ಪ್ರತಿಧ್ವನಿ ಯಲ್ಲಾಪುರ – ಬೆಂಗಳೂರು: ರಾಜ್ಯದ ಪ್ರಮುಖ ಸಮಸ್ಯೆಗಳ ಕುರಿತು ಚರ್ಚಿಸಲು ವಿಧಾನಮಂಡಲ ಅಧಿವೇಶನದಲ್ಲಿ ಅವಕಾಶ ನೀಡದೆ, ಗದ್ದಲದ ಮೂಲಕ ಕಲಾಪದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಧೋರಣೆಯನ್ನು ಖಂಡಿಸಿ ವಿಧಾನಸೌಧದ ಆವರಣದಲ್ಲಿರುವ ಮಹಾತ್ಮ ಗಾಂಧೀಜಿ ಅವರ ಪ್ರತಿಮೆ ಮುಂದೆ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಪಾಲ್ಗೊಂಡು, ಪ್ರತಿಪಕ್ಷಗಳ ಈ ಧೋರಣೆಯನ್ನು ಖಂಡಿಸಿದರು. ರಾಜ್ಯದ ಜನರ ಸಮಸ್ಯೆಗಳು, …
Read More »Monthly Archives: August 2026
ಪ್ರಕರಣಗಳನ್ನು ಶೀಘ್ರಗತಿಯಲ್ಲಿ ಇತ್ಯರ್ಥ ಪಡಿಸಲು ಲೋಕ್ ಅಧಾಲತ್ ಯಶಸ್ವಿಗೊಳಿಸೋಣ – ಕುಮಾರ್ ಎಸ್, ನ್ಯಾಯಾಧೀಶರು ಯಲ್ಲಾಪುರ.
ಪ್ರತಿಧ್ವನಿ ಯಲ್ಲಾಪುರ : ಲೋಕ್ ಅದಾಲತ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣ ಇತ್ಯರ್ಥ ಪಡಿಸಲು, ರಾಜಿ ಸಂಧಾನದ ಮೂಲಕ ಪ್ರಕರಣ ಬಗ್ಗೆ ಹರಿಸಿ ಸಾರ್ವಜನಿಕರ ಸಮಯ ಮತ್ತು ಆರ್ಥಿಕ ಹೊರೆ ತಪ್ಪಿಸಲು ಎಲ್ಲಾ ಇಲಾಖೆಗಳು ಸಹಕರಿಸಬೇಕು ಎಂದು ಮಾನ್ಯ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕುಮಾರ್ ಎಸ್ ಹೇಳಿದರು. ಅವರು ದಿನಾಂಕ 19.9.2026 ರಂದು ನಡೆಯಲಿರುವ ಲೋಕ್ ಅದಾಲತ್ ಯಶಸ್ವಿಯಾಗಿಸುವ ಬಗ್ಗೆ ಚರ್ಚಿಸಲು ಯಲ್ಲಾಪುರದ ನ್ಯಾಯಾಲಯದ ಆವರಣದಲ್ಲಿ ಪೂರ್ವಭಾವಿ ಸಭೆಕರೆದು ಸಭೆಯ …
Read More »ಯಲ್ಲಾಪುರ ಗಣಪತಿ ಗಲ್ಲಿ ಅಂಗನವಾಡಿ ಕೇಂದ್ರಕ್ಕೆ ತಾಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಉಲ್ಲಾಸ ಶಾನಭಾಗ್ ಬೇಟಿ.
