Breaking News

Monthly Archives: August 2026

ಯಲ್ಲಾಪುರ ಪಟ್ಟಣದಲ್ಲಿ ಅನಾಥವಾಗಿ ಸುತ್ತುತ್ತಿವೆ ಎರಡು ಕುದುರೆಗಳು.- ಮಾಲಿಕರ ಸುಪರ್ಧಿಗೆ ಅಥವಾ ಪ್ರಾಣಿಗಳ ಆಸರೆಗೆ ವ್ಯವಸ್ಥೆ ಮಾಡಬೇಕಿದೆ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಅಂಬೇಡ್ಕರ್ ವೃತ್ತ, ಮುಂಡಗೋಡು ರಸ್ತೆ ಸುತ್ತ ಮುತ್ತ ಕಳೆದ ಕೆಲವು ದಿನಗಳಿಂದ ಎರಡು ಕುದುರೆಗಳು ಅನಾಥವಾಗಿ ಸುತ್ತುತ್ತಿದ್ದು ಪ್ರಾಣಿ ಪ್ರಿಯರು ಅಥವಾ ಅರಣ್ಯ ಇಲಾಖೆ ಯವರು ಅಥವಾ ಸಂಬಂಧಿಸಿದ ಇಲಾಖೆಯವರು ಈ ಮೂಕ ಪ್ರಾಣಿಗಳಿಗೆ ಆಸರೆ ಒದಗಿಸುವತ್ತ ಗಮನ ಹರಿಸಬೇಕಿದೆ ಎಂಬುದು ಸ್ಥಳೀಯ ನಾಗರಿಕರ ಅಭಿಪ್ರಾಯವಾಗಿದೆ. ಬೇರಾವುದೋ ಊರಿನಿಂದ ವಾಹನದಲ್ಲಿ‌ ತಂದು ಯಲ್ಲಾಪುರ ಅರಣ್ಯ ಪರಿಸರದಲ್ಲಿ ಬಿಟ್ಟು ಹೋಗಿರುವ ಸಾದ್ಯತೆ ಇದೆ. ಅಥವಾ ಮಾಲಿಕರು …

Read More »

25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿತನ ಬಂಧನ – ಯಲ್ಲಾಪುರ ಪೊಲೀಸರ ಕಾರ್ಯಕ್ಕೆ SP ಶ್ಲಾಘನೆ.

ಪ್ರತಿಧ್ವನಿ ಯಲ್ಲಾಪುರ : ಕಳೆದ 25 ವರ್ಷಗಳಿಂದ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದು ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೋಲಿಸ್ ಅಧೀಕ್ಷಕ ದೀಪನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಗುಜರಾತ್ ಪೋರಬಂದರ್ ಮೂಲದ ಚಾಲಕ ವೃತ್ತಿಯ ಆರೋಪಿತ ಕೇಸುಬಾಯಿ ತಂದೆ ಮಿನಂದಾಬಾಯಿ ಸಿಸೋಡಿಯಾ ಅಲಿಯಾಸ್ ಮೊದ್ವಾಡಿಯಾ ಕೇಸುಬಾಯಿ. ಪ್ರಾಯ: 58 ಎಂಬಾತನು 2001 ರಲ್ಲಿ  ಯಲ್ಲಾಪುರದಲ್ಲಿ ಹಾದು ಹೋಗಿರುವ ಕಾರವಾರ ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ಮೇಲೆ ಜೋಗಿಕೋಪ್ಪ …

Read More »

ಕೃಷಿ ಸಾಲ ಮಿತಿ 5 ಲಕ್ಷಕ್ಕೆ ಏರಿಕೆ: ಶೂನ್ಯ ಬಡ್ಡಿ- ಮುಖ್ಯಮಂತ್ರಿಗಳಿಂದ ಸುತ್ತೋಲೆ.

ಪ್ರತಿಧ್ವನಿ ಯಲ್ಲಾಪುರ : ರೈತರಿಗೆ ಸಹಕಾರಿ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ನೀಡಲಾಗುತ್ತಿರುವ ಸಾಲದ ಮಿತಿಯನ್ನು 5ಲಕ್ಷಕ್ಕೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂದೇಶವನ್ನು ನೀಡಿದ್ದು, ಬೆಂಗಳೂರಿನ ಸಹಕಾರ ಸಂಘಗಳ ನಿಬಂಧಕರ ಕಛೇರಿಯಿಂದ ಸುತ್ತೋಲೆಯನ್ನು ಸಹ ಹೊರಡಿಸಲಾಗಿದೆ. 2023-24ರಲ್ಲಿ ಶೂನ್ಯ ಬಡ್ಡಿ ದರದ ಬೆಳೆ ಸಾಲದ ಮಿತಿಯನ್ನು ಅಂದಿನ  ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರವು 3ರಿಂದ 5ಲಕ್ಷಕ್ಕೆ ಹೆಚ್ಚಿಸಿತ್ತು. ಆದರೆ ನಬಾರ್ಡ್ ಇದಕ್ಕೆ ಅಗತ್ಯವಾಗಿರುವಂತಹ ಮೊತ್ತವನ್ನು ಬಿಡುಗಡೆಗೊಳಿಸದ ಹಿನ್ನೆಲೆಯಲ್ಲಿ ಹಲವಾರು …

