
ಪ್ರತಿಧ್ವನಿ ಯಲ್ಲಾಪುರ: ಪಕ್ಷ, ಪಂಗಡ ಎಲ್ಲದಕ್ಕೂ ಮೀರಿದ್ದು ನಮ್ಮ ಭಾರತ, ದೇಶ ಎಂಬ ವಿಷಯ ಬಂದಾಗ ಉಳಿದವೆಲ್ಲಾ ನಗಣ್ಯ ದೇಶವೆ ಮೊದಲು. ಜಗತ್ತಿನೆದುರು ಭಾರತ ಪ್ರಜ್ವಲಿಸಿ ಅಭಿವೃದ್ಧಿ ಪಥದತ್ತ ಸಾಗಬೇಕಿದೆ ಅದಕ್ಕೆ ಸಂಘಟಿತ ಮನೋಭಾವ ಅತಿ ಮುಖ್ಯ, ದೇಶದ ಸಂವಿದಾನದ ಅಡಿಯಲ್ಲಿ ನಾವೆಲ್ಲಾ ಒಗ್ಗಟ್ಟಾಗಿ ಮುಂದೆ ಸಾಗೋಣ ಭವ್ಯ ಭಾರತ ನಿರ್ಮಾಣ ಮಾಡೋಣ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ಅವರು 80 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಆಯೋಜಿಸಿದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ ಮಿರಾಶಿ, ತಾಲೂಕಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಲ್ಲಾಸ ಶಾನಭಾಗ, ಪ.ಪಂ ಮಾಜಿ ಉಪಾಧ್ಯಕ್ಷ ಅಮಿತ ಅಂಗಡಿ, ಪ್ರಾಂಶುಪಾಲ ಡಾ, ಆರ್.ಡಿ.ಜನಾರ್ದನ ಸಮಿತಿ ಪ್ರಮುಖರಾದ ಶ್ರೀ ರಂಗ ಕಟ್ಟಿ, ರಾಜೇಂದ್ರ ಬದ್ದಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.


















Prathidvani Yellapura