Breaking News

Yearly Archives: 2026

SKDRDP ಬಿ.ಸಿ. ಟ್ರಸ್ಟ್‌ನ ಯಲ್ಲಾಪುರ ಮತ್ತು ಮುಂಡಗೋಡು ಒಕ್ಕೂಟಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆ.

ಪ್ರತಿಧ್ವನಿ ಯಲ್ಲಾಪುರ : ಶ್ರೀ ಕ್ಷೇತ್ರ ಧರ್ಮಸ್ಥಳವು ಶತಮಾನಗಳಿಂದ ದಾನ, ಧರ್ಮ, ಸೇವೆ ಮತ್ತು ಮಾನವೀಯತೆಯ ಆದರ್ಶವನ್ನು ಸಮಾಜಕ್ಕೆ ಸಾರುತ್ತಾ ಬಂದಿದೆ. ಅನ್ನದಾನ, ವಿದ್ಯಾದಾನ, ಆರೋಗ್ಯ ಸೇವೆ, ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣ, ಸ್ವಾವಲಂಬನೆ, ಉದ್ಯೋಗ ಸೃಷ್ಟಿ, ಕೃಷಿ ಅಭಿವೃದ್ಧಿ, ಪರಿಸರ ಸಂರಕ್ಷಣೆ ಹಾಗೂ ಮದ್ಯವ್ಯರ್ಜನ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಈ ಸೇವಾ ಪರಂಪರೆ ಇನ್ನಷ್ಟು ವಿಸ್ತಾರಗೊಂಡಿದೆ ಎಂದು …

Read More »

ಸವಿಯಾದ ಹಬ್ಬಗಳು ಹತ್ತಿರವಾದಂತೆ ಸಿಹಿಯಾದ ಸಕ್ಕರೆ ದುಭಾರಿಯಾಗುತ್ತಿದೆ ಭವಿಷ್ಯದಲ್ಲಿ ಸಕ್ಕರೆ ಕಹಿ,ಕಹಿ..!!

ಕೇಬಲ್ ನಾಗೇಶ್, ಯಲ್ಲಾಪುರ..🖋 ಪ್ರತಿಧ್ವನಿ ಯಲ್ಲಾಪುರ : ಭಾರತದಲ್ಲಿ ಸಕ್ಕರೆ ಬೆಲೆಯು ಗಣನೀಯವಾಗಿ ಹೆಚ್ಚಾಗಿದೆ.ಸಗಟು ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯು ಕ್ವಿಂಟಾಲ್‌ಗೆ ₹5,400 ರಿಂದ ₹5,800 ರ ವರೆಗೆ ತಲುಪಿದೆ.ಚಿಲ್ಲರೆ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯು ಕೆ.ಜಿ.ಗೆ ₹52 ರಿಂದ ₹62 ರ ವರೆಗೆ ಮಾರಾಟವಾಗುತ್ತಿದೆ. ಬೆಲೆ ಏರಿಕೆಗೆ ಕಾರಣಗಳು: ಉತ್ಪಾದನೆ ಇಳಿಕೆ: ಮಳೆಯ ಕೊರತೆ ಮತ್ತು ಶುಷ್ಕ ಹವಾಮಾನದಿಂದಾಗಿ ಕಬ್ಬಿನ ಇಳುವರಿ ಕಡಿಮೆಯಾಗಿದೆ. ಹಬ್ಬದ ಬೇಡಿಕೆ: ಮುಂಬರುವ ಗಣೇಶ ಚತುರ್ಥಿ ಮತ್ತು …

Read More »

ಕಸ್ತೂರಿ ರಂಗನ್ ಅವೈಜ್ಞಾನಿಕ 7 ನೆ ಅಧಿಸೂಚನೆ ವರದಿ ವಿರುದ್ದ ಹೋರಾಟಕ್ಕೆ ಪೂರ್ವಬಾವಿ ಸಭೆ.

