
ಪ್ರತಿಧ್ವನಿ ಯಲ್ಲಾಪುರ: ತಾಲೂಕಿನ ಕಿರವತ್ತಿ ಗ್ರಾಮ ಪಂಚಾಯತ್ ಕೇಂದ್ರಸ್ಥಾನದ ಶಾಲೆಗಳಿಗೆ ವಿದ್ಯೆ ಅರಸಿ ಬರುವ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಒಂದೆಡೆ ಸಾರಿಗೆ ಸಮಸ್ಯೆ ಉಳಿದು ಕೊಳ್ಳಲು ಹಾಸ್ಟೆಲ್ ಸಮಸ್ಯೆ ಒಟ್ಟಿನಲ್ಲಿ ಪ್ರತಿ ನಿತ್ಯ ಸಮಸ್ಯೆ ನಡುವೆಯೆ ವಿದ್ಯೆ ಕಲಿಯುತ್ತಿರುವುದು ಶೋಚನೀಯ.

ಕಿರವತ್ತಿ ಶಾಲೆಗಳಿಗೆ ಹುಣಸಗೇರಿ, ಪಾನಿಗುಂಡಿ, ಬಸನಕೊಪ್ಪ,ಯಲವಳ್ಳಿ, ಹುಣಸಗೇರಿ ಗೌಳಿವಾಡ ಹಾಗು ಸುತ್ತಮುತ್ತಲಿನ ಮಕ್ಜಳು ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ. ಕೆಲವರಂತು 9 ಕಿಲೋಮೀಟರ್ ಕಡಿದಾದ ಕಾಡು ಪ್ರದೇಶದಲ್ಲೆ ನಡೆದು ಸಾಗಬೇಕು. ಕಾಡು ಪ್ರಾಣಿಗಳ ದಾಳಿಯ ಭಯದಲ್ಲೆ ನಿತ್ಯ ಸಂಚರಿಸುವಂತಾಗಿದೆ.
ಬಸ್ಸಿನ ಸೌಕರ್ಯ ಇಲ್ಲ.

ನಿತ್ಯ ಸಂಚರಿಸುವ ಬದಲು ಹಾಸ್ಟೆಲ್ ನಲ್ಲಾದರು ಉಳಿದುಕೊಳ್ಳೋಣ ಎಂದರೆ ಅದು ಸಹ ಗಗನ ಕುಸುಮವಾದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ದೂರ ಉಳಿದರು ಅಚ್ಚರಿ ಪಡಬೇಕಿಲ್ಲ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಪರಿಹರಿಸುವತ್ತ ಮುಂದಗಬೇಕಿದೆ ಇಲ್ಲವಾದಲ್ಲಿ ಪ್ರತಿಭಟನೆ ಮಾರ್ಗ ಅನಿವಾರ್ಯ ಎಂದು ಸಾಜಿಕ ಹೋರಾಟಗಾರ ವಿಠ್ಟು ಪಟಕಾರೆ ಮಾದ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಕಿರವತ್ತಿ ಕೆಲವು ಶಾಲೆಗಳಿಗೆ ಸುತ್ತಮುತ್ತಲಿನ ಗ್ರಾಮಗಳಿಂದ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದು ಸಾರಿಗೆ ವ್ಯವಸ್ಥೆ ಇಲ್ಲದಿರುವುದು ಶೋಚನೀಯ ಆಗಿದೆ. ಬಹುತೇಕ 9 ಕಿಲೋಮೀಟರ್ ಕಡಿದಾದ ಅರಣ್ಯ ಪ್ರದೇಶದಲ್ಲಿ ಮಕ್ಕಳು ನಡೆದು ಸಾಗಬೇಕು ಪ್ರಾಣಿಗಳ ಭಯ ಮತ್ತು ಹೆಣ್ಣು ಮಕ್ಕಳ ಸುರಕ್ಷತೆಯು ಕಷ್ಟಕರವಾಗಿದೆ. ಈ ಕುರಿತು ಹಲವು ಬಾರಿ ಮನವಿ ಮಾಡಿದರು ಯಾವ ಪ್ರಯೋಜನವಿಲ್ಲದಾಗಿದೆ. ಸರ್ಕಾರ ಗ್ರಾಮೀಣ ಭಾಗದ ಶಾಲೆಗಳಿಗಾಗಿಯೆ ಮಿನಿ ಬಸ್ ಮಾದರಿ ವಾಹನಗಳನ್ನು ಉಚಿತವಾಗಿ ನೀಡುವ ಬಗ್ಗೆ ಯೋಜನೆ ರೂಪಿಸುವುದು ಒಳಿತು. ವಿಠ್ಠುಪಟಕಾರೆ,ಸಾಮಾಜಿಕ ಹೋರಾಟಗಾರ.

ಈ ಸಮಸ್ಯೆ ನನ್ನ ಗಮನಕ್ಕೆ ಬಂದ ಕೂಡಲೆ ಅಲ್ಲಿ ಸರ್ವೆ ನಡೆಸಿ ವರದಿಯನ್ನು ಮೇಲಾಧಿಕಾರಿಗಳಿಗೆ ಕಳುಹಿಸಿದ್ದು ಬಸ್ ರೂಟ್ ವ್ಯವಸ್ಥೆಗಾಗಿ ಕೋರಲಾಗಿದೆ. ಶೀಘ್ರದಲ್ಲೇ ಇದಕ್ಕೊಂದು ಪರಿಹಾರ ಸಿಗಲಿದೆ. ಸಂತೋಷವರ್ಣೇಕರ್,ಡಿಪೋ ಮ್ಯಾನೇಜರ್, ಯಲ್ಲಾಪುರ ಘಟಕ.










Prathidvani Yellapura