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೆ ಇರುವ ಗಣಪತಿಗಲ್ಲಿ ಅಂಗನವಾಡಿ ಕೇಂದ್ರಕ್ಕೆ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ದೇವಿದಾಸ (ಉಲ್ಲಾಸ)ನಾಗೇಶ್ ಶಾನಭಾಗ ಭೇಟಿ ನೀಡಿ ಪರಿಶೀಲಿಸಿದರು. ಮಕ್ಕಳಿಗೆ ನೀಡುತ್ತಿರುವ ಆಹಾರ ಮತ್ತು ಪಾಟ,ಪಾಠ ಹಾಗು ಆರೋಗ್ಯದ ಕುರಿತು ಸಿಬ್ಬಂದಿಯೊಂದಿಗೆ ಮಾತನಾಡಿ ಮಾಹಿತಿ ಪಡೆದರು. ಅಂಗನವಾಡಿ ಪರಿಸರವನ್ನು ಶುಚಿಯಾಗಿಟ್ಟುಕೊಂಡು ಮಕ್ಕಳಿಗೆ ಉತ್ತಮ ಆಹಾರ ಹಾಗು ಆಟಪಾಠಗಳನ್ನು ಅಚ್ಚುಕಟ್ಟಾಗಿ ಹೇಳಿಕೊಡುತ್ತಿರುವ ಶಿಕ್ಷಕಿ ಮಂಜುಳ ವಿ ನಾಯ್ಕ್ ಹಾಗು …
Read More »ಯಲ್ಲಾಪುರ ಲೋಕೋಪಯೋಗಿ ಇಲಾಖೆಯಿಂದ ತಾಲೂಕಿನ ವಿವಿಧ ರಸ್ತೆಗಳ ತಾತ್ಕಾಲಿಕ ದುರಸ್ತಿ ಕಾರ್ಯ.
ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ವಿವಿಧ ಭಾಗಗಳಲ್ಲಿ ರಸ್ತೆಗಳು ತುಂಬಾ ಹದಗೆಟ್ಟಿದ್ದು ಮಳೆಗಾಲವಾದ್ದರಿಂದ ಮತ್ತಷ್ಟು ಹೊಂಡಗುಂಡಿಗಳ ಸಂಖ್ಯೆ ಹೆಚ್ಚುತ್ತಲೆ ಇದೆ. ಈ ಮದ್ಯೆ ಯಲ್ಲಾಪುರ ಲೋಕೋಪಯೋಗಿ ಇಲಾಖೆ ಸಾರ್ವಜನಿಕ ಸಂಚಾರದ ಸುರಕ್ಷತೆಯನ್ನು ಮನದಲ್ಲಿಟ್ಟುಕೊಂಡು ತಾತ್ಕಾಲಿಕ ದುರಸ್ತಿಗೆ ಮುಂದಾಗಿದ್ದು ಹೊಂಡಗುಂಡಿಗಳನ್ನು ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಖಾನಾಪುರ – ತಾಳಗುಪ್ಪ ರಾಜ್ಯ ಹೆದ್ದಾರಿ, ಚವತ್ತಿ ಗ್ರಾಮೀಣ ಭಾಗದಲ್ಲಿ, ಉಮ್ಮಚ್ಚಗಿ ಸಂಕದಗುಂಡಿ ವ್ಯಾಪ್ತಿಯಲ್ಲಿ,ಮಂಚಿಕೇರಿ ಗ್ರಾಮೀಣ ವ್ಯಾಪ್ತಿಯಲ್ಲಿ ತಾತ್ಕಾಲಿಕ ದುರಸ್ತಿ ಕೆಲಸ ಮಾಡಿದ್ದು ಮತ್ತು ಇತರೆಡೆಗಳಲ್ಲಿ …
Read More »ಹೊಂಡಗಳ ಭಾಗ್ಯ ಕರುಣಿಸಿದ ಕಾಂಗ್ರೆಸ್ ಸರ್ಕಾರ ನಮ್ಮ ರಾಜ್ಯಕ್ಕೆ ಬೇಕಿತ್ತೆ – ಪ್ರಸಾದ್ ಹೆಗಡೆ.
ಪ್ರತಿಧ್ವನಿ ಯಲ್ಲಾಪುರ : ಕಾಂಗ್ರೆಸ್ ಸರಕಾರ ಕಳೆದ ಮೂರು ವರ್ಷಗಳಿಂದ ರಸ್ತೆಗಳನ್ನು ನಿರ್ವಹಣೆ ಮಾಡದೇ ಹೊಂಡಗಳ ಭಾಗ್ಯ ಕರುಣಿಸಿದೆ. ಇಂತಹ ಭಾಗ್ಯಗಳು ನಮ್ಮ ತಾಲ್ಲೂಕಿಗೆ ,ನಮ್ಮ ರಾಜ್ಯಕ್ಕೆ ಬೇಕಾಗಿತ್ತೇ ? ಎಂದು ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಆಕ್ರೋಶ ವ್ಯಕ್ತಪಡಿಸಿದರು. ಅವರು ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಿಡಬ್ಲುಡಿ ರಸ್ತೆಗಳ ತುರ್ತು ನಿರ್ವಹಣೆ ಆಗದಿದ್ದಲ್ಲಿ ಪ್ರತಿಭಟನೆ ಅನಿವಾರ್ಯವಾಗಿ ಮಾಡಬೇಕಾಗುತ್ತದೆಂದು ಇಲಾಖಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಮತ್ತು ಹೊಂಡಗಳಲ್ಲಿ ಬಾಳೆ …
Read More »ಯಲ್ಲಾಪುರ ವಿಶ್ವದರ್ಶನದಲ್ಲಿ ಆ.23ರಂದು ಉಚಿತ ಹೃದಯರೋಗ ತಪಾಸಣಾ ಶಿಭಿರ.
