Breaking News

ಯಲ್ಲಾಪುರ ಆರ್ತಿಬೈಲ ಘಟ್ಟದಲ್ಲಿ ಭೀಕರ ಅಪಘಾತ 6 ಮಂದಿ ಸಾವು – ಶಾಸಕ ಹೆಬ್ಬಾರ್ ಭೇಟಿ.

ಪ್ರತಿಧ್ವನಿ,ಯಲ್ಲಾಪುರ – ತಾಲೂಕಿನ ಆರ್ತಿ ಬೈಲ್ ಘಟ್ಟದಲ್ಲಿ ಗುರುವಾರ ಮುಂಜಾನೆ ಲಾರಿ ಮತ್ತು ಟ್ರಾಕ್ಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ತೆರಳುತ್ತಿದ್ದ 9 ( ಚಾಲಕನು ಸೇರಿದಂತೆ ) ಜನ ಯಾತ್ರಿಕರಲ್ಲಿ ಒಟ್ಟು 6 ಮಂದಿ ಮೃತಪಟ್ಟಿದ್ದು ಉಳಿದ 3 ಮಂದಿ ಗಾಯಗೊಂಡವರನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ರವಾನಿಸಲಾಗಿದೆ.

ದಾರವಾಡ ಮೂಲದ ಎಲ್ಲರು ಧರ್ಮಸ್ಥಳ ಹಾಗು ಇತರೆಡೆಗೆ ಪ್ರವಾಸಕ್ಕೆಂದು ತೆರಳುತ್ತಿದ್ದರು. ಗುರುವಾರ 2-30 ರ ಮುಂಜಾನೆ ವೇಳೆ ಆರ್ತಿ ಬೈಲ್ ಘಟ್ಟದಲ್ಲಿ ಅಂಕೋಲಾ ಕಡೆಯಿಂದ ಯಲ್ಲಾಪುರದ ಕಡೆಗೆ ಬರುತ್ತಿದ್ದ ಲಾರಿಗು ಯಲ್ಲಾಪುರದ ಕಡೆಯಿಂದ ಅಂಕೋಲ ಕಡೆಗೆ ಸಾಗುತ್ತಿದ್ದ ಟ್ರಾಕ್ಸ್ ಗು ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಕ್ರೂಸರ್ ನಲಿದ್ದ 6 ಮಂದಿ ಸಾವನಪ್ಪಿದ್ದಾರೆ ಉಳಿದ ಮೂವರು ಗಾಯಗೊಂಡಿದ್ದಾರೆ.

ಮೃತರು ದಾರವಾಡ ಮೂಲದ ಸಂಜೀವ ಮೈಲಾರ ಅಂಗಡಿ ( 33) ಕುರುಬಗಟ್ಟಿ,ಅಕ್ಷಯ ತೇಜಪ್ಪ ಮರಳವರ(26), ಅಭಿಷೇಕ ಈಶ್ವರ (28), ಅಭಿಷೇಕ ಮಲ್ಲೇಶ ಮಡಬಾವಿ (27), ಬಸಪ್ಪ ದೇವಪ್ಪ ಕನಕನವರ (38), ಮಂಜುನಾಥ ಅಶೋಕ ಜುಳಕಿ (33) ಎಂದು ಗುರುತಿಸಲಾಗಿದೆ.

ಶಿವರಾಜ ಗುರಪ್ಪ ಮಡಿವಾಳರ (22), ಸಚಿನ ( 26) ,ಚನ್ನಬಸುಬಸಲಿಂಗಯ್ಯಸಂಪಗಾವಿಮಠ (28) ಎಂಬ ಮೂವರು ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಗೆ ಕಳುಹಿಸಲಾಗಿದೆ.

ವಿಷಯ ತಿಳಿಯುತ್ತಲೆ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದೌಡಾಯಿಸಿದ ಶಾಸಕ ಶಿವರಾಮ ಹೆಬ್ಬಾರ್ ವಿವರ ಪಡೆದು ಮೃತರ ದರ್ಶನ ಪಡೆದರು. ಪೊಲೀಸ್, ವೈದ್ಯರು ಹಾಗು ಇತರೆ ಅಧಿಕಾರಿಗಳೆ ಸೂಚನೆ ನೀಡಿ ಮೃತರ ಕುಟುಂಬಕ್ಕೆ ಸಹಕರಿಸುವಂತೆ ಆದೇಶಿಸಿದರು.

ಮಲೆನಾಡಿನ ಮಳೆಯ ಪರಿಸ್ಥಿತಿ ಬಯಲು ಸೀಮೆಯ ಕಡೆಯ ಜನರಿಗೆ ಅಷ್ಟಾಗಿ ಮಾಹಿತಿ ಇರದಿರುವುದು ಇಂತಹ ಅಪಘಾತಕ್ಕೆ ಕಾರಣವಾಗಿದೆ. ಪ್ರವಾಸಿಗರಾಗಲಿ ಅಥವಾ ಈ ಭಾಗದಲ್ಲಿ ಸಂಚರುಸುವ ಎಲ್ಲಾ ವಾಹನ ಸವಾರರು ಅತ್ಯಂತ ಜಾಗರೂಕರಾಗಿ ವಾಹನ ಚಲಾಯುಸಬೇಕು ಬಾರಿ ಮಳೆಯಾಗುತ್ತಿರುವುದರಿಂದ ಚಾಲನೆಯ ಮೇಲೆ ಎಚ್ಚರವಿರಲಿ. ಮೃತರ ಕುಟುಂಬಕ್ಕೆ ಭಗವಂತ ದುಖಃ ಭರಿಸುವ ಶಕ್ತಿ ಭಗವಂತ ಕರುಣಿಸಲಿ. ಶಿವರಾಮ ಹೆಬ್ಬಾರ್, ಶಾಸಕ,ಯಲ್ಲಾಪುರ ವಿಧಾನಸಭಾ ಕ್ಷೇತ್ರ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದ ಪಂಚಾಯತ ರಾಜ್ ಇಂಜಿನೀಯರಿಂಗ್ ಕಛೇರಿಯಲ್ಲಿ ಗಣೇಶೋತ್ಸವ – ಶ್ರೀಧರ ಸಂಜೀವ ಕರಕೆರ ಕೈಯಲ್ಲಿ ಅರಳಿದ ಕೂರ್ಮಾರೂಡ ಗಣಪ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಪಂಚಾಯತ ರಾಜ್ ಇಂಜಿನೀಯರಿಂಗ್, ಉಪ ವಿಭಾಗ, ಯಲ್ಲಾಪುರ ಕಾರ್ಯಾಲಯದಲ್ಲಿ ಅಧಿಕಾರಿ …

Leave a Reply

Your email address will not be published. Required fields are marked *