ಪ್ರತಿಧ್ವನಿ ಯಲ್ಲಾಪುರ: ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿಗೆ 7 ನೇ ಅಧಿಸೂಚನೆ ಆಗಿರುವ ಹಿನ್ನಲೆಯಲ್ಲಿ ಯಲ್ಲಾಪುರ ತಾಲೂಕಿನಲ್ಲಿ ಘೋಷಿಸಲ್ಟಟ್ಟ ಸೂಕ್ಷ್ಮ ಪ್ರದೇಶದ ಪಟ್ಟಿಯ ಬಿಡುಗಡೆ ಮತ್ತು ಮುಂದಿನ ಹೋರಾಟದ ರೂಪು ರೇಷೆ ನಿರ್ಧರಿಸಲು ಅಗಸ್ಟ 24 ರ ಸೋಮವಾರ, ಮುಂಜಾನೆ 10 ಗಂಟೆಗೆ ಸ್ಥಳೀಯ ವೆಂಕಟರಮಣ ದೇವಸ್ಥಾನ ಸಭಾಭವನದಲ್ಲಿ ಕರೆಯಲಾಗಿದೆ ಎಂದು ಜಿಲ್ಲಾ ಸಂಚಾಲಕ ಚಂದ್ರಶೇಖರ ಪೂಜಾರಿ ಮಂಚಿಕೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅರಣ್ಯವಾಸಿಗಳ ಅಸ್ತಿತ್ವಕ್ಕಾಗಿ …

Read More »

ಯಲ್ಲಾಪುರದ ಸಂಸ್ಕೃತಿ ಮಹಿಳಾ ಸೌಹಾರ್ದ ಸಹಕಾರಿ ಸಂಘದ 3 ನೇ ವಾರ್ಷಿಕ ಸರ್ವಸಾಧಾರಣ ಸಭೆ

ಪ್ರತಿಧ್ವನಿ ಯಲ್ಲಾಪುರ : ಸಂಸ್ಕೃತಿ ಮಹಿಳಾ ಸೌಹಾರ್ದ ಸಹಕಾರಿ ಸಂಘ ನಿಯಮಿತ, ಯಲ್ಲಾಪುರ ಇದರ ೩ನೇ ವಾರ್ಷಿಕ ಸರ್ವಸಾಧಾರಣ ಸಭೆಯು ಪಟ್ಟಣದ ಅಡಿಕೆ ಭವನದಲ್ಲಿ ನಡೆಯಿತು. ಸಹಕಾರಿ ಸಂಘದ ಗೌರವಾಧ್ಯಕ್ಷೆ ವರ್ಷಾ ಮಿರಾಶಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮಾವತಿ ಭಟ್ ಹಾಗೂ ಕಣ್ಣಿನ ತಜ್ಞೆ ಸೌಮ್ಯಾ ಭಟ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ …

Read More »

ಮಾದೇವಕೊಪ್ಪ,ಖಂಡ್ರಾನಕೊಪ್ಪ,ಮದನೂರು ಮಕ್ಕಳು ಹೆಬ್ಬಾರ್ ಮತ್ತು ಮಿರಾಶಿ ಅವರಲ್ಲಿ ಬಸ್ ಬೇಡಿಕೆ ವಿಡಿಯೋ ಹರಿಬಿಟ್ಟಿದ್ದಾರೆ.

ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಮಾದೇವಕೊಪ್ಪ,ಖಂಡ್ರಾನಕೊಪ್ಪ,ಮದನೂರು ಭಾಗದ ಮಕ್ಕಳು ಬಸ್ ಸೌಕರ್ಯ ಇಲ್ಲದೆ ನಿತ್ಯ ಕಿರವತ್ತಿ ವರೆಗೆ ಕಾಲ್ನಡಿಗೆಯಲ್ಲಿ ಶಾಲೆಗೆ ತೆರಳುತ್ತಿದ್ದು ಬಸ್ ಬೇಕಿದೆ ಎಂದು ಶಾಸಕ ಹೆಬ್ಬಾರ್ ಹಾಗು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ್ ಮಿರಾಶಿ ಅವರಿಗೆ ಮನವಿ ಮಾಡಿದ ವಿಡಿಯೋ ಸ್ಥಳೀಯ ವಾಟ್ಸಪ್ ಗ್ರೂಪ್ ಗೆ ಹರಿ ಬಿಟ್ಟಿದ್ದಾರೆ. ಇತ್ತೀಚೆಗೆ ತಮಿಳು ನಾಡಿನಲ್ಲಿ ಚುನಾವಣೆ ನಡೆದು ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದ ದಳಪತಿ ವಿಜಯ್ …

Read More »

ಭಾರತ್ ಜೋಡೋ ಯುವ ಸಂಘಟನೆ (BJYS) ಅಭಿಯಾನಕ್ಕೆ ಕೈ ಜೋಡಿಸಿ – ಕರೆ ನೀಡಿದ ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್.