ಪ್ರತಿಧ್ವನಿ ಯಲ್ಲಾಪುರ : ಸದಾ ಒಂದಲ್ಲ ಒಂದು ಸಮಾಜಮುಖಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಮನುಷ್ಯನ ಅತಿ ಪ್ರಮುಖ ಭಾಗವಾದ ಹೃದಯಕ್ಕೆ ಸಂಬಂಧಿಸಿದಂತೆ ಉಚಿತ ತಪಾಸಣ ಶಿಭಿರವನ್ನು ಆಗಸ್ಟ್ 23 ರ ಬೆಳಗ್ಗೆ 10 ಗಂಟೆಯಿಂದ ಹಮ್ಮಿಕೊಂಡಿದ್ದು ಸಾರ್ವಜನಿಕರು ಶಿಭಿರದ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆ ಮಾದ್ಯಮ ಪ್ರಕಟಣೆ ಹೊರಡಿಸಿದೆ. ವಿಶ್ವದರ್ಶನ ಸೇವಾ ಹಾಗೂ ಹುಬ್ಬಳ್ಳಿಯ ವಿಹಾನ ಹಾರ್ಟ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯವರ ಸಹಯೋಗದಲ್ಲಿ ಉಚಿತ ಹೃದಯರೋಗ …
Read More »SKDRDP ಬಿ.ಸಿ. ಟ್ರಸ್ಟ್‌ನ ಯಲ್ಲಾಪುರ ಮತ್ತು ಮುಂಡಗೋಡು ಒಕ್ಕೂಟಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆ.
ಪ್ರತಿಧ್ವನಿ ಯಲ್ಲಾಪುರ : ಶ್ರೀ ಕ್ಷೇತ್ರ ಧರ್ಮಸ್ಥಳವು ಶತಮಾನಗಳಿಂದ ದಾನ, ಧರ್ಮ, ಸೇವೆ ಮತ್ತು ಮಾನವೀಯತೆಯ ಆದರ್ಶವನ್ನು ಸಮಾಜಕ್ಕೆ ಸಾರುತ್ತಾ ಬಂದಿದೆ. ಅನ್ನದಾನ, ವಿದ್ಯಾದಾನ, ಆರೋಗ್ಯ ಸೇವೆ, ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣ, ಸ್ವಾವಲಂಬನೆ, ಉದ್ಯೋಗ ಸೃಷ್ಟಿ, ಕೃಷಿ ಅಭಿವೃದ್ಧಿ, ಪರಿಸರ ಸಂರಕ್ಷಣೆ ಹಾಗೂ ಮದ್ಯವ್ಯರ್ಜನ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಈ ಸೇವಾ ಪರಂಪರೆ ಇನ್ನಷ್ಟು ವಿಸ್ತಾರಗೊಂಡಿದೆ ಎಂದು …
Read More »ಸವಿಯಾದ ಹಬ್ಬಗಳು ಹತ್ತಿರವಾದಂತೆ ಸಿಹಿಯಾದ ಸಕ್ಕರೆ ದುಭಾರಿಯಾಗುತ್ತಿದೆ ಭವಿಷ್ಯದಲ್ಲಿ ಸಕ್ಕರೆ ಕಹಿ,ಕಹಿ..!!