Read More »

ಯಲ್ಲಾಪುರ ತಾಲೂಕಿನ ಖಾರೆವಾಡ ಮೂಲದ 33 ವರ್ಷದ ಚಾಂಗು ಪಟಕಾರೆಗೆ ಚಿಕಿತ್ಸೆಗೆ ಬೇಕಿದೆ ಆರ್ಥಿಕ ಸಹಾಯ.

ಪ್ರತಿಧ್ವನಿ ಯಲ್ಲಾಪುರ :ತಾಲೂಕಿನ ಖಾರೆವಾಡ ನಿವಾಸಿ  ಅತ್ಯಂತ ಹಿಂದುಳಿದ ಧನಗರ ಗೌಳಿ ಸಮುದಾಯದ ಕಡುಬಡವನಾಗಿರುವ, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ, ಚಾಂಗು ಪಟಗಾರೆ ವಯಸ್ಸು 33 ವರ್ಷ ಎಂಬಾತ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಈಗಾಗಲೇ ಎರಡು ಬಾರಿ ಶಸ್ತ್ರಚಿಕಿತ್ಸೆ ಮಾಡಿ ಸುಮಾರು 10 ರಿಂದ 12 ಲಕ್ಷ ರೂಪಾಯಿ ಖರ್ಚು ಆಗಿರುತ್ತದೆ.ಹಾಗೆಯೇ,ಈಗ ಈ ಕ್ಯಾನ್ಸರ್ ರೋಗವು 3 ನೇ ಹಂತಕ್ಕೆ (Third Stage* ) ತಲುಪಿದೆ.ಈಗ ಮತ್ತೆ ಶಸ್ತ್ರಚಿಕಿತ್ಸೆ …

Read More »

ಯಲ್ಲಾಪುರದಲ್ಲಿ 84 ಹಳ್ಳಿ ಸೂಕ್ಷ್ಮ ಪ್ರದೇಶ: ಶಿರಸಿಯಲ್ಲಿ ಸೆ.5 ರಂದು ಸಲ್ಲಿಸುವ ಆಕ್ಷೇಪ ಪತ್ರಕ್ಕೆ ಯಲ್ಲಾಪುರದಿಂದ ಸಂಪೂರ್ಣ ಬೆಂಬಲ : ರವೀಂದ್ರ ನಾಯ್ಕ್..

ಪ್ರತಿಧ್ವನಿ ಯಲ್ಲಾಪುರ : ಕಸ್ತೂರಿ ರಂಗನ್ 7 ನೇ ಅಧಿಸೂಚನೆ ಗೆ ಆಕ್ಷೇಪ ಪತ್ರ ಸಲ್ಲಿಸಲು ಯಲ್ಲಾಪುರದಿಂದ ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿ ಕಸ್ತೂರಿ ರಂಗನ್ ವಿರೋಧಿ ರ‍್ಯಾಲಿಯಲ್ಲಿಆಕ್ಷೇಪ  ಪತ್ರ ಸಲ್ಲಿಸುವುದರೊಂದಿಗೆ ಹೋರಾಟಕ್ಕೆ ಬೆಂಬಲಿಸಲು ತೀರ್ಮಾನಿಸಲಾಯಿತು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.ಅವರು ಸೋಮವಾರ ಪಟ್ಟಣದ ವೆಂಕಟರಮಣ ಸಭಾಂಗಣದಲ್ಲಿ ಜರುಗಿದ ಕಸ್ತೂರಿ ರಂಗನ್ ವಿರೋಧಿ ರ‍್ಯಾಲಿ ಪೂರ್ವಬಾವಿ ಸಭೆಯಲ್ಲಿನ ಮಾಹಿತಿ ಮಾದ್ಯಮಕ್ಕೆ ತಿಳಿಸಿದರು. ಯಲ್ಲಾಪುರ …

Read More »

