
ಪ್ರತಿಧ್ವನಿ ಯಲ್ಲಾಪುರ : ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಯುವ ದೃಷ್ಟಿಕೋನ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಾಗೂ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರ ಸಂಘಟನಾ ಶಕ್ತಿಯೊಂದಿಗೆ ಯುವಕರನ್ನು ಒಗ್ಗೂಡಿಸುವ ಭಾರತ್ ಜೋಡೋ ಯುವ ಸಂಘಟನೆ (BJYS) ಅಭಿಯಾನಕ್ಕೆ ಯಲ್ಲಾಪುರ – ಮುಂಡಗೋಡ – ಬನವಾಸಿ ವಿಧಾನಸಭಾ ಕ್ಷೇತ್ರದ ಯುವಕ, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಬೇಕಿದೆ ಎಂದು ಕೆಪಿಸಿಸಿ ಸದಸ್ಯ ಯಲ್ಲಾಪುರ-ಮುಂಡಗೋಡು ವಿಧಾನಸಭಾ ಕ್ಷೇತ್ರದ ಯುವ ಮುಖಂಡ ವಿವೇಕ್ ಹೆಬ್ಬಾರ್ ಯುವ ಜನತೆಗೆ ಕರೆ ನೀಡಿದ್ದಾರೆ.
ನಿಮ್ಮ ಸ್ನೇಹಿತರು, ಸಹಪಾಠಿಗಳು ಹಾಗೂ ಯುವಕರಿಗೆ ಈ ಸಂದೇಶವನ್ನು ಹೆಚ್ಚು ಶೇರ್ ಮಾಡಿ, ಸಂಘಟನೆಯ ಸದಸ್ಯತ್ವ ಪಡೆದು ಯುವ ಶಕ್ತಿಯನ್ನು ಮತ್ತಷ್ಟು ಬಲಪಡಿಸೋಣ. ” ಭಾರತ ಜೋಡೋ ಯುವ ಸಂಘ ಯುವ ಶಕ್ತಿ – ಭಾರತದ ಭವಿಷ್ಯ “ಯಲ್ಲಾಪುರ, ಮುಂಡಗೋಡ, ಬನವಾಸಿ ವಿಧಾನಸಭಾ ಕ್ಷೇತ್ರದ ಯುವಕ,ಯುವತಿಯರೇ ಬನ್ನಿ — ಯುವ ಶಕ್ತಿಯನ್ನು ಸಂಘಟಿಸೋಣ ! ಎಂದು ಕರೆ ನೀಡಿದ್ದಾರೆ.
ಇಂದೇ ಸದಸ್ಯರಾಗಿ — ಯುವ ಶಕ್ತಿಯೊಂದಿಗೆ ಭಾರತವನ್ನು ಮತ್ತಷ್ಟು ಬಲಿಷ್ಠಗೊಳಿಸೋಣ. ಸದಸ್ಯತ್ವ ಪಡೆಯಲು: https://bjys.karnataka.gov.in/ ಭೇಟಿ ನೀಡಿ






Prathidvani Yellapura