ಕೇಬಲ್ ನಾಗೇಶ್, ಯಲ್ಲಾಪುರ..🖋 ಪ್ರತಿಧ್ವನಿ ಯಲ್ಲಾಪುರ : ಭಾರತದಲ್ಲಿ ಸಕ್ಕರೆ ಬೆಲೆಯು ಗಣನೀಯವಾಗಿ ಹೆಚ್ಚಾಗಿದೆ.ಸಗಟು ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯು ಕ್ವಿಂಟಾಲ್‌ಗೆ ₹5,400 ರಿಂದ ₹5,800 ರ ವರೆಗೆ ತಲುಪಿದೆ.ಚಿಲ್ಲರೆ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯು ಕೆ.ಜಿ.ಗೆ ₹52 ರಿಂದ ₹62 ರ ವರೆಗೆ ಮಾರಾಟವಾಗುತ್ತಿದೆ. ಬೆಲೆ ಏರಿಕೆಗೆ ಕಾರಣಗಳು: ಉತ್ಪಾದನೆ ಇಳಿಕೆ: ಮಳೆಯ ಕೊರತೆ ಮತ್ತು ಶುಷ್ಕ ಹವಾಮಾನದಿಂದಾಗಿ ಕಬ್ಬಿನ ಇಳುವರಿ ಕಡಿಮೆಯಾಗಿದೆ. ಹಬ್ಬದ ಬೇಡಿಕೆ: ಮುಂಬರುವ ಗಣೇಶ ಚತುರ್ಥಿ ಮತ್ತು …
Read More »ಕಸ್ತೂರಿ ರಂಗನ್ ಅವೈಜ್ಞಾನಿಕ 7 ನೆ ಅಧಿಸೂಚನೆ ವರದಿ ವಿರುದ್ದ ಹೋರಾಟಕ್ಕೆ ಪೂರ್ವಬಾವಿ ಸಭೆ.
ಪ್ರತಿಧ್ವನಿ ಯಲ್ಲಾಪುರ: ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿಗೆ 7 ನೇ ಅಧಿಸೂಚನೆ ಆಗಿರುವ ಹಿನ್ನಲೆಯಲ್ಲಿ ಯಲ್ಲಾಪುರ ತಾಲೂಕಿನಲ್ಲಿ ಘೋಷಿಸಲ್ಟಟ್ಟ ಸೂಕ್ಷ್ಮ ಪ್ರದೇಶದ ಪಟ್ಟಿಯ ಬಿಡುಗಡೆ ಮತ್ತು ಮುಂದಿನ ಹೋರಾಟದ ರೂಪು ರೇಷೆ ನಿರ್ಧರಿಸಲು ಅಗಸ್ಟ 24 ರ ಸೋಮವಾರ, ಮುಂಜಾನೆ 10 ಗಂಟೆಗೆ ಸ್ಥಳೀಯ ವೆಂಕಟರಮಣ ದೇವಸ್ಥಾನ ಸಭಾಭವನದಲ್ಲಿ ಕರೆಯಲಾಗಿದೆ ಎಂದು ಜಿಲ್ಲಾ ಸಂಚಾಲಕ ಚಂದ್ರಶೇಖರ ಪೂಜಾರಿ ಮಂಚಿಕೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅರಣ್ಯವಾಸಿಗಳ ಅಸ್ತಿತ್ವಕ್ಕಾಗಿ …
Read More »ಯಲ್ಲಾಪುರದ ಸಂಸ್ಕೃತಿ ಮಹಿಳಾ ಸೌಹಾರ್ದ ಸಹಕಾರಿ ಸಂಘದ 3 ನೇ ವಾರ್ಷಿಕ ಸರ್ವಸಾಧಾರಣ ಸಭೆ
ಪ್ರತಿಧ್ವನಿ ಯಲ್ಲಾಪುರ : ಸಂಸ್ಕೃತಿ ಮಹಿಳಾ ಸೌಹಾರ್ದ ಸಹಕಾರಿ ಸಂಘ ನಿಯಮಿತ, ಯಲ್ಲಾಪುರ ಇದರ ೩ನೇ ವಾರ್ಷಿಕ ಸರ್ವಸಾಧಾರಣ ಸಭೆಯು ಪಟ್ಟಣದ ಅಡಿಕೆ ಭವನದಲ್ಲಿ ನಡೆಯಿತು. ಸಹಕಾರಿ ಸಂಘದ ಗೌರವಾಧ್ಯಕ್ಷೆ ವರ್ಷಾ ಮಿರಾಶಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮಾವತಿ ಭಟ್ ಹಾಗೂ ಕಣ್ಣಿನ ತಜ್ಞೆ ಸೌಮ್ಯಾ ಭಟ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ …
Read More »
Prathidvani Yellapura