Breaking News

ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಭಾವ ಚಿತ್ರ ಮುಚ್ಚಿ ಗೃಹಲಕ್ಷ್ಮಿ ಬ್ಯಾನರ್ ಅಳವಡಿಸಿ ಅಪಮಾನ – ದಲಿತ ಸಂಘಟನೆಗಳ ಅಸಮಧಾನ.


ಪ್ರತಿಧ್ವನಿ ಯಲ್ಲಾಪುರ : ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರ ಅಳವಡಿಸಿದ್ದ ಬೃಹತ್ ಫಲಕಕ್ಕೆ ಸರ್ಕಾರದ ಗ್ಯಾರಂಟಿ ಯೋಜನೆಯ ಗೃಹ ಲಕ್ಷ್ಮೀ ಯೋಜನೆಯು 3 ವರ್ಷ ತುಂಬಿದ ಪ್ರಚಾರ ಪರದೆಯನ್ನು ಅಳವಡಿಸಿದ್ದು ಸ್ಥಳೀಯ ದಲಿತ ಸಂಘಟನೆಗಳ ಅಸಮಧಾನಕ್ಕೆ ಕಾರಣವಾಗಿದೆ.
ಈ ಸಂಬಂಧ ತೊಗಲು ಅರಳಯ್ಯ ಟ್ರಸ್ಟ್ ಅಧ್ಯಕ್ಷ ದಲಿತ ಮುಖಂಡ ಜಗನ್ನಾಥ ರೇವಣ್ಕರ್ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದು ಈ ಕೃತ್ಯ ಎಸಗಿದವರ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.


ಬದಲಿಸಿರುವುದು ಯಾವುದೊ ಕಾರ್ಯಕ್ರಮದ ಜಾಹಿರಾತು ಫಲಕವಲ್ಲ ಬದಲಾಗಿ ಪಟ್ಟಣದ ಪ್ರಮುಖ ಅಂಬೇಡ್ಕರ್ ವೃತ್ತದಲ್ಲಿನ ಈ ಫಲಕದಲ್ಲಿ ಪ್ರತಿ ವರ್ಷ ಅಂಬೇಡ್ಕರ್ ಜಯಂತಿ ವಿಜ್ರಂಭಣೆಯಿಂದ ಆಚರಿಸುವ ಸಂದರ್ಭದಲ್ಲಿ ಹೊಸದಾದ ಬೃಹತ್ ಪರದೆಯನ್ನು ಈ ಹೋಲ್ಡಿಂಗ್ ನಲ್ಲಿ ಅಳವಡಿಸಲಾಗುತ್ತದೆ.

ಅದನ್ನು ಸ್ಥಳೀಯ ಶಾಸಕರ ಕೈಯಲ್ಲಿ ಉದ್ಘಾಟನೆ ಮಾಡಿಸಲಾಗಿದೆ. ಈ ಫಲಕದ ಮೇಲೆ ಮತ್ತು ಆ ವೃತ್ತದ ಮೇಲೆ ವಿಶೇಷವಾಗಿ ದಲಿತ ಸಮುದಾಯದವರಲ್ಲಿ ಭಾವನಾತ್ಮಕ ಸಂಬಂಧವಿದ್ದು ಆ ಭಾವನೆಗೆ ದಕ್ಕೆತಂದಿದ್ದಾರೆ ಎಂಬುದು ಹಲವು ದಲಿತ ಮುಖಂಡರ ಆಕ್ರೋಶದ ನುಡಿಗಳಾಗಿದೆ.


ಕನಿಷ್ಟಪಕ್ಷ ಸೌಜನ್ಯಕ್ಕು ಈ ಕುರಿತು ಸ್ಥಳೀಯ ದಲಿತ ಮುಖಂಡರ ಗಮನಕ್ಕು ತರದೆ‌ ಬಾಬಾ ಸಾಹೇಬರ ಭಾವಚಿತ್ರ ಮುಚ್ಚಿ ಸರ್ಕಾರದ ಜಾಹಿರಾತು ಪರದೆ ಹಾಕಿರುವುದು ಅಕ್ಷಮ್ಯವಾಗಿದ್ದು ಸಂಬಂಧಿಸಿದ ಇಲಾಖೆ ಸ್ಪಷ್ಟನೆ ಕೊಡಬೇಕಿದೆ ಮತ್ತು ಕ್ರಮ ಜರುಗಿಸಬೇಕಿದೆ ಎಂಬುದು ಹಿರಿಯ ದಲಿತ ಮುಖಂಡ ಜಗನ್ನಾಥ ರೇವಣಕರ ಅವರ ಆಗ್ರಹವಾಗಿದೆ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದ ಪಂಚಾಯತ ರಾಜ್ ಇಂಜಿನೀಯರಿಂಗ್ ಕಛೇರಿಯಲ್ಲಿ ಗಣೇಶೋತ್ಸವ – ಶ್ರೀಧರ ಸಂಜೀವ ಕರಕೆರ ಕೈಯಲ್ಲಿ ಅರಳಿದ ಕೂರ್ಮಾರೂಡ ಗಣಪ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಪಂಚಾಯತ ರಾಜ್ ಇಂಜಿನೀಯರಿಂಗ್, ಉಪ ವಿಭಾಗ, ಯಲ್ಲಾಪುರ ಕಾರ್ಯಾಲಯದಲ್ಲಿ ಅಧಿಕಾರಿ …

Leave a Reply

Your email address will not be published. Required fields are marked *