
ಪ್ರತಿಧ್ವನಿ ಯಲ್ಲಾಪುರ : ಯು.ಕೆ.ಸೌಹಾರ್ದ ಸಹಕಾರಿಯು ಪ್ರಸಕ್ತ ಸಾಲಿನಲ್ಲಿ 1.14 ಕೋಟಿ ರೂ ಎಲ್ಲ ನಿಧಿಗಳನ್ನು ತೆಗೆದಿಟ್ಟು ಲಾಭ ಗಳಿಸಿದೆ. 22,448 ಶೇರುದಾರರನ್ನು ಹೊಂದಿದ್ದು, 7,70 ಕೋಟಿ ಶೇರು ಬಂಡವಾಳ ಹೊಂದಿ, ಕಾಲು ಶತಮಾನ ಗತಿಸಿದ ನಮ್ಮ ಸಂಸ್ಥೆ ಸಮಾನ ಮನಸ್ಕರ ತಂಡದಿದಾಗಿ ಅಭಿವೃದ್ಧಿಯನ್ನು ಹೊಂದಿದೆ. ಜನರ ಸಹಕಾರ, ಪ್ರೀತಿ ನಮ್ಮ ಸಂಸ್ಥೆಯ ಮೇಲಿರುವುದರಿಂದಲೇ ಉತ್ತಮ ಪ್ರಗತಿಯನ್ನು ಸಾಧಿಸುವುದಕ್ಕೆ ಸಾಧ್ಯವಾಗಿದೆ ಎಂದು ಸಹಕಾರಿಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಅವರು, ಶುಕ್ರವಾರ ಪಟ್ಟಣದ ಅಡಿಕೆಭವನದಲ್ಲಿ 25 ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
229 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದ್ದು, ಬ್ಯಾಂಕಿನ ಭದ್ರತೆಗಾಗಿ 9.98 ಕೋಟಿ ನಿಧಿಗಳನ್ನು ಬೇರೆ ಬೇರೆ ಬ್ಯಾಂಕುಗಳಲ್ಲಿ ತೆಗೆದಿಡಲಾಗಿದೆ. 11.13 ಕೋಟಿ ಸಾಲ ಪಡೆದಿದ್ದು, ಸದಸ್ಯರ ಠೇವು 2೦೦ ಕೋಟಿಗೂ ಹೆಚ್ಚಿದೆ. ಅಂತೆಯೇ 150 ಕೋಟಿ ಸಾಲ ನೀಡಲಾಗಿದೆ. ವಾರ್ಷಿಕವಾಗಿ 2288 ಕೋಟಿ ವಾರ್ಷಿಕ ವ್ಯವಹಾರದ ಪ್ರಗತಿಯಲ್ಲಿರುವ ನಮ್ಮ ಸಂಸ್ಥೆ ಪ್ರಧಾನ ಕಚೇರಿ, ಸ್ವಂತ ಕಟ್ಟಡ, 11 ಶಾಖೆಗಳು, ಪಿಗ್ಮಿ ಸಂಗ್ರಹದವರನ್ನೂ ಸೇರಿಸಿ 80 ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಹೊಂದಿದೆ ಎಂದು ವಿವರಿಸಿದರು.