ಪ್ರತಿಧ್ವನಿ ಯಲ್ಲಾಪುರ : ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಯುವ ದೃಷ್ಟಿಕೋನ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಾಗೂ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರ ಸಂಘಟನಾ ಶಕ್ತಿಯೊಂದಿಗೆ ಯುವಕರನ್ನು ಒಗ್ಗೂಡಿಸುವ ಭಾರತ್ ಜೋಡೋ ಯುವ ಸಂಘಟನೆ (BJYS) ಅಭಿಯಾನಕ್ಕೆ ಯಲ್ಲಾಪುರ – ಮುಂಡಗೋಡ – ಬನವಾಸಿ ವಿಧಾನಸಭಾ ಕ್ಷೇತ್ರದ ಯುವಕ, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಬೇಕಿದೆ ಎಂದು ಕೆಪಿಸಿಸಿ ಸದಸ್ಯ ಯಲ್ಲಾಪುರ-ಮುಂಡಗೋಡು ವಿಧಾನಸಭಾ ಕ್ಷೇತ್ರದ ಯುವ …

Read More »

ಭರಣಿ ವಿಶ್ವನಾಥನ ಸನ್ನಿಧಿಯಲ್ಲಿ ಶ್ರಾವಣ ಮಾಸದ ಪ್ರಥಮ ಸೋಮವಾರ ಪೂಜೆ ಸಂಪನ್ನ.

ಪ್ರತಿಧ್ವನಿ ಯಲ್ಲಾಪುರ : ಭರಣಿಯ ಶ್ರೀ ಕಾಶೀ ವಿಶ್ವನಾಥ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಥಮ ಸೋಮವಾರದಂದು ವಿಶೇಷ ಪೂಜೆ ಭಜನೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳು ಸಂಪನ್ನಗೊಂಡಿತು. ‘ಶ್ರೀ ಮಾರುತೇಶ್ವರ ಭಜನಾ ಮಂಡಳಿ ಮರಗುಂಡಿ’ ಇವರಿಂದ ಭಜನಾ ಸೇವೆ ನೆರವೇರಿತು. ಸತ್ಸಂಗದಲ್ಲಿ ವಿಶೇಷ ವ್ಯಕ್ತಿಯಾಗಿ, ಸಾಮಾಜಿಕ ರಾಜಕೀಯವಾಗಿ ತೊಡಗಿಸಿಕೊಂಡಿರುವ ,ಸಹಕಾರಿ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಸತತ ಮೂರನೇ ಬಾರಿಗೆ ಕೊರ್ಲಕಟ್ಟಾ ಸೊಸೈಟಿಯ ಅಧ್ಯಕ್ಷರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿರುವ ‘ಶ್ರೀ ರಾಜೇಶ್ ನಾಯ್ಕ …

Read More »

ವಿಧಾನಸಭಾ ಉಪಸಭಾಧ್ಯಕ್ಷ ಸ್ಥಾನಕ್ಕೆ ಮಂಕಾಳ ವೈದ್ಯ ಹೆಸರು ಸೂಚಿಸಿ ಪ್ರಸ್ತಾವನೆ ಸಲ್ಲಿಕೆ – ಶಾಸಕ ಹೆಬ್ಬಾರ್ ಸಾಥ್.

ಪ್ರತಿಧ್ವನಿ ಯಲ್ಲಾಪುರ : ರಾಜ್ಯ ರಾಜಕಾರಣದಲ್ಲಿ ಇತ್ತೀಚೆಗೆ ನಡೆದ ಮಂತ್ರಿ ಮಂಡಲ ರಚನೆ ಸಂದರ್ಭದಲ್ಲಿ ಕೊನೆ ಗಳಿಗೆಯವರೆಗು ಪಟ್ಟಿಯಲ್ಲಿ ಸ್ಥಾನ ಪಡೆದು ಅಂತಿಮ ಹಂತದಲ್ಲಿ ಪಟ್ಟಿಯಿಂದ ಹೊರಗುಳಿದು ರಾಜ್ಯಾದ್ಯಂತ ಸುದ್ದಿಯಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಶಾಸಕ ಮಂಕಾಳ ವೈದ್ಯ ಅವರನ್ನು ವಿಧಾನಸಭಾ ಉಪಸಭಾಧ್ಯಕ್ಷ ಸ್ಥಾನಕ್ಕೆ ಹೆಸರು ಸೂಚಿಸಿ ವಿಧಾನಸಭಾ ಕಾರ್ಯದರ್ಶಿ ಅವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಸ್ಥಾವನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಾಸಕ ಶಿವರಾಮ …

