‌ಸರಕಾರ ಯಲ್ಲಾಪುರ ‌ದಲ್ಲಿ ಕನ್ನಡ ಶಾಲೆಯಲ್ಲಿ ಬಿಸಿಊಟಕ್ಕೆ ಆಹಾರಧಾನ್ಯದ ಕೊರತೆಯಾಗಿದ್ದು ಶಾಲಾ ಮಕ್ಕಳ,ಶಿಕ್ಷಕರ ಪರಿಸ್ಥಿತಿ ನೋಡಿ ಅತ್ಯಂತ ದುಃಖವೆನೆಸಿದೆ. ಈ‌ ಆಡಳಿತ ವ್ಯವಸ್ಥೆ ಜನಪರವೇ? ಈ ಆಡಳಿತ ವ್ಯವಸ್ಥೆ ಮಾನವೀಯತೆ ಯಿಂದ ಕೂಡಿದೆಯೇ? ಸರಕಾರದ ಅವ್ಯವಸ್ಥೆ ಗೆ ಇದೊಂದು ಕೈಗನ್ನಡಿ. ಈ ಆಡಳಿತ ವ್ಯವಸ್ಥೆ ಗೆ ಏನನ್ನು ಹೇಳಬೇಕು ಶಾಲಾಮಕ್ಕಳಿಗೆ ಯಲ್ಲಾಪುರ ದಲ್ಲಿ ಅಕ್ಕಿಯ ಆಹಾರ ಧಾನ್ಯ ದ …

Read More »

ಕೆ.ಎಸ್.ಈಶ್ವರಪ್ಪನವರದ್ದು ಮಾನಸಿಕ ಸ್ಥಿಮಿತ ಕಳೆದುಕೊಂಡ ಹೇಳಿಕೆಯಾಗಿದೆ – ಹೆಬ್ಬಾರ್.

ಪ್ರತಿಧ್ವನಿ ಯಲ್ಲಾಪುರ: ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ, ವಿವಾದಾತ್ಮಕ ಹಾಗೂ ಬೇಜವಾಬ್ದಾರಿ ಹೇಳಿಕೆಗಳಿಂದಲೇ ಗುರುತಿಸಿಕೊಂಡಿರುವ ಕೆ.ಎಸ್. ಈಶ್ವರಪ್ಪ ಅವರು ಸಂಪೂರ್ಣ ರಾಜಕೀಯ ದಿವಾಳಿತನಕ್ಕೆ ತಲುಪಿರುವುದು ಅವರ ಇತ್ತೀಚಿನ ಹೇಳಿಕೆಗಳಿಂದ ಸ್ಪಷ್ಟವಾಗುತ್ತಿದೆ ಹಾಯ ಅವರು ತಮ್ಮ ಮಾನಸಿಕ ಸಿಮೀತವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ ಅವರನ್ನು ಕೂಡಲೇ ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು ಎಂದು ಶಾಸಕ ಶಿವರಾಮ್ ಹೆಬ್ಬಾರ್ ಅವರು ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು 17 ಕಾಂಗ್ರೆಸ್ ಶಾಸಕರನ್ನು …

Read More »