ತಾಲೂಕಿನಲ್ಲಿ ಈಗಾಗಲೇ 35 ಬ್ಯಾಂಕುಗಳು ಆರ್ಥಿಕ ವ್ಯವಹಾರವನ್ನು ನಡೆಸುತ್ತಿದ್ದಾರೆ. ಯಲ್ಲಾಪುರದಲ್ಲಿ ಸಾವಿರಾರು ಕೋಟಿ ಠೇವಿದೆ. ಇದರಿಂದ ಎಲ್ಲ ಸಂಸ್ಥೆಗಳು ಸಶಕ್ತವಾಗಿದೆ ಎಂಬುದನ್ನು ತೋರಿಸುತ್ತದೆ. ನಮ್ಮ ಸಂಸ್ಥೆ 5 ಕೋಟಿ ರೂ ಆಸ್ತಿಯನ್ನು ಹೊಂದಿದೆ. ಆರ್ಥಿಕ ಶಿಸ್ತಿನ ಚೌಕಟ್ಟಿನಲ್ಲೇ ನಡೆದಿರುವುದರಿಂದ ಅಢಾವೆಯ ಪ್ರಗತಿಗಾಗಿ ಹೊಂದಾಣಿಕೆ ಮಾಡಿಕೊಳ್ಳದೇ ಪ್ರಗತಿಯಲ್ಲಿ ನಡೆದಿದ್ದೇವೆ. ಮಾರ್ಚ್ ನಂತರ ನಿರೀಕ್ಷೆ ಮೀರಿ ಪ್ರಗತಿಯನ್ನು ಸಾಧಿಸಿದ್ದೇವೆ. ಅಲ್ಲದೇ ಗ್ರಾಹಕರಿಗೆ ತೀರಾ ಅಗತ್ಯವಾದ ವಿದೇಶಿ ಹಣ ವರ್ಗಾವಣೆ, ಪ್ರವಾಸಿಗರಿಗೆ ಟಿಕೇಟು ಸೇರಿದಂತೆ ಹತ್ತಾರು ಸೌಲಭ್ಯಗಳನ್ನು ನಮ್ಮ ಸಂಸ್ಥೆ ನೀಡುತ್ತಿದೆ. ತನ್ಮೂಲಕ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದೆ. ಇದರಿಂದ ಊರಿನ ಪ್ರಗತಿಗೆ ಕಾರಣವಾಗಿದೆ ಎಂದು ಮಾಹಿತಿ ನೀಡಿದರು.
ಸಹಕಾರಿಗಳಾದ ಡಿ.ಶಂಕರ ಭಟ್ಟ, ಕೃಷ್ಣಮೂರ್ತಿ ಹೆಗಡೆ ಚರ್ಚೆಯಲ್ಲಿ ಪಾಲ್ಗೊಂಡರು.
ಲೆಕ್ಕ ಪರಿಶೋಧಕರಾದ ಸಿ.ಎ ಎಸ್.ಜಿ.ಹೆಗಡೆ ಶಿರಸಿ ಸಾಂದರ್ಭಿಕವಾಗಿ ಮಾತನಾಡಿದರು. ಸಲಹೆಗಾರರಾದ ಪಿ.ಜಿ.ಹೆಗಡೆ, ನಿರ್ದೇಶಕರಾದ ರಮೇಶ ಪ್ರಸಾದ, ಮಹಾಬಲೇಶ್ವರ ಹೆಗಡೆ, ನಾಗೇಂದ್ರ ಭಟ್ಟ, ಸದಾನಂದ ಭಟ್ಟ, ನಾರಾಯಣ ಗಾಂವ್ಕರ, ತಿಮ್ಮಣ್ಣ ಭಟ್ಟ, ಮೆಹಬೂಬ ಮುಲ್ಲಾ, ನಾರಾಯಣ ಉಡದಂಗಿ, ದೇಮಣ್ಣ ಕೇಸರಕರ, ಭಾಸ್ಕರ ಸಿದ್ದಿ, ರಾಜೇಶ್ವರಿ ಭಟ್ಟ, ಆಶಾ ಪಟೇಲ, ಪ್ರಶಾಂತ ಹೆಗಡೆ, ಪರಮೇಶ್ವರ ಹೆಗಡೆ, ಎನ್.ಜಿ.ಕಿರಣ ಉಪಸ್ಥಿತರಿದ್ದರು. ಉಪಾಧ್ಯಕ್ಷ ಸುಬ್ಬಯ್ಯ ಧೋಗಳೆ ಸ್ವಾಗತಿಸಿದರು. ನಿರ್ದೇಶಕ ರವಿ ಭಟ್ಟ ನಿರ್ವಹಿಸಿದರು.




Prathidvani Yellapura