Breaking News

ಮಾದೇವಕೊಪ್ಪ,ಖಂಡ್ರಾನಕೊಪ್ಪ,ಮದನೂರು ಮಕ್ಕಳು ಹೆಬ್ಬಾರ್ ಮತ್ತು ಮಿರಾಶಿ ಅವರಲ್ಲಿ ಬಸ್ ಬೇಡಿಕೆ ವಿಡಿಯೋ ಹರಿಬಿಟ್ಟಿದ್ದಾರೆ.


ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಮಾದೇವಕೊಪ್ಪ,ಖಂಡ್ರಾನಕೊಪ್ಪ,ಮದನೂರು ಭಾಗದ ಮಕ್ಕಳು ಬಸ್ ಸೌಕರ್ಯ ಇಲ್ಲದೆ ನಿತ್ಯ ಕಿರವತ್ತಿ ವರೆಗೆ ಕಾಲ್ನಡಿಗೆಯಲ್ಲಿ ಶಾಲೆಗೆ ತೆರಳುತ್ತಿದ್ದು ಬಸ್ ಬೇಕಿದೆ ಎಂದು ಶಾಸಕ ಹೆಬ್ಬಾರ್ ಹಾಗು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ್ ಮಿರಾಶಿ ಅವರಿಗೆ ಮನವಿ ಮಾಡಿದ ವಿಡಿಯೋ ಸ್ಥಳೀಯ ವಾಟ್ಸಪ್ ಗ್ರೂಪ್ ಗೆ ಹರಿ ಬಿಟ್ಟಿದ್ದಾರೆ.


ಇತ್ತೀಚೆಗೆ ತಮಿಳು ನಾಡಿನಲ್ಲಿ ಚುನಾವಣೆ ನಡೆದು ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದ ದಳಪತಿ ವಿಜಯ್ ಅವರಿಗೆ ಅಲ್ಲಿನ ಗ್ರಾಮ ಮಕ್ಕಳು ವಿಡಿಯೋ ಮಾಡಿ ವಿಜಯ್ ಮಾಮ ನಮಗೆ ಶಾಲೆಗೆ ಹೋಗಲು ಬಸ್ ಇಲ್ಲ ಎಂದು ವಿಡಿಯೋ ಮಾಡಿ ಮನವಿ ಸಲ್ಲಿಸಿದ್ದರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಲೆ ತಕ್ಷಣ ಅಲ್ಲಿನ ತಮಿಳು ನಾಡು ಟಿ.ವಿ.ಕೆ ಸರ್ಕಾರ ಒಂದೇ ದಿನದಲ್ಲಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿ ಜನತೆಯ ಮನ ಗೆದ್ದರು,

ಅದೇ ರೀತಿಯ ಪ್ರಯೋಗ ಯಲ್ಲಾಪುರ ತಾಲೂಕಿನ ಮಕ್ಕಳು ಮಾಡಿದ್ದು ಇಲ್ಲಿನ ಶಾಸಕ ಶಿವರಾಮ ಹೆಬ್ಬಾರ್ ಮತ್ತು ವಿಜಯ್ ಮಿರಾಶಿ ಅವರಲ್ಲಿ ಮನವಿ ಸಲ್ಲಿಸಿ ಬಸ್ ವ್ಯವಸ್ಥೆ ಕೋರಿದ್ದಾರೆ. ಮಕ್ಕಳ ಈ ಪ್ರಯತ್ನ ಫಲಿಸುತ್ತದ ಕಾದು ನೋಡಬೇಕಿದೆ.

ಈ ಭಾಗದ ಮಕ್ಕಳು ಸುಮಾರು 6 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಕಿರವತ್ತಿ ತಲುಪಬೇಕು, ಇತ್ತೀಚೆಗೆ ಪ್ರಾಣಿಗಳ ಕಾಟ ಹೆಚ್ಚಾಗಿದೆ, ಮಕ್ಕಳು ಭಯದಿಂದ ನಿತ್ಯ ಸಂಚರಿಸುತ್ತಿದ್ದಾರೆ. ಬಹಳಷ್ಟು ಮಕ್ಕಳು ಇದೇ ಕಾರಣದಿಂದ ವಿದ್ಯಾಬ್ಯಾಸ ಮೊಟಕುಗೊಳಿಸಿದ ಉದಾಹರಣೆಗಳಿವೆ, ಇಷ್ಟೆಲ್ಲಾ ಸಮಸ್ಯೆಗಳನ್ನು ಪರಿಗಣಿಸಿ ಬಸ್ ವ್ಯವಸ್ಥೆ ಕಲ್ಪಿಸಬೇಕಿರುವುದು ಸರ್ಕಾರದ ಅದ್ಯ ಕರ್ತವ್ಯವಾಗಿದೆ ಎನ್ನುತ್ತಾರೆ ಸ್ಥಳೀಯ ನಾಗರಿಕರು.

ನಮ್ಮ ವಿದ್ಯಾಬ್ಯಾಸದ ಸಂದರ್ಭದಲ್ಲಿ ಈ ಭಾಗದಲ್ಲಿ ಒಂದು ಬಸ್ ಸಂಚರಿಸುತ್ತಿತ್ತು ಆಗ ಪ್ರಯಾಣಿಕರ ಕೊರತೆಯಿಂದ ನಿಲ್ಲಿಸಲಾಗಿತ್ತು. ಸದ್ಯ ಈ ಭಾಗದಿಂದ ನೂರಕ್ಕು ಅಧಿಕ ಮಕ್ಕಳು, ನೂರಾರು ಸಂಖ್ಯೆ ಕೂಲಿ ಕಾರ್ಮಿಕರು ಕಿರವತ್ತಿ ಮತ್ತು ಯಲ್ಲಾಪುರ ಸಂಚರಿಸಲು ಪರದಾಡುತ್ತಿದ್ದು ಬಸ್ ವ್ಯವಸ್ಥೆ ಮಾಡಿದರೆ ತುಂಬಾ ಅನುಕೂಲ ಆಗಲಿದೆ. ಈ ಸಂಬಂಧ ಶಾಸಕರಿಗೆ,ಸ್ಥಳೀಯ ನಾಯಕರಾದ ವಿಜಯ್ ಮಿರಾಶಿ ಅವರ ಗಮನಕ್ಕೆ ಮತ್ತು ಸಾರಿಗೆ ಅಧಿಕಾರಿಗಳ ಗಮನಕ್ಕೂ ತಂದಿದ್ದು ಸಮಸ್ಯೆ ಬಗೆಗರಿಸಿಕೊಡುವಂತೆ ಮಕ್ಕಳೆ ಮನವಿ ಮಾಡಿದ್ದಾರೆ. ಬಾಪು ಶಳಕೆ, ಖಂಡ್ರಾನಕೊಪ್ಪ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ದೇಶದ ಪ್ರಧಾನಿ,ಅರಣ್ಯ ಸಚಿವರು ಮತ್ತು ಸಚಿವಾಲಯದ ಕಾರ್ಯದರ್ಶಿಯವರಿಗೆ ಪಶ್ಚಿಮ ಘಟ್ಟಗಳ ವಿಚಾರದಲ್ಲಿ ಮದ್ಯ ಪ್ರವೇಶಿಸುವಂತೆ ಚಂದ್ರಕಾಂತ ಕೊಚರೇಕರ್ ಮನವಿ

ಪ್ರತಿಧ್ವನಿ ಯಲ್ಲಾಪುರ :  ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸುವ ಸಂಬಂಧ 27-07-2026ರಂದು …

Leave a Reply

Your email address will not be published. Required fields are marked *