ತಾಲೂಕು ಮಟ್ಟದ ಕಾಲೇಜು ಕ್ರೀಡಾಕೂಟದಲ್ಲಿ ಯಲ್ಲಾಪುರದ ವೈ.ಟಿ.ಎಸ್.ಎಸ್ ಗೆ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ,

ಪ್ರತಿಧ್ವನಿ ಯಲ್ಲಾಪುರ : ತಾಲೂಕಾ ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಸ್ಥಳೀಯ ವೈ.ಟಿ.ಎಸ್.ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು 36 ಪ್ರಥಮ, 18 ದ್ವಿತೀಯ ಹಾಗೂ 11 ಕ್ರೀಡೆಗಳಲ್ಲಿ ತೃತೀಯ ಸ್ಥಾನ ಪಡೆಯುವ ಮೂಲಕ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆ ಶಿಕ್ಷಣಕ್ಕು ಸೈ  ಕ್ರೀಡೆಗಳಲ್ಲು ಜೈ ಎನಿಸಿಕೊಂಡಿದೆ. ವಿಶೇಷವಾಗಿ ವೈ.ಟಿ.ಎಸ್.ಎಸ್ ಪದವಿಪೂರ್ವ ಕಾಲೇಜು ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡದ್ದಲ್ಲದೆ ಕಾಲೇಜಿನ ಶ್ರೀದೇವಿ ಗಂಗಾನಾಯ್ಕ ಹಾಗೂ ನಾದಶ್ರೀ ರಾಮಚಂದ್ರ ಭಟ್ಟ ವೈಯಕ್ತಿಕ ವೀರಾಗ್ರಣಿ …

Read More »

ವಿಕಾಸ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಪ್ರಸಕ್ತ ವರ್ಷದಲ್ಲಿ 72.91 ಲಕ್ಷ ಲಾಭದಲ್ಲಿ –  ಮುರಳಿ ಹೆಗಡೆ.

ಪ್ರತಿಧ್ವನಿ ಯಲ್ಲಾಪುರ : 1997 ರಲ್ಲಿ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾಮಿಗಳ ಆಶಿರ್ವಾದದಿಂದ ಪ್ರಾರಂಭವಾದ ವಿಕಾಸ್ ಅರ್ಬನ್ ಬ್ಯಾಂಕ್ ರಾಷ್ಟ್ರ ಮಟ್ಟದ ಆರ್ಥಿಕ ಏರಿಳಿತ,ಸ್ಥಳೀಯವಾಗಿ ಬ್ಯಾಂಕ್ ಸಂಖ್ಯೆ ಹೆಚ್ಚುತ್ತಿರುವುದರ ನಡುವೆಯು ಉತ್ತಮ ಪ್ರಗತಿ ಸಾಧಿಸಿ ಲಾಭದಾಯಕ ನಡೆಯಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ, ಇದಕ್ಕೆ ನಮ್ಮ ಆರ್ಥಿಕ ಸಂಸ್ಥೆಯ ಮೇಲಿನ ಗ್ರಾಹಕರ ಭರವಸೆ, ಸಿಬ್ಬಂದಿಗಳ ನಿಷ್ಠೆ, ಆಡಳಿತ ಮಂಡಳಿಯ ದೂರದೃಷ್ಟಿ ಯೋಜನೆಗಳು ಕಾರವಾಗಿದ್ದು ಸರ್ವರಿಗು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ವಿಕಾಸ್ ಅರ್ಬನ್ …

Read More »

ವಿಶ್ವ ದರ್ಶನ ಶಿಕ್ಷಣ ಸೇವೆಗು ಸೈ – ಸಮಾಜ ಸೇವೆಗು ಜೈ – ಎಂ‌.ಆರ್.ಹೆಗಡೆ ಕುಂಬ್ರಿಗುಡ್ಡೆ.

ಪ್ರತಿಧ್ವನಿ ಯಲ್ಲಾಪುರ : ಸಮಾಜಕ್ಕೆ ಹಿತವನ್ನೇ ಬಯಸುವ ಆಶಯವನ್ನು ಕೇವಲ ಮಾತಿಗೆ ಸೀಮಿತವಾಗಿಸದೇ, ಕೃತಿಯ ಮೂಲಕ ವಿಶ್ವದರ್ಶನ ಸೇವಾ ತೋರಿಸುತ್ತಿದೆ. ವಿಶ್ವದರ್ಶನ ಶಿಕ್ಷಣ ಸಂಸ್ಥೆ ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವನ್ನೂ ನೀಡುತ್ತಿದೆ. ಶೈಕ್ಷಣಿಕ ಚಟುವಟಿಕೆಗಳಲ್ಲಿ ಮಾತ್ರವಲ್ಲದೇ ಸಾಮಾಜಿಕ ಕಾರ್ಯಗಳಲ್ಲಿಯೂ ಮುಂಚೂಣಿಯಲ್ಲಿದೆ ಎಂದು ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್ ಹೆಗಡೆ ಕುಂಬ್ರಿಗುಡ್ಡೆ ಹೇಳಿದರು. ಅವರು ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವದರ್ಶನ ಸೇವಾ, ಹುಬ್ಬಳ್ಳಿಯ ವಿಹಾನ್ ಹಾರ್ಟ್ ಮತ್ತು ಸೂಪರ್ …