Read More »

ಸ್ಪೇಸ್ ಟೆಕ್ನಾಲಜಿ ರಸ್ತೆಗಳು ಇದು ನಮ್ಮಲ್ಲಿ ಮಾತ್ರ ಸಾಧ್ಯ..

ಪ್ರತಿಧ್ವನಿ ಯಲ್ಲಾಪುರ : ಜಗತ್ತು ಚಂದ್ರನ ಮೇಲೆ ಮನೆ ಕಟ್ಟುವ ಯೋಜನೆ ಮತ್ತು ಯೋಚನೆಯಲ್ಲಿರುವಷ್ಟರ ಮಟ್ಟಿಗೆ ಮುಂದುವರೆಯುತ್ತಿದ್ದರೆ ಅದೇಕೊ ನಮ್ಮ ಗ್ರಾಮೀಣ ಭಾಗದಲ್ಲಿ ಜನರ ಮೂಲಭೂತ ಸೌಕರ್ಯಗಳ ಸಮರ್ಪಕ ಅನುಷ್ಟಾನವೆ ಆಗದಿರುವುದು ದುರಂತವೆ ಸರಿ ತಾಲೂಕಿನ ದೇಹಳ್ಳಿ ಕ್ರಾಸ್ ದಿಂದ ಬಿಸಗೋಡಕ್ಕೆ ಹೋಗುವ ರಸ್ತೆಯಾಗಿದ್ದು( ಸುಮಾರು ಎರಡು ಕಿ ಮಿ) ಯಥಾವತ್ ದುರವಸ್ಥೆ ಯಾಗಿದೆ. ಹಿ.ಪ್ರಾ.ಶಾಲೆ, ಮತ್ತು ಪ್ರತಿಷ್ಠಿತ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು, ಸಾರ್ವಜನಿಕರು ಓಡಾಡುವ ಈ ರಸ್ತೆ ಸಂಪೂರ್ಣ …

Read More »

ಯಲ್ಲಾಪುರ ತಾಲೂಕಿನ ವೀರಶೈವ ಲಿಂಗಾಯತ ಸಮಾಜದವರಿಗೆ ಹೆಬ್ಬಾರ್ ವೈಯಕ್ತಿಕವಾಗಿ ಭಜನಾ ಸಾಮಗ್ರಿಗಳನ್ನು ವಿತರಿಸಿದರು.

ಪ್ರತಿಧ್ವನಿ ಯಲ್ಲಾಪುರ : ಮಾನ್ಯ ಶಾಸಕರಾದ ಶಿವರಾಮ ಹೆಬ್ಬಾರ್ ಅವರು ಇಂದು ಪಟ್ಟಣದ ತಿಲಕಚೌಕ್‌ನಲ್ಲಿರುವ ಶ್ರೀ ವೀರಭದ್ರೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಯಲ್ಲಾಪುರ ತಾಲೂಕಿನ ವೀರಶೈವ ಲಿಂಗಾಯತ ಸಮಾಜದವರಿಗೆ ಶಾಸಕರು ವೈಯಕ್ತಿಕವಾಗಿ ಭಜನಾ ಸಾಮಗ್ರಿಗಳನ್ನು ವಿತರಿಸಿದರು. ಭಜನಾ ಸಾಮಗ್ರಿಗಳನ್ನು ಸ್ವೀಕರಿಸಿದ ಸಮಾಜದ ಪ್ರಮುಖರು ಶಾಸಕರನ್ನು ಸನ್ಮಾನಿಸಿ ಗೌರವಿಸಿದರು. ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ ಮಿರಾಶಿ, ಪಟ್ಟಣ ಪಂಚಾಯತ ಮಾಜಿ ಉಪಾಧ್ಯಕ್ಷ ಅಮಿತ …

Read More »