
ಪ್ರತಿಧ್ವನಿ ಯಲ್ಲಾಪುರ : ಮಾನ್ಯ ಶಾಸಕರಾದ ಶಿವರಾಮ ಹೆಬ್ಬಾರ್ ಅವರು ಇಂದು ಪಟ್ಟಣದ ತಿಲಕಚೌಕ್ನಲ್ಲಿರುವ ಶ್ರೀ ವೀರಭದ್ರೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಯಲ್ಲಾಪುರ ತಾಲೂಕಿನ ವೀರಶೈವ ಲಿಂಗಾಯತ ಸಮಾಜದವರಿಗೆ ಶಾಸಕರು ವೈಯಕ್ತಿಕವಾಗಿ ಭಜನಾ ಸಾಮಗ್ರಿಗಳನ್ನು ವಿತರಿಸಿದರು. ಭಜನಾ ಸಾಮಗ್ರಿಗಳನ್ನು ಸ್ವೀಕರಿಸಿದ ಸಮಾಜದ ಪ್ರಮುಖರು ಶಾಸಕರನ್ನು ಸನ್ಮಾನಿಸಿ ಗೌರವಿಸಿದರು.

ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ ಮಿರಾಶಿ, ಪಟ್ಟಣ ಪಂಚಾಯತ ಮಾಜಿ ಉಪಾಧ್ಯಕ್ಷ ಅಮಿತ ಅಂಗಡಿ ಸೇರಿದಂತೆ ವೀರಶೈವ ಲಿಂಗಾಯತ ಸಮಾಜದ ಪ್ರಮುಖರು, ಮುಖಂಡರು ಹಾಗೂ ಸಮಾಜದ ಸದಸ್ಯರು ಉಪಸ್ಥಿತರಿದ್ದರು.

ವಿಶೇಷವಾಗಿ ಶಾಸಕ ಹೆಬ್ಬಾರ್ ಭಜನಾ ಪರಿಕರಗಳನ್ನು ವಿತರಿಸಿ ಕೆಲಕಾಲ ಭಜನೆಯಲ್ಲಿ ತಾಳ ಹಾಕಿದರು ಅಲ್ಲದೆ ಹಾರ್ಮೋನಿಯಂ ನುಡಿಸಿ ನೆರೆದಿದ್ದ ಸಮುದಾಯದ ನಾಗರಿಕರಿಗೆ ಸಂತಸ ತಂದರು.






Prathidvani Yellapura