Read More »

ಶಿಕ್ಷಕರ ಸೇವೆಗೆ ಸದಾ ಸಿದ್ದ – ಕನ್ನಡ ಮಾದ್ಯಮ ಶಾಲೆಗಳ ಉಳಿವಿಗಾಗಿ ನನ್ನ ಹೋರಾಟ ನಿರಂತರ – ಹೊರಟ್ಟಿ.

ಪ್ರತಿಧ್ವನಿ ಯಲ್ಲಾಪುರ :  ಸಭಾಪತಿ ಸ್ಥಾನದಿಂದ ಕೆಳಗೆ ಇಳಿಸಿರುವ ಕ್ರಮ ಸಂವಿಧಾನಕ್ಕೆ ವಿರುದ್ಧವಾಗಿದ್ದು ಶಿಕ್ಷಕರ ಕ್ಷೇತ್ರದಿಂದ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಇಷ್ಟು ವರ್ಷಗಳ ಕಾಲ ಘನತೆಯಿಂದ ಕಾಪಾಡಿಕೊಂಡು ಬಂದಿರುವ ಈ ವ್ಯಕ್ತಿತ್ವಕ್ಕೆ ಅವಮಾನ, ಗೌರವಕ್ಕೆ ದಕ್ಕೆ ಬಂದಿದ್ದು ನಿಜ,  ಹಾಗೆಂದು ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ ಇದರಿಂದ ಮತ್ತೆ ಪುಟ್ಟಿದೆದ್ದು ಬಂದು ಇನ್ನೂ ಹೆಚ್ಚಿನ ಸಮಯ ಶಿಕ್ಷಕರ ಕ್ಷೇತ್ರದಲ್ಲಿ ಸೇವೆಯನ್ನು ಮಾಡಲು ಅವಕಾಶವನ್ನ ಪಡೆಯುವಂತಾಗಿದೆ. ಇನ್ನೂ ಹೆಚ್ಚಿನ ಶಿಕ್ಷಕರಿಗೆ …

Read More »

ಉ.ಕ ಜಿಲ್ಲೆಯನ್ನು ಧಾರವಾಡ ಸಂಚಾರಿ ಪೀಠದಲ್ಲೆ ಮುಂದುವರೆಸುವಂತೆ ಸದನದ ಗಮನ ಸೆಳೆದು  ಉತ್ತರ ಕನ್ನಡ ಅಸ್ಮಿತೆಯ ಧ್ವನಿಯಾದ ಶಾಸಕ ಹೆಬ್ಬಾರ್ ,

ಪ್ರತಿಧ್ವನಿ ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯನ್ನು ಪ್ರಸ್ತಾಪಿತ ಮಂಗಳೂರು ಸಂಚಾರಿ ಪೀಠದ ವ್ಯಾಪ್ತಿಗೆ ಸೇರಿಸುವ ಕುರಿತ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಅದೇ ರೀತಿ ಶಾಸಕ ಶಿವರಾಮ ಹೆಬ್ಬಾರ್ ಕೂಡ ಉ.ಕ.ಜಿಲ್ಲೆಯನ್ನು ಧಾರವಾಡ ಪೀಠದಿಂದ ಪ್ರಸ್ಥಾಪಿತ ಮಂಗಳೂರು ಪೀಠದ ವ್ಯಾಪ್ತಿಗೆ ಒಳಪಡಿಸುವುದನ್ನು ಖಂಡತುಂಡಾಗಿ ವಿರೋದಿಸಿದ್ದರು. ಸದ್ಯ ರಾಜ್ಯದಲ್ಲಿ ವಿಧಾನಸಭಾ ಅಧಿವೇಶನ ನಡೆಯುತ್ತಿದ್ದು ಇದೇ ವಿಚಾರವನ್ನು ಶಾಸಕ ಹೆಬ್ಬಾರ್ ಸದನದ ಗಮನಕ್ಕೆ ತಂದು